ಹಿಂದೂಸ್ಥಾನ ಏರೋನಾಟಿಕ್ಸ್ : ಹುದ್ದೆಗಳಿಗೆ ಭರ್ತಿ
Team Udayavani, Apr 24, 2019, 5:30 AM IST
ಪದವಿ, ಸ್ನಾತಕೋತ್ತರ ಪದವಿಗಳಿಗೆ ತರಗತಿಗಳು ಅಂತಿಮ ಹಂತಕ್ಕೆ ಬಂದಿದ್ದು ಇನ್ನೇನು ಪರೀಕ್ಷೆಗಳು ನಡೆಯುವ, ಅದಕ್ಕಾ ಗಿ ವಿದ್ಯಾರ್ಥಿಗಳು ಈಗಾಗಲೇ ಸಿದ್ಧತೆಯಲ್ಲಿಯೂ ತೊಡಗಿಕೊಂಡಿದ್ದಾರೆ. ಪದವಿ ವಿದ್ಯಾರ್ಥಿಗಳಲ್ಲಿ ಕೆಲವರು ಸ್ನಾತಕೋತ್ತರ ವಿದ್ಯಾಭ್ಯಾಸದ ಬಗ್ಗೆ ಯೋಚಿಸುತ್ತಿದ್ದರೆ, ಇನ್ನು ಕೆಲವರು ಉದ್ಯೋಗ ಕ್ಷೇತ್ರದತ್ತ ಹೆಜ್ಜೆ ಹಾಕಲು ಸಿದ್ಧತೆಗಳನ್ನು ನಡೆಸುತ್ತಿರಬಹುದು. ಸ್ನಾತಕೋತ್ತರ ವಿದ್ಯಾರ್ಥಿಗಳು ಭವಿಷ್ಯದ ಬಗೆಗಿನ ಹಲವು ಕನಸುಗಳನ್ನು ನನಸಾಗಿಸಲು ಯೋಜನೆಗಳನ್ನು ರೂಪಿಸಿಕೊಳ್ಳುತ್ತಿರಬಹುದು. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಕ್ಕಾಗಿ ಎದುರು ನೋಡುತ್ತಿರುವವರಿಗೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಈ ಬಾರಿ ಸುವರ್ಣಾವಕಾಶವನ್ನು ಒದಗಿಸಿಕೊಟ್ಟಿದೆ. ಸಂಸ್ಥೆಯಲ್ಲಿ ಮ್ಯಾನೇಜರ್, ಮೆಡಿಕಲ್ ಅಫೀಸರ್ ಮತ್ತು ಫೈನಾನ್ಸ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಹತೆ
ಈ ಹುದ್ದೆಗಳಿಗೆ ಸಂಸ್ಥೆಯೂ ವಿದ್ಯಾರ್ಹತೆಯನ್ನು ನಿಗದಿಪಡಿಸಿದ್ದು, ಎಂಜಿನಿಯರಿಂಗ್‌ನಲ್ಲಿ ಯಾವುದೇ ಪದವಿ, ಸಿಎ, ಈಸಿಡಬ್ಲ್ಯುಎ, ಎಂಬಿಬಿಎಸ್, ಸ್ನಾತಕೋತ್ತರ ಪದವಿ, ಎಂಡಿ/ ಡಿಎನ್‌ಬಿ ಮುಂತಾದ ವಿದ್ಯಾರ್ಹತೆಯನ್ನು ಹೊಂದಿದ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡ ಲು ತಿಳಿಸಿದೆ.
ಅರ್ಜಿ ಸಲ್ಲಿಸುವ ವಿಧಾನ
ಸಂಸ್ಥೆಯ ಅಧಿಕೃತ ವೆಬ್‌ಸೈಟ್ https://hal-india.co.in ಗೆ ಲಾಗ್‌ಇನ್ ಆಗಿ ಅದರಲ್ಲಿನ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, 15/1, ಕಬ್ಬನ್ ರೋಡ್, ಬೆಂಗಳೂರು- 560001 ಗೆ ಮೇ 2 ರ ಮೊದಲು ತಲುಪುವಂತೆ ಕಳುಹಿಸುವಂತೆ ಸಂಸ್ಥೆ ತಿಳಿಸಿದೆ.
ಪರೀಕ್ಷಾ ವಿಧಾನ
ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೂ ಲಿಖೀತ ಪರೀಕ್ಷೆ ಮೂಲಕ ಮೊದಲಿಗೆ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಅಲ್ಲದೆ ಅಭ್ಯರ್ಥಿಯ ಓವರ್‌ಆಲ್ ಫರ್‌ಫಾರ್ಮೆನ್ಸ್ ಗಮನಿಸಿಕೊಂಡು ಉದ್ಯೋಗಿಯನ್ನು ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯ ಜ್ಞಾನಕ್ಕೆ 20 ಅಂಕಗಳು, ಇಂಗ್ಲಿಷ್ ರೀಸನಿಂಗ್‌ಗೆ 40 ಅಂಕಗಳು ಮತ್ತು ಕನ್ಸರ್ನ್ಡ್ ಡಿಸಿಪ್ಲಿನ್‌ಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಒಟ್ಟಾರೆ 160 ಅಂಕಗಳಲ್ಲಿ ಪರೀಕ್ಷೆಯನ್ನು ಸಂಸ್ಥೆ ನಡೆಸುತ್ತದೆ. ಪರೀಕ್ಷಾ ಅವಧಿ ಒಟ್ಟು 2 ಗಂಟೆ 30 ನಿಮಿಷವನ್ನು ನಿಗದಿಪಡಿಸಿದೆ.
ಭುವನ ಬಾಬು, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.