ವಿಶುವಲ್ ಆರ್ಟ್ಸ್ ಡಿಗ್ರಿ – ಬೇಡಿಕೆ ಕ್ಷೇತ್ರ
Team Udayavani, Jul 24, 2019, 5:00 AM IST
ಟೆಕ್ನಾಲಜಿಗಳು ಮುಂದುವರಿದಂತೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ವಿವಿಧ ಕೋರ್ಸ್‌ಗಳೂ ಆರಂಭವಾಗುತ್ತಿವೆ. ಟೆಕ್ನಾಲಜಿಗಳಲ್ಲಿ ಆಸಕ್ತಿಯಿರುವವರು ಟೆಕ್ನಾಲಜಿಗೆ ಸಂಬಂಧಪಟ್ಟ ಕೋರ್ಸ್ ಗಳನ್ನು ಆಯ್ದುಕೊಳ್ಳಬಹುದು. ಕ್ರೀಯಾಶೀಲರಾಗಿದ್ದರೆ, ಕ್ರೀಯಾಶೀಲ ಕಲ್ಪನೆಗಳಿದ್ದರೆ ಅಂತಹವರಿಗೆ ಟೆಕ್ನಾಲಜಿಗೆ ಸಂಬಂಧಪಟ್ಟ ವಿಶುವಲ್ ಆರ್ಟ್ಸ್ ಡಿಗ್ರಿ ಮಾಡಬಹುದು. ಇಂದು ಹೆಚ್ಚು ಅವಕಾಶಗಳನ್ನು ನೀಡುವ ಕ್ಷೇತ್ರ ಬೆಳೆದು ನಿಂತಿದೆ. ಈ ಡಿಗ್ರಿಯ ಅನಂತರ ಹಲವು ಕ್ಷೇತ್ರಗಳಲ್ಲಿ ಉದ್ಯೋಗಾಕಾಶಗಳಿವೆ.
ಏನಿದು ವಿಶುವಲ್ ಆರ್ಟ್ಸ್
ವಿಶುವಲ್ ಆರ್ಟ್ಸ್ ಡಿಗ್ರಿ ಎಂದರೆ ಅನೀಮೆಶನ್, ತ್ರೀಡಿ ಡಿಸೈನರ್ ಸಂಬಂಧಪಟ್ಟ ಕೋರ್ಸ್ ಆಗಿದ್ದು, ಟೆಕ್ನಾಲಜಿಯಲ್ಲಿ ಆಸಕ್ತಿಯಿರುವವರು ಇದನ್ನು ಆಯ್ದು ಕೊಳ್ಳಬಹುದು. ಇವರನ್ನು ವಿಶುವಲ್ ಆರ್ಟಿಸ್ಟ್ ಎಂದು ಕರೆಯುತ್ತಾರೆ. ಇದಕ್ಕೆ ಹಲವು ಕೌಶಲಗಳ ಅಗತ್ಯವಿದೆ.
ವ್ಯಾಪ್ತಿ: ಟಿವಿ, ಕಂಪ್ಯೂಟರ್, ಮೊಬೈಲ್ಗಳಿಂದಾಗಿ ಇಂದು ವಿಶುವಲ್ ಆರ್ಟ್ಸ್ಗೆ ಬೇಡಿಕೆ ಹೆಚ್ಚಾಗುತ್ತಿದೆ. ಮನೋರಂಜನೆ, ಶಿಕ್ಷಣ, ಮಾಹಿತಿ ಎಲ್ಲದರಲ್ಲೂ ಇಂದು ಟೆಕ್ನಾಲಜಿ ಬಳಕೆಯಾಗುವುದರಿಂದ ವಿಶುವಲ್ ಆರ್ಟ್ಸ್ಗೆ ಬೇಡಿಕೆ ಹೆಚ್ಚಾಗುತ್ತಿದೆ. ಗೇಮ್ ಡಿಸೈನಿಂಗ್, ಆ್ಯನಿಮೇಶನ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ.
