ಪರೀಕ್ಷಾ ತಯಾರಿಗೆ ಕೆಲವೊಂದು ಕಿವಿಮಾತು


Team Udayavani, Mar 4, 2020, 5:18 AM IST

exam-study

ದೇವರು, ವಿದ್ಯೆ ಎರಡೂ ಸಮಾನ ಸ್ಥಾನಮಾನವಿರುವ ಪದ. ಶಾಲೆಗೆ ಹೋಗವ ಭಾಗ್ಯ ಎಲ್ಲರಿಗೂ ಸಿಗದು. ಎಷ್ಟೋ ಜನ ಆ ಭಾಗ್ಯ ಸಿಗದೆ ಕ್ಯಾಂಟಿನ್‌ನಲ್ಲಿ, ಗ್ಯಾರೇಜಿನಲ್ಲಿ ಕಲಿಯುವ ವಯಸ್ಸಿನಲ್ಲಿ ಕೆಲಸ ಮಾಡುವುದನ್ನು ನೋಡುತ್ತೇವೆ. ನಮಗೆ ಶಾಲೆ ಕಲಿಯಲು ದೊರಕಿರುವ ಅದ್ಭುತ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಇನ್ನೇನು ಕೆಲವೇ ವಾರಗಳಲ್ಲಿ ಪರೀಕ್ಷೆಗಳು ಆರಂಭವಾಗಲಿವೆ. ಇದಕ್ಕಾಗಿ ಅಧ್ಯಯನಗಳು ವಿಶೇಷ ಅಧ್ಯಯನಗಳು ಈಗಾಗಲೇ ನಡೆಯುತ್ತಿವೆ. ಪರೀಕ್ಷಾ ತಯಾರಿಯ ಸಂದರ್ಭ ಮಕ್ಕಳ ಚಿತ್ತ ಬಾಹ್ಯ ವಿಷಯದತ್ತ ಹೊರಲದಂತೆ ಎಚ್ಚರ ವಹಿಸಿಬೇಕು. ಸರಿಯಾಗಿ ಪರೀಕ್ಷಾ ತಯಾರಿ ನಡೆಸಿದ್ದೇ ಆದರೆ ಳ್ಳೆಯ ಓದು ನಿಮ್ಮದಾಗಿ, ಉತ್ತಮ ಅಂಕವೂ ಸಂಪಾದನೆಯಾಗುತ್ತದೆ.

ಮೇಡಂ “ನಾವು ಕಲಿತದ್ದು ಪರೀಕ್ಷೆ ಸಂದರ್ಭ ನೆನಪಾಗಲೇ ಇಲ್ಲ’ ಎಂದು ಕೆಲವು ವಿದ್ಯಾರ್ಥಿಗಳು ಬಹಳಷ್ಟು ಸಂದರ್ಭ ಹೇಳುವುದಿದೆ. ಹಾಗಾದರೆ ನಾವು ಒಂದು ಸಿನಿಮಾದಲ್ಲಿ ಬರುವ ಹಾಡನ್ನು ತಪ್ಪಿಲ್ಲದೆ ಹಾಡಲು ಹೇಗೆ ಸಾಧ್ಯ? ಯಾಕೆಂದರೆ ಅದರ ಮೇಲಿನ ಆಸಕ್ತಿ. ಅದೇ ರೀತಿ ಕಲಿಕೆಯ ಮೇಲೆ ಆಸಕ್ತಿ ತೋರಿಸಿ, ಪ್ರಯತ್ನ ಮಾಡಿ ಓದಿದರೆ ಕಷ್ಟವಾಗುವುದಿಲ್ಲ. ಅಧ್ಯಾಪಕರು ಕಲಿಸಿದ ವಿಷಯವನ್ನು ಪ್ರತಿದಿನ ಓದಿದರೆ ಪರೀಕ್ಷಾ ಸಮಯದಲ್ಲಿ ಸುಲಭವಾಗುತ್ತದೆ.

