ಐಟಿ ಕ್ಷೇತ್ರದ ಬೆಳವಣಿಗೆ ಬಿಸಿಎ, ಎಂಸಿಎಗೆ ಬೇಡಿಕೆ
Team Udayavani, Feb 26, 2020, 5:36 AM IST
ಇಂದು ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಕಂಪ್ಯೂಟರ್ ಕೋರ್ಸ್ ಗಳ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಬಿಸಿಎ ಮತ್ತು ಎಂಸಿಎ ಕೋರ್ಸ್ ಗಳಲ್ಲಿ ಅವಕಾಶಗಳು ಹೇರಳವಾಗಿವೆ. ಈ ಕೋರ್ಸ್‌ನ ಬೇಡಿಕೆ ಮತ್ತು ಅವಕಾಶಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದಾಗಿ ವೃತ್ತಿಪರ ಕಂಪ್ಯೂಟರ್ ಶಿಕ್ಷಣ ಪಡೆದವರಿಗೆ ಉದ್ಯೋಗ ಮಾರುಕಟ್ಟೆ ಸೃಷ್ಟಿಯಾಗುತ್ತಲೇ ಇದೆ. ಸುಮಾರು 2 ದಶಕಗಳಿಂದ ಬಿಸಿಎ ಮತ್ತು ಎಂಸಿಎ ಬಹುಬೇಡಿಕೆಯ ಪ್ರಮುಖ ಕೋರ್ಸ್‌ಗಳೆನಿಸಿವೆ. ಬ್ಯಾಚುಲರ್ ಇನ್ ಕಪ್ಯೂಟರ್ ಅಪ್ಲಿಕೇಶನ್(ಬಿಸಿಎ) ಮೂರು ವರ್ಷಗಳ ಪದವಿ ಕೋರ್ಸ್. ಇದು ಡಾಟಾಬೇಸ್, ನೆಟ್ ವರ್ಕಿಂಗ್, ಡಾಟಾ ಸ್ಟ್ರಕ್ಚರ್, ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ಗಳಾದ ಸಿ ಮತ್ತು ಜಾವಾ ಮೊದಲಾದ ವಿಷಯಗಳ ಅಧ್ಯಯನವನ್ನು ಒಳಗೊಂಡಿರುತ್ತದೆ. ಯಾವುದೇ ವಿಷಯದಲ್ಲಿ ಪಿಯುಸಿ (ಅಥವಾ ಎಸ್‌ಎಸ್‌ಎಲ್‌ಸಿ + 2 ಅಥವಾ ಎಸ್‌ಎಸ್‌ಎಲ್‌ಸಿ + ಜಾಬ್ ಒರಿಯೆಂಟೆಡ್ ಕೋರ್ಸ್‌ಗಳು) ತೇರ್ಗಡೆಯಾದವರು ಬಿಸಿಎ ಪದವಿಗೆ ಸೇರ್ಪಡೆಗೊಳ್ಳಬಹುದು. ಈ ಪದವಿ ಒಟ್ಟು 6 ಸೆಮಿಸ್ಟರ್‌ಗಳನ್ನು ಒಳಗೊಂಡಿರುತ್ತದೆ.
ಉದ್ಯೋಗಾವಕಾಶಗಳು
ಬಿಸಿಎ ಪೂರ್ಣಗೊಳಿಸಿದವರು ಸಿಸ್ಟಂ ಎಂಜಿನಿಯರ್, ಸಾಫ್ಟ್ವೇರ್ ಟೆಸ್ಟರ್, ಜೂನಿಯರ್ ಪ್ರೋಗ್ರಾಮರ್, ವೆಬ್ ಡೆವಲಪರ್ ಆಗಿ ಒರಾಕಲ್, ಐಬಿಎಂ, ಇನ್ಫೋಸಿಸ್, ವಿಪ್ರೋ ಮೊದಲಾವುದ ಐಟಿ ಕಂಪೆನಿಗಳಲ್ಲಿ ಮಾತ್ರವಲ್ಲದೆ ಇಂಡಿಯಯನ್ ಏರ್‌ಫೋರ್ಸ್(ಐಎಎಫ್), ಇಂಡಿಯನ್ ಆರ್ಮಿ ಮತ್ತು ಇಂಡಿಯನ್ ನೇವಿಗಳಲ್ಲಿಯೂ ಅವಕಾಶಗಳನ್ನು ಹೊಂದಿದ್ದಾರೆ. ಸರಕಾರದ ಇಲಾಕೆಗಳಲ್ಲಿಯೂ ಸೇವೆ ಸಲ್ಲಿಸಬಹುದಾಗಿದೆ.
