ಗ್ರಾಫಿಕ್ಸ್ ಡಿಸೈನಿಂಗ್‌ನಿಂದ ಉತ್ತಮ ಗಳಿಕೆ
Team Udayavani, Sep 25, 2019, 5:00 AM IST
ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯೊಂದಿಗೆ ವಿದ್ಯಾರ್ಥಿಗಳು ಪಾರ್ಟ್‌ಟೈಮ್ ಕೆಲಸಗಳನ್ನು ಮಾಡುವುದು ಸಾಮಾನ್ಯ. ಇದಕ್ಕಾಗಿ ಅವರಲ್ಲಿ ಆಯ್ಕೆಗಳು ಹಲವಿರುತ್ತವೆ. ಟ್ಯುಟೋರಿಯಲ್, ರೆಸ್ಟೋರೆಂಟ್, ಕಾಫಿ ಡೇ ಹೀಗೆ ನಾನಾ ಕೆಲಸಗಳನ್ನು ಕಲಿಕೆಯೊಂದಿಗೆ ವಿದ್ಯಾರ್ಥಿಗಳು ಆದಾಯದ ಮೂಲಗಳನ್ನಾಗಿ ಮಾಡಿಕೊಂಡು ಪಾಕೆಟ್ ಮನಿಗೆ ದಾರಿ ಮಾಡಿಕೊಳ್ಳುತ್ತಾರೆ.
ಇಂದು ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಇದೇ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ಸಂಪಾದನೆಯ ಹಾದಿಯನ್ನು ಕಂಡುಕೊಳ್ಳಬಹುದು. ಹೌದು ಮನೆಯಲ್ಲೇ ಕೂತು ಆನ್‌ಲೈನ್ ಮೂಲಕ ಸಂಪಾದನೆ ಮಾಡಿಕೊಳ್ಳಬಹುದು. ಆನ್‌ಲೈನ್ ಟೀಚಿಂಗ್, ಬಟ್ಟೆ, ಡ್ರಾಯಿಂಗ್ ಮಾರಾಟ, ಅರ್ಜಿಗಳನ್ನು ಭರ್ತಿ ಮಾಡುವುದು ಹೀಗೆ ಅನೇಕ ಆನ್‌ಲೈನ್ ಪಾರ್ಟ್‌ಟೈಮ್ ಕೆಲಸಗಳು ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತಿವೆ. ಇಂತಹ ಕೆಲಸಗಳಲ್ಲಿ ಒಂದು ಗ್ರಾಫಿಕ್ ಡಿಸೈನಿಂಗ್.
ಗ್ರಾಫಿಕ್ಸ್ ಡಿಸೈನರ್ ಕೈಚಳಕ ಇಂದು ಎಲ್ಲ ಕಡೆಯಲ್ಲೂ ಇದೆ. ನಾವು ನೋಡುವ ವೆಬ್‌ಸೈಟ್, ಜಾಹೀರಾತು, ಸಿನೆಮಾ ಎಲ್ಲದರಲ್ಲೂ ಗ್ರಾಫಿಕ್ಸ್ ಡಿಸೈನ್‌ಗಳನ್ನು ಕಾಣಬಹುದು. ಗ್ರಾಫಿಕ್ಸ್ ಡಿಸೈನಿಂಗ್ ಬಗ್ಗೆ ಸಾಮಾನ್ಯ ಜ್ಞಾನ ನಿಮಗಿದ್ದರೆ ಮನೆಯಲ್ಲೇ ಕುಳಿತು ಸಂಪಾದನೆ ಮಾಡಬಹುದು. ಇದಕ್ಕೆ ಬೇಕಾಗಿರುವುದು ಕಂಪ್ಯೂಟರ್, ವೈಫೈ ಕನೆಕ್ಷನ್ ಹಾಗೂ ಗ್ರಾಫಿಕ್ಸ್ ಡಿಸೈನಿಂಗ್ ಸಾಫ್ಟ್ವೇರ್‌ಗಳು. ಜಾಹೀರಾತು, ಮಾಧ್ಯಮ, ಕೈಗಾರಿಕಾ ವಿನ್ಯಾಸ, ಸಿನೆಮಾ ರಂಗ ಹೀಗೆ ಮೊದಲಾದ ಕ್ಷೇತ್ರಗಳಲ್ಲಿ ಗ್ರಾಫಿಕ್ಸ್ ಡಿಸೈನರ್‌ಗಳಿಗೆ ಉತ್ತಮ ಬೇಡಿಕೆ ಇದೆ. ಕಲಿಕೆ ಜತೆಗೆ ಗ್ರಾಫಿಕ್ಸ್ ಡಿಸೈನಿಂಗ್ ಅನ್ನು ಹಣದ ಮೂಲ ವನ್ನಾಗಿಸಿಕೊಳ್ಳಬಹುದು.