ಕಷ್ಟದ ವಿಷಯಕ್ಕೆ ಒತ್ತು ಕೊಡಿ
ಅಂದಿನ ಪಾಠಗಳನ್ನು ಅದೇ ದಿನ ಓದುವ ಅಭ್ಯಾಸ ಮಾಡಿದರೆ ಪರೀಕ್ಷೆ ಬರೆಯುವಾಗ ವಿಷಯಗಳು ಬೇಗನೇ ನೆನಪಿಗೆ ಬರುತ್ತದೆ. ಕೆಲವು ವಿದ್ಯಾರ್ಥಿಗಳು ಅವರಿಗೆ ತುಂಬಾ ಇಷ್ಟವಿರುವ ವಿಷಯವನ್ನು ಚೆನ್ನಾಗಿ ಅಭ್ಯಾಸ ಮಾಡುತ್ತಾರೆ. ಅದನ್ನೇ ಜಾಸ್ತಿ ಓದಿ ಕಷ್ಟದ ವಿಷಯಗಳನ್ನು ಒದಲು ಹೋಗುವುದಿಲ್ಲ. ವಿದ್ಯಾರ್ಥಿಗಳು ಕಷ್ಟದ ವಿಷಯಗಳಿಗೆ ಹೆಚ್ಚು ಸಮಯ ನೀಡಿ ಅದನ್ನು ಹೆಚ್ಚು ಒತ್ತು ಕೊಟ್ಟು ಓದಬೇಕು. ಕೆಲವೊಮ್ಮೆ ಎಲ್ಲ ವಿಷಯದಲ್ಲಿ ಉತ್ತೀರ್ಣರಾಗಿ, ಕಷ್ಟದ ವಿಷಯದಲ್ಲಿ ಅನುತ್ತೀರ್ಣವಾಗಲು ಇದುವೇ ಕಾರಣ.

ನೋಟ್‌ ಮಾಡಿಕೊಳ್ಳಿ
ಆದಷ್ಟು ತರಗತಿಯಲ್ಲಿ ಅಧ್ಯಾಪಕರು ಪಾಠ ಮಾಡುವಾಗ ನೋಟ್ಸ್‌ ಬರೆದಿಟ್ಟುಕೊಳ್ಳಬೇಕು. ಕೆಲವೊಮ್ಮೆ ಪಾಠ ಪುಸ್ತಕ ತೆರೆಯುವಾಗ ಅದನ್ನು ನೋಡಿಯೇ ತಲೆನೋವಾಗಿ ಓದದೇ ಇರುತ್ತೇವೆ. ನೋಟ್ಸ್‌ ನಿಮ್ಮದೇ ಕೈ ಬರಹವಾಗಿರುವುದರಿಂದ ಓದಲು ಆಸಕ್ತಿ ಉಂಟಾಗಿ, ಕಲಿಯಲು ಸುಲಭವಾಗುತ್ತದೆ.

ಆಹಾರ ಹೇಗಿರಲಿ
ಪರೀಕ್ಷೆಗೆ ಹೊರಡುವ ಮುನ್ನ ಹೊಟ್ಟೆ ತುಂಬಾ ತಿನ್ನಬೇಕು. ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನಾಪತ್ರಿಕೆ ಸಿಕ್ಕಿದ ಬಳಿಕ ಪ್ರಶ್ನೆಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ. ಒಂದೊಂದು ಪ್ರಶ್ನೆಗಳಿಗೆ ಸಮಯ ನಿಗದಿ ಮಾಡಬೇಕು.

ಗಣಿತ ಕಷ್ಟ ಅಲ್ಲ
ಗಣಿತ (ಲೆಕ್ಕ ) ವಿಷಯ ಕಷ್ಟ ಎಂದು ತೀರ್ಮಾನ ಮಾಡಿ ಅದನ್ನು ದೂರ ಮಾಡಿದರೆ ಅದು ಅರ್ಥವೇ ಆಗಲು ಸಾದ್ಯವಿಲ್ಲ. ಓದಿಗಾಗಿ ಒಂದು ವೇಳಾಪಟ್ಟಿ ತಯಾರಿಸಿ, ಒಂದೊಂದು ವಿಷಯಕ್ಕೆ ಸಮಯ ನಿಗದಿ ಮಾಡಬೇಕು. ಅದರಲ್ಲಿ ಸ್ವಲ್ಪ ವಿಶ್ರಾಂತಿಗೂ ಅವಧಿ ಮೀಸಲಿಡಿ. ಕಲಿತ ವಿಷಯಗಳ ಕುರಿತು ನಿಮ್ಮ ಸ್ನೇಹಿತರೊಂದಿಗೆ ಚರ್ಚೆ ಮಾಡಿಕೊಳ್ಳಿ. ಇದರಿಂದ ಬೇರೊಬ್ಬರಿಗೆ ವಿವರಿಸುವಾಗ ನಮ್ಮಲ್ಲಿ ನೆನಪಿನ ಶಕ್ತಿ ಹೆಚ್ಚುತ್ತದೆ. ವಿಷಯವನ್ನು ಅರ್ಥ ಮಾಡಿ ಓದಿದರೆ ಪರೀಕ್ಷೆ ಸಂದರ್ಭ ಸ್ವಂತ ವಾಕ್ಯದಲ್ಲಿ ಬರೆಯಬಹುದು.

