ವಿವಿಧ ಭಾಷೆ ಕಲಿಯುವ ಹವ್ಯಾಸ ಬೆಳೆಸಿಕೊಳ್ಳಿ
Team Udayavani, Sep 11, 2019, 5:15 AM IST
ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ರಾಷ್ಟ್ರ. ಅನೇಕ ಸಂಸ್ಕೃತಿಯ ಜತೆಗೆ ಅನೇಕ ಭಾಷೆಗಳನ್ನು ಇಲ್ಲಿ ಕಾಣಬಹುದು. ಸಂಸ್ಕೃತ ಮೂಲ ಭಾಷೆಯಾದರೆ, ಹಿಂದಿ ರಾಷ್ಟ್ರ ಭಾಷೆಯಾಗಿದೆ. ಪಂಜಾಬಿ, ಬಂಗಾಳಿ, ಮರಾಠಿ, ಬೋಜ್‌ಪುರಿ, ಕಾಶ್ಮೀರಿ ಉತ್ತರ ಭಾರತದ ಭಾಷೆಗಳಾದರೆ, ದಕ್ಷಿಣದಲ್ಲಿ ಕನ್ನಡ, ತಮಿಳು, ತೆಲುಗು, ತುಳು ಮತ್ತು ಮಲಯಾಳ ಭಾಷೆಗಳಿವೆ. ಇಷ್ಟೆಲ್ಲ ಭಾಷೆಗಳನ್ನು ಹೊಂದಿದ ಭಾರತದಲ್ಲಿ ಮಾತೃ ಭಾಷೆಗಷ್ಟೇ ಸೀಮಿತವಾಗದೇ ಬೇರೆ ಬೇರೆ ಭಾಷೆಗಳನ್ನು ಕಲಿ ಯುವ ಮನಸ್ಸು ಮಾಡಬೇಕು. ಭಾರತದ ಭಾಷೆ ಯಷ್ಟೇ ಅಲ್ಲ ಅಂತಾರಾಷ್ಟ್ರೀಯ ಭಾಷೆಗಳನ್ನೂ ಕಲಿಯಬೇಕು.
·ಜ್ಜಾನ ವೃದ್ಧಿ : ಕನ್ನಡ ಮಾತೃ ಭಾಷೆಯ ಹುಡುಗ ಹಿಂದಿ ಅಥವಾ ತಮಿಳು ಭಾಷೆಯನ್ನು ಓದಲು, ಬರೆಯಲು ಕಲಿತರೆ ಆತನಿಗೆ ಅ ಭಾಷೆಯ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಸಂಪಾದಿಸಬಹುದು.
·ಒಂದು ಅಧ್ಯಯನ ಪ್ರಕಾರ ಹೆಚ್ಚು ಭಾಷೆಗಳನ್ನು ಕಲಿತಷ್ಟು ಜ್ಞಾಪಕ ಶಕ್ತಿಯೂ ವೃದ್ಧಿಯಾಗುತ್ತದೆ.
·ಇತರೆ ಭಾಷೆಗಳನ್ನು ಕಲಿಯುವುದರಿಂದ ಉತ್ತಮ ಸಂವಹನ ಕಲೆಯನ್ನು ರೂಢಿಸಿಕೊಳ್ಳಲು ಸಾಧ್ಯ.
·ಬೇರೆ ಬೇರೆ ಭಾಷೆಗಳ ಕಲಿಕೆ ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.
·ಬೇರೆ ಭಾಷೆ ಕಲಿಯುವುದರ ಜತೆಗೆ ಅಲ್ಲಿನ ಸಂಸ್ಕೃತಿಯನ್ನು ತಿಳಿಸಲು ಸಾಧ್ಯ.
·ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಬೇರೆ ಬೇರೆ ಭಾಷೆಗಳನ್ನು ಕಲಿಯುವುದು ಹೇಗೆ?
·ಭಾಷೆಗಳನ್ನು ಕಲಿಯಬೇಕೆಂಬ ಹಂಬಲ, ಆಸಕ್ತಿ ಮೊದಲು ಇರಬೇಕು. ಬೇರೆ ಬೇರೆ ಭಾಷೆಗಳನ್ನು ಕಲಿಯುವ ಆ್ಯಪ್‌ಗ್ಳಿದ್ದು ಅವುಗಳ ಮೂಲಕ ಕಲಿಯಬಹುದು.
