ಸ್ಪರ್ಧಾತ್ಮಕ ಪರೀಕ್ಷೆ ಸ್ವಯಂ ತರಬೇತಿಗಾಗಿ ಹಲವು ದಾರಿ
Team Udayavani, May 2, 2019, 12:24 PM IST
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹಾಗೂ ಪರೀಕ್ಷೆ ಬರೆದು ಉದ್ಯೋಗ ಕ್ಷೇತ್ರಕ್ಕೆ ತೆರಳಲು ಸಾಕಷ್ಟು ಅವಕಾಶವಿರುವ ಕಾಲಘಟ್ಟವಿದು. ನಾಗರಿಕ ಸೇವಾ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಬಹುದು. ಅದರ ತಯಾರಿಗಾಗಿ ನಗರ ದಲ್ಲಿ ಕೋಚಿಂಗ್ ಕೇಂದ್ರ ಮೊದಲಾದ ತರಬೇತಿ ಸಂಸ್ಥೆ ಗಳು ಹುಟ್ಟಿಕೊಂಡಿವೆ. ಆದರೆ ತೀರಾ ಗ್ರಾಮಾಂತರದ ವಿದ್ಯಾರ್ಥಿ ಗಳಿಗೆ ಆಸಕ್ತಿ ಇದ್ದರೂ, ತರಬೇತಿ ಕೊರತೆ ಎದುರಾಗುವುದು ಇದೆ. ಅವೆಲ್ಲದರ ಮಧ್ಯೆ ಕೋಚಿಂಗ್ ಜತೆಗೆ ಸ್ವಯಂ ತರಬೇತಿ ಪಡೆದು ಕೊಳ್ಳುವ ಬಗ್ಗೆ ಇರುವ ಸಾಧ್ಯತೆಗಳು, ದಾರಿಗಳು ಹಲವು.
ಮನೆಯಲ್ಲೇ ಕುಳಿತು ಸ್ವಯಂ ತಯಾರಿಮಾಡಿ ಪರೀಕ್ಷೆ ಗೆದ್ದವರು ಅನೇಕ ಮಂದಿ ಇದ್ದಾರೆ. ಮೊಬೈಲ್ ಇಂಟರ್ನೆಟ್ ಯುಗ ಇದಾಗಿದ್ದು, ಮಾಹಿತಿ ಕಣಜ ತತ್‌ಕ್ಷಣ ಪಡೆದುಕೊಳ್ಳಲು ಸಾಧ್ಯವಿದೆ. ಹಾಗಾಗಿ ಕೋಚಿಂಗ್ ಸೆಂಟರ್ ಅನ್ನು ಅವಲಂಬಿಸಲೇ ಬೇಕಿಲ್ಲ. ಪರಿಶ್ರಮ ಇದ್ದರೆ ಮನೆ ಪಾಠಶಾಲೆ ಆಗಬಹುದು.
ಕೋಚಿಂಗ್ ಕ್ಲಾಸ್‌ನಲ್ಲಿ ನಿಗದಿತ ತರಗತಿ, ಪ್ರತಿಯೊಂದು ವಿಷಯಕ್ಕೂ ಗಮನ, ಪರೀಕ್ಷೆ, ಪರೀಕ್ಷೆಗೆ ಬೇಕಾದ ಸ್ಟಡಿ ಮೆಟಿರಿಯಲ್ ಅಲ್ಲಿರುತ್ತದೆ. ಕಲಿಕಾ ವಾತಾವರಣಕ್ಕೆ ಪೂರಕ ಚಟುವಟಿಕೆಗಳು ಇರುತ್ತವೆ. ಸಹಪಾಠಿಗಳು ಜತೆಗಿದ್ದು, ಅವರ ಜತೆ ಸಾಕಷ್ಟು ಚರ್ಚೆ ನಡೆಸಬಹುದು. ಉತ್ತಮ ತರಬೇತುದಾರರು, ಈಗಾಗಲೇ ಪರೀಕ್ಷೆ ಬರೆದು ಅನುಭವ ಪಡೆದವರು ಇರುತ್ತಾರೆ. ಹಾಗಾಗಿ ಮನೆಯಲ್ಲಿ ಕೋಚಿಂಗ್ ಸೆಂಟರ್‌ನಂತೆ ಓದುವ ವಾತಾವರಣ ಇರುವುದು ಕಷ್ಟ ಅನ್ನುವ ಅಭಿಪ್ರಾಯವು ಇದೆ.
ಮನೆಯೊಳಗಿನ ವಾತಾವರಣ ಅಂದ್ರೆ ಅದು ಭಿನ್ನ. ಮಕ್ಕಳ ಆಟ, ಟಿ.ವಿ. ಸದ್ದು, ನೆಂಟರ, ಪಕ್ಕದ ಮನೆ ಮಂದಿಯ ದಿಢೀರ್ ಭೇಟಿ ಇವೆಲ್ಲವೂ ಅಧ್ಯಯನದ ಏಕಾಗ್ರತೆಗೆ ಅಡ್ಡಿ ಉಂಟು ಮಾಡಬಲ್ಲುದು. ಅದಾಗ್ಯೂ ಮನಸ್ಸು ಮಾಡಿ, ಇವೆಲ್ಲ ಚಟುವಟಿಕೆಗಳಿಂದ ದೂರ ನಿಂತು ಅಭ್ಯಾಸ ಮಾಡಿದರೆ ಮನೆಯಲ್ಲೇ ಕುಳಿತು ಓದಿ ಯಶಸ್ಸು ಪಡೆದಂತಹ ಕಥೆಗಳು ಇವೆ.