ಇತರ ಅವಕಾಶಗಳು
ಬಿಸಿಎ ಪೂರ್ಣಗೊಂಡ ಅನಂತರ ಉದ್ಯೋಗ ಪಡೆಯಲು ಇಚ್ಛಿಸದೆ ಈ ಕ್ಷೇತ್ರದಲ್ಲಿ ಇನ್ನಷ್ಟು ಅಧ್ಯಯನ ಮಾಡಬೇಕು ಎಂದಾದರೆ ಎಂಸಿಎ(ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್) ಮಾಡಬಹುದು. ಇಲ್ಲವಾದಲ್ಲಿ ಸಿಎಟಿ ಬರೆಯಬಹುದು ಅಥವಾ ಐಟಿ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಅಧ್ಯಯನ ಮಾಡಬಹುದು. ಎಂಎಸ್‌ಸಿ(ಐಟಿ), ನೆಟ್‌ವರ್ಕಿಂಗ್ ಡಿಪ್ಲೋಮಾ ಕೂಡ ಮಾಡಬಹುದು. ಸಿಸಿಎನ್‌ಪಿ ಅಥವಾ ಸಿಸಿಎನ್‌ಎ ಸರ್ಟಿಫಿಕೇಶನ್‌ಗೆ ಸಿದ್ಧತೆ, ವೆಬ್ ಡೆವಲಪ್‌ಮೆಂಟ್, ವೆಬ್ ಡಿಸೈನಿಂಗ್ ಮೊದಲಾದವುಗಳನ್ನು ನಡೆಸಬಹುದು. ಎಂಸಿಎ (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್) ಮೂರು ವರ್ಷ ಅವಧಿಯ ಕೋರ್ಸ್. ಬಿಸಿಎ ಪೂರ್ಣಗೊಂಡವರು ಮಾತ್ರವಲ್ಲದೆ ಇತರೆ ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿದವರು ಎಂಸಿಎ ಮಾಡಬಹುದು. ಆದರೆ ಇವರು 10+2 ಹಂತದಲ್ಲಿ ಮ್ಯಾಥಮ್ಯಾಟಿಕ್ಸ್ ಅಧ್ಯಯನ ಮಾಡಿರಬೇಕು. ಎಂಸಿಎಗೆ ಪಿಜಿಸಿಟಿ, ಕೆ-ಮ್ಯಾಟ್ ಮೊದಲಾದ ಪ್ರವೇಶ ಪರೀಕ್ಷೆಗಳು ಕೂಡ ಇರುತ್ತವೆ.
ಮ್ಯಾಥ್‌ಮೆಟಿಕ್ಸ್ ಪೇಪರ್ ಇದ್ದು ಇತರ ಕೋರ್ಸ್ ಮಾಡಿದವರು ಕೂಡ ಎಂಸಿಎ ಮಾಡಬಹುದು. ಸಾಮಾನ್ಯವಾಗಿ ಮೂರು ವರ್ಷದ ಕೋರ್ಸ್. ಆದರೆ ಬಿಸಿಎ ಅಥವಾ ಕಂಪ್ಯೂಟರ್ ಸೈನ್ಸ್ ಬಿಎಸ್‌ಸಿ ಆದರೆ ಲ್ಯಾಟರಲ್ ಎಂಟ್ರಿಯೂ ದೊರೆಯುತ್ತದೆ. ಅವರು ಎರಡನೇ ವರ್ಷಕ್ಕೆ ಪ್ರವೇಶ ಪಡೆಯುತ್ತಾರೆ. ಎಂಸಿಎ ಆದವರಿಗೆ ನೇರವಾಗಿ ಪ್ರೋಗ್ರಾಮಿಂಗ್ ಎಂಜಿನಿಯರ್‌ಗಳು ಆಗುವ ಅವಕಾಶಗಳೇ ದೊರೆಯುತ್ತವೆ. ಎಂಸಿಎಯಲ್ಲಿ ಆಳವಾದ ಅಭ್ಯಾಸ ಸಾಧ್ಯವಾಗುತ್ತದೆ. ಬಿಸಿಎಯಲ್ಲಿ ಹಲವು ಸಾಫ್ಟ್ವೇರ್ ಡೆವಲಪ್‌ಮೆಂಟ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ, ನೆಟವ್‌ರ್ಕ್ ಆ್ಯಂಡ್ ಸರ್ವರ್ ಆಡ್ಮಿನಿಸ್ಟ್ರೇಷನ್, ಸೈಬರ್ ಸೆಕ್ಯುರಿಟಿ ಮೊದಲಾದ ಸಬ್ ಪ್ರೋಗ್ರಾಂಗಳನ್ನು ಸ್ಪೆಷಲೈಸ್‌ಡ್ ಆಗಿ ನೋಡಬಹುದು. ಬಿಸಿಎ ಮತ್ತು ಎಂಸಿಎ ಕೋರ್ಸ್‌ಗಳಿಗೆ ಬೇಡಿಕೆಯೂ ಹೆಚ್ಚು ಇದೆ ಎನ್ನುತ್ತಾರೆ ಶ್ರೀನಿವಾಸ ಖಾಸಗಿ ವಿ.ವಿಯ ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಇನಾರ್ಮೇಶನ್ ಸೈನ್ಸ್‌ನ ಡೀನ್ ಪಿ. ಶ್ರೀಧರ ಆಚಾರ್ಯ ಅವರು.