ಅಲರಾಂ ಇಟ್ಟು ಮಲಗಿ
ರಾತ್ರಿ ಅಲರಾಂ ಇಟ್ಟು ಮಲಗಿ ಬೆಳಗ್ಗೆ ಬೇಗ ಎದ್ದು ಓದುವುದು ಹೆಚ್ಚು ಪರಿಣಾಮಕಾರಿ. ಅಲರಾಂ ಇಡದೇ ಇದ್ದರೆ ರಾತ್ರಿ ಸರಿ ನಿದ್ದೆ ಬಾರದೆ, ಕಷ್ಟವಾಗಬಹುದು. ಇಡೀ ರಾತ್ರಿ ಬೆಳಗ್ಗೆಯಾಯಿತು ಎನ್ನುವ ಆಲೋಚನೆಯಿಂದ ಪದೇ ಪದೇ ಎಚ್ಚರವಾಗುತ್ತದೆ. ಪರೀಕ್ಷೆಯಲ್ಲಿ ಒಮ್ಮೆ ಅನುತ್ತೀರ್ಣರಾದರೆ ಮತ್ತೆ ಪಾಸ್‌ ಆಗಲು ಪುನಃ ಅಧ್ಯಯನ ನಡೆಸಬೇಕು. ಆದಷ್ಟು ಮೊಬೈಲನ್ನು ದೂರವಿಡುವುದು ಉತ್ತಮ.

ಪರೀಕ್ಷೆಯ ಹಿಂದಿನ ದಿನ ಓದು ಹೇಗೆ?
ಪರೀಕ್ಷೆಯ ಹಿಂದಿನ ದಿನ ರಾತ್ರಿಯಿಡಿ ಓದಬಾರದು. ಇದರಿಂದ ಮರುದಿನ ಪರೀಕ್ಷೆ ಬರೆಯಲು ಆಗುವುದಿಲ್ಲ . ಪಿತ್ತದಿಂದ ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೆಲವೊಮ್ಮೆ ಕಲಿತ ಎಲ್ಲಾ ವಿಷಯಗಳೂ ಮರೆತು ಹೋಗಿ ಕಣ್ಣು ಕತ್ತಲೆಯಾಗುತ್ತದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ನಿದ್ದೆಗೆ ಪ್ರಧಾನ ಸ್ಥಾನ ನೀಡಬೇಕು. ರಾತ್ರಿ ಚೆನ್ನಾಗಿ ನಿದ್ರಿಸಬೇಕು.

ಪ್ರಶ್ನೆ ಪತ್ರಿಕೆ ತಯಾರಿ
ಪರೀಕ್ಷೆಯ ತಯಾರಿ ಮಾಡುವಾಗ ಹಳೆಯ ಪ್ರಶ್ನಾಪತ್ರಿಕೆಗಳನ್ನು ಗಮನಿಸಬೇಕು. 5-6 ವರ್ಷದ ಪ್ರಶ್ನೆ ಪತ್ರಿಕೆಗಳನ್ನು ನೋಡಿದಾಗ ಪ್ರಶ್ನೆ ಪತ್ರಿಕೆಯ ಮಾದರಿಯ ಅರಿವಾಯುತ್ತದೆ. ಕೆಲವೊಂದು ಪ್ರಶ್ನೆಗಳು ಪ್ರತಿ ವರ್ಷ ಪುನರಾವರ್ತನೆಯಾಗುತ್ತಿರುತ್ತದೆ. ಅಂತಹ ಪ್ರಶ್ನೆಗಳಿಗೆ ಗಮನಕೊಟ್ಟು ಓದಬೇಕು. ಪ್ರಾಕ್ಟಿಕಲ್‌ ವಿಷಯಗಳನ್ನು ಬರೆದು ಕಲಿಯಬೇಕು. ಇದು ಪರೀಕ್ಷೆಯ ಸಮಯದಲ್ಲಿ ನೆನಪಿಗೆ ಬಂರುತ್ತದೆ.
ತಣ್ಣೀರಿನಿಂದ ಮುಖ ತೊಳೆಯಿರಿ

ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಓದಿ, ಮಧ್ಯಾಹ್ನದ ಊಟ ಆದ ಬಳಿಕ ಪುಸ್ತಕ ನೋಡುವಾಗ ನಿದ್ದೆ ಬರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ರಾತ್ರಿ ಮಾತ್ರ ಮಲಗುವುದು ಉತ್ತಮ. ಮಧ್ಯಾಹ್ನದ ಹೊತ್ತಿನಲ್ಲಿ ವಿದ್ಯಾರ್ಥಿಗಳು ತಮಗೆ ಸುಲಭವಾಗಿ ವಿಷಯವನ್ನು ಆರಿಸಿ ಓದಬೇಕು. ತಣ್ಣೀರಿನಿಂದ ಮುಖ ತೊಳೆದು ಓದಬೇಕು. ಒಂದೊಂದು ಪಾಠಕ್ಕೆ ಸಮಯ ನಿಗದಿ ಮಾಡಿ ಓದಬೇಕು. ರಾತ್ರಿ 10.30 ವರೆಗೆ ಓದಿ ಚೆನ್ನಾಗಿ ನಿದ್ದೆ ಮಾಡಬೇಕು.

ಅಂಕಕ್ಕೆ ತಕ್ಕಂತೆ ಬರೆಯಿರಿ
2 ಅಂಕದ ಪ್ರಶ್ನೆಗೆ ಒಂದು ಪುಟದ ಉತ್ತರದ ಅಗತ್ಯವಿಲ್ಲ. ಎಷ್ಟು ಅಗತ್ಯ ಅಷ್ಟು ಬರೆದರೆ ಸೂಕ್ತ. ಇಲ್ಲದಿದ್ದರೆ ಸಮಯ ವ್ಯರ್ಥವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಮಯ ಸಿಗುವುದಿಲ್ಲ. ಯಾವ ಪ್ರಶ್ನೆಗೆ ಉತ್ತರ ಸರಿಯಾಗಿ ಗೊತ್ತಿದೆಯೋ ಅದನ್ನು ಮೊದಲಿಗೆ ಬರೆಯಿರಿ. ಪರೀಕ್ಷೆಗೆ ತೆರಳುವಾಗ ಎಕ್ಟ್ರಾ ಪೆನ್ನಿರಲಿ.

ಮರು ಪರಿಶೀಲನೆ
ನಾನು ಪಿಯುಸಿಯಲ್ಲಿರಬೇಕಾದರೆ ಇಂಗ್ಲಿಷ್‌ ವಿಷಯದಲ್ಲಿ 81 ಆಗಬೇಕಿದ್ದ ಅಂಕದ ಬದಲು 18 ಆಗಿತ್ತು. ಫ‌ಲಿತಾಂಶ ಅನುತ್ತೀರ್ಣವಾಗಿತ್ತು. ಆಘಾತ, ದುಃಖವಾಗಿ ಧೈರ್ಯವನ್ನೂ ಕಳೆದುಕೊಂಡೆ. ಆದರೆ ನನ್ನ ಶಿಕ್ಷಕರು ನನಗೆವ ಧೈರ್ಯ ತುಂಬಿ ಫ‌ಲಿತಾಂಶವನ್ನು ಮರುಪರಿಶೀಲನೆಗೆ ಹಾಕಿದರು. ತಪ್ಪಾಗಿ ಬಂದಿದ್ದ ಫ‌ಲಿತಾಂಶ ಹತ್ತೇ ದಿನದಲ್ಲಿ ಸರಿಯಾಯಿತು. ಅಂದು ತಪ್ಪು ನಿರ್ಧಾರ ತೆಗೆದಿದ್ದರೆ ಇಂದಿನ ಸುಂದರ ಜೀವನದಿಂದ ವಂಚಿತಲಾಗುತ್ತಿದೆ.

