ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕ
Team Udayavani, Oct 9, 2019, 4:11 AM IST
ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕಕಾಲೇಜು ಜೀವನದಲ್ಲಿ ಅನೇಕ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಸಾಮಾನ್ಯ. ಆದರೆ ಕೆಲವರು ಯಾಕೆ ಅದಕ್ಕೆಲ್ಲಾ ಸೇರಬೇಕು ಎಂದು ಸುಮ್ಮನಾಗುತ್ತಾರೆ. ಅದೇ ರೀತಿ ಶಾಲಾ ಜೀವನದಿಂದ ಹಿಡಿದು ಕಾಲೇಜು ಮುಗಿಯುವವರೆಗೆ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು ಸಾಮಾನ್ಯ. ಆದರೆ ಅದರಲ್ಲಿ ಭಾಗವಹಿಸುವವರ ಸಂಖ್ಯೆ ಮಾತ್ರ ವಿರಳ.
ಪ್ರಬಂಧ ಬರೆಯಲು ಎಲ್ಲರಿಗೂ ಇಷ್ಟವಿರುವುದಿಲ್ಲ ಆದರೆ ಅದರಿಂದ ಹಲವು ಅನೂಕೂಲಗಳಿವೆ. ಅದೆಂತಹ ಅನುಕೂಲ ಎಂಬ ಕೂತೂಹಲವಿರುವುದು ಸಾಮಾನ್ಯ. ಪ್ರಬಂಧ ಬರೆಯುವುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ.
ಶೈಕ್ಷಣಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆೆ. ಪ್ರಬಂಧ ಬರೆಯುವುದರಿಂದ ಇರುವ ಅನುಕೂಲಗಳ ಬಗ್ಗೆ ಇಲ್ಲಿದೆ ಮಾಹಿತಿ.
ವಿಷಯಗಳ ಕ್ರೋಡೀಕರಣ
ಒಂದು ಪ್ರಬಂಧ ಬರೆಯಬೇಕಾದರೆ ಹಲವು ರೀತಿಯ ಪುಸ್ತಕಗಳನ್ನು ಓದಬೇಕಾಗುತ್ತದೆ. ಆಗ ಹೊಸ ವಿಷಯಗಳ ಪರಿಚಯವಾಗುತ್ತದೆ. ಪ್ರಬಂಧಕ್ಕೆ ಪೂರಕವಾದಂತಹ ಮಾಹಿತಿಗಳು ದೊರಕುತ್ತವೆ. ಹಲವು ಪುಸ್ತಕಗಳು ನೆನಪಿನ ಶಕ್ತಿಯನ್ನು ಹೆಚ್ಚಿಸಿ ಬೇರೆ ಬೇರೆ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತವೆೆ. ಓದುವುದು ಮಾತ್ರವಲ್ಲದೆ ಬೇರೆ ಬೇರೆ ಕಡೆಗಳಿಂದ ವಿಷಯ ಸಂಪಾದಿಸಿಕೊಳ್ಳಬಹುದು. ಇದರಿಂದ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬಹುದು.
ವಿಷಯ ಪ್ರಸ್ತುತಿ
ವಿದ್ಯಾರ್ಥಿಗಳು ಹೇಗೆ ಒಂದು ವಿಷಯವನ್ನು ಪ್ರಸ್ತುತ ಪಡಿಸಬೇಕೆನ್ನುವುದನ್ನು ಪ್ರಬಂಧ ಕಲಿಸಿಕೊಡುತ್ತದೆ. ಒಂದು ವಿಷಯವನ್ನು ಹೇಗೆ ಆರಂಭಿಸಬೇಕು, ಹೇಗೆ ಆರಂಭಿಸಿದರೆ ಉತ್ತಮ ಮತ್ತು ಅದಕ್ಕೆ ಪೂರಕವಾದ ಅಂಶಗಳನ್ನು ನೀಡುವುದು ಹೇಗೆ ಎಂಬುದನ್ನು ಮನಗಾಣಲು ಸಹಾಯ ಮಾಡುತ್ತದೆ. ಇದರಿಂದ ಒಬ್ಬ ವಿದ್ಯಾರ್ಥಿ ತಾನು ಹೇಗೆ ಒಂದು ವಿಷಯವನ್ನು ಪ್ರಸ್ತುತಪಡಿಸಬಹುದು ಎಂಬುದನ್ನು ತಿಳಿದುಕೊಳ್ಳುತ್ತಾನೆ.
ಭಾಷಾ ಪ್ರೌಢಿಮೆ
ಇವೆಲ್ಲವುದರ ಹೊರತಾಗಿ ಪ್ರಬಂಧ ಬರೆಯುವುದರಿಂದ ವಿದ್ಯಾರ್ಥಿ ತನ್ನ ಭಾಷಾ ಪ್ರೌಢಿಮೆಯನ್ನು ಹೆಚ್ಚಿಸಿಕೊಳ್ಳಬಹುದು. ಪ್ರಬಂಧ ಬರೆಯುವಾಗ ಬಳಸುವ ಪದಗಳು, ಅದು ಯಾವ ಅರ್ಥ ನೀಡಿದರೆ ಹೆಚ್ಚು ಸೂಕ್ತ, ಪದ ಬಳಕೆ ಯಾವುದು ಸರಿ? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಪ್ರಬಂಧ ಉತ್ತರ ನೀಡುತ್ತದೆ. ಒಬ್ಬ ವಿದ್ಯಾರ್ಥಿ ಹೆಚ್ಚು ಹೆಚ್ಚು ಬರೆಯುತ್ತಾ ಹೋದಂತೆ ಭಾಷೆಯ ಪ್ರೌಢಿಮೆ ಹೆಚ್ಚುತ್ತದೆ. ಹೀಗೆ ಪ್ರಬಂಧ ಬರೆಯುವುದರಿಂದ ವಿದ್ಯಾರ್ಥಿಯ ಕೌಶಲ ವೃದ್ಧಿ ಯಾಗುವುದಲ್ಲದೆ ಅವರ ಸಾಮರ್ಥ್ಯ ಕೂಡ ಹೆಚ್ಚುತ್ತದೆ
ಉತ್ತಮ ಬರೆವಣಿಗೆ
ಪ್ರಬಂಧ ಬರೆಯುವ ರೂಢಿ ಬೆಳೆಸಿಕೊಂಡಲ್ಲಿ ಸರ್ವೇ ಸಾಮಾನ್ಯವಾಗಿ ಉತ್ತಮ ಬರವಣಿಗೆಗೆ ಸಹಕಾರಿ. ಅದಲ್ಲದೆ ಇದು ಕಾರ್ಯಕ್ಷಮತೆಯನ್ನು ಇಮ್ಮಡಿಗೊಳಿಸುತ್ತದೆ. ಹೆಚ್ಚು ಹೆಚ್ಚು ಬರೆಯುವುದರಿಂದ ಅಕ್ಷರಗಳು ಸುಂದರವಾಗಿ ಮೂಡುವುದಲ್ಲದೆ ಬರವಣಿಗೆಯ ವೇಗ ಕೂಡ ಹೆಚ್ಚುತ್ತದೆ.
ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.