ಬದುಕು ಬದಲಿಸುವ ಆಟೋ ಮೊಬೈಲ್
Team Udayavani, Mar 20, 2019, 8:09 AM IST
ಒಬ್ಬೊಬ್ಬರಿಗೆ ಒದೊಂದು ವಸ್ತುಗಳ ಮೇಲೆ ಒಲವಿರುತ್ತದೆ ಅದರಂತೆ ವಾಹನಗಳನ್ನು ಪ್ರೀತಿಸುವವರ ಸಂಖ್ಯೆಯೂ ಕಡಿಮೆ ಇಲ್ಲ. ಅದಕ್ಕೆ ಪೂರಕವಾಗಿ ಪ್ರತಿ ಮನೆಗಳನ್ನೂ ದಿನದಿಂದ ದಿನಕ್ಕೆ ವಾಹನಗಳೂ ಹೆಚ್ಚಾಗುತ್ತಿದ್ದು, ಅವುಗಳ ನಿರ್ವಹಣೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇದರಿಂದ ಆಟೋ ಮೊಬೈಲ್ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದರೆ ತಪ್ಪಿಲ್ಲ.
ಮೊದಲು ಮೆಕ್ಯಾನಿಕ್ ಎಂದರೆ ಕೇವಲ 2 ವ್ಹೀಲರ್, 4ವ್ಹೀಲರ್ ಗಳನ್ನು ಸರಿ ಮಾಡುವವರು ಎಂಬ ಮಾತಿತ್ತು. ಆದರೆ ಇಂದು ಆ ಮಾತು ಬದಲಾಗಿದೆ. ಇತ್ತೀಚೆಗೆ ಎಲೆಕ್ಟ್ರಾನಿಕ್ ಕಾರ್ ಗಳ ಹಾವಳಿ ಜಾಸ್ತಿಯಾಗಿದ್ದು ಅಮೆರಿಕಾದಂತಹ ದೊಡ್ಡ ದೊಡ್ಡ ರಾಷ್ಟ್ರ ಗಳು ತಯಾರಿಸುವ ಕಾರ್ ಗಳು ಜನಮನ ಸೆಳೆಯುತ್ತಿದೆ. ಇವುಗಳು ಹಾಳಾದ ಪಕ್ಷದಲ್ಲಿ ಅದನ್ನು ಸರಿ ಮಾಡುವ ಜ್ಞಾನವನ್ನು ಹೊಂದಿರಬೇಕಾಗುತ್ತದೆ. ಕೆಲವು ಕಾರ್ ಗಳಲ್ಲಿ ಎಬಿ ಎಸ್ ಮತ್ತು ಇಬಿಡಿಗಳಂತಹ ಬ್ರೇಕ್ ಸಿಸ್ಟಮ್ ಗಳಿದ್ದು ಅದರ ಜ್ಞಾನ ಕೂಡ ಅಗತ್ಯವಾಗಿರುತ್ತದೆ.
ಡಿಸೈನ್ ಗಳ ಹಾವಳಿ
ಕೆಲವು ಬೈಕ್ ಕಾರ್ ಪ್ರಿಯರು ಹೊಸ ಹೊಸ ಮಾದರಿಯ ಡಿಸೈನ್ ಗಳನ್ನು ಮಾಡುತ್ತಿದ್ದು, ಒಬ್ಬರಿಂದ ಬಬ್ಬರಿಗೆ ಸ್ಪರ್ಧೆಯಂತೆ ಇದು ಮುಂದುವರಿಯುತ್ತಿದೆ. ಅದಲ್ಲದೆ ಬೈಕ್ ಸೈಲೆನ್ಸ ರ್ ನಿಂದ ಹಿಡಿದು ಸಿಟ್, ಹೆಡ್ ಲೈಟ್, ಇಲ್ಲದನ್ನೂ ತಮಗೆ ಬೇಕಾದಂತೆ ಬದಲಿಸಿಕೊಳ್ಳುತ್ತಿದ್ದಾರೆ.
