ಹೊಸ ಕಾಲೇಜು ಅಂಜಿಕೆ ಬೇಡ


Team Udayavani, Jun 12, 2019, 5:50 AM IST

h-15

ಜೂನ್‌ ಅರಂಭವಾದಾಗ ಎಲ್ಲೆಡೆ ಶಾಲಾರಂಭಗಳದ್ದೇ ಮಾತು. ಕೆಲವರು ಹಳೇ ಶಾಲೆಗಳಿಗೆ ಮತ್ತೆ ಹಿಂದಿರುಗಿದರೆ ಇನ್ನು ಕೆಲವರು ಹೊಸ ಶಾಲಾ ಕಾಲೇಜುಗಳಿಗೆ ಪ್ರವೇಶಿಸುತ್ತಾರೆ. ಹೊಸ ಕಾಲೇಜುಗಳಿಗೆ ತೆರಳುವಾಗ ಅಂಜಿಕೆ ಆಗುವುದ ಸಹಜ. ಹಳೇ ಸ್ನೇಹಿತರ, ಅಧ್ಯಾಪಕರು ಇದ್ಯಾವುದೂ ಇಲ್ಲದ ಒಂದು ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದೊಂದು ಚಾಲೆಂಜ್‌. ಕೆಲವರು ಅದರಲ್ಲಿ ಯಶಸ್ವಿ ಗಳಿಸಿದರೆ, ಇನ್ನು ಕೆಲವರು ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ ವಿದ್ಯಾಭ್ಯಾಸ ಮೊಟಕುಗೊಳಿಸುವುದು ಅಥವಾ ಬೇರೆ ಕಾಲೇಜಿಗೆ ತೆರಳುತ್ತಾರೆ. ಅದು ಅಷ್ಟು ಸೂಕ್ತವಲ್ಲ. ಹೊಸ ಕಾಲೇಜಿಗೆ ತೆರಳುವವರಿಗೆ ಇಲ್ಲಿದೆ ಕೆಲವು ಟಿಪ್ಸ್‌

ಮೊದಲದಿನದ ಭಯ ಬೇಡ
ಕಾಲೇಜುಗಳಿಗೆ ತೆರಳುವಾಗ ಮೊದಲದಿನ ರ್ಯಾಗಿಂಗ್‌ ಆಗುತ್ತದೆ ಅಥವಾ ಸೀನಿಯರ್ ಹೆದರಿಸುತ್ತಾರೆಂಬ ಭಯದಲ್ಲಿ ಹೋಗಬಾರದು. ರ್ಯಾಗಿಂಗ್‌ನ್ನು ಎಲ್ಲ ಕಾಲೇಜುಗಳು ಈಗಾಗಲೇ ಸಂಪೂರ್ಣವಾಗಿ ನಿಷೇಧಿಸಿವೆ. ಎಲ್ಲ ಸೀನಿಯರ್‌ಗಳು ಜೂನಿಯರ್‌ಗಳನ್ನು ಗೋಳು ಹೊಯ್ದುಕೊಳ್ಳುವುದಿಲ್ಲ. ಅವರು ನಿಮಗೆ ಸಹಾಯಕರಾಗಲೂಬಹುದು. ಆದುದರಿಂದ ಅವರ ಜತೆ ನಿರಾತಂಕವಾಗಿ ಮಾತನಾಡಿ. ತಪ್ಪುಕಲ್ಪನೆಗಳು ದೂರವಾಗುತ್ತವೆ.

ಹಾಸ್ಟೆಲ್‌ನಲ್ಲಿ ಸ್ನೇಹಿತರಿರಲಿ
ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸುವು ದಾದರೆ ಅಲ್ಲಿ ಒಂದಿಷ್ಟು ಗೆಳೆಯ ಗೆಳತಿಯರನ್ನು ಸಂಪಾದಿ ಸಿಕೊಳ್ಳಿ. ಮನೆ ಬಿಟ್ಟು ನಿಲ್ಲುವಾಗ ಉಂಟಾಗುವ ಬೇಸರವನ್ನು ನೀಗಿಸಲು ಹಾಸ್ಟೆಲ್‌ ಗೆಳೆಯರಿಂದ ಸಾಧ್ಯ.

ಗೆಳೆಯರೊಂದಿಗೆ ಮಾತನಾಡಿ
ಮೊದಲು ನಿಮ್ಮ ಗೆಳೆಯರು ಯಾವ ಕಾಲೇಜಿಗೆ ತೆರಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ನೀವು ತೆಗೆದುಕೊಳ್ಳುವ ವಿಷಯಗಳು ಒಂದೇ ಆಗಿದ್ದರೆ ಒಟ್ಟಿಗೆ ತೆರಳಬಹುದು. ಅಥವಾ ನಿಮ್ಮ ಹೊಸ ಕಾಲೇಜಿನಲ್ಲಿ ಹಳೆ ಸ್ನೇಹಿತರಿಲ್ಲದಿದ್ದರೆ ಹೊಸಬರನ್ನು ಆದಷ್ಟು ಪ್ರೀತಿಯಿಂದಲೇ ಮಾತನಾಡಿ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಪರಿಚಿತರು ಕಾಲೇಜಿನಲ್ಲಿದ್ದರೆ ಅವರ ಜತೆ ಮೊದಲ ದಿನ ಕಾಲೇಜಿಗೆ ತೆರಳಿ.

ಟ್ಯಾಲೆಂಟ್‌ ಪ್ರದರ್ಶಿಸಿ
ಹೊಸ ತರಗತಿ ಆರಂಭವಾದ ಕೂಡಲೇ ಫ್ರೆಶರ್ ಡೇ ಗಳು ಇರುತ್ತವೆ. ಆ ಸಂದರ್ಭದಲ್ಲಿ ಮುಜುಗರಪಟ್ಟುಕೊಳ್ಳದೆ ನಿಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಪ್ರಕಟಿಸಿ. ಕಲೆಯಲ್ಲಿ ಆಸಕ್ತಿ ಇಲ್ಲದವರು ಇತರ ತಮ್ಮ ಪ್ರತಿಭೆಗಳನ್ನು ಪ್ರಕಟಿಸಿ. ಇದರಿಂದ ನೀವು ಬೇಗ ಎಲ್ಲರಿಗೂ ಪರಿಚಿತರಾಗುತ್ತೀರಿ.
ಕಲಿಯುವ ವಿಷಯದಷ್ಟೇ ಕಾಲೇಜಿಗೂ ಪ್ರಾಮುಖ್ಯತೆಯಿದೆ. ಒಂದೆರೆಡು ಸಣ್ಣ ಸಣ್ಣ ಕಾರಣಗಳನ್ನಿಟ್ಟುಕೊಂಡು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಬೇಡಿ. ಇಂದಿನ ಮನಸ್ಸಿಗೆ ಬೇಸರವಾಗುವ ಘಟನೆಗಳು ನಾಳೆ ನಗು ತರಿಸಬಹುದು. ಆದದನ್ನು ಅಲ್ಲೆ ಮರೆತು ಕಲಿಯುವತ್ತ ಆಸಕ್ತಿ ತೋರಿಸಿ.

-   ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.