ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಇರಲಿ ತಯಾರಿ


Team Udayavani, Dec 12, 2018, 12:49 PM IST

12-december-9.gif

ನಾವಿಂದು ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಹೀಗಾಗಿ ಉದ್ಯೋಗಕ್ಕೆ ಇಂದು ಪದವಿ ಸರ್ಟಿಫಿಕೇಟ್‌ಗಳಿದ್ದರೆ ಸಾಲದು. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನೂ ಪಡೆದಿರಬೇಕು. ಆದ್ದರಿಂದ ಹೊಸ ವರ್ಷದ ಸ್ವಾಗತದೊಂದಿಗೆ 2019ರಲ್ಲಿ ಬರೆಯಬಹುದಾದ ಒಂದೆರಡಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಲೇ ತಯಾರಿ ಆರಂಭಿಸುವುದು ಉತ್ತಮ. ಇದು ಭವಿಷ್ಯಕ್ಕೊಂದು ದಾರಿಯಾಗಬಲ್ಲದು.

ಪದವಿ ಪಡೆದರೆ ಉದ್ಯೋಗ ಎಂದು ಯೋಚಿಸುವ ಕಾಲ ಬದಲಾಗಿದೆ. ವಿವಿಧ ಇಲಾಖೆಗಳು ಆಯೋಜಿಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿ ಆಯ್ಕೆಗೊಂಡರೆ ಅದರಲ್ಲಿ ದೊರೆಯುವ ಉದ್ಯೋಗಗಳಿಗೆ ಉತ್ತಮ ಮನ್ನಣೆ ದೊರೆಯುತ್ತಿದೆ. ಆ ಕಾರಣಕ್ಕಾಗಿಯೇ ಬಹುತೇಕ ಜನರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಉತ್ಸಾಹಕರಾಗಿರುತ್ತಾರೆ.

ವಿದ್ಯಾರ್ಥಿಗಳಿಗಾಗಿ ವಿವಿಧ ಕೋರ್ಸ್‌ಗಳಿಗೆ ತೆರಳಲು ಪ್ರವೇಶ ಪರೀಕ್ಷೆಗಳು ನಡೆಯುತ್ತಿರುತ್ತದೆ. ಅಂತೆಯೇ ಬ್ಯಾಂಕಿಂಗ್‌, ಸೇನೆ ಸಹಿತ ವಿವಿಧ ವಿಭಾಗಗಳಿಗೆ ಸೇರಲು ಪರೀಕ್ಷೆಗಳನ್ನು ಆಯಾಯ ಇಲಾಖೆಗಳು ನಡೆಸುತ್ತದೆ. ಒಂದು ಉದ್ಯೋಗದಲ್ಲಿರುವವರು ಭಡ್ತಿ ಅಥವಾ ಇನ್ಯಾವುದೋ ಕಾರಣಕ್ಕಾಗಿಯೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಾರೆ.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು
ಪ್ರಸ್ತುತ ಸಾವಿರಾರು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿವೆ. ಯಾವ ಪರೀಕ್ಷೆಗಳಲ್ಲಿ ಭಾಗವಹಿಸಬೇಕು ಎಂದು ಗೊಂದಲ ಸೃಷ್ಟಿಸುವಷ್ಟು ಸ್ಪರ್ಧೆಗಳಿದ್ದರೂ ನಮ್ಮ ಆಯ್ಕೆ ಸ್ಪಷ್ಟವಾಗಿರಬೇಕು. ಪ್ರಸ್ತುತ ಐಎಎಸ್‌, ಐಪಿಎಸ್‌, ಕೆಎಎಸ್‌ ಪರೀಕ್ಷೆಗಳ ಕಡೆಗೆ ಬಹುತೇಕ ಮಂದಿ ಹೆಚ್ಚಿನ ಒತ್ತು ನೀಡುತ್ತಾರೆ. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂದರೆ, ಐಎಎಸ್‌, ಕೆಎಎಸ್‌, ಬ್ಯಾಂಕಿಂಗ್‌, ಶಿಕ್ಷಕರ ಆಯ್ಕೆ ಹಾಗೂ ಇನ್ನಿತರ ಪರೀಕ್ಷೆಗಳಲ್ಲಿ ಪ್ರತಿ ಅಭ್ಯರ್ಥಿಯ ಮನೋಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಶ್ನೆಗಳು ಸಾಮಾನ್ಯವಾಗಿರುತ್ತದೆ. ಅದಕ್ಕೆ ಅಭ್ಯರ್ಥಿಗಳು ಮಾನಸಿಕವಾಗಿ ಸಿದ್ಧರಿರಬೇಕಾಗುತ್ತದೆ. ಇನ್ನೂ ವಿದ್ಯಾರ್ಥಿಗಳಿಗಾಗಿ ನೀಟ್‌, ಜೆಇಇ ಮೈನ್ಸ್‌ ಅಲ್ಲದೆ, ಪದವೀಧರ ಫಾರ್ಮಸಿ ಯೋಗ್ಯತಾ ಪರೀಕ್ಷೆ (ಜಿಪಿಎಟಿ) ಮತ್ತು ಸಾಮಾನ್ಯ ಮ್ಯಾನೇಜ್‌ಮೆಂಟ್‌ ಪ್ರವೇಶ ಪರೀಕ್ಷೆ (ಸಿಮ್ಯಾಟ್‌)ಯೂ ನಡೆಯುತ್ತದೆ.

