ಆರೋಗ್ಯದ ಗುಟ್ಟು- ಸಂತೋಷವಾಗಿ ಇದ್ದುಬಿಡಿ
Team Udayavani, Aug 14, 2019, 5:00 AM IST
ಸಂತೋಷವಾಗಿರುವುದಕ್ಕೆ ನಾವು ಹುಟ್ಟಿದವರು ಮತ್ತು ಅದು ಪ್ರತಿಯೊಬ್ಬರ ಹಕ್ಕು ಎನ್ನುವ “ಸಂತೋಷವಾಗಿ ಇದ್ದುಬಿಡಿ’ ಸಂತೋಷವಾಗಿ ಯಾಕಿರಬೇಕು ಮತ್ತು ಸಂತೊಷವಾಗಿರಲು ಏನು ಮಾಡಬೇಕು ಎನ್ನುವುದನ್ನು ತಿಳಿಸುತ್ತದೆ. ಈ ಪುಸ್ತಕವನ್ನು ಬರೆದವರು ಡಾ| ರಂಗನಾಥ.ಎಂ. ಇವರು ವೃತ್ತಿಯಲ್ಲಿ ವೈದ್ಯರು. ಇವರು ಮೂರು ಪುಸ್ತಕಗಳನ್ನು ಬರೆದಿದ್ದಾರೆ. “ಡಾಕ್ಟರಿಂದ ದೂರ ಇರಿ, ಬಿಂದಾಸ್ ಸಂತೋಷ ಮತ್ತು ಸಂತೋಷವಾಗಿ ಇದ್ದು ಬಿಡಿ’ ಈ ಮೂರು ಪುಸ್ತಕಗಳು ಸಂತೋಷ ಮತ್ತು ಆರೊಗ್ಯಗಳ ಕುರಿತು ತಿಳಿಸುತ್ತದೆ.
ಘಟನೆ: 1
ಇವರು ಸಂತೋಷ ಎನ್ನುವುದಕ್ಕೆ ವ್ಯಾಖ್ಯಾನ ನೀಡುತ್ತಾರೆ. ತಮ್ಮ ಜತೆಯಲ್ಲಿರುವ ನಾಲ್ಕು ಜನರ ಮನಸ್ಸನ್ನು ಮುಟ್ಟಿ ಅವರ ಸಂತೋಷ, ದುಃಖಗಳನ್ನು ತಾನು ಅನುಭವಿಸುವ ಸಾನುರಾಗದ (ಎಂಪತಿ) ಸಾಮರ್ಥ್ಯ ಕೆಲವರಿಗೆ ಇರುತ್ತದೆ. ಆ ಎಮೋಷನಲ್, ಸೋಶಿಯಲ್ ಸಂಬಂಧವೇ ಸಂತೋಷ ಎನ್ನುತ್ತಾರೆ.
ಘಟನೆ: 2
ಸಂತೋಷದ ಕೃಷಿ ಹೇಗೆ ಮಾಡುವುದು ? ಎನ್ನುವ ಅಧ್ಯಾಯದಲ್ಲಿ ಲೇಖಕರು ನಮ್ಮ ಭಾವನೆಗಳನ್ನು ಸರಿಯಾದ ಕ್ರಮದಲ್ಲಿ ನಿಭಾಯಿಸಿಕೊಂಡು ಹೋಗಬೇಕು ಎನ್ನುತ್ತಾರೆ. ಜತೆಗೆ ಬರೀ ನಗುವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಆಳವಿರುವುದಿಲ್ಲ. ಮನಸ್ಸನ್ನು ಹಂಚಿಕೊಳ್ಳಬೇಕು ಎನ್ನುತ್ತಾರೆ.
ಘಟನೆ: 3
ಮೆದುಳಿನಲ್ಲಿ ಹೊಸ ನರಕೋಶಗಳು ಬೆಳೆಯುತ್ತಾ ಇರುವಷ್ಟು ದಿನ ನಾವು ತರುಣರಾಗಿರುತ್ತೇವೆ. ಆಗ ಸಂತೋಷವಾಗಿಯೂ ಇರುತ್ತೇವೆ. ಆದರೆ ಜೀವಪೋಷಣೆಗೆ ವ್ಯತಿರಿಕ್ತವಾದ ಏಕತಾನತೆಯಿಂದ ಜಡ್ಡುಗಟ್ಟಿ ಹೋದರೆ ಬೆಳವಣಿಗೆ ನಿಂತು ಮುಪ್ಪು ಬರುತ್ತದೆ ಎನ್ನುತ್ತಾರೆ.
ನಾಲ್ಕು ವಯೋಲಿನ್‌ಗಳು ಬೇರೆ ಬೇರೆ ಶೃತಿಯಲ್ಲಿ ಹಾಡುಗಳನ್ನು ನುಡಿಸಿದರೆ ಅವು ಎಷ್ಟೇ ಶುದ್ಧ ಸಂಗೀತವಾದರೂ ನಾಲ್ಕೂ ಒಟ್ಟಿಗೆ ಮಿಕ್ಸ್ ಆದಾಗ ಕರ್ಕಶ ಶಬ್ದಗಳಾಗುತ್ತವೆ. ಆದರೆ ನೂರು ವಯೋಲಿನ್‌ಗಳು ಒಂದೇ ಶ್ರುತಿಯಲ್ಲಿ ಒಂದೇ ಹಾಡು ನುಡಿಸಿದರೆ ರೋಮಾಂಚನದ ಅನುಭವವಾಗುತ್ತದೆ. ಆಗ ಗಲಾಟೆ ಅನಿಸುವುದಿಲ್ಲ. ಅದು ನಮ್ಮ ಮೆದುಳಿಗೂ ಅನ್ವಯವಾಗುತ್ತದೆ ಎನ್ನುವುದನ್ನು ಪುಸ್ತಕದುದ್ದಕ್ಕೂ ಹೇಳುತ್ತಾ ಹೋಗುತ್ತಾರೆ.
ಸಂತೋಷ ಎಂದರೆ ಏನು?
ಸಂತೋಷದಿಂದ ಹೇಗೆ ಆರೋಗ್ಯವನ್ನು ಪಡೆಯಬಹುದು ಎನ್ನುವುದನ್ನು ತಿಳಿಸುವ ಸಂತೋಷವಾಗಿ ಇದ್ದುಬಿಡಿ ಪುಸ್ತಕವನ್ನು ಸ್ವಲ್ಪ ಹಾಸ್ಯ ಸೇರಿಸಿ ಬರೆದಿದ್ದಾರೆ. ಇದರಿಂದ ಪುಸ್ತಕವು ಓದುಗರನ್ನು ಓದಿಸುತ್ತಾ ಹೋಗುತ್ತದೆ.
- ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.