ಡಾಟಾ ಅನಾಲಿಸ್ಟ್ ಬೇಡಿಕೆ ಇದೆ; ಕೌಶಲವಿರಲಿ
Team Udayavani, Jul 24, 2019, 5:00 AM IST
21ನೇ ಶತಮಾನದಲ್ಲಿ ಎಲ್ಲರೂ ಬಯಸುವುದು ಆನ್‌ಲೈನ್ ವಹಿವಾಟು. ಪುಸಕ್ತ, ಪೆನ್ನಿನಲ್ಲಿ ನಡೆಯುತ್ತಿದ್ದ ವ್ಯವಹಾರ ಇಂದು ಕಂಪ್ಯೂಟರ್ ಸಾಫ್ಟ್ವೇರ್‌ಗಳಿಗೆ ವರ್ಗವಣೆಗೊಂಡಿದೆ. ಆನ್‌ಲೈನ್ ಹಾಗೂ ಕಂಪ್ಯೂಟರ್‌ಗಳಲ್ಲೇ ಎಲ್ಲ ವ್ಯವಹಾರಗಳಾಗುವುದರಿಂದ ಕಂಪ್ಯೂಟೀಕೃತ ಡಾಟಾಗಳ ನಿರ್ವಹಣೆ ಅತೀ ಮುಖ್ಯ. ಹೀಗಾಗಿ ಡಾಟಾ ಅನಾಲಿಸ್ಟ್ ಗಳಿಗೂ ಬೇಡಿಕೆ ಹೆಚ್ಚು.
ತಾಂತ್ರಿಕ ಕ್ಷೇತ್ರ ಮುಂದುವರಿಯುತ್ತಿದೆ. ಅಂಗಡಿಗಳಿಗೆ ತೆರಳಿ ಬೇಕಾದ ವಸ್ತು, ಉತ್ಪನ್ನಗಳನ್ನು ಕೊಳ್ಳುವ ಕಾಲ ಮುಗಿದು ಹೋಗಿದೆ. ವೇಗದ ಜಗತ್ತಿನಲ್ಲಿ ಒತ್ತಡದ ನಡುವೆಯೂ ಬದುಕುತ್ತಿರುವ ಮನುಷ್ಯ ಸಂಕುಲಕ್ಕೆ ತಮಗೆ ಬೇಕಾದನ್ನು ಹೋಗಿ ಕೊಳ್ಳುವಷ್ಟು ಸಮಯವೂ ಇರುವುದಿಲ್ಲ. ಮೊಬೈಲ್ ಹಿಡಿದು ಆರ್ಡರ್ ಮಾಡಿದರೆ ಕಾಲ ಬುಡಕ್ಕೇ ಬೇಕಾದ ಉತ್ಪನ್ನಗಳು ಬಂದು ತಲುಪುವಂತದ್ದನ್ನೇ ಬಯಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅದಕ್ಕೇ 21ನೇ ಶತಮಾನದ ಜನರು ಬಯಸೋದು ಆನ್‌ಲೈನ್ ವಹಿವಾಟು.
ಬಟ್ಟೆ, ಎಲೆಕ್ಟ್ರಾನಿಕ್ ಉಪಕರಣಗಳು, ಆಹಾರ, ಮೇಕಪ್ ಸಾಮಾಗ್ರಿಯಿಂದ ಹಿಡಿದು ಟಿವಿ, ವಾಶಿಂಗ್ ಮೆಶಿನ್, ಮೊಬೈಲ್ ಎಲ್ಲವನ್ನೂ ಆನ್‌ಲೈನ್‌ನಲ್ಲೇ ಖರೀದಿ ಮಾಡುವ ಯುಗದಲ್ಲಿ ನಾವಿದ್ದೇವೆ. ಜನರ ಬೇಡಿಕೆಗನುಗುಣವಾಗಿ ಆನ್‌ಲೈನ್ ವಹಿವಾಟು ಕುದುರಿದೆ. ಇಂಟನ್‌ನೆಟ್ ಬಳಕೆ ಹೆಚ್ಚಾಗಿದೆ. ಜಗತ್ತೇ ವೆಬ್‌ಮಯವಾಗಿದೆ. ರಾಶಿರಾಶಿ ಡಾಟಾಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಎಲ್ಲ ಕಂಪೆನಿಗಳ ಮುಂದಿದೆ. ಸಹಜವಾಗಿಯೇ ಅಂತಹ ಕಂಪೆನಿಗಳಲ್ಲಿ ಡಾಟಾ ಅನಾಲಿಸ್ಟ್‌ಗಳಿಗೂ ಬೇಡಿಕೆ ವೃದ್ಧಿಯಾಗಿದೆ.
-ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.