ಕ್ರಿಯಾಶೀಲತೆ ಮತ್ತು ಕಲ್ಮಾತಕ ಯೋಚನೆ ಇದ್ದರೆ ಗ್ರಾಫಿಕ್ ಡಿಸೈನಿಂಗ್‌ನಲ್ಲಿ ಹೇರಳವಾದ ಅವಕಾಶಗಳಿವೆ. ವಿದ್ಯಾರ್ಜನೆಯ ವೇಳೆ ಗ್ರಾಫಿಕ್ ಡಿಸೈನಿಂಗ್ ಬಗ್ಗೆ ಕಲಿತುಕೊಂಡಿದ್ದರೆ ಪಾರ್ಟ್ ಟೈಮ್ ಆಗಿ ಆನ್‌ಲೈನ್ ಗ್ರಾಫಿಕ್ ಡಿಸೈನರ್ ಆಗಿ ದುಡಿಯಬಹುದು. ಜಾಹೀರಾತು, ವೆಬ್‌ಸೈಟ್‌ಗಳಲ್ಲಿ ಗ್ರಾಫಿಕ್ ಡಿಸೈನರ್‌ಗಳ ಆವಶ್ಯಕತೆ ಅಧಿಕವಾಗಿದೆ. ಹೀಗಿರುವಾಗ ಅವರು ವಿದ್ಯಾರ್ಥಿಗಳ ಚಾಕಚಕ್ಯತೆಯನ್ನು ತಿಳಿಯುವ ಸಲುವಾಗಿ ವಿದ್ಯಾರ್ಥಿಗಳಿಗೆ ಗ್ರಾಫಿಕ್ ಡಿಸೈನರ್‌ಗಳಾಗಿ ದುಡಿಯಲು ಅವಕಾಶಗಳನ್ನು ನೀಡುತ್ತಾರೆ. ಇದರಿಂದ ಕಂಪೆನಿಗೂ ಲಾಭ, ವಿದ್ಯಾರ್ಥಿಗಳಿಗೂ ಅನುಕೂಲ.
ಫುಲ್‌ಟೈಮ್‌ನಲ್ಲೂ ಅವಕಾಶ
ಆನ್‌ಲೈನ್ ಮೂಲಕ ಪಾರ್ಟ್ ಟೈಮ್ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ ಅನುಭವ ನಿಮಗಿದ್ದರೆ ವಿದ್ಯಾರ್ಜನೆ ಮುಗಿದ ಬಳಿಕ ಈ ಕ್ಷೇತ್ರವನ್ನೇ ನೀವು ಫುಲ್‌ಟೈಮ್ ಉದ್ಯೋಗವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲೇ ಪದವಿ ಮುಗಿಸಿದರೆ ಹಲವು ಉದ್ಯೋಗ ಅವಕಾಶಗಳಿವೆ. ವೀಡಿಯೋ ಎಡಿಟರ್, ಗ್ರಾಫಿಕ್ ಡಿಸೈನರ್, ಆನಿಮೇಟರ್, ವೆಬ್ ಡಿಸೈನರ್ ಹೀಗೆ ಹಲವು ಅವಕಾಶಗಳು ನಿಮಗಿದೆ.
ಅರ್ಹತೆ
ಕ್ರಿಯಾಶೀಲತೆ ಅಥವಾ ಸೃಜನ ಶೀಲತೆ ಈ ಕೆಲಸಕ್ಕೆ ಅಗತ್ಯ ವಾದದ್ದು. ಸಾಫ್ಟ್ವೇರ್, ಪ್ರೋಗ್ರಾಮಿಂಗ್ ಭಾಷೆಗಳ ಜ್ಞಾನ ಕೂಡ ಅಗತ್ಯವಾಗಿದೆ. ಉತ್ತಮ ಸಂವಹನ ಕಲೆ ಯನ್ನು ತಿಳಿದಿರಬೇಕು. ಬಣ್ಣಗಳ ಬಳಕೆಯ ಅರಿವು ಇರಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.