ಆಕರ್ಷಕ ವೃತ್ತಿ ಈವೆಂಟ್ ಮ್ಯಾನೇಜ್‌ಮೆಂಟ್
Team Udayavani, Nov 13, 2019, 4:22 AM IST
ಕಳೆದೊಂದು ದಶಕದ ಹಿಂದೆ ಸ್ವತಂತ್ರ ಅಸ್ತಿತ್ವವನ್ನೇ ಹೊಂದಿರದ, ಭಾರತದ ಮಟ್ಟಿಗೆ ಸಂಪೂರ್ಣ ಹೊಸತೇ ಆದ ವಲಯ ಎನಿಸಿಕೊಂಡಿದ್ದ ಕ್ಷೇತ್ರ ” ಈವೆಂಟ್ ಮ್ಯಾನೇಜ್‌ಮೆಂಟ್’. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಲಕ್ಷಾಂತರ ಯುವ ಜನರು ಈ ಆಕರ್ಷಕ ವೃತ್ತಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ವಿದ್ಯಾರ್ಜನೆ ಮಾಡಿಕೊಂಡು ಸ ಹಣ ಸಂಪಾದನೆ ಮಾಡುವವರಿಗೆ ಈ ಕ್ಷೇತ್ರ ಹೇಳಿ ಮಾಡಿಸಿದಂತಿದ್ದು, ಗಳಿಕೆಯೊಂದಿಗೆ ಕೌಶಲವನ್ನು ವೃದ್ಧಿಸಿಕೊಳ್ಳಬಹುದಾಗಿದೆ.
ಬೇಡಿಕೆ ಹೆಚ್ಚು
ಬಹುತೇಕ ಉದ್ಯಮಗಳ ಕಾರ್ಯಕ್ರಮ ರೂಪರೇಖೆ ನಿರ್ಧರಿಸುವ ಹಾಗೂ ನಿರ್ವಹಿಸುವ ದೊಡ್ಡ ಶಕ್ತಿಯಾಗಿ ಈ ಕ್ಷೇತ್ರ ಬೆಳೆಯುತ್ತಿದ್ದು, ಮದುವೆ ಅಂತಹ ವೈಯಕ್ತಿಕ ಕಾರ್ಯಕ್ರಮಗಳಿಂದ ಹಿಡಿದು ಹೊಸ ಉತ್ಪನ್ನ ಅಥವಾ ಪರಿಕರ ಬಿಡುಗಡೆಯಂತಹ ಕಂಪೆನಿಗಳ ವೃತ್ತಿಪರ ಉದ್ದೇಶಗಳಿಗೂ ಈವೆಂಟ್ ಮ್ಯಾನೇಜ್‌ಮೆಂಟ್‌ನ ಅಗತ್ಯತೆ ವಿಸ್ತರಿಸಿಕೊಂಡಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಯುವಕರಿಗೂ ಈ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶಗಳಿದ್ದು, ರಜಾದಿನಗಳಲ್ಲಿ, ಬಿಡುವಿದ್ದ ಸಮಯದಲ್ಲಿ ತೆರಳ ಬಹುದಾಗಿದೆ.
ಇನ್ನೂ ಈ ಕ್ಷೇತ್ರಕ್ಕೆ ಕ್ರಿಯಾತ್ಮಾಕ ಯೋಚನೆಗಳೇ ಬಂಡವಾಳವಾಗಿದ್ದು, ನಿರ್ವಹಣೆಯ ಕೌಶಲದೊಂದಿಗೆ ಸೃಜನಾತ್ಮಕ ದೃಷ್ಟಿಕೋನವನ್ನೂ ಹೊಂದಿರಬೇಕಾಗುತ್ತದೆ. ಪ್ರತಿಭಾ ಅನಾವರಣಕ್ಕೂ ಈ ಕ್ಷೇತ್ರ ಉತ್ತಮ ವೇದಿಕೆಯಾಗಿದ್ದು, ಪಾರ್ಟ್ ಟೈಮ್ ಜಾಬ್ ಆಗಿ ಕಾರ್ಯ ನಿರ್ವಹಿಸಬಹುದು.
ವೃತ್ತಿ ತರಬೇತಿ
ಅನೇಕ ವಿಶ್ವವಿದ್ಯಾಲಯಗಳು ಎಂಬಿಎ ಪಠ್ಯಕ್ರಮದ ಒಂದು ಭಾಗವಾಗಿಯೇ ಈವೆಂಟ್ ಮ್ಯಾನೇಜ್‌ಮೆಂಟ್ ವಿಷಯವನ್ನೂ ಕಲಿಸುತ್ತಿವೆ. ಪ್ರತಿಕೋದ್ಯಮ ವಿಭಾಗದಲ್ಲಿಯೂ ಸಾರ್ವಜನಿಕ ಸಂಪರ್ಕ ವಿಷಯದಡಿ “ಈವೆಂಟ್ ಮ್ಯಾನೇಜ್‌ಮೆಂಟ್’ ಕೋರ್ಸ್‌ನ ಲಭ್ಯವಿದೆ. ಇದರೊಂದಿಗೆ ಅನೇಕ ಖಾಸಗಿ ಸಂಸ್ಥೆಗಳಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್ ವಿಷಯವನ್ನು ಒಂದು ಪ್ರತ್ಯೇಕ ವಿಷಯವಾಗಿ ಬೋಧಿಸಲಾಗುತ್ತಿದ್ದು, ಈ ಕ್ಷೇತ್ರ ವೃತ್ತಿಪರ ನೈಪುಣ್ಯತೆಯನ್ನು ಹೊಂದಿದೆ.
ಕಡಿಮೆ ಬಂಡವಾಳ ಹೆಚ್ಚು ಲಾಭ
ಹೊಸ ಉದ್ಯಮ ಆರಂಭಿಸುವಾಗ ಅಧಿಕಮಟ್ಟದ ಬಂಡವಾಳ ಹೂಡಬೇಕೆಂಬುದು ಎಲ್ಲಾರ ಅಭಿಪ್ರಾಯವಾಗಿರುತ್ತದೆ. ಆದರೆ ಈವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರ ಇದಕ್ಕೆ ಹೊರತಾಗಿದ್ದು, ಕಡಿಮೆ ಬಂಡವಾಳದಲ್ಲಿ ಈ ಉದ್ಯಮವನ್ನು ಪ್ರಾರಂಭಿಸಬಹುದಾಗಿದೆ. ಇನ್ನೂ ಈ ಕ್ಷೇತ್ರದಲ್ಲಿ ಆದಾಯಮಟ್ಟವು ಆಕರ್ಷಕವಾಗಿದ್ದು, ಒಂದು ಯೋಜನೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರೆ ಲಕ್ಷದವರೆಗೂ ಸಂಭಾವನೆ ಪಡೆಯಬಹುದಾಗಿದೆ.
ಅರ್ಹತೆಗಳೇನು
· ನಿರ್ವಹಣೆ ಕೌಶಲ
· ನಾಯಕತ್ವ ಗುಣ
· ಕ್ರಿಯಾಶೀಲತೆ
· ಚಲನಶೀಲತೆ
· ಸವಾಲು ನಿರ್ವಹಣೆ
ಸುಶ್ಮಿತಾ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.