·ಇತರೆ ಭಾಷೆ ಮಾತನಾಡುವವರ ಜತೆಗೆ ಅವರ ಭಾಷೆಯಲ್ಲೇ ಮಾತನಾಡುವುದು. ಉದಾ: ತುಳು ಬರದ ಕನ್ನಡ ವ್ಯಕ್ತಿ ತುಳು ಮಾತನಾಡುವ ವ್ಯಕ್ತಿ ಜತೆಗೆ ತುಳುವಿನಲ್ಲೇ ಮಾತನಾಡಲು ಪ್ರಯತ್ನಿಸುವುದು.
·ಇತರೆ ಭಾಷೆಯ ಸಿನಿಮಾಗಳನ್ನು ನೋಡುವ ಮೂಲಕವೂ ಭಾಷೆಗಳನ್ನು ಕಲಿಯಬಹುದು.
·ಯೂಟ್ಯೂಬ್‌ನಲ್ಲಿ ಭಾಷೆಯ ಕಲಿಕೆಗೆ ಸಾಕಷ್ಟು ವೀಡಿಯೋಗಳು ಲಭ್ಯವಿದೆ. ಅವುಗಳನ್ನು ಗಮನಿಸುವ ಮೂಲಕ ಇತರ ಭಾಷೆಗಳನ್ನು ಕಲಿಯಬಹುದು.
ಬೇರೆ ಭಾಷೆಯ ಕಲಿಕೆಯ ಅಗತ್ಯವೇನು?
ಯಾವುದೇ ಒಂದು ಭಾಷೆ ಪ್ರಾದೇಶಿಕ ನೆಲೆ ಗಟ್ಟಿನಲ್ಲಿ ನಿಂತರೆ ಅದು ಬೆಳೆಯಲು ಸಾಧ್ಯವಿಲ್ಲ. ಭಾರತೀಯರು ಇಂಗ್ಲಿಷ್ ಭಾಷೆಯನ್ನು ಕಲಿಯದಿದ್ದರೆ ಇಂದು ಜಗತ್ತಿನ ಮುಂದೆ ತಲೆ ಎತ್ತಲಾಗುತ್ತಿರಲಿಲ್ಲ. ಸಂಸ್ಕೃತ ಭಾಷೆ ಇಂದು ಜನ ಮನಸದಿಂದ ನಶಿಸಿ ಹೋಗಲು ಕಾರಣ ಆ ಭಾಷೆಯನ್ನು ಕಲಿಯಲು ಯಾರೂ ಮುಂದಾಗದ್ದು. ಒಂದು ಭಾಷೆಯ ಉಳಿವಿಗಾಗಿ ಭಾಷಾ ಕಲಿಕೆ ಅಗತ್ಯವಾಗಿದೆ.
ಮಾನವನಿಗೆ ಸಂವಹನ ಅತೀ ಮುಖ್ಯ. ಸಂವಹನಕ್ಕೆ ಭಾಷೆ ಅಗತ್ಯ. ಕೇವಲ ಮಾತೃಭಾಷೆಗೆ ಸೀಮಿತವಾಗದೇ ವಿವಿಧ ಭಾಷೆಗಳನ್ನು ಕಲಿತಾಗ ಪರ ಊರಿನ ಜನರೊಂದಿಗೆ ಸಂವಹನ ನಡೆಸಲು ಸಾಧ್ಯ. ಕೇವಲ ಭಾರತೀಯ ಭಾಷೆಗಳನ್ನು ಕಲಿಯುವುದು ಮಾತ್ರವಲ್ಲದೇ ಅಂತಾರಾಷ್ಟ್ರೀಯ ಭಾಷೆಗಳನ್ನೂ ಕಲಿಯುವುದು ಒಂದು ಉತ್ತಮ ಹವ್ಯಾಸ.
•ಧನ್ಯಶ್ರೀ ಬೋಳಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.