ಹೊಸ ಭವಿಷ್ಯಕ್ಕೆ ಕಾಸ್ಮೆಟೋಲಜಿ
Team Udayavani, Jul 31, 2019, 5:00 AM IST
ಸೌಂದರ್ಯ ಕೇವಲ ಹೆಸರಿಗಷ್ಟೇ ಎಂಬ ಭಾವನೆಯಿದ್ದ ಕಾಲವೊಂದಿತ್ತು. ಟಿವಿ, ತಂತ್ರಜ್ಞಾನಗಳು ಸಮಾಜವನ್ನು ನಿಯಂತ್ರಿಸಲು ಆರಂಭಿಸಿದ ಮೇಲೆ ಸೌಂದರ್ಯದ ಪರಿಕಲ್ಪನೆಯೇ ಬದಲಾಗಿ ಹೋಯಿತು. ಸೌಂದರ್ಯ ವರ್ಧಕಗಳು ಈ ಪರಿಕಲ್ಪನೆಯನ್ನು ಬದಲಾಯಿಸಿದವು ಎಂದರೂ ತಪ್ಪಿಲ್ಲ. ಇಂದು ಹಲವಾರು ಬ್ರ್ಯಾಂಡ್‌ಗಳು ಸೌಂದರ್ಯವನ್ನು ಹೊಸ ಆಯಾಮಕ್ಕೆ ಕೊಂಡೊಯ್ಯುತ್ತಿವೆ. ಇಂತಹ ಸಮಯದಲ್ಲಿ ಕಾಸ್ಮೆಟೋಲಜಿ ಎಂಬುದು ಭರವಸೆಯ ಉದ್ಯೋಗವಾಗಿ ಗೋಚರಿಸುತ್ತದೆೆ.
ಕಾಸ್ಮೆಟೋಲಜಿ ಉದ್ಯೋಗದಲ್ಲಿ ಅಪಾರ ಅವಕಾಶಗಳಿವೆ. ಪ್ರತಿಯೊಬ್ಬ ವ್ಯಕ್ತಿಗೂ ತಾನು ಸುಂದರವಾಗಿ ಕಾಣಬೇಕೆಂಬ ಹಂಬಲವಿರುತ್ತದೆ. ಅಂತಹ ವ್ಯಕ್ತಿಗಳಿಗೆ ಕಾಸ್ಮೆಟೋಲಜಿ ಕ್ಷೇತ್ರದ ಪರಿಣತರು ಅವರನ್ನು ಸುಂದರವಗಿ ಕಾಣುವಂತೆ ಮಾಡಲು ಸಹಕರಿಸುತ್ತಾರೆ. ಇದು ಅಲಂಕಾರ, ಚರ್ಮ ಸಂರಕ್ಷಣೆ, ಮುಖದ ಸೌಂದರ್ಯ. ಥೆರಪಿ ಮೊದಲಾದ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಕಾಸ್ಮೆಟೋಲಜಿ ಪರಿಣತನು ಕೂದಲಿನ ಆರೈಕೆ, ಚರ್ಮ ಸಂರಕ್ಷಣೆ, ವಿವಿಧ ಥೆರಪಿಗಳ ಅನುಭವವನ್ನು ಹೊಂದಿರಬೇಕಾಗುತ್ತದೆ.
ಅವಕಾಶಗಳು
ಕಾಸ್ಮೆಟಾಲಜಿ ಉದ್ಯಮದಲ್ಲಿ ಅವಕಾಶಗಳೂ ಎಂದೂ ಕೊನೆಗೊಳ್ಳುವುದಿಲ್ಲ. ದುಡಿಯುವುದರ ಜತೆಗೆ ನಮ್ಮ ಅನುಭವವನ್ನೂ ಹೆಚ್ಚಿಸಿಕೊಳ್ಳುವ ಅಪಾರ ಅವಕಾಶ ಈ ಕ್ಷೇತ್ರದಲ್ಲಿದೆ. ಆದಾಯ ಕೂಡ ಹೆಚ್ಚಾಗಿರುತ್ತದೆ. ಹೊಟೇಲ್, ರೆಸಾರ್ಟ್, ಬ್ಯೂಟಿಪಾರ್ಲರ್ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ದೊರಕುತ್ತದೆ. ಸೀರಿಯಲ್ ಮತ್ತು ಸಿನೆಮಾ ಕ್ಷೇತ್ರದಲ್ಲಿ ಮೇಕಪ್‌ಗ್ಳಿಗೆ ಹೆಚ್ಚು ಅವಲಂಬನೆ ಇರುವುದರಿಂದ ಅವರಿಗೆ ಇಂತಹ ಪರಿಣತರು ಬೇಕಾಗುತ್ತಾರೆ.
ಕಾಸ್ಮೆಟೋಲಜಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಯಾವುದೇ ತರವಾದ ಡಿಗ್ರಿ ಕಡ್ಡಾಯವಲ್ಲ. ಅದಕ್ಕಾಗಿ ಬೇರೆಯೇ ಡಿಪ್ಲೊಮಾ ಕೋರ್ಸ್‌ಗಳಿವೆ. ನಿಮ್ಮ ಆಸಕ್ತಿಗನುಸಾರವಾಗಿ ಕೋರ್ಸ್‌ಗಳನ್ನು ಆಯ್ದುಕೊಳ್ಳಬಹುದು. ಮೂರು ತಿಂಗಳು, ಆರು ತಿಂಗಳು, ಒಂದು ವರ್ಷದವರೆಗಿನ ಕೋರ್ಸ್ ಗಳು ಲಭ್ಯವಿವೆ. ಪಿಜಿ ಡಿಪ್ಲೊಮಾ ಇನ್ ಕಾಸ್ಮೆಟೋಲಜಿ ಕೋರ್ಸ್ ಎಂಬ ಶಿಕ್ಷಣ ಮಾಡಬಹುದು.
ಇತ್ತೀಚೆಗೆ ಸೌಂದರ್ಯ ವರ್ಧಕಗಳ ಬಗ್ಗೆ ಜನರಿಗೆ ಅತೀ ಆಸಕ್ತಿ ಇರುವುದರಿಂದ ಈ ಕ್ಷೇತ್ರದಲ್ಲಿ ಬೆಳೆಯಲು ಅವಕಾಶಗಳಿವೆ. ಭಾರತ ಸೇರಿದಂತೆ ವಿದೇಶಗಳಲ್ಲೂ ಉದ್ಯೋಗಕ್ಕೆ ಅವಕಾಶಗಳಿವೆ. ಒಬ್ಬ ಉತ್ತಮ ಕಾಸ್ಮೆಟೋಲಜಿ ಪರಿಣತ ತಿಂಗಳಿಗೆ ಅಂದಾಜು 50 ಸಾವಿರ ರೂ. ದುಡಿಯಬಹುದು.
ಕೌಶಲಗಳು
ಒಬ್ಬಉತ್ತಮ ಕಾಸ್ಮೆಟೋಲಜಿ ಪರಿಣತನು ಸ್ಟೈಲಿಶ್ ಆಗಿ ಕಾಣುವುದು ಅತಿ ಅಗತ್ಯ. ಅವನ ಭಾವ ಮತ್ತು ಮಾತಿನ ಶೈಲಿಗಳು ಗ್ರಾಹಕರನ್ನು ಆಕರ್ಷಿಸುವಂತಿರಬೇಕು. ಲೈಸೆನ್ಸ್ ನ್ನು ಹೊಂದಿರುವಂತದ್ದು ಅತಿ ಅಗತ್ಯವಾಗಿದೆ.
ಉತ್ತಮ ಸಂವಹನ ಕಲೆ
ಕ್ರಿಯೇಟಿವ್ ಆಗಿರಬೇಕು
ಬೇರೆ ಬೇರೆ ಸೌಂದರ್ಯ ವರ್ಧಕಗಳ ಮಾಹಿತಿ ಇರಬೇಕು. ಕಾಲಲ್ಲೆ ತಕ್ಕಂತೆ ಅಪಡೇಟ್ ಆಗುತ್ತಿರಬೇಕು
ಕೂದಲು, ಚರ್ಮ, ಉಗುರಗಳ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿಬೇಕು.
ಬಣ್ಣಗಳ ಬಗ್ಗೆ ಮಾಹಿತಿ ಇರಬೇಕು.
ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.