ದೇಹಭಾಷೆ  ಕೆಲಸ ಗಿಟ್ಟಿಸುವಲ್ಲಿ ನಿರ್ಣಾಯಕ


Team Udayavani, Oct 17, 2018, 1:14 PM IST

17-october-11.gif

ಉತ್ತಮ ಅಂಕವಿದೆ, ಹಲವು ಸಂದರ್ಶನ ಎದುರಿಸಿದರೂ ಕೆಲಸ ಸಿಗಲಿಲ್ಲ ಎನ್ನುವ ಕೊರಗು ಹಲವರಲ್ಲಿರುತ್ತದೆ. ಸಂದರ್ಶನಕ್ಕೆ ಕೇವಲ ಅಂಕ ಮುಖ್ಯವಲ್ಲ ದೇಹ ಭಾಷೆ ಕೂಡ ಅಗತ್ಯ ಎಂಬುದನ್ನು ಹೆಚ್ಚಿನವರು ಮರೆತಿರುತ್ತಾರೆ. ಸಂದರ್ಶನಕ್ಕೆ ಹೋಗುವಾಗ ದೇಹಭಾಷೆಯ ಕುರಿತು ತಿಳಿದುಕೊಳ್ಳುವುದು ಬಹುಮುಖ್ಯ. ಇಲ್ಲಿ ದೇಹ ಭಾಷೆಗೆ ವಿಶೇಷ ಅಂಕವಿದೆ ಎಂಬುದನ್ನು ಮರೆಯಬಾರದು. ಹೆಚ್ಚಿನ ಸಂದರ್ಭಗಳಲ್ಲಿ ನಿಮ್ಮ ಅಂಕ ಉತ್ತಮವಿಲ್ಲದಿದ್ದರೂ ದೇಹಭಾಷೆಯ ಮೂಲಕವೇ ನೀವು ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಿದೆ.

ಸಂವಹನದಲ್ಲಿ ದೇಹ ಭಾಷೆ ((body language) ಅತಿ ಮುಖ್ಯವಾದದ್ದು. ನಮ್ಮ ಗುಣನಡತೆಯನ್ನು ಇದು ಸೂಚಿಸುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೆಲಸ ಮಾಡುವಾಗ ಆ ಪ್ರದೇಶಗಳಲ್ಲಿ ನಮ್ಮ ವರ್ತನೆ ಮಹತ್ವವೆನಿಸುತ್ತದೆ. ಕೆಲವೊಂದು ಬಾರಿ ಇದು ಯಶಸ್ಸಿಗೂ ಅಥವಾ ಬದುಕಿನ ಸೋಲಿಗೂ ಕಾರಣವಾಗಬಹುದು. ಈ ಕಾರಣದಿಂದಲೇ ಪ್ರತಿಯೊಬ್ಬರೂ ತಮ್ಮ ಕೆಲಸಗಳ ಮೂಲಕ ವರ್ತನೆಗಳನ್ನು ತೋರ್ಪಡಿಸುವ ಅನಿವಾರ್ಯತೆ ಇದೆ.

ಕೆಲಸ ಹುಡುಕುತ್ತಿರುವ ಸಮಯದಲ್ಲಿ ಅನೇಕ ಕಂಪೆನಿಗಳಲ್ಲಿ ಸಂದರ್ಶನ ಮಾಡಿದರೂ, ಆಯ್ಕೆಯಾಗುತ್ತಿಲ್ಲ ಎಂಬ ಚಿಂತೆ ಅನೇಕರಿಗೆ ಬಂದಿರಬಹುದು. ಅಲ್ಲದೇ, ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದರೂ, ಸಂದರ್ಶನ ಉತ್ತಮವಾಗಿ ನಿರ್ವಹಿಸಿದರೂ, ಅದೇಕೆ ಆಯ್ಕೆಯಾಗುತ್ತಿಲ್ಲ ಎಂಬ ಚಿಂತೆ ಅನೇಕರಲ್ಲಿರಬಹುದು. ಇದಕ್ಕೆ ನಮ್ಮ ನ್ಯೂನತೆಗಳೇ ಕಾರಣವಾಗಿರಬಹುದು. ಏಕೆಂದರೆ ಹೆಚ್ಚಿನ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಸಂದರ್ಶನಕಾರರು ಬಾಡಿ ಲಾಂಗ್ವೇಜ್‌ ಗಮನಿಸಿಯೇ ಕೆಲಸಕ್ಕೆ ಆಯ್ಕೆ ಮಾಡುತ್ತಾರೆ.

