ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನೆರವಾಗುವ ಡ್ರೋನಾ
Team Udayavani, Jun 13, 2018, 4:20 PM IST
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸುಲಭ ತಯಾರಿ ನಡೆಸಲು ಜನರಲ್ ನಾಲೇಜ್ ಗಳ ಆಗರ ಡ್ರೋನಾ ಆಪ್. ಎಸ್‌ಎಸ್‌ಸಿ, ಯುಪಿಎಸ್ಸಿ, ಐಎಎಸ್, ಪಿಒ, ಐಬಿಪಿಎಸ್ ಅಥವಾ ರೈಲ್ವೇಸ್, ಡಿಫೆನ್ಸ್, ಬ್ಯಾಂಕ್‌ಗಳ ಪರೀಕ್ಷೆ ಸಹಿತ ಸರಕಾರಿ ಉದ್ಯೋಗಗಳ ಪರೀಕ್ಷೆಗಳಿಗೆ ಮಾರ್ಗದರ್ಶಿಯಾಗಿದೆ.
ಈ ಅಪ್ಲಿಕೇಶನ್ ನಲ್ಲಿ ಪ್ರತಿದಿನ ನವೀಕರಿಸಿದ ಪ್ರಶ್ನೆಗಳು ಲಭ್ಯವಾಗುತ್ತಿದ್ದು, ಜ್ಞಾನ ಭಂಡಾರವನ್ನು ವೃದ್ಧಿಸಿಕೊಳ್ಳಲು ಸಹಾಯಕವಾಗಿದೆ. ಅಂತರಾಷ್ಟ್ರೀಯ ಮಟ್ಟದ ಪರೀಕ್ಷೆಗಳಾದ GRE, SAT, TOEFL, IELTS, GMAT ಇತ್ಯಾದಿಗಳಿಗೆ ಪರೀಕ್ಷೆಗಳಿಗೆ ಸಿದ್ಧರಾಗಲು ಸಹಕಾರಿಯಾಗಿದೆ.
ಅಪ್ಲಿಕೇಶನ್‌ನಲ್ಲಿ ಲಭ್ಯವಾಗುವ ನವೀಕರಿಸಿದ ಪ್ರಶ್ನೆಗಳ ಮೂಲಕ ಎಸ್‌ಎಸ್ಸಿ, ಯುಪಿಎಸ್ಸಿ, ಐಎಎಸ್, ಎಲ…ಎಸ್‌ಎಟಿ, ಎಂಸಿಎಟಿ, ಜಿಇಇ ಮೊದಲಾದ ಸರಕಾರಿ ಹಾಗೂ ಖಾಸಗಿ ಉದ್ಯೋಗ ಕ್ಷೇತ್ರಗಳಿಗೆ ಸುಲಭವಾಗಿ ತಯಾರಾಗಬಹುದಾಗಿದೆ. ಪ್ರಸ್ತುತ ವಿದ್ಯಮಾನದಲ್ಲಿ ಇಂಗ್ಲಿಷ್ ಜ್ಞಾನವು ಬಹಳ ಉಪಯುಕ್ತವಾಗಿದೆ.
ಉದ್ಯೋಗಗಳ ಸಂದರ್ಶನಗಳನ್ನು ಪೂರೈಸಬೇಕಾದರೆ ಇಂಗ್ಲಿಷ್ ಜ್ಞಾನ ಬಹಳ ಆವಶ್ಯಕವಾಗಿದೆ. ಈ ಆ್ಯಪ್‌ನಲ್ಲಿ ಪ್ರಚಲಿತ ವಿದ್ಯಮಾನಗಳಿಗೆ ನಮ್ಮನ್ನು ಅಪ್‌ಡೇಟ್ ಮಾಡುತ್ತಿದೆ. ಈ ದಿನದ ವಿಶೇಷಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಘಟನೆಗಳು, ಪ್ರಸಿದ್ಧ ವ್ಯಕ್ತಿಗಳು, ಪ್ರಶಸ್ತಿಗಳು ಮತ್ತು ಗೌರವಗಳು, ಕ್ರೀಡೆಗಳು, ವ್ಯಾಪಾರ ಮತ್ತು ಆರ್ಥಿಕತೆ, ರಾಜಕೀಯ, ಪುಸ್ತಕಗಳು ಮತ್ತು ಲೇಖಕರು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಮೊದಲಾದವುಗಳ ವಿಸ್ತೃತ ಮಾಹಿತಿ ಇದರಲ್ಲಿದೆ.
ಪ್ರತಿದಿನ ಹೊಸ ಹೊಸ ಪದಗಳು ಹಾಗೂ ಇಂಗ್ಲಿಷ್ ಭಾಷೆ ಸಹಿತ ಇನ್ನಿತರ ಭಾಷೆಗಳ ವ್ಯಾಕರಣಗಳನ್ನು ಕಲಿಯಲು ಬಹಳ ಸಹಕಾರಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಳಸಲಾಗುವ ಸಂಕ್ಷಿಪ್ತ ಪದಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಉನ್ನತವಾಗಿ ತಯಾರಾಗಲು ಬಹಳ ಸಹಕಾರಿಯಾಗುತ್ತದೆ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, 4.8 ಎಂಬಿ ಗಾತ್ರ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.