ಬೋಲ್ಟ್ ಗೆ ಅವನದ್ದೇ ಚಿಂತೆಯಾದರೆ, ಉಳಿದವರಿಗೆ ಬೋಲ್ಟ್ ನದ್ದೇ ಚಿಂತೆ!
Team Udayavani, Jan 22, 2020, 5:29 AM IST
ಉಸೇನ್ ಬೋಲ್ಟ್ ನ ಓಟದ ರಹಸ್ಯವನ್ನು ಇಲ್ಲಿ ವಿವರಿಸಿದ್ದಾರೆ ಕಾರ್ತಿಕ್ ಅಮೈ
ನಮಗೆಲ್ಲಾ ಉಸೇನ್ ಬೋಲ್ಟ್ ಗೊತ್ತು. ಜಗತ್ತಿನ ಅತೀ ವೇಗದ ಓಟಗಾರ, ಹಲವು ದಾಖಲೆಗಳ ಸರದಾರ, ಒಲಿಂಪಿಕ್ಸ್‌ನಲ್ಲಿ ಚಿನ್ನವನ್ನು ಸಲೀಸಾಗಿ ಗೆಲ್ಲುವಾತ. ಅವರ ಈ ಯಶಸ್ಸಿನ ಕುರಿತು ಒಂದು ಒಳ್ಳೆಯ ಥಿಯರಿ ಇದೆ. ಉಸೇನ್ ಟ್ರ್ಯಾಕ್ ಮೇಲೆ ಓಡುವಾಗ ಎಷ್ಟು ವೇಗವಾಗಿ ಕಾಲುಗಳನ್ನು ಮುಂದಿಡುತ್ತಾನೆ ಎಂಬುದಕ್ಕಿಂತ ಕಾಲಿನಿಂದ ಎಷ್ಟು ಒತ್ತಡ ಹಾಕಿ ನೆಲದಿಂದ ಪುಟಿಯುತ್ತಾನೆ ಎಂಬುದು ಮುಖ್ಯ. ಈ ರಹಸ್ಯ ಅರಿಯಲು ಸಾಕಷ್ಟು ವರ್ಷದಿಂದ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದಾರಂತೆ. ಅವರಿಗೆ ಇದರ ಪೂರ್ಣ ಫಲಿತಾಂಶ ಇನ್ನೂ ಲಭಿಸಿಲ್ಲ.
ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿರುವವರ ಪೈಕಿ ಪೀಟರ್ ವೇಯಾಂಡ್ ಎಂಬವರು ಒಬ್ಬರು. ಓಟಗಾ ರನ ದೇಹದ ತೂಕಕ್ಕೆ ಅನುಗುಣವಾಗಿ ಎರಡರಿಂದ ಮೂರೂವರೆ ಪಟ್ಟು ಅಧಿಕವಾದ ಬಲದಿಂದ ನೆಲವನ್ನು ಗುದ್ದಿ ಮುನ್ನುಗ್ಗುತ್ತಾರೆ ಎಂದಿದ್ದಾರೆ. ಬೋಲ್ಟ್ ಕಾಲುಗಳು ನೆಲವನ್ನು ಸುಮಾರು 1000 ಪೌಂಡ್‌ಗಳ ಶಕ್ತಿಯಿಂದ ಗುದ್ದಿ ಮುನ್ನುಗ್ಗುತ್ತವೆ ಎನ್ನಬಹುದು. ಇದು ಆತನ ದೇಹದ ತೂಕ ಕ್ಕಿಂತ ಐದು ಪಟ್ಟು ಅಧಿಕ. 6 ಅಡಿ 5 ಇಂಚು ಎತ್ತರ ಹಾಗೂ 207 ಪೌಂಡು ತೂಕವಿರುವ ಬೋಲ್ಟ್ ಈ ಸೂತ್ರವನ್ನು ಮೀರ ಬಲ್ಲ ದೈತ್ಯ ಪ್ರತಿಭೆ. ಸಾಮಾನ್ಯವಾಗಿ ಬೋಲ್ಟ…ನಷ್ಟು ಗಾತ್ರ ಹೊಂದಿರುವ ಅತ್ಲೀಟ್‌ಗಳು ತಮ್ಮ ದೇಹ ತೂಕಕ್ಕಿಂತ ಅಧಿಕ ಒತ್ತಡ ಹೇರಿ ಮುನ್ನುಗ್ಗಲು ಕಷ್ಟ ಎಂದು ಪೀಟರ್ ಒಂದು ಕಡೆ ಹೇಳಿದ್ದಾರೆ. ಇಷ್ಟೇ ಅಲ್ಲ. ಈ ದಂತಕತೆ ಕುರಿತು ಮತ್ತೂಂದು ಪ್ರಮೇಯವಿದೆ. ಉಸೇನ್ ಬೋಲ್ಟ್ ಪ್ರತಿ ಬಾರಿ ಪದಕ ಪಡೆಯುವುದು ಹೇಗೆ? ಯಾವ ರೀತಿಯ ಸಿದ್ಧತೆ? ಎಂಬ ಪ್ರಶ್ನೆಗೆ ಸಿಗುವ ಉತ್ತರವೇನು ಗೊತ್ತೇ?