ಶಿಕ್ಷಣ
ಆಟೋ ಮೊಬೈಲ್ ಕ್ಷೇತ್ರದಲ್ಲಿ ಪರಿಣತಿ ಹೊಂದಲು ನಿಮಗೆ ವಿವಿಧ ವಾಹನಗಳ ಬಗ್ಗೆ ಮಾಹಿತಿ ಅದೇ ರೀತಿಯಲ್ಲಿ ಶಿಕ್ಷಣಕ್ಕೆ ಬಂದರೆ ಡಿಪ್ಲೊಮಾ, ಡಿಗ್ರಿ, ಸರ್ಟಿಫಿಕೆಟ್ ಪ್ರೋಗ್ರಾಂಗಳಿದ್ದು ವಿಭಾಗಗಳಿಗೆ ತಕ್ಕಂತೆ ನಿಮಗೆ ಆಯ್ಕೆ ಮಾಡಬಹುದಾಗಿದೆ. ಇದೆಲ್ಲದಕ್ಕಿಂತ ಮಿಗಿಲಾಗಿ ನಿಮಗೆ ವೈಯಕ್ತಿಕ ಆಸಕ್ತಿ, ಕೌಶಲ ಈ ಕ್ಷೇತ್ರಕ್ಕೆ ತುಂಬಾ ಮುಖ್ಯವಾಗಿರುತ್ತದೆ.
ಸ್ವಂತ ಉದ್ಯೋಗಕ್ಕೆ ಬೇಡಿಕೆ
ಆಟೋ ಮೊಬೈಲ್ ಕ್ಷೇತ್ರದಲ್ಲಿ ಆಸಕ್ತಿಯಿರುವವರು ತಮ್ಮದೇ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು. ಅದಲ್ಲದೆ ಬೇರೆ ಬೇರೆ ಉದ್ಯೋಗದ ಜತೆ ಜತೆಗೆ ಇದನ್ನು ಮಾಡಬಹುದು. ಇದರಿಂದ ಆದಾಯಕ್ಕೂ ಕೊರತೆಯಾಗದೇ ಕೆಲಸ ಮಾಡಲು ಸಹಾಯವಾಗುತ್ತದೆ. ಅದಲ್ಲದೆ ಈ ಕ್ಷೇತ್ರಕ್ಕೆ ರೋಬಟ್ ಗಳು ಕಾಲಿಡುತ್ತಿದ್ದು ಪ್ರೊಜೆಕ್ಟ್ ಗಳನ್ನು ಮಾಡುವುದರ ಮೂಲಕ ಕೂಡ ವಿನೂತನ ರೀತಿಯಲ್ಲಿ ಗುರುತಿಸಿಕೊಳ್ಳಬಹುದು.
ಹೊಸ ಶೈಲಿಯ ಮಾರ್ಪಾಡು
ಬೈಕ್, ಕಾರುಗಳನ್ನು ತೆಗೆದುಕೊಂಡ ಮೇಲೆ ಕೆಲವರಿಗೆ ಅದಕ್ಕೆ ವಿನೂತನ ರೀತಿಯ ಮಾರ್ಪಾಡು ಮಾಡಬೇಕೆಂಬ ಹಂಬಲವಿರುತ್ತದೆ. ಆ ಆಸೆಗಳಿಗೆ ನೀರೆರೆಯುವುದು ಆಟೋ ಮೊಬೈಲ್ ಮೆಕ್ಯಾನಿಕ್ ಗಳು. ಸದ್ಯ ಕೆಲವು ಮಾರ್ಪಾಡುಗಳಿಗೆ ಕಾನೂನು ಕ್ರಮ ಅನ್ವಯವಾಗುತ್ತದೆ. ಅದರ ಹೊರತಾಗಿ ಬೈಕ್ ಕಾರುಗಳಿಗೆ ಹೊಸ ಗೆಟಪ್ ನೀಡಲು ಅವಕಾಶವಿದೆ.
ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.