ಮಾಹಿತಿ ಪಡೆಯಿರಿ
ಬಹಳ ಮುಖ್ಯವಾಗಿ ಇಂಟರ್‌ನೆಟ್ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವುದು. ಪರೀಕ್ಷೆಗೆ ಪೂರಕವಾದ ಮಾಹಿತಿಗಳನ್ನು ಪಡೆದುಕೊಂಡು ಅಧ್ಯಯನ ಮಾಡಲು ಪೂರಕವಾದ ಸಾಕಷ್ಟು ವೆಬ್‌ಸೈಟ್‌ಗಳು, ಚರ್ಚಾ ತಾಣಗಳಿಗೆ ಭೇಟಿ ನೀಡಬೇಕು. ಅಲ್ಲಿ ದಿನ ನಿತ್ಯದ ಅಪ್‌ಡೇಟ್‌ಗಳನ್ನು ಗಮನಿಸಬೇಕು.
ಸ್ಮಾರ್ಟ್‌ಪೋನ್ ಸೌಲಭ್ಯವಿದ್ದರೆ ಮನೆಯಲ್ಲಿ ಕುಳಿತು ಇಂಟರ್‌ನೆಟ್ ಮೂಲಕ ಜಾಲತಾಣಗಳನ್ನು ಗಮನಿಸಿಕೊಳ್ಳಬಹುದು. ಹೀಗಾಗಿ ಸೈಬರ್ ಸೆಂಟರ್‌ಗಳಿಗೆ ತೆರಳಬೇಕಾದ ಅಗತ್ಯವಿಲ್ಲ. ಈ ಕಾಲಘಟ್ಟದಲ್ಲಿ ಸ್ಮಾರ್ಟ್‌ಪೋನ್ ಸೌಲಭ್ಯ ಇಲ್ಲದ ಮನೆಯೇ ಅಪರೂಪ.
ಪ್ರತಿ ಊರಲ್ಲಿ ಪರೀಕ್ಷೆ ಬರೆಯುವ ಆಸಕ್ತ ಎಷ್ಟು ಜನ ಇದ್ದಾರೆ ಅನ್ನುವ ಬಗ್ಗೆ ಪರಿಶೀಲಿಸಿ. ಬಳಿಕ ಅವರೊಂದಿಗೆ ಸ್ನೇಹ ಬೆಳೆಸಿ ಗುಂಪು ಚಟುವಟಿಕೆ ಮೂಲಕ ಅಧ್ಯಯನ ಮಾಡಿಕೊಳ್ಳಬಹುದು. ಇದರಿಂದ ನಿಮಗೆ ಗೊತ್ತಿಲ್ಲದ ವಿಚಾರಗಳನ್ನು ಇನ್ನೊಬ್ಬರಿಂದ ತಿಳಿದುಕೊಳ್ಳಬಹುದು.
ಅಧ್ಯಯನ ಪ್ರಾರಂಭಿಸುವ ಮೊದಲು
ಅಧ್ಯಯನ ಆರಂಭಿಸುವ ಮೊದಲು ಟೈಮ್ ಟೇಬಲ್ ರೂಪಿಸುವುದು ಉತ್ತಮ. ಪ್ರತಿ ದಿನ ಇಂತಿಷ್ಟು ಸಮಯಕ್ಕೆ ಎದ್ದು, ಇಷ್ಟು ಗಂಟೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ನಿಶ್ಶಬ್ದ ವಾತಾವರಣದಲ್ಲಿ ಕಲಿಕೆ ಆರಂಭಿಸಬೇಕು. ಸಂಶಯಗಳು ಇದ್ದಲ್ಲಿ ಸಂಬಂಧಪಟ್ಟವರು ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು.
ನೀವು ಬರೆಯಲಿರುವ ಪರೀಕ್ಷೆಗೆ ಪೂರಕವಾಗಿ ಸಿಲೆಬಸ್, ಹಳೆ ಪ್ರಶ್ನೆಪತ್ರಿಕೆ, ದಿನ ಪತ್ರಿಕೆ ಮೊದಲಾದವುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ದಿನ ನಿತ್ಯದ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕೆ ಪೂರಕ ಸರಕುಗಳು ಯುಪಿಎಸ್‌ಸಿ, ಕೆಪಿಎಸ್‌ಸಿ ಇತ್ಯಾದಿ ವೆಬ್‌ಸೈಟ್‌ಗಳಲ್ಲೇ ದೊರಕುತ್ತವೆೆ.
ಓದಿದನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕು. ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಒಮ್ಮೆ ಓದಿರುವ ಸಿಲೆಬಸ್‌ಗಳನ್ನು ಮತ್ತೆ ಓದಿಕೊಳ್ಳಿ. ಇದರಿಂದ ನೆನೆಪಿನ ಸಾಮರ್ಥ್ಯ ವೃದ್ಧಿಗೊಳ್ಳುತ್ತದೆ. ಹಿಂದಿನ ವರ್ಷ ನಡೆಸಿದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಗಳನ್ನು ಕಂಡು ಹಿಡಿಯಿರಿ. ಪರೀಕ್ಷೆಯಂತೆ ಸಮಯ ನಿಗದಿ ಪಡಿಸಿ, ಆ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. ಇದರಿಂದ ಮುಂದೆ ಪರೀಕ್ಷೆ ಬರೆಯವ ಸಂದರ್ಭ ಸಮಯದ ನಿರ್ವಹಣೆ ಸಾಧ್ಯವಾಗುತ್ತದೆ. ನೀವು ಓದಲೇಬೇಕಾದ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಸ್ಪರ್ಧಾತ್ಮಕ ಪರೀûಾ ಮಾರ್ಗದರ್ಶಿ, ಗ್ರಂಥಾಲಯ ಭೇಟಿ ಮೊದಲಾದ ಚಟುವಟಿಕೆಗಳಿಗೆ ಒತ್ತು ನೀಡಬೇಕು.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.