ಹೇಗಿರಬೇಕು?
ನಾವು ಕುಳಿತುಕೊಳ್ಳುವ ಸಮಯದಿಂದಲೇ ನಮ್ಮನ್ನು ಗಮನಿಸುವ ವ್ಯಕ್ತಿಗಳಿರುತ್ತಾರೆ. ಅದರಲ್ಲಿಯೂ, ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳ ಬಳಿ ಮಾತನಾಡುವಾಗಲಂತೂ ತುಂಬಾ ಜಾಗರೂಕರಾಗಿರಬೇಕು. ಆ ಸಮಯದಲ್ಲಿ ನಮ್ಮ ಹಾವಭಾವಗಳು ಪರಿಗಣನೆಗೆ ಬರುತ್ತವೆ. ಕುಳಿತುಕೊಳ್ಳುವ ಸಮಯದಲ್ಲಿ ಸಾಧ್ಯವಾದಷ್ಟು ನೇರವಾಗಿ ಕುಳಿತುಕೊಳ್ಳಬೇಕು. ಉತ್ತಮವಾಗಿ ಮಾತನಾಡುವವರು ಮೊದಲು ವಿಚಾರಗಳನ್ನು ಕೇಳಲು ಕಲಿಯಬೇಕು. ಆದ್ದರಿಂದ ಮಾತಿನ ಮಧ್ಯೆ ಅನಗತ್ಯವಾಗಿ ವಾದ ಮಾಡಬಾರದು. ಇದು ನಮ್ಮ ವರ್ತನೆಯನ್ನು ಪ್ರತಿಬಿಂಬಿಸುತ್ತದೆ.

ಆಯಾ ಸಮಯದಲ್ಲಿ ಅಲ್ಲಿನ ಸನ್ನಿವೇಶಗಳ ಬಗ್ಗೆ ನಮಗೆ ಅರಿವಿರಬೇಕು. ಮುಖದಲ್ಲಿ ಮೂಡಿಬರುವಂತಹ ಭಾವ ಸನ್ನಿವೇಶಕ್ಕೆ ತಕ್ಕಂತೆ ಇರಬೇಕು. ಹಾಗಂತ ಅತಿಯಾದಾಗ ಅದುವೇ ಕಂಟಕವಾಗುವ ಸಾಧ್ಯತೆಯೂ ಇದೆ.

ಇತ್ತೀಚಿನ ದಿನಗಳಲ್ಲಿ ವ್ಯಕ್ತಿಗಳ ಜತೆ ಮಾತನಾಡುವ ಸಮಯದಲ್ಲಿ ಕೈಕಟ್ಟಿ ನಿಲ್ಲುವುದನ್ನು ಕಾಣುತ್ತೇವೆ. ಇದು ಸರಿಯಲ್ಲ. ಮೊದಲು, ಆರಾಮವಾಗಿ ನಿಲ್ಲುವುದನ್ನು ಕರಗತ ಮಾಡಿಕೊಳ್ಳಬೇಕು. ಯಾವುದೇ ಹಾಸ್ಯ ಚಟಾಕಿಗೆ ನಗಬೇಕಾದಾಗ ಆ ಸಮಯದಲ್ಲಿ ನಗದೆ ಉಳಿದ ವೇಳೆ ಜೋರಾಗಿ ನಗುವ ಪ್ರವೃತ್ತಿಯವರು ಕೂಡ ಇದ್ದಾರೆ. ಇದು ಉದ್ಯೋಗ ಸಂದರ್ಶನ ಸಹಿತ ಗಣ್ಯರ ಜತೆ ಮಾತನಾಡುವ ಸಮಯದಲ್ಲಿ ಸಲ್ಲದು. ಏಕೆಂದರೆ ಕೆಲವೊಂದು ಬಾರಿ ಜೀವನದ ತಿರುವಿಗೆ ಇದೇ ಮುಳ್ಳಾಗಬಹುದು. ಅಷ್ಟೇ ಏಕೆ ಸಂದರ್ಶನದಲ್ಲಿದ್ದರೂ, ಕೂದಲು ಸರಿ ಮಾಡುವ ಯುವತಿಯರೂ ಇದ್ದಾರೆ. ಚರ್ಚೆಯ ವಿಷಯಕ್ಕಿಂತ ಕೂದಲಿನ ಬಗ್ಗೆ ಗಮನವಿರುವುದು ಸರಿಯಲ್ಲ. ಕಣ್ಣುಗಳೇ ಮಾತನಾಡುತ್ತವೆ ಎಂದು ಹೇಳುವವರಿದ್ದಾರೆ. ಅದರಂತೆಯೇ ಯಾರ ಜತೆಗಾದರೂ ಮಾತನಾಡುವ ಸಮಯದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು.ಹೆಚ್ಚಿನ ಮಂದಿ ಇದನ್ನು ಅನುಸರಿಸುವುದಿಲ್ಲ.

