ಬದುಕು ಬದಲಿಸುವ ನಟನ ಹವ್ಯಾಸ
Team Udayavani, Oct 24, 2018, 1:46 PM IST
ರಂಗ ಭೂಮಿ ಎಲ್ಲ ಪ್ರತಿಭೆಗಳಿಗೂ ವೇದಿಕೆಯನ್ನೊದಗಿಸುತ್ತದೆ. ನಟನಾ ಕೌಶಲವಿದ್ದರೆ ಸಾಕು ರಂಗಭೂಮಿಗೆ ಸುಲಭವಾಗಿ ಎಂಟ್ರಿ ಪಡೆಯಬಹುದು. ಚಲನಚಿತ್ರ, ಕೆಲವು ರಿಯಾಲಿಟಿ ಶೋ ಅಥವಾ ನಾಟಕ ರಂಗದಲ್ಲಿ ಕೆಲವರ ಅಭಿನಯವನ್ನು ಮನಸ್ಸಿಗೆ ಖುಷಿ ಕೊಡುತ್ತದೆ. ಒಬ್ಬನಿಗೆ ನಾಯಕನ ಪಾತ್ರ ಇಷ್ಟವಾದರೆ, ಇನ್ನು ಕೆಲವರಿಗೆ ವಿಲನ್ ರೋಲ್ ಮೆಚ್ಚುಗೆಯಾಗಬಹುದು. ಮತ್ತೆ ಕೆಲವರಿಗೆ ಕೆಲ ನಿಮಿಷಗಳ ಕಾಲ ಬಂದುಹೋದ ಪಾತ್ರವೂ ಮನ ಸೆಳೆಯಬಹುದು. ಹೀಗೆ ಒಬ್ಬೊಬ್ಬರಿಗೆ ಒಬ್ಬೊಬ್ಬರ ಅಭಿನಯ ಇಷ್ಟವಾಗುತ್ತದೆ. ಅವರನ್ನು ನೋಡಿದಾಗ ನಮ್ಮೊಳಗೂ ಒಬ್ಬ ಕಲಾವಿದ ಜಾಗೃತನಾಗುತ್ತಾನೆ. ತಾವೂ ಯಾವುದಾದರೊಂದು ಪಾತ್ರ ಮಾಡಬೇಕು ಎಂಬ ಆಸೆ ಮೂಡುವುದು ಸಹಜ. ಇಂಥ ಆಕಾಂಕ್ಷಿಗಳಿಗೆ ಹಲವು ಅವಕಾಶಗಳೂ ಇವೆ. ನಿಮ್ಮಲ್ಲಿ ನಟನಾ ಕೌಶಲವೊಂದಿದ್ದರೆ ಸಾಕು, ಪಾರ್ಟ್ ಟೈಮ್, ಫುಲ್ ಟೈಮ್ ಆಗಿ ಇದರಲ್ಲಿ ತೊಡಗಿಸಿಕೊಳ್ಳಬಹುದು.
ಕುರಿ ಪ್ರತಾಪ, ಮಂಡ್ಯ ರಮೇಶ್ ಹೀಗೆ ರಂಗ ಕಲಾವಿದರು ಕಾಮಿಡಿ ಶೋಗಳಲ್ಲಿ ನೋಡುಗರನ್ನು ರಂಜಿಸುತ್ತಾರೆ. ಈ ಅಭಿನಯ ಅಥವಾ ನಟನೆ ಎಂಬುದು ಒಂದು ಕಲೆ. ಹಾಗಾಗಿ ಈ ಅಭಿನಯ ಮಾಡಲು ಒಂದು ಪಾತ್ರಕ್ಕೆ ನಮ್ಮನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಈ ಕಲೆ ನಮ್ಮನ್ನು ಆವರಿಸಿತು ಎಂದಾದರೆ ರಂಗಭೂಮಿಯಿಂದ ಚಲನಚಿತ್ರ ನಟರವರೆಗೆ ತಮ್ಮನ್ನು ವೃದ್ಧಿಸಿಕೊಳ್ಳಬಹುದು.
ಡಬ್ ಸ್ಮಾಶ್ ಎನ್ನುವ ಕ್ರೇಜ್
ಯುವಕರಲ್ಲಿ ಈಗ ಹೆಚ್ಚಿನವರಿಗೆ ಈ ನಟನೆ ಅಥವಾ ಅಭಿನಯದ ಆಸಕ್ತಿ ಇರುವುದನ್ನು ಕಾಣುತ್ತೇವೆ. ಏಕೆಂದರೆ ಕೆಲವು ನಟರ ಚಲನಚಿತ್ರದ ವೀಡಿಯೋ ತುಣುಕುಗಳನ್ನು ಡಬ್ ಸ್ಮಾಶ್ ಮಾಡುವ ಮೂಲಕ ಆ ನಟನ ಪಾತ್ರದ ಅಭಿನಯವನ್ನು ಮಾಡುತ್ತಾರೆ. ಅದೇ ಕೆಲವರಿಗೆ ಸ್ಫೂರ್ತಿಯೂ ಆಗಬಹುದು. ಅಭಿನಯ ಮಾಡುವ ಕಲಾವಿದನಲ್ಲಿ ಕೆಲವೊಂದು ಗುಣಗಳು ಇರಲೇಬೇಕು. ಸ್ಪಷ್ಟ ಭಾಷಾ ಉಚ್ಚಾರ, ಹಾವ- ಭಾವ, ದೈಹಿಕ ಭಾಷೆ (ಬಾಡಿಲ್ಯಾಂಗ್ವೇಜ್), ನವರಸಗಳು, ಅಭಿನಯ, ನೃತ್ಯಗಳ ಮೂಲಕ ಕೊಟ್ಟ ಪಾತ್ರಕ್ಕೆ ಪರಕಾಯ ಪ್ರವೇಶವನ್ನು ಮಾಡುವ ಸಾಮರ್ಥ್ಯ ಇಲ್ಲಿ ಅಗತ್ಯವಾಗಿದೆ. ನಟನೆಯಲ್ಲಿ ಆಸಕ್ತಿ ಇದ್ದರೆ ಇದರಲ್ಲಿ ಮುಂದುವರಿಯುವುದು ಸುಲಭ. ಇದನ್ನು ಕಲಿಸುವ ರಂಗಭೂಮಿ ಕಲಾ ಕೇಂದ್ರಗಳಿವೆ. ಕೆಲವೊಂದು ಶಾಲೆ, ಕಾಲೇಜುಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಗಳೂ ಇವೆ. ಹೀಗಾಗಿ ವಿದ್ಯಾರ್ಥಿ ಹಂತದಲ್ಲೇ ಇದರಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.