ಭಾರತದ ರಕ್ಷಣಾಪಡೆಯ ವಿಭಾಗಗಳಾದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಅಧಿಕಾರಿಗಳಾಗಿ ಆಯ್ಕೆಯಾಗಲು ಸುಮಾರು 20ಕ್ಕೂ ಹೆಚ್ಚು ನೇಮಕಾತಿ ಯೋಜನೆಗಳಿವೆ. ಇವುಗಳಲ್ಲಿ ಪ್ರಮುಖವಾಗಿರುವ ವಿಧಾನವೆಂದರೆ ಎನ್‌.ಡಿ.ಎ. ಮತ್ತು ಎನ್‌.ಎ. ಪರೀಕ್ಷೆ. ಎನ್‌.ಡಿ.ಎ(ನ್ಯಾಷನಲ್‌ ಡಿಫೆನ್ಸ್‌ ಆಕಾಡೆಮಿ) ಮತ್ತು ಎನ್‌.ಎ(ನೇವಲ್‌ ಅಕಾಡೆಮಿ) ಪರೀಕ್ಷೆಯನ್ನು ಯುಪಿಎಸ್ಸಿ ನಡೆಸುತ್ತದೆ. ಪ್ರತಿ ವರ್ಷ ನಿಯುಮಿತವಾಗಿ ಎರಡು ಬಾರಿ ಎಪ್ರಿಲ್‌ ಮತ್ತು ಸೆಪ್ಟಂಬರ್‌ ತಿಂಗಳಲ್ಲಿ ಜರಗುತ್ತದೆ. ಪ್ರತಿ ಪರೀಕ್ಷೆ ನಡೆಯುವ ಮೂರು ತಿಂಗಳು ಮುಂಚಿತವಾಗಿಯೇ ಈ ಕುರಿತು ಅರ್ಜಿಗಳನ್ನು ಕರೆಯಲಾಗುತ್ತದೆ. ಈ ಪರೀಕ್ಷೆಯನ್ನು ದೇಶದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ತೆಗೆದುಕೊಂಡು ಆಯ್ಕೆಯಾದವರು ರಕ್ಷಣಾದಳದಲ್ಲಿನ ತಮ್ಮ ಆಯ್ಕೆಯ ಭಾಗಗಳಲ್ಲಿ ನಿಯೋಜಿತ ಅಧಿಕಾರಿಯಾಗಿ ಶಾಶ್ವತ ಸೇವೆ ಸಲ್ಲಿಸಲು ಅರ್ಹತೆ ಗಳಿಸುತ್ತಾರೆ. ಪರೀಕ್ಷೆ ಬರೆಯಲು ಅರ್ಹತೆಗಳಿರುತ್ತದೆ. ಎನ್‌.ಡಿ.ಎ. ಮತ್ತು ಎನ್‌.ಎ. ಪರೀಕ್ಷೆಯು ಲಿಖೀತ ಪರೀಕ್ಷೆ , ಬುದ್ಧಿಶಕ್ತಿ, ವ್ಯಕ್ತಿತ್ವ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿದೆ. ಇದರಲ್ಲಿ ಲಿಖಿತ ಪರೀಕ್ಷೆಯನ್ನು ಯು.ಪಿ.ಎಸ್‌.ಸಿ. ನಡೆಸುತ್ತದೆ. ಉಳಿದ ಎರಡು ಪರೀಕ್ಷೆಗಳನ್ನು ಸರ್ವೀಸಸ್‌ ಎಸ್‌ಎಸ್ಬಿ ನಡೆಸುತ್ತದೆ.

ಅರ್ಜಿ ಹಾಕುವ ದಿನ ಖಚಿತ ಪಡಿಸಿಕೊಳ್ಳಿ
ಯಾವುದೇ ಸ್ಪರ್ಧೆಗಳು ನಡೆಯುವ ಮುನ್ನ ದಿನಪತ್ರಿಕೆಗಳಲ್ಲಿ ಅಥವಾ ತಮ್ಮ ಅಧಿಕೃತ ವೆಬ್‌ ಸೈಟ್‌ಗಳಲ್ಲಿ ಮಾಹಿತಿ ಬಿಡುಗಡೆ ಮಾಡಿರುತ್ತಾರೆ. ಆಯಾಯಾ ಪರೀಕ್ಷೆಗಳು ನಡೆಯುವ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಲು ಕೊನೆಯ ದಿನ ಸಹಿ ತ ಬೇಕಾದ ಅರ್ಹತೆಗಳ ಕುರಿತು ತಿಳಿದುಕೊಳ್ಳಬೇಕು. ಒಮ್ಮೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡರೆ ಮತ್ತೊಂದು ವರ್ಷ ಸುಮ್ಮನೆ ವ್ಯರ್ಥವಾಗುತ್ತದೆ.