ಅವರೊಂದಿಗೆ ಇನ್ನೂ ಹಲವು ಮಂದಿ ಟ್ರ್ಯಾಕ್‌ನಲ್ಲಿರು ತ್ತಾರೆ. ಈ ಟ್ರ್ಯಾಕ್‌ನಲ್ಲಿರುವವರಿಗೆ ಉಸೇನ್ ಬೋಲ್ಟ್ ನನ್ನು ಹಿಂದಿಕ್ಕುವುದೇ ಗುರಿ. ಆದರೆ ಬೋಲ್ಟ್ಗೆ ತನ್ನ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸುವುದೇ ಗುರಿಯಂತೆ. ಹಾಗಾಗಿ ಉಸೇನ್ ಓಟ ಆರಂಭವಾಗುತ್ತಿದ್ದಂತೆ, ತನ್ನ ದಾಖಲೆಯನ್ನು ಗುರಿಯಾಗಿಸಿಕೊಂಡು ಓಡುತ್ತಾನೆ, ಅವನಿಗೆ ಉಳಿದ ಸ್ಪರ್ಧಿಗಳ ಬಗ್ಗೆ ಅರಿವೇ ಇಲ್ಲ. ಉಳಿದವರು ಇವನ ಹಿಂದೆ ಓಡುತ್ತಾರೆ. ಅವನು ಗೆಲ್ಲುತ್ತಾನೆ, ಇವರು ಸೋಲುತ್ತಾರೆ. ಯಾವಾಗ ನಾವು ನಮ್ಮನ್ನೇ, ನಮ್ಮ ಹಿಂದಿನ ಸಾಧನೆಯನ್ನು ಮೀರುವ ಗುರಿ ಇಟ್ಟು ಕೊಂಡು ಮುನ್ನುಗುತ್ತೇವೆಯೋ ಹೊಸ ದಾಖಲೆ ನಿರ್ಮಿಸುತ್ತೇವೆ. ಇಲ್ಲವಾದರೆ ಉಳಿದವರ ದಾಖಲೆ ಮುರಿಯುವುದರಲ್ಲಿ ಪ್ರಯತ್ನ ನಿರತರಾಗುತ್ತೇವೆ. ಈ ದೃಷ್ಟಿಕೋನ ದಿಂದ ಪಂದ್ಯ ಗೆಲ್ಲಬಹುದು, ಇತಿಹಾಸ ನಿರ್ಮಿಸಲಾಗದು.
ಇದೇ ನಿಯಮವನ್ನು ನಾವು ವಿವಿಧ ಕ್ಷೇತ್ರಗಳಿಗೆ ಅನ್ವಯಿಸಬಹುದಾಗಿದೆ. ಶಿಕ್ಷಣಕ್ಕೆ ಅನ್ವಯಿಸಿದರೆ ಹೊಸ ಇತಿಹಾಸ ನಿರ್ಮಿಸ ಬೇಕೆಂದರೆ ಎಲ್ಲರಿಗಿಂತ ಮುಂದಿರಬೇಕು. ಅಂದರೆ ನಾವು ಉಳಿದವರನ್ನು ಹಿಂದಕ್ಕೆ ಹಾಕುವ ಲೆಕ್ಕಕ್ಕಿಂತ, ನಮ್ಮ ಮುಂದಿನ ಗುರಿಯನ್ನು ಆಧರಿಸಿ ರೂಪುರೇಷೆ ಸಿದ್ಧಪಡಿಸಿಕೊಂಡು, ಪೂರ್ವ ಸಿದ್ಧತೆ ಕೈಗೊಂಡು ಸಾಧನೆಗೆ ಇಳಿಯಬೇಕು. ಆಗಷ್ಟೇ ಯಶಸ್ಸು ಸಾಧ್ಯ. ಓದುವ ಸಮ ಯದಲ್ಲಿ ಆಲಸ್ಯ, ನಿದ್ದೆ ಎದುರಾದಾಗ ಅದನ್ನು ಹಿಮ್ಮೆಟ್ಟಿಸಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಹಂಬಲ ಬೇಕು. ಇದು ನಮ್ಮಲ್ಲಿದ್ದರೆ ಸಕಾರಾತ್ಮಕವಾಗುವುದರ ಜತೆಗೆ ಓದು ಸಾಕಾರಗೊಳ್ಳುತ್ತದೆ. ಯಶಸ್ಸು ನಮ್ಮ ಬೆನ್ನಿಗೆ ನಿಲ್ಲುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.