ಒತ್ತಾಯ ಮಾಡಬೇಡಿ
ಕಲಿಯವ ವಿಷಯದಲ್ಲಿ ಮಕ್ಕಳಿಗೆ ಒತ್ತಡ ಹೇರಬಾರದು. ಹೆಚ್ಚು ಅಂಕ ಪಡೆಯಲೇಬೇಕೆಂದು ಬೇರೆ ಮಕ್ಕಳ ಜತೆ ಹೋಲಿಕೆಯೂ ಮಾಡಬಾರದು. ಕಲಿಯಲು ಉತ್ತೇಜನ ನೀಡಿ. ಗಿಡ ನೆಟ್ಟು ನೀರು, ಗೊಬ್ಬರ ಹಾಕಿ ಬೆಳೆಸುವುದಷ್ಟೇ ನಮ್ಮ ಕರ್ತವ್ಯ. ಅದರ ಫ‌ಲದ ಫ‌ಲಿತಾಂಶ ನಮ್ಮ ಕೈಯಲಿಲ್ಲ. ಒಳ್ಳೆ ಫ‌ಲ ನೀಡುತ್ತದೆ ಎಂಬ ನಂಬಿಕೆಯಿಂದ ಕೆಲಸ ಮಾಡಬೇಕು.

ಪರೀಕ್ಷಾ ಅಕ್ರಮ ಬೇಡ
ಪರೀಕ್ಷೆಯಲ್ಲಿ ನಕಲು ಮಾಡುವಂತಹ ಆಲೋಚನೆ ಮಾಡಬಾರದು. ಯಾವುದೇ ಆಗಿರಲಿ ಅದು ನೇರ ದಾರಿಯಿಂದ ನಮಗೆ ಸಿಕ್ಕಿದರೆ ಮಾತ್ರ ಶಾಶ್ವತ. ಪರೀಕ್ಷೆ ಬರೆಯುವಾಗ ಬೇರೆಯವರು ಎಷ್ಟು ಹೆಚ್ಚುವರಿ ಪೇಪರ್‌ ತೆಗೆದುಕೊಂಡಿದ್ದಾರೆ? ಎಷ್ಟು ಬರೆಯುತ್ತಾರೆ ಅದರ ಬಗ್ಗೆ ಚಿಂತಿಸಬಾರದು. ಅದು ನಮ್ಮ ಏಕಾಗ್ರತೆಯನ್ನು ಹಾಳು ಮಾಡುತ್ತದೆ.

ಎಲ್ಲರೂ ಧೈರ್ಯದಿಂದ, ಉಲ್ಲಾಸದಿಂದ ಪರೀಕ್ಷೆಗೆ ಹಾಜರಾಗಿ ಒಳ್ಳೆಯ ಫ‌ಲಿತಾಂಶವನ್ನು ಪಡೆಯಿರಿ. ಮನಸಿಟ್ಟು ಓದಿ, ಪುಸ್ತಕವನ್ನು ಪ್ರೀತಿಸಿ, ಯಾರೂ ಕೈ ಬಿಟ್ಟರೂ ನೀವು ಕಲಿತ ವಿದ್ಯೆ ನಿಮ್ಮ ಕೈ ಬಿಡದು. ನಿಮಗೂ ಅನ್ನ ಹಾಕುತ್ತದೆ, ನೀವು ಇನ್ನೊಬ್ಬರಿಗೆ ಅನ್ನ ಹಾಕುವ ಸಾಮರ್ಥ್ಯವನ್ನು ನೀಡುತ್ತದೆ.

ಆರ್‌. ದುರ್ಗಾ ಮೆನನ್‌,
ಉಪನ್ಯಾಸಕರು, ಮಂಗಳೂರು ವಿ.ವಿ. ಹಂಪನಕಟ್ಟೆ

ಟಾಪ್ ನ್ಯೂಸ್

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.