ಹೊಟೇಲ್ ಮ್ಯಾನೇಜ್‌ಮೆಂಟ್ ಉದ್ಯೋಗಾವಕಾಶ ಅಗಾಧ
Team Udayavani, Dec 18, 2019, 4:20 AM IST
ಸಾಂಪ್ರದಾಯಿಕ ಕೋರ್ಸ್‌ಗಳ ನಡುವೆ ಯುವಜನತೆಯನ್ನು ಸೆಳೆದ ಹೊಸ ಕೋರ್ಸ್‌ಗಳಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಕೂಡ ಒಂದು. ಪ್ರವಾಸೋದ್ಯಮಕ್ಕೆ ಜಗತ್ತು ಒತ್ತು ನೀಡಲಾರಂಭಿಸಿದ ಪರಿಣಾಮ ಹೊಟೇಲ್ ಉದ್ಯಮ ಕ್ಷೇತ್ರಗಳು ವೇಗವಾಗಿ ಬೆಳೆದವು. ಇದು ಹೊಸ ರೀತಿಯ ಉದ್ಯೋಗಾವಕಾಶವನ್ನು ತೆರೆದಿಟ್ಟಿತು. ಹೊಟೇಲ್‌ನ ನಿರ್ವಹಣೆಗೆ ಬೇಕಾದ ವೃತ್ತಿಪರರಿಗೆ ಬೇಡಿಕೆ ಹೆಚ್ಚಿತು.
ಇದು ಇನ್ನೂ ಮುಂದಕ್ಕೆ ಹೋಗಿ ಇತರೆ ಉದ್ಯಮಗಳಲ್ಲಿಯೂ ಹೊಟೇಲ್ ಮ್ಯಾನೇಜ್‌ಮೆಂಟ್ ಶಿಕ್ಷಣ ಪಡೆದವರಿಗೆ ಬೇಡಿಕೆ ಹೆಚ್ಚುತ್ತಾ ಹೋಯಿತು. ಪರಿಣಾಮವಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಗಳು ಕೂಡ ಬೆಳೆದು ನಿಂತಿವೆ. ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ಪೂರೈಸಿದವರು ಕೇವಲ ಹೊಟೇಲ್ ಉದ್ಯಮವನ್ನೇ ಅವಲಂಬಿಸಬೇಕಾಗಿಲ್ಲ. ವಿವಿಧ ಉದ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶಗಳು ಇಂದು ಮುಕ್ತವಾಗಿವೆ.
ಬಿಎಚ್‌ಎಂ(ಬ್ಯಾಚುಲರ್ ಆಫ್ ಹೊಟೇಲ್ ಮ್ಯಾನೇಜ್‌ಮೆಂಟ್), ಬ್ಯಾಚುಲರ್ ಇನ್ ಹೊಟೇಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕ್ಯಾಟರಿಂಗ್ ಟೆಕ್ನಾಲಜಿ(ಬಿಎಚ್‌ಎಂಸಿಟಿ), ಬಿಎಸ್‌ಸಿ ಇನ್ ಹಾಸ್ಪಿಟಾಲಿಟಿ ಆ್ಯಂಡ್ ಹೊಟೇಲ್ ಅಡ್ಮಿನಿಸ್ಟ್ರೇಷನ್, ಬಿಎ ಇನ್ ಹೊಟೇಲ್ ಮ್ಯಾನೇಜ್ ಮೆಂಟ್, ಬಿಬಿಎ ಇನ್ ಹಾಸ್ಪಿಟಾಲಿಟಿ, ಟ್ರಾವೆಲ್ ಆ್ಯಂಡ್ ಟೂರಿಸಂ, ಮಾಸ್ಟರ್ ಆಫ್ ಹೊಟೇಲ್ ಮ್ಯಾನೇಜ್‌ಮೆಂಟ್ (ಎಂಎಚ್‌ಎಂ), ಡಿಪ್ಲೊಮಾ ಇನ್ ಹೊಟೇಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕ್ಯಾಟರಿಂಗ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಡಿಪ್ಲೊಮಾ ಇನ್ ಏವಿಯೇಷನ್ ಹಾಸ್ಪಿಟಾಲಿಟಿ ಮೊದಲಾದವು ಹೊಟೇಲ್ ಮ್ಯಾನೇಜ್‌ಮೆಂಟ್ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮುಖ ಕೋರ್ಸ್‌ಗಳು. ಪಿಯುಸಿ ವಿದ್ಯಾಭ್ಯಾಸ ಪಡೆದವರು ಹೊಟೇಲ್ ಮ್ಯಾನೇಜ್‌ಮೆಂಟ್‌ನ ಪದವಿ ಕೋರ್ಸ್‌ಗಳು ಸೇರ್ಪಡೆಯಾಗಲು ಅರ್ಹರು.
ಬೇಡಿಕೆ ಹೆಚ್ಚಳ
ಕರ್ನಾಟಕ ಕರಾವಳಿಯ ವಿದ್ಯಾರ್ಥಿಗಳು ಕೂಡ ಇತ್ತೀಚಿನ ವರ್ಷಗಳಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹೊಟೇಲ್ ಮ್ಯಾನೇಜ್‌ಮೆಂಟ್ ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗಿದೆ. “ಹೆಚ್ಚಿನ ಉದ್ಯೋಗಾವಕಾಶಗಳು ಇರುವುದರಿಂದ ಸಹಜವಾಗಿಯೇ ಕೋರ್ಸ್‌ಗೆ ಬೇಡಿಕೆ ಇದೆ’ ಎನ್ನುತ್ತಾರೆ ನಗರದ ಶ್ರೀದೇವಿ ಹೊಟೇಲ್ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಸ್ಯಾಮುವೆಲ್ ಜತ್ತನ್ನ ಅವರು.
