ಪಕ್ಷಿಲೋಕವನ್ನು ಪರಿಚಯಿಸುವ ಹಕ್ಕಿಪುಕ್ಕ
Team Udayavani, Mar 20, 2019, 9:04 AM IST
ಕನ್ನಡ ನಾಡಿನಲ್ಲಿ ಬಗೆಬಗೆಯ ಹಕ್ಕಿಗಳಿವೆ. ಗುಬ್ಬಿ, ಗಿಳಿ, ಕೋಗಿಲೆಗಳನ್ನು ಬಿಟ್ಟರೆ ಹೆಚ್ಚಿನ ಯಾವ ಹಕ್ಕಿಗಳ ಪರಿಚಯವೂ ನಮಗಿಲ್ಲ. ಬಣ್ಣವನ್ನೇ ನೋಡಿ ಅವುಗಳಿಗೆ ಒಂದೊಂದು ಹೆಸರನ್ನು ನೀಡುತ್ತೇವೆ. ಈ ಸಮಸ್ಯೆಯನ್ನು ಗಂಭೀರ ವಾಗಿ ಪರಿಗಣಿಸಿ ಪೂರ್ಣಚಂದ್ರ ತೇಜಸ್ವಿಯವರು ‘ಹಕ್ಕಿ ಪುಕ್ಕ: ಕನ್ನಡ ನಾಡಿನ ಹಕ್ಕಿಗಳ ಪುಸ್ತಕ’ ಎಂಬ ಕೃತಿಯನ್ನು ಹೊರತಂದರು. ಹಕ್ಕಿಗಳ ಬಗ್ಗೆ ಕುತೂಹಲವಿರುವವರಿಗೆ, ಬರ್ಡ್ ಫೋಟೊಗ್ರಫಿಯಲ್ಲಿ ಆಸಕ್ತಿ ಯಿರುವವರಿಗೆ ಈ ಪುಸ್ತಕ ಸಾಕಷ್ಟು ಮಾಹಿತಿಯನ್ನು ಒದಗಿಸಬಲ್ಲದು.
ಘಟನೆ 1
ಕಪ್ಪು ಗರುಡ ಅಥವಾ ಕಾಮನ್ ಪರಯ್ಹ ಕೈಟ್ ಎಂಬ ಹಕ್ಕಿಯ ಬಗ್ಗೆ ಲೇಖಕರು ವಿಶ್ಲೇಷಣೆಯನ್ನು ಹೀಗೆ ನೀಡುತ್ತಾರೆ. ಊರ ಕೋಳಿಹುಂಜದಷ್ಟು ದೊಡ್ಡದಾದ ಕಪ್ಪು, ಕೆಂಪು ಬಣ್ಣದ ಹದ್ದು. ಹಾರುತ್ತ ಕತ್ತರಿಯಂತೆ ಕಾಣುವ ಬಾಲದ ತುದಿಯಿಂದ ಇದನ್ನು ಪ್ರತ್ಯೇಕಿಸಿ ಗುರುತಿಸಬಹುದು. ಗಂಡು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸವಿಲ್ಲ. ಖಂಡಾಂತರ ವಲಸೆ ಹೋಗದಿದ್ದರೂ ಸ್ಥಳೀಯವಾಗಿ ವಲಸೆ ಹೋಗುತ್ತದೆ.
ಘಟನೆ 2
ಕೋಗಿಲೆ ಚಾಣ ಪಾರಿವಾಳ ಗಾತ್ರದ ಹಕ್ಕಿ. ಮೈಯೆಲ್ಲ ಕಪ್ಪು ಹಸುರು ಇಲ್ಲವೇ ದಟ್ಟ ಬೂದು ಬಣ್ಣ. ಅಗಲವಾದ ಕಪ್ಪು ಮತ್ತು ಬಿಳಿ ಚುಕ್ಕೆಗಳಿರುವ ಬಾಲ. ಹೆಣ್ಣು ಗಂಡುಗಳೆರಡೂ ಒಂದೇ ರೀತಿ ಇರುತ್ತವೆ. ಹಾರುವ ರೀತಿಯಲ್ಲೂ ಹಾವಭಾವದಲ್ಲೂ ಮಾಂಸಹಾರಿ ಹಕ್ಕಿಯಾದ ಚಾಣವನ್ನು ಹೋಲುವುದರಿಂದ ಇದಕ್ಕೆ ಕೋಗಿಲೆ ಚಾಣವೆಂದು ಹೆಸರು.
ಘಟನೆ 3
ಅರಿಸಿನ ಬುರುಡೆ ಅಥವಾ ಗೋಲ್ಡನ್ ಓರಿಯೋಲ್ ಮಯನಾ ಹಕ್ಕಿ ಗಾತ್ರದ ಹೊಳೆಯುವ ಹೊಂಬಣ್ಣದ ಹಕ್ಕಿ. ರೆಕ್ಕೆ ಮತ್ತು ಪುಕ್ಕ ಕಪ್ಪು ಬಣ್ಣ. ಕಣ್ಣಗಳು ದಾಳಿಂಬೆ ಕೆಂಪು. ಹಳದಿ ತಲೆಯ ಮೇಲೆ ಎದ್ದು ಕಾಣುವ ಕಪ್ಪು ಹುಬ್ಬಿದೆ. ಹೆಣ್ಣು ಹಕ್ಕಿಗೆ ಕೊಂಚ ಹಸುರು ಮಿಶ್ರಿತ ಹಳದಿ ಬಣ್ಣ. ಭಾರತ, ಪಾಕಿಸ್ತಾನ, ಅಪೂರ್ವವಾಗಿ ಸಿಲೋನ್‌ನಲ್ಲಿ ಈ ಹಕ್ಕಿಗಳು ಕಾಣ ಸಿಗುತ್ತವೆ. ಯುರೋಪಿನ ಈ ಹಕ್ಕಿಗೆ ಭಾರತದ ಹಕ್ಕಿಯಂತೆ ಕಣ್ಣಿನ ಮೇಲೆ ಕಪ್ಪು ಹುಬ್ಬು ಇಲ್ಲ. ಒಟ್ಟಿನಲ್ಲಿ ಪಕ್ಷಿಗಳ ಬಗ್ಗೆ ಮಾತ್ರವಲ್ಲ ಅವುಗಳ ಜೀವನ ವಿಧಾನದ ವಿವರಣೆಯೂ ಇದರಲ್ಲಿದ್ದು, ಅತ್ಯಮೂಲ್ಯದ ಮಾಹಿತಿಯನ್ನು ಒಳಗೊಂಡಿರುವ ಸಂಗ್ರಹ ಯೋಗ್ಯ ಕೃತಿ ಇದಾಗಿದೆ.
ಸುಶ್ಮಿತಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.