ಭೂತಾರಾಧನೆಯೊಂದಿಗೆ ಬದುಕಿನ ಸೂಕ್ಷ್ಮತೆ ತಿಳಿಸುವ ಅಜಬಿರು
Team Udayavani, Jul 10, 2019, 5:00 AM IST
ತುಳುನಾಡಿನ ವಿಶೇಷ ಆರಾಧನೆ ಭೂತಾರಾಧನೆ. ಇದು ಕೇವಲ ಆರಾಧನೆಯಲ್ಲ ಬದಲಾಗಿ ತುಳು ನಾಡಿನ ಸಂಸ್ಕೃತಿ. ಈ ಭೂತಾರಾಧನೆಯೊಂದಿಗೆ ಬದುಕಿನ ಹತ್ತು ಹಲವು ಸನ್ನಿವೇಶಗಳನ್ನು ತಿಳಿಸುವ ಕಾದಂಬರಿ ತೀರ್ಥರಾಮ ವಳಲಂಬೆ “ಅಜಬಿರು’. ಬದುಕಿನ ವಿಷಯಗಳನ್ನು ಕುತೂಹಲಕಾರಿ ಕತೆಯ ಮೂಲಕ ಲೇಖಕರು ಜನರಿಗೆ ಅದ್ಭುತವಾಗಿ ತಿಳಿಸಿದ್ದಾರೆ. ಕತೆಯ ಮೂಲಕ ಕರಾವಳಿ ಭಾಗದ ಜನಸಾಮಾನ್ಯರ ಬದುಕಿನ ಕುರಿತು ತಿಳಿಸುವ ಈ ಕಾದಂಬರಿ ಎಲ್ಲ ವರ್ಗದ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಘಟನೆ: 1
ಅಕ್ಟೋಬರ್ ತಿಂಗಳ ಕೊನೆಯ ವಾರದ ಮುಸ್ಸಂಜೆ. ಆಗ ತಾನೆ ಮಳೆ ನಿಂತು ಆಗಸ ತುಂಬಾ ಕಪ್ಪು ಮೋಡಗಳ ತುಣುಕುಗಳು ಚದುರಿದ್ದು, ಪಶ್ಚಿಮ ಕಡಲಂಚಿನಲ್ಲಿ ಸೂರ್ಯ ಆಗೊಮ್ಮೆ ಈಗೊಮ್ಮೆ ಮೋಡಗಳ ಮರೆಯಿಂದ ಇಣುಕುವ ದೃಶ್ಯ ರಮಣೀಯವಾಗಿತ್ತು. ಜಗದೀಶ ಆಗಸದಲ್ಲಿ ಮೋಡಗಳಿಂದ ಮೂಡಿಬಂದ ಚಿತ್ರವಿಚಿತ್ರ ಆಕಾರಗಳನ್ನು ನೋಡುತ್ತಾ ತನ್ನ ಹಳೆಯದಾದ ಮಾರುತಿ ಓಮ್ನಿ ಕಾರಲ್ಲಿ ನೇತ್ರಾವತಿ ಸೇತುವೆ ದಾಟಿ ಮುಂದೆ ಸಾಗುತ್ತಿದ್ದ ಜತೆಯಲ್ಲಿ ಯಶವಂತೂ ಇದ್ದ. “ಈಗೇನೋ ನೇತ್ರಾವತಿ ತುಂಬಿ ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ಈ ದೃಶ್ಯ ನೋಡಲು ಸಿಗಬಹುದೆಂಬ ಯಾವ ಖಾತ್ರಿಯೂ ಇಲ್ಲ’ ಎಂದು ಯಶವಂತ ತನ್ನಷ್ಟಕ್ಕೇ ಹೇಳಿಕೊಂಡ.
ಘಟನೆ: 2
ರಾತ್ರಿ 8ರ ಸಮಯ ಯಶವಂತ ಟಿವಿಯಲ್ಲಿ ನ್ಯೂಸ್ ನೋಡುತ್ತಾ ಕೂತಿದ್ದ. ಟಿವಿ ಸ್ಕ್ರೀನ್‌ನ ಕೆಳಗಡೆ ಬ್ರೇಕಿಂಗ್ ನ್ಯೂಸ್‌ನಲ್ಲಿ “ಮಂಗಳೂರು ಬಳಿ ಅಪಘಾತಕ್ಕೀಡಾದ ಮಾರುತಿ ಆಮ್ನಿ ಬೆಂಕಿಗೆ ಆಹುತಿ. ವ್ಯಕ್ತಿ ಸಾವು’ ಎಂದು ಫ್ಲ್ಯಾಶ್ ನ್ಯೂಸ್ ಬರುತ್ತಿತ್ತು. ಒಮ್ಮೆ ಓದಿ ಸುಮ್ಮನಾದ ಯಶವಂತನಿಗೆ ಯಾಕೋ ಸ್ವಲ್ಪ ಸಂಶಯ ಬಂದು ಜಗದೀಶನಿಗೆ ಫೋನ್ ಮಾಡಿದ. ಆತನ ಫೋನ್ ಸ್ವಿಚ್ ಆಫ್ ಅಂತ ಬರುತ್ತಿತ್ತು.
ಘಟನೆ: 3
ಈ ಜಗತ್ತನ್ನು ನಾವು ಅರ್ಥಮಾಡಿಕೊಂಡಷ್ಟೂ ಅದು ಜಟಿಲವಾಗುತ್ತಾ ಹೋಗುತ್ತದೆ. ನಾವು ಒಂದು ಪ್ರಶ್ನೆಗೆ ಉತ್ತರ ಕಂಡುಕೊಂಡಾಗ ಅದು ಇನ್ನೊಂದು ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ಜನಸಾಮಾನ್ಯರಿಗೆ ಅರ್ಥವಾಗದೇ ಇರೋ ವಿಚಾರವನ್ನು ಕೆಲವರು ದೇವರು, ದೆವ್ವ ಎಂದು ಹೇಳಿ ವಂಚಿಸುತ್ತಾರೆ. ಜನ ನಂಬಿ ಬಿಡುತ್ತಾರೆ.
- ಆರ್.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.