ಉದ್ಯೋಗಾವಕಾಶ ಅಧಿಕ
ಮೂರು ವರ್ಷದ ಕೋರ್ಸ್‌ನ್ನು ಪೂರ್ಣಗೊಳಿಸುವ ಮೊದಲೇ ಪಡೆಯುವ ತರಬೇತಿ ವೇಳೆಯಲ್ಲಿಯೇ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಪಡೆಯುತ್ತಿರುವುದು ಈ ಕೋರ್ಸ್ ನ ವಿಶೇಷ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ, ಆತಿಥ್ಯಕ್ಕೆ ಆದ್ಯತೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗವಾಕಾಶ ಹೆಚ್ಚು. ಹೆಣ್ಮಕ್ಕಳಿಗೂ ಉತ್ತಮ ಉದ್ಯೋಗಾವಕಾಶವಿದೆ. ಆದರೆ ಈ ಭಾಗದಲ್ಲಿ ಈ ಕೋರ್ಸ್‌ಗೆ ಸೇರ್ಪಡೆಯಾಗುವವರ ಪೈಕಿ ಗಂಡು ಮಕ್ಕಳ ಸಂಖ್ಯೆ ಅಧಿಕ ಎನ್ನಾತ್ತಾರೆ ಸ್ಯಾಮುವೆಲ್ ಅವರು.
ಯಶಸ್ಸಿಗೆ ಸೂತ್ರ
ಹೊಟೇಲ್ ಮ್ಯಾನೆಜ್‌ಮೆಂಟ್ ಕೋರ್ಸ್ ಬಳಿಕ ಉದ್ಯೋಗ ಕ್ಷೇತ್ರಕ್ಕೆ ಅಥವಾ ಸ್ವಂತ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಾಗ ಅಲ್ಲಿ ಯಶಸ್ವಿಯಾಗಲು ಹೆಚ್ಚಿನ ಸಂವಹನ ಕೌಶಲ ಅಗತ್ಯ. ಇತರ ಕ್ಷೇತ್ರಗಳಿಗಿಂತಲೂ ಹೊಟೇಲ್ ಉದ್ಯಮ ಕ್ಷೇತ್ರ ಹೆಚ್ಚಿನ ಸಂಪರ್ಕವನ್ನು ಬಯಸುತ್ತದೆ. ಹೊಸತನದ ಆಲೋಚನೆ, ಗ್ರಾಹಕರಿಗೆ ಉತ್ತಮ ಸ್ಪಂದನೆ, ಶಿಸ್ತು, ತಂಡ ಸ್ಫೂರ್ತಿ, ಆತ್ಮವಿಶ್ವಾಸ, ಇನ್ನೊಬ್ಬರ ಮಾತುಗಳನ್ನು ಆಲಿಸುವ ತಾಳ್ಮೆ, ವಿಭಿನ್ನ ರೀತಿಯ ಗುಣಗಳ ಜನರೊಂದಿಗೆ ಬೆರೆಯುವ ಅಭ್ಯಾಸ, ಬದ್ಧತೆಯಿಂದ ಜವಾಬ್ದಾರಿ ನಿರ್ವಹಣೆ ಮೊದಲಾದವುಗಳು ಅವಶ್ಯ. ಆತಿಥ್ಯವನ್ನು (ಹಾಸ್ಪಿಟಾಲಿಟಿ) ಬಯಸುವ ಎಲ್ಲ ಕ್ಷೇತ್ರಗಳಲ್ಲಿಯೂ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಪೂರ್ಣಗೊಳಿಸಿದವರಿಗೆ ಬೇಡಿಕೆ ಇದೆ. ಹೊಟೇಲ್ ಮ್ಯಾನೇಜರ್, ಹೌಸ್‌ಕೀಪಿಂಗ್ ಮ್ಯಾನೇಜರ್, ಫುಡ್ ಆ್ಯಂಡ್ ಬೆವರೇಜಸ್ ಮ್ಯಾನೇಜರ್, ರೆಸ್ಟೋರೆಂಟ್ ಆ್ಯಂಡ್ ಫುಡ್ ಸರ್ವೀಸ್ ಮ್ಯಾನೇ ಜರ್, ಚೆಫ್, ಬ್ಯಾಂಕ್ವೆಟ್ ಮ್ಯಾನೇಜರ್, ಸ್ಟೀವರ್ಡ್, ಫ್ಲೋರ್ ಸೂಪರವೈಸರ್ ಆಗಿ ಹೊಟೇಲ್‌ಗಳು, ಬಹುರಾಷ್ಟ್ರೀಯ ಕಂಪೆನಿಗಳು, ಸಾಫ್ಟ್ವೇರ್ ಕಂಪೆನಿಗಳು, ಹಡಗು, ವಿಮಾನಯಾನ ಸಂಸ್ಥೆಗಳು ಮೊದಲಾದೆಡೆ ಅಪಾರ ಅವಕಾಶವಿದೆ.
- ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.