ಕ್ಯಾಂಪಸ್ ಆಯ್ಕೆ ವೃದ್ಧಿ
ಇತ್ತೀಚಿನ ವರ್ಷಗಳಲ್ಲಿ ಬಿಸಿಎ ಪೂರ್ಣಗೊಂಡವರು ಹೆಚ್ಚಾಗಿ ಕ್ಯಾಂಪಸ್ ಆಯ್ಕೆ ಮೂಲಕವೇ ಉದ್ಯೋಗ ಪಡೆಯುವುದನ್ನು ಕಾಣುತ್ತಿದ್ದೇವೆ. ಇದರಲ್ಲಿ ಪ್ರಾಜೆಕ್ಟ್ ವರ್ಕ್ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮಲ್ಲಿ ಪ್ರತಿ ವರ್ಷ ವರ್ಷ ಬಿಸಿಎ ಮತ್ತು ಎಂಸಿಎ ಅಭ್ಯರ್ಥಿಗಳ ಆಯ್ಕೆಗೆ ಪ್ರಮುಖ ಐಟಿ ಕಂಪೆನಿಗಳು ಖಾಯಂ ಆಗಿ ಕ್ಯಾಂಪಸ್ ಸೆಲೆಕ್ಷನ್‌ಗೆ ಬರುತ್ತವೆ. ಅಲ್ಲಿಯೇ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ. ಇನ್ನು ಕೆಲವು ಕಂಪೆನಿಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಕಂಪೆನಿಯಲ್ಲಿಯೇ ಇಂಟರ್‌ವ್ಯೂ ಮಾಡುತ್ತವೆ. ಉದ್ಯೋಗಿಗಳಾಗಿ ಮಾತ್ರವಲ್ಲದೆ ಸ್ವಯಂ ಆಗಿ ಸ್ಟಾರ್ಟಾಪ್ ಕೂಡ ಮಾಡಬಹುದಾಗಿದೆ. ಐಟಿ ಮಾತ್ರವಲ್ಲದೆ ಬ್ಯಾಂಕಿಂಗ್, ಸರಕಾರದ ಇಲಾಖೆಗಳಲ್ಲಿಯೂ ಅವಕಾಶವಿದೆ. ಬಿಸಿಎ, ಎಂಸಿಎ ಮಾಡಿದವರು ಕ್ಯಾಂಪಸ್ ಆಯ್ಕೆಯಾಗದಿದ್ದರೂ ಒಂದು ವರ್ಷದೊಳಗೆ ಯಾವುದಾದರೂ ಕಂಪೆನಿಯಲ್ಲಿ ಉದ್ಯೋಗ ಪಡೆಯುತ್ತಾರೆ. ರೀಸನಿಂಗ್ ನಾಲ್ಡ್ಜ್, ಲಾಜಿಕಲ್ ನಾಲ್ಡ್ಜ್ ಇದ್ದರೆ ಹೆಚ್ಚು ಉಪಯುಕ್ತವಾಗುತ್ತದೆ. ಜನರಲ್ ಬೇಸಿಕ್ ಇಂಗ್ಲಿಷ್ ಕೂಡ ಅಗತ್ಯ. ಆ್ಯಪ್ ಡೆವಲಪ್, ಬ್ಯುಸಿನೆಸ್ ಅನಾಲಿಸ್ಟ್, ಡಾಟಾಬೇಸ್ ಎಂಜಿನಿಯರ್, ಹಾರ್ಡ್‌ವೇರ್ ಎಂಜಿನಿಯರ್, ವೆಬ್ ಡಿಸೈನರ್/ ಡೆವಲಪರ್ ಆಗಿಉನ್ನತ ಸಂಸ್ಥೆಗಳಲ್ಲಿ ಉದ್ಯೋಗ ಮಾಡಬಹುದಾಗಿದೆ ಎನ್ನುತ್ತಾರೆ ಪಿ.ಶ್ರೀಧರ ಆಚಾರ್ಯ ಅವರು.
- ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.