ಕಲಿಸಬೇಕಿದೆ ಬಾಡಿ ಲ್ಯಾಂಗ್ವೇಜ್‌
ಇತ್ತೀಚಿನ ದಿನಗಳಲ್ಲಿ ಫ್ಯಾಶನ್‌ ಪ್ರಪಂಚ ವಿಶಾಲವಾದಂತೆ ನಮ್ಮ ನಡವಳಿಕೆಗಳೂ ಬದಲಾಗಿವೆ. ವರ್ತನೆಯ ವಿಚಾರವಾಗಿನ ಪ್ರತ್ಯೇಕ ಕಲಿಕೆಯ ಅಗತ್ಯವಿದೆ. ಏಕೆಂದರೆ, ಸಂದರ್ಶನಕ್ಕೆ ಹೋಗುವ ಸಮಯದಲ್ಲಿ ಯಾವ ರೀತಿ ಹಾವಭಾವ ಇರಬೇಕು, ಗಣ್ಯರು, ಶಾಲೆಯಲ್ಲಿ ಅಧ್ಯಾಪಕರು, ಸ್ನೇಹಿತರು, ಪೋಷಕರ ಜತೆ ಮಾತನಾಡುವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಇದನ್ನು ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಆವಶ್ಯಕತೆ ಹೆಚ್ಚಾಗಿದೆ. ಇದೇ ಕಾರಣಕ್ಕಿಂದು ಸಂದರ್ಶನಕ್ಕೆ ತಯಾರಾಗುವುದು ಹೇಗೆ? ಎಂಬ ಕಾರ್ಯಾಗಾರಗಳು ವಿಶೇಷ ಪ್ರಾಮುಖ್ಯ ಪಡೆದುಕೊಂಡಿವೆ. 

ಮನೆಯಲ್ಲೂ ಕಲಿಸಬಹುದು
ಬಾಡಿ ಲ್ಯಾಂಗ್ವೇಜ್‌ ಎನ್ನುವುದು ಕೇವಲ ಪುಸ್ತಕದಿಂದ ಕಲಿಯಲು ಸಾಧ್ಯವಿಲ್ಲ. ಮನೆಯಲ್ಲಿ ಹೆತ್ತವರೂ ಮಕ್ಕಳಿಗೆ ಇದನ್ನು ಕಲಿಸಿಕೊಡಬಹುದು. ಹಿರಿಯರಿಗೆ ಗೌರವಕೊಡುವುದು, ಹಿರಿಯರೆದುರು ಕುಳಿತು ಕೊಳ್ಳುವುದು, ಮಾತನಾಡುವುದು, ಎಲ್ಲಿ, ಯಾವಾಗ ಹೇಗೆ ವರ್ತಿಸಬೇಕು ಎಂಬುದನ್ನು ತಾವು ಪಾಲಿಸಿ, ಮಕ್ಕಳಿಗೆ ಹೇಳಿಕೊಡುವ ಮೂಲಕ ಬಾಡಿ ಲ್ಯಾಂಗ್ವೇಜ್‌ ಅನ್ನು ಕಲಿಸಲು ಸಾಧ್ಯವಿದೆ. 

ಏನಿರುತ್ತವೆ?
ಕೆಲಸದ ಸಂದರ್ಶನದ ಸಮಯದಲ್ಲಿ ಹಾವ ಭಾವ ಅತೀ ಮುಖ್ಯವಾಗಿರುತ್ತದೆ. ಎದುರಿನಲ್ಲಿ ಕುಳಿತಿರುವ ವ್ಯಕ್ತಿ ಏನು ಹೇಳುತ್ತಾರೆ ಎಂಬುವುದನ್ನು ಸರಿಯಾಗಿ ಕೇಳುವಂಥ ವ್ಯವದಾನ ಬೇಕು. ಈ ವೇಳೆ ಮುಖದ ಹಾವಭಾವದ ಮೇಲೆ ಹಿಡಿತವಿರಬೇಕಾಗುತ್ತದೆ. ಸಂದರ್ಶನದ ಸಮಯದಲ್ಲಿ ಮುಖದ ಭಾವಗಳಿಂದ ನಮ್ಮನ್ನು ಅಳೆಯಬಹುದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೇಹದ ನಿಲುವು, ಚಲನೆ, ಸಕಾರಾತ್ಮಕ ಆಲೋಚನೆಗಳು ಕೂಡ ಪ್ರತಿಯೊಂದು ಕಾರ್ಯ ಯಶಸ್ವಿಯಾಗಲು ಸಾಧ್ಯ. ಹೀಗಿದ್ದಾಗ, ನಮ್ಮ ಬಾಡಿ ಲಾಂಗ್ವೇಜ್‌ ಹೇಗಿರಬೇಕು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. 

 ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.