ಕೋಚಿಂಗ್‌  ಬೇಕಿಲ್ಲ
ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೆ ಕೋಚಿಂಗ್‌ ಕೇಂದ್ರಗಳಲ್ಲಿ ತರಬೇತು ಪಡೆಯಲೇಬೇಕು ಎಂಬ ಯೋಚನೆ ಹಲವರಲ್ಲಿ ಇದೆ. ಆದರೆ ಕೋಚಿಂಗ್‌ ಕೇಂದ್ರಗಳ ನೆರವು ಪಡೆಯದೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬಹುದೆಂದು ಸಾಕಷ್ಟು ಅಭ್ಯರ್ಥಿಗಳು ತೋರಿಸಿಕೊಟ್ಟಿದ್ದಾರೆ. ಪ್ರತಿದಿನ ಇಂತಿಷ್ಟು ಗಂಟೆ ಪರೀಕ್ಷೆಗೆ ಸಿದ್ಧತೆ ಮಾಡಲೇಬೇಕು ಎಂದು ಟೈಮ್‌ಟೇಬಲ್‌ ಹಾಕಿಕೊಳ್ಳಿ. ಕಷ್ಟಪಟ್ಟು ಸಾಕಷ್ಟು ಸಮಯವನ್ನು ಓದಲು ಮತ್ತು ವಿಷಯಗಳ ಮನನ ಮಾಡಲು ವಿನಿಯೋಗಿಸಿ ಬರೆಯಲಿರುವ ಪರೀಕ್ಷೆಗೆ ಸಂಬಂಧಪಟ್ಟ ಸಿಲೆಬಸ್‌, ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಳ್ಳಿ. ಇಂತಹ ಸರಕುಗಳು ಯುಪಿಎಸ್ಸಿ, ಕೆಪಿಎಸ್ಸಿ ಇತ್ಯಾದಿ ವೆಬ್‌ಸೈಟ್‌ ಗಳಲ್ಲೇ ದೊರಕುತ್ತದೆ. ಆಯಾ ಸಿಲೆಬಸ್‌ ತಕ್ಕಂತಹ ಪುಸ್ತಕಗಳನ್ನು ಸಂಗ್ರಹಿಸಿಕೊಳ್ಳಿ. 

ಓದಲೇಬೇಕಾದ ಕೆಲವು ಪುಸ್ತಕಗಳನ್ನು ಖರೀದಿಸಿ. ಗ್ರಂಥಾಲಯಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ. ಇಂಟರ್ನೆಟ್‌ ಮೂಲಕ ನಿಮ್ಮ ಪರೀಕ್ಷೆಗೆ ಪೂರಕವಾದ ಮಾಹಿತಿಗಳನ್ನು ಪಡೆದುಕೊಂಡು ಅಧ್ಯಯನ ಮಾಡಿ.

ಗುಂಪು ಚರ್ಚೆಯಲ್ಲಿ ಪಾಲ್ಗೊಳ್ಳಿ
ನಿಮ್ಮ ಜತೆ ನಿಮ್ಮಂತೆ ಪರೀಕ್ಷೆ ಬರೆಯುವವರಿದ್ದರೆ ಅವರ ಸ್ನೇಹ ಬೆಳೆಸಿಕೊಳ್ಳಿ. ವಿಷಯಕ್ಕೆ ಸಂಬಂಧಪಟ್ಟಂತೆ ಅವರೊಂದಿಗೆ ಗುಂಪು ಚರ್ಚೆ ನಡೆಸಿ. ಹೀಗೆ ಈಗಲೇ ತಯಾರಿ ಆರಂಭಿಸಿದರೆ ಮುಂದಿನ ವರ್ಷದಲ್ಲಿ 1- 2 ಸ್ಪರ್ಧಾತ್ಮಕ ಪರೀಕ್ಷೆಯನ್ನಾದರೂ ಬರೆಯಬಹುದು.

ಹೊಸ ಹೊಸ ವಿಷಯ ತಿಳಿದುಕೊಳ್ಳಿ
ನೀವು ಓದಲೇಬೇಕಾದ ಕೆಲವು ಪುಸ್ತಕಗಳನ್ನು ಖರೀದಿಸಿ. ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿಗಳನ್ನು ಓದಿ. ಗ್ರಂಥಾಲಯಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ. ಇಂಟರ್ನೆಟ್‌ ಸೌಲಭ್ಯವಿದ್ದರೆ ದೊಡ್ಡ ಲೈಬ್ರೆರಿ ನಿಮ್ಮ ಬಳಿ ಇದ್ದಂತೆ. ಇಂಟರ್ನೆಟ್‌ ಮೂಲಕ ನಿಮ್ಮ ಪರೀಕ್ಷೆಗೆ ಪೂರಕವಾದ ಮಾಹಿತಿಗಳನ್ನು ಪಡೆದುಕೊಂಡು ಅಧ್ಯಯನ ಮಾಡಿ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ವೆಬ್‌ಸೈಟ್‌ಗಳು, ಚರ್ಚಾ ತಾಣಗಳಿಗೆ ಭೇಟಿ ನೀಡುತ್ತಿರಿ.

 ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.