PHD ಹೆಚ್ಚಿದ ಆಸಕ್ತಿ


Team Udayavani, Sep 25, 2019, 5:11 AM IST

r-20

ತನ್ನ ಹೆಸರಿನ ಮುಂದೆ ಡಾಕ್ಟರ್‌ ಎಂಬ ಪದ ಇರಬೇಕು ಎಂಬ ಆಸೆ ಅನೇಕರಿಗಿರುತ್ತದೆ. ಕೆಲವೊಬ್ಬರು ವೈದ್ಯಕೀಯ ಶಿಕ್ಷಣ ಪಡೆದು ಡಾಕ್ಟರ್‌ ಆದರೆ, ಮತ್ತೂ ಕೆಲವು ಮಂದಿಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದಂತಹ ಉತ್ಕೃಷ್ಟ ಸಾಧನೆಗೆ ವಿ.ವಿ.ಗಳು ಗೌರವ ಡಾಕ್ಟರೇಟ್‌ ನೀಡಿ ಗೌರವಿಸುತ್ತವೆ. ಮತ್ತೂ ಕೆಲವರು ಉನ್ನತ ಶಿಕ್ಷಣದ ಬಳಿಕ ಪಿಎಚ್‌.ಡಿ.ಗಾಗಿ ಸಂಶೋಧನೆ ನಡೆಸುತ್ತಾರೆ.

ಪಿಎಚ್‌.ಡಿ. ಪದವೀಧರ ಎಂದರೆ ಗೌರವ. ಯಾವುದೋ ಒಂದು ಕ್ಷೇತ್ರದ ಒಂದು ವಿಷಯವನ್ನು ಇಟ್ಟುಕೊಂಡು ಅದರ ಕುರಿತು ಆಳವಾದ ಸಂಶೋಧನೆ ಮಾಡಿ, ತಾನು ತಯಾರಿಸಿರುವ ಡಾಟಾಗಳನ್ನು ಮಾರ್ಗದರ್ಶಕರಿಗೆ ತೋರಿಸಿ ಅವರಿಂದ ಒಪ್ಪಿಗೆ ಪಡೆದು ತಯಾರಿಸಿಕೊಂಡ ಪ್ರಬಂಧವನ್ನು ಮಂಡಿಸಿ ಪಿಎಚ್‌.ಡಿ. ಗಿಟ್ಟಿಸಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಪಿಎಚ್‌.ಡಿ. ಪದವಿ ಪಡೆಯಬೇಕಾದರೆ ಸಾಕಷ್ಟು ಶ್ರಮ ವಹಿಸಬೇಕು. ವಿಷಯದ ಕುರಿತು ಆಳವಾದ ಅಧ್ಯ ಯನ ನಡೆಸಿದರಷ್ಟೇ ಡಾ| ಎಂಬ ಬಿರುದು ಹೆಸರಿನ ಮುಂದೆ ಬರಲು ಸಾಧ್ಯ.

ನಿಯಮಗಳು
ಪಿಎಚ್‌.ಡಿ. ಮಾಡಲು ಕೆಲವೊಂದು ನಿಯಮಗಳಿವೆ. ವಿದೇಶಗಳಲ್ಲಾದರೆ ಪದವಿ ಪಡೆದಾಕ್ಷಣ ಪಿಎಚ್‌.ಡಿ. ಮಾಡಬಹುದು. ಆದರೆ, ಭಾರತದಲ್ಲಿ ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕವಷ್ಟೇ ಪಿಎಚ್‌. ಡಿ.ಗೆ ಅರ್ಹನಾಗುತ್ತಾನೆ. ಪಿಎಚ್‌.ಡಿ. ಪಡೆಯಲು ಸಂಶೋಧನಾ ವಿದ್ಯಾರ್ಥಿಗಳಲ್ಲಿ ಪೂರ್ಣಕಾಲಿಕ ಹಾಗೂ ಅರೆಕಾಲಿಕ ಎಂಬ ಎರಡು ಆಯ್ಕೆಗಳು ಇರುತ್ತವೆೆ. ಪೂರ್ಣಕಾಲಿಕವಾಗಿ ಪಿಎಚ್‌.ಡಿ. ಅಧ್ಯಯನ ಮಾಡಲು ಬಯಸುವಂತಹ ನೌಕರರು ತಾವು ಉದ್ಯೋಗ ಮಾಡುತ್ತಿರುವ ಸಂಸ್ಥೆಯಿಂದ ಅಧ್ಯಯನ ರಜೆ ಮಂಜೂರಾತಿ ಪಡೆದ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಪೂರ್ಣಕಾಲಿಕವಾಗಿ ಪಿಎಚ್‌.ಡಿ. ಅಧ್ಯಯನ ಮಾಡಬಯಸುವ ಇತರೆ ವಿದ್ಯಾರ್ಥಿಗಳು ಸಂಶೋಧನ ಅವಧಿಯಲ್ಲಿ ಯಾವುದೇ ಉದ್ಯೋಗ ಮಾಡುವಂತಿಲ್ಲ. ಅರೆಕಾಲಿಕ ಪಿಎಚ್‌.ಡಿ.ಗೆ ಕನಿಷ್ಠ ಮೂರು ವರ್ಷ ಸಂಶೋಧನೆ ಮಾಡಬೇಕು. ಪೂರ್ಣಕಾಲಿಕ ಪಿಎಚ್‌.ಡಿ.ಗೆ ಕನಿಷ್ಠ ನಾಲ್ಕು ವರ್ಷಗಳ ಕಾಲ ಸಂಶೋಧನೆ ನಡೆಸಲೇಬೇಕು.

ಪಿಎಚ್‌.ಡಿ. ಅಧ್ಯಯನ ಮಾಡುವುದಕ್ಕೂ ಮುನ್ನ ಆ ಸಂಶೋಧನಾ ಪ್ರಬಂಧದ ಸಲಹೆಗೆಂದು ಒಬ್ಬ ಮಾರ್ಗದರ್ಶಕ (ಗೈಡ್‌) ಬೇಕು. ಅಭ್ಯರ್ಥಿಯು ಒಬ್ಬ ಗೈಡ್‌ ಜತೆ ಮತ್ತೂಬ್ಬ ಕೋ ಗೈಡ್‌ ಅನ್ನು ಕೂಡ ಆಯ್ಕೆ ಮಾಡಬಹುದು. ಆದರೆ ಮಾರ್ಗದರ್ಶಕರಿಬ್