ಇವೆಂಟ್ ಮ್ಯಾನೇಜ್‌ಮೆಂಟ್ ಕಲಿತರೆ ಬದುಕಿಗೊಂದು ಹೊಸ ತಿರುವು
Team Udayavani, Aug 15, 2018, 2:56 PM IST
ಕಾಲೇಜಿನಲ್ಲಿ ಪಾಠದ ಜತೆಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸೇರಿಕೊಂಡಾಗ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ. ಜತೆಗೆ ಸಾಕಷ್ಟು ಹೊಸ ವಿಷಯಗಳನ್ನು ಕಲಿಯುವ ಅವಕಾಶವೂ ದೊರೆಯುತ್ತದೆ. ಇದರಿಂದ ನಮ್ಮಲ್ಲಿ ಅಡಗಿರುವ ಪ್ರತಿಭೆಗಳು ಹೊರಬರುವುದು. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡರೆ, ಸಂಘಟನೆ ಮಾಡಿದರೆ ನಾವು ಇವೆಂಟ್‌ಮ್ಯಾನೇಜರ್ ಆಗಬಹುದು.
ಏನಿದು ?
ಒಂದು ಕಾರ್ಯಕ್ರಮವನ್ನು ಸೂಕ್ತ ರೂಪರೇಷೆಯೊಂದಿಗೆ ಆಯೋಜಿಸುವುದು. ಉದಾಹರಣೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದ್ದರೆ ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ವೇದಿಕೆ ಸಿದ್ಧತೆ, ಸಭಾಂಗಣ ಅಲಂಕಾರ, ನಿರೂಪಣೆ, ಆಹ್ವಾನ ಪತ್ರಿಕೆ, ಅತಿಥಿಗಳಿಗೆ ಸೂಕ್ತ ವ್ಯವಸ್ಥೆ ಸಹಿತ ಇನ್ನಿತರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವ ಹಿಸಿ, ಕಾರ್ಯಕ್ರಮವನ್ನು ಮತ್ತಷ್ಟು ಸುಂದರಗೊಳಿಸುವುದು. ಇದಕ್ಕೆ ತಂಡವನ್ನು ಕಟ್ಟಿಕೊಳ್ಳುವುದು ಬಹುಮುಖ್ಯ. ಕಾಲೇಜಿನಲ್ಲಿ ನಮ್ಮದೇ ಒಂದು ಸ್ನೇಹಿತ ಸಂಘವಿದ್ದರೆ ಇಂತಹ ಕಾರ್ಯಕ್ರಮ ಆಯೋಜಿಸಿ ಬದುಕಿಗೊಂದು ಹೊಸ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಹಣಕಾಸು, ನಿರೂಪಣೆ, ಫೋಟೋಗ್ರಫಿ, ಕಂಪ್ಯೂಟರ್, ದೈಹಿಕ ಶ್ರಮಿಕರನ್ನೊಳಗೊಂಡಂತ ಸ್ನೇಹಿತರ ತಂಡ ನಿಮ್ಮದಾಗಿದ್ದರೆ ಯಶಸ್ವಿಯಾಗಿ ಇವೆಂಟ್ ಮ್ಯಾನೇಜ್ ಮೆಂಟ್ ನಡೆಸಬಹುದು.
ಉದ್ಯಮ ಕ್ಷೇತ್ರ
ಇದು ಈಗಾಗಲೇ ದೊಡ್ಡ ಮಟ್ಟದ ಒಂದು ಉದ್ಯಮವಾಗಿದೆ. ಯಾವುದೇ ಮದುವೆ, ಇನ್ನಿತರ ಸಭೆ ಸಮಾರಂಭಗಳ ಸಂಪೂರ್ಣ ಜವಾಬ್ದಾರಿ ಹಾಗೂ ನಿರ್ವಹಣೆಯನ್ನು ಒಂದು ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಗೆ ನೀಡಿದರೆ ಅವರು ಅದನ್ನು ಯಶಸ್ವಿಗೊಳಿಸುತ್ತಾರೆ. ಇದರಿಂದ ಕಾರ್ಯಕ್ರಮ ನಡೆಸುವವನಿಗೆ ಯಾವುದೇ ತಲೆಬಿಸಿ ಇರುವುದಿಲ್ಲ. ಕೇವಲ ಹಣ ನೀಡಿದರಾಯಿತು. ಇವ ರು ಸಮಾರಂಭದ ಆಮಂತ್ರಣದಿಂದ ಹಿಡಿದು ಸ್ಥಳ, ಸಿದ್ಧತೆ, ಅಲಂಕಾರ, ಊಟ, ಫೋಟೋಗ್ರಫಿ, ಕ್ಯಾಟರಿಂಗ್ ಪ್ರಚಾರ ಎಲ್ಲವನ್ನೂ ನೋಡಿ ಕೊಳ್ಳುತ್ತಾರೆ.
ಕೋರ್ಸ್‌ಗಳೂ ಇವೆ
ಇವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಈಗಾಗಲೇ ಆರಂಭವಾಗಿದೆ. ಇದು 6 ತಿಂಗಳ ಅಥವಾ 1 ವರ್ಷದ ಕೋರ್ಸ್ ಆಗಿದ್ದು ಇದರಲ್ಲಿ ಎಲ್ಲವನ್ನು ಕಲಿಸಲಾಗುತ್ತದೆ. ಮಾತ್ರವಲ್ಲದೆ ಇದೊಂದು ಒಳ್ಳೆಯ ಸಂಪಾದನೆಯ ಕ್ಷೇತ್ರವೂ ಹೌದು.
ಸಂಪಾದನೆಗೊಂದು ದಾರಿ
ಇಂತಹ ಇವೆಂಟ್ ಮ್ಯಾನೇಜ್‌ಮೆಂಟ್ ಮೊದಲು ಕಾಲೇಜಿನಲ್ಲೇ ಆರಂಭವಾಗಬೇಕು. ಆಗ ಒಂದು ಕಾರ್ಯಕ್ರಮದಲ್ಲಿ ಇದು ಯಶಸ್ವಿ ಯಾದರೆ ಪ್ರತಿ ವಿಭಾಗದ ಕಾರ್ಯಕ್ರಮಕ್ಕೂ ಇವೆಂಟ್ ಮ್ಯಾನೇಜ್‌ಮೆಂಟ್ ಬೇಕಾಗಬಹುದು. ಇದು ಕೇವಲ ಸರ್ವೀಸ್ ಅಲ್ಲ. ಪ್ರತಿಫಲವಾಗಿ ಇಂತಿಷ್ಟು ಹಣವನ್ನು ಪಡೆಯುತ್ತಾರೆ. ಇದರಿಂದ ಕಲಿಕೆಗೆ ಸ್ವಲ್ಪ ಹಣ ಸಹಾಯವಾದ ರೀತಿಯಾಗುತ್ತದೆ. ಕಾಲೇಜಿನಲ್ಲಿ ಇದನ್ನು ಕಲಿತು ಮುಂದೆ ಇದೇ ಕ್ಷೇತ್ರದಲ್ಲಿ ಮುಂದುವರೆಯುವ ಅವಕಾಶಗಳು ಕೂಡ ಇವೆ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.