ಅವಕಾಶಗಳು: ಅನಿಮೇಶನ್, ಗೇಮ್ ಡಿಸೈನಿಂಗ್
ಟೆಕ್ನಾಲಜಿಗಳು ಅತಿ ವೇಗವಾಗಿ ಅಭಿವೃದ್ಧಿಯಾಗುತ್ತಿವೆ. ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ನಾವು ಅಭಿವೃದ್ಧಿಯಾದರೆ ಹೆಚ್ಚು ಉದ್ಯೋಗಾವಕಾಶಗಳು ಇಲ್ಲಿವೆ. ಹೊಸ ಹೊಸ ಆಲೋಚನೆಗಳು, ಕಲ್ಪನೆಗಳಿದ್ದರೆ ಇಲ್ಲಿ ಉತ್ತಮ ಅವಕಾಶವಿದೆ.
ಡಿಜಿಟಲ್ ಕಂಪೋಸಿಟರ್: ಆ್ಯನಿಮೇಶನ್ ಮಾಡಿದ ಕೆಲಸದ ಕೊನೆಯ ಕೆಲಸವನ್ನು ಈ ಡಿಜಿಟಲ್ ಕಂಪೋಸಿಟರ್ ಮಾಡುತ್ತಾರೆ. ಮೊದಲೇ ತಯಾರಿಸಿದ ತ್ರೀಡಿ ಕೆಲಸಗಳ ಕೊನೆಯ ಹಂತವನ್ನು ಇವರು ಮಾಡುತ್ತಾರೆ.
ಗೇಮ್ ಡೆವಲಪ್‌ಮೆಂಟ್: ಯುವಜನಾಂಗಕ್ಕೆ ಗೇಮ್ ಡೆವಲಪ್‌ಮೆಂಟ್‌ನಲ್ಲಿ ಉತ್ತಮ ಅವಕಾಶವಿದ್ದು, ಭಾರತದಲ್ಲಿ ಗೇಮ್ ಡಿಸೈನಿಂಗ್‌ಗೆ ಆದ್ಯತೆ ಹೆಚ್ಚಿದೆ. ಇದರಲ್ಲೂ ಹಲವು ಅವಕಾಶಗಳಿವೆ.
ಕಂಪ್ಯೂಟರ್: ಕಂಪ್ಯೂಟರ್‌ಗಳಲ್ಲಿ ಗೇಮ್ ಡಿಸೈನಿಂಗ್‌ಗಳಿಗೆ ಮಹತ್ವವಿದ್ದೂ ಇಲ್ಲೂ ಹೆಚ್ಚು ಅವಕಾಶವಿದೆ.
ವೆಬ್ ಡೆವಲಪರ್: ವೆಬ್ ಡೆವಲಪರ್ ವೆಬ್‌ಸೈಟ್‌ನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ ಮತ್ತು ವೆಬ್‌ಸೈಟ್‌ನಲ್ಲಿನ ಕಂಟೆಂಟ್‌ಗಳನ್ನು ಇವರೇ ನೋಡಿಕೊಳ್ಳುತ್ತಾರೆ.
ಬೇಕಾದ ಕೌಶಲಗಳು: ಉತ್ತಮ ಕಲ್ಪನಾಶಕ್ತಿ ಮತ್ತು ಟೆಕ್ನಾಲಜಿಯಲ್ಲಿ ಆಸಕ್ತಿಯಿದ್ದರೆ ಈ ಡಿಗ್ರಿ ಪಡೆಯಬಹುದು.
ಕಂಪ್ಯೂಟರ್, ಟಿವಿ, ಮೊಬೈಲ್ಗಳ ಬಳಕೆ ಹೆಚ್ಚಾದಂತೆ ಈ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದೆ. ಟೆಕ್ನಾಲಜಿಯಲ್ಲಿ ಆಸಕ್ತಿ ಮತ್ತು ಕೌಶಲಗಳಿದ್ದರೆ ಇದು ಉತ್ತಮ ಕೋರ್ಸಾಗಿದೆ.
•ಮಾನವ್ ರಚನಾ ಯುನಿವರ್ಸಿಟಿ ಫರಿದಾಬಾದ್
•ಕಾಲೇಜ್ ಆಫ್ ಆರ್ಟ್ -ಯುನಿವರ್ಸಿಟಿ ಆಪ್ ದೆಹಲಿ
•ಪಾಕಲ್ಟಿ ಆಫ್ ವಿಶ್ಯುವಲ್ ಆರ್ಟ್ಸ್, ಬನಾರಸ್ ಹಿಂದೂ ಯುನಿವರ್ಸಿಟಿ
•ರವೀಂದ್ರ ಭಾರತಿ ಯುನಿವರ್ಸಿಟಿ ಕಲ್ಕತ್ತಾ
-ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.