ಆತ್ಮ ವಿಶ್ವಾಸದಿಂದ ಕ್ಯಾಂಪಸ್ ಇಂಟರ್ ವ್ಯೂ ಎದುರಿಸಿ
Team Udayavani, Aug 28, 2019, 5:23 AM IST
ವಿದ್ಯಾಭ್ಯಾಸದ ಹಂತ ಮುಗಿದು ಕೆಲಸ ಹುಡುಕುವ ಹಂತದಲ್ಲಿ ಪ್ರತಿಯೊಬ್ಬರಿಗೂ ಗೊಂದಲಗಳು ಎದುರಾಗುತ್ತವೆ. ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಕೆಲಸ ಹುಡುಕುವ ಕಾಲವೊಂದಿತ್ತು. ಆದರೆ ಈಗ ಹಾಗಲ್ಲ. ಎಲ್ಲ ಕ್ಷೇತ್ರ ಗಳಲ್ಲೂ ಪ್ರತಿಭಾವಂತರ ಹುಡುಕಾಟ ನಿರಂತರವಾಗಿ ಸಾಗುತ್ತಿರುತ್ತವೆ. ಆ ಕಾರಣ ದಿಂದಾಗಿಯೇ ವಿದ್ಯಾಭ್ಯಾಸದ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಹಲವಾರು ಕಂಪೆನಿಗಳು ಕ್ಯಾಂಪಸ್ ಇಂಟರ್‌ವ್ಯೂಗಳನ್ನು ನಡೆಸುತ್ತವೆ. ವಾಕ್ ಇನ್ ಇಂಟರ್‌ವ್ಯೂಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತವೆ ಕ್ಯಾಂಪಸ್ ಇಂಟರ್‌ವ್ಯೂ.
ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಗುಂಪು ಚರ್ಚೆ, ಆಪ್ಟಿಟ್ಯೂಡ್ ಟೆಸ್ಟ್, ವೈಯಕ್ತಿಕ ಇಂಟರ್‌ವ್ಯೂಗಳಿರುತ್ತವೆ. ಪ್ರತಿಭಾವಂತರೂ ಕೆಲವೊಂದು ಬಾರಿ ಗೊಂದಲ ಮಾಡಿಕೊಂಡು ಅವಕಾಶವನ್ನು ಕೈ ಚೆಲ್ಲಿ ಕೂರುವುದಿದೆ. ಕ್ಯಾಂಪಸ್ ಇಂಟರ್‌ವ್ಯೂ ಸಮರ್ಥವಾಗಿ ಎದುರಿಸಲು ಇಲ್ಲಿದೆ ಟಿಪ್ಸ್…
ಪರೀಕ್ಷೆ ಹಾಗೂ ಮತ್ತೂಂದು ಸಂದರ್ಶನ. ವಿದ್ಯಾರ್ಥಿಗಳು ಇವೆರಡಕ್ಕೂ ಸಿದ್ಧರಾಗಿಯೇ ತೆರಳಬೇಕು. ನಿಮ್ಮ ಮಾತುಗಾರಿಕೆ ಚೆನ್ನಾಗಿದ್ದು ಸಂದರ್ಶನ ಚೆನ್ನಾಗಿ ಎದುರಿಸುತ್ತೇನೆ ಎಂಬ ನಂಬಿಕೆಯಿದ್ದರೂ ಕೆಲವೊಂದು ಬಾರಿ ಬರೆಯುವ ಪರೀಕ್ಷೆಯಲ್ಲಿ ಅಂಕ ಕಡಿಮೆ ಬರಬಹುದು . ಆದ್ದರಿಂದ ಎರಡಕ್ಕೂ ಸಿದ್ಧರಾಗಿರಬೇಕು. ನಿಮ್ಮ ವಿಷಯದಲ್ಲಿ ಹೆಚ್ಚು ತಿಳಿದುಕೊಂಡಿರಿ.
ಸಂದರ್ಶನಗಳಲ್ಲಿ ಮಾತನಾಡುವಾಗ ಹೆಚ್ಚು ಆತ್ಮವಿಶ್ವಾಸವಿರಲಿ. ಯಾವುದೇ ವಿಷಯವನ್ನು ವಿವರಿಸುವಾಗಲೂ ಗೊಂದಲಕ್ಕೆ ಒಳಗಾಗಬಾರದು. ನಿಮಗೆ ಗೊತ್ತಿಲ್ಲದ ವಿಷಯವನ್ನು ತಿಳಿದಿಲ್ಲವೆಂದೇ ಹೇಳಿ. ಸಂದರ್ಶಕರ ಮುಖ ನೋಡಿ ಉತ್ತರಿಸಿ. ಕೇಳುವ ಪ್ರಶ್ನೆಗೆ ಎಲ್ಲೋ ಹೊರಗೆ ನೋಡುತ್ತಾ ಅಥವಾ ಕೆಳಗೆ ನೋಡುತ್ತಾ ಉತ್ತರಿಸಿದರೆ ಅವರಿಗೆ ನಿಮ್ಮ ಕೆಲಸದ ಮೇಲೆ ನಂಬಿಕೆಯಿಲ್ಲದೆ ಹೋಗಬಹುದು. ಉತ್ತರ ಸ್ಪಷ್ಟವಾಗಿರಲಿ.
ಜಾತಿ, ಮತಗಳ ವಿಷಯಗಳು ಬಂದಾಗ ಅದನ್ನು ಆದಷ್ಟು ತಳ್ಳಿ ಹಾಕಿ. ಅದರಲ್ಲಿ ಆಸಕ್ತಿ ಇಲ್ಲದಂತಿರಿ. ಇಂತಹ ಪ್ರಶ್ನೆಗಳು ನಿಮ್ಮನ್ನು ಪರೀಕ್ಷಿಸಲು ಕೇಳುವುದಾಗಿರಬಹುದು.
ತಾಳ್ಮೆ ಇರುವವರನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದುದರಿಂದ ಕ್ಯಾಂಪಸ್ ಇಂಟರ್‌ವ್ಯೂ ಮಾಡುವಾಗಲೂ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾರೆ. ಸಂದರ್ಶನಕ್ಕೆ ನಿಮ್ಮನ್ನು ಗಂಟೆಗಟ್ಟಲೆ ಕಾಯಿಸುವುದು ಅಥವಾ ಸಂದರ್ಶನದಲ್ಲಿ ಉಲಾr ಪ್ರಶ್ನೆಗಳನ್ನು ಕೇಳಿದ್ದಲ್ಲಿ ತಾಳ್ಮೆಯಾಗಿ ಉತ್ತರಿಸಿ.
ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
Yuzi Chahal: ಡಿವೋರ್ಸ್ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್; ಯಾರೀಕೆ?
Kuchuku Movie: ಟೀಸರ್‌ನಲ್ಲಿ ಕುಚುಕು
Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.