ಸಂಗೀತದ ಹೊಸ ಅಲೆ ಸೃಷ್ಟಿಸಿ
Team Udayavani, Dec 19, 2018, 1:53 PM IST
ಹಿಪ್-ಅಪ್ ಸಾಂಗ್ ಎನ್ನುವುದು ಈ ಜಮಾನದ ಹೊಸ ಸಂಗೀತ. ಇದರ ಅಭಿಮಾನಿಗಳು ತುಂಬಾ ಮಂದಿ ಇದ್ದಾರೆ. ಇದರಿಂದ ಈ ಹಿಪ್ ಅಪ್ ಮಾಡರ್ನ್ ರೂಪ ಪಡೆದು ರ್ಯಾಪ್ ಎಂದಾಗಿದೆ. ಹೌದು ವೆಸ್ಟರ್ನ್ ಮ್ಯೂಸಿಕ್ ನ ಹೊಸ ಅಲೆ ‘ರ್ಯಾಪ್’ ಈಗ ಎಲ್ಲಡೆ ಪಸರಿಸುತ್ತಿದೆ. ಇದರಿಂದ ಹಲವು ಭಾಷೆಗಳಲ್ಲಿ ಈ ರ್ಯಾಪ್ ಸಾಂಗ್ ಸದ್ದು ಮಾಡುತ್ತಿದೆ. ಹೊಸ ಹಾಡುಗಾರರರು ಹಾಗೂ ವಿಭಿನ್ನ ಸಂಗೀತದ ಪ್ರಭೇದಕ್ಕೆ ಇದು ನಾಂದಿ ಹಾಡಿದೆ.
ಸ್ನೂಪ್ ಡಾಗ್, ಲಿಲ್ ವಾಯಿನೇ, ಓಶಿಯಾ ಜಾಕ್ಸೆನ್, ಎಮಿನೆಮ್ ಮುಂತಾದವರು ಇಂಗ್ಲಿಷ್ ಪಾಪ್ಯುಲರ್ ಸಿಂಗರ್‌ಗಳಾದರೆ, ಹನಿಸಿಂಗ್, ಜಾಜ್, ಜೆ ಸ್ಟಾರ್ ಹಿಂದಿ ಫೇಮಸ್ ರ್ಯಾಪರ್. ಅದರಂತೆ ಇದು ಕನ್ನಡ ಭಾಷೆಗೂ ಕಾಲಿಟ್ಟಿದ್ದು ಚಂದನ್ ಶೆಟ್ಟಿ, ಆಲ್‌ಒಕೆ, ಎಂ.ಸಿ. ಬಿಜ್ಜು, ರಾಹುಲ್ ಡಿಟ್ಟು ಮೊದಲಾದವರು ಹೊಸ ಅಲೆ ಸೃಷ್ಟಿಸುತ್ತಿದ್ದಾರೆ.
ಏನಿದು ರ್ಯಾಪ್
ಪ್ರಾಸ ಪದಗಳ ಜೋಡಣೆ ಮೂಲಕ ಸಂಗೀತ ರಚಿಸಿ ಅದನ್ನು ಅತ್ಯಂತ ವೇಗವಾಗಿ ಹಾಗೂ ಸ್ಪಷ್ಟವಾಗಿ ಹಾಡುವ ಒಂದು ವಿಧಾನವೇ ರ್ಯಾಪ್. ಗದ್ಯವನ್ನು ಪದ್ಯದ ದಾಟಿಯಲ್ಲಿ ನಿರೂಪಿಸುವುದು ಇಲ್ಲಿನ ವಿಶೇಷ. ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಕಂಪೋಸಿಶನ್ ಜತೆಗೆ ಪದ ಪುಂಜಗಳನ್ನು ರಾಗ, ತಾಳಕ್ಕೆ ತಕ್ಕಂತೆ ಹಾಡುವುದು ಇದರ ವಿಶೇಷತೆ.
ಥೀಮ್ ಹೊಂದಿರುವ ರ್ಯಾಪ್
ರ್ಯಾಪ್ ಸಾಂಗ್‌ಗಳು ಪ್ರಾರಂಭವಾದದ್ದು ಬಡವರ ಅಥವಾ ಶೋಷಣೆಗೊಳಗಾದವರ ಪರವಾಗಿ. ಹೊಸ ಮಾದರಿಯಲ್ಲಿ ಅವರಿಗೆ ನ್ಯಾಯ ದಕ್ಕಿಸಿಕೊಡುವ ಉದ್ದೇಶದಿಂದ ಪಾಶ್ಚಾತ್ಯ ದೇಶಗಳಲ್ಲಿ ಇದು ಆರಂಭವಾಯಿತು. ಬಳಿಕ ಥೀಮ್ ಗಳನ್ನಿಟ್ಟು ಜಾಗೃತಿ ಅಥವಾ ಇನ್ಯಾವುದೇ ಉದ್ದೇಶದಿಂದ ರಚಿಸಲ್ಪಡುತ್ತಿವೆ. ಒಟ್ಟಿನಲ್ಲಿ ಪ್ರತಿಯೊಂದು ರ್ಯಾಪ್ ಸಾಂಗ್ ಒಂದು ಥೀಮ್ ಹೊಂದಿರುತ್ತದೆ.
ಕಲಿಕೆ ಹೇಗೆ?
ಇದು ಸಾಮಾನ್ಯ ಸಂಗೀತಕ್ಕಿಂತ ವಿಭಿನ್ನವಾದ ಕಾರಣ ಇದನ್ನು ಕಲಿಯಲು ಆಸಕ್ತಿ ಇರುವುದು ಮುಖ್ಯ. ಅನಂತರ ಯಾವುದೇ ಭಾಷೆಯ ಉಚ್ಚಾರ ಹಾಗೂ ನಿರರ್ಗಳ ಮಾತುಗಾರಿಕೆಗೆ ಇಲ್ಲಿ ಪ್ರಾಶಸ್ತ್ಯ. ಇಷ್ಟಿದ್ದರೆ ಮ್ಯೂಸಿಕ್ ಸ್ಕೂಲ್ ಗಳು ರ್ಯಾಪ್ ಗಳಿಗೆ ತರಬೇತಿಯನ್ನು ನೀಡುತ್ತಾರೆ. ಇದರಲ್ಲಿ ಈಗ ಇಂಗ್ಲಿಷ್, ಹಿಂದಿ ಭಾಷೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಡಿಸ್ಕ್ ಜಾಕಿಗಳು ಇವುಗಳನ್ನು ಹೆಚ್ಚು ಕಲಿತು ಹೊಸ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಇದಕ್ಕಾಗಿ ಡಿಪ್ಲೋಮಾ ಕೋರ್ಸ್‌ಗಳು ಇವೆ.
ಶಾಲೆ, ಕಾಲೇಜು ಜೀವನದಲ್ಲೇ ಪದ ಬಳಕೆಗಳ ಬಗ್ಗೆ ಆಸಕ್ತಿ ತೋರಿಸಿ ಸ್ವಲ್ಪ ಸಂಗೀತ ಕಲಿತರೆ ನೀವೂ ರ್ಯಾಪ್ ಸಂಗೀತಗಾರರು ಆಗಬಹುದು. ಇದರಲ್ಲೇ ಫುಲ್ ಟೈಮ್ ಕೆಲಸ ಮಾಡಬೇಕೆಂದಿಲ್ಲ. ಹವ್ಯಾಸವಾಗಿಯೂ ಮುಂದುವರಿಸಬಹುದು. ಈಗ ಸಾಮಾಜಿಕ ಜಾಲತಾಣಗಳು ಒಂದು ವೇದಿಕೆ ಆಗಿರುವುದರಿಂದ ನೀವು ರಚಿಸಿದ, ಹಾಡಿ ಹಾಡುಗಳನ್ನು ಇಲ್ಲಿ ಅಪ್ಲೋಡ್ ಮಾಡಿ ಜನಪ್ರಿಯರಾಗಬಹುದು.
ಅವಕಾಶಗಳು ಸಾವಿರಾರು
ರ್ಯಾಪರ್ ಒಮ್ಮೆ ಹಿಟ್ಟಾದರೆ ಅವಕಾಶಗಳು ಹುಡಿಕೊಂಡು ಬರುತ್ತವೆ. ಏಕೆಂದರೆ ಸ್ವರಚಿತ ಸಂಗೀತ ಹಾಗೂ ಹಾಡುಗಾರಿಕೆ ಎರಡನ್ನೂ ಒಬ್ಬರೆ ನಿರ್ವಹಿಸಿದರೆ ಮುಂದೆ ಆಲ್ಬಾಂ ಸಾಂಗ್ ಗಳು ಮಾಡಬಹುದು ಅಥವಾ ಸಿನೆಮಾಗಳಿಗೆ ಸಂಗೀತ ರಚನೆ, ಹಾಡುಗಾರಿಕೆ ಎಲ್ಲದಕ್ಕೂ ಅವಕಾಶಗಳಿವೆ. ಸ್ಟೇಜ್ ಪ್ರೊಗ್ರಾಂಗಳನ್ನು ನೀಡಬಹುದು. ಉತ್ತಮ ಸಂಭಾವನೆಗೊಂದು ಇದು ದಾರಿಯಾಗುತ್ತದೆ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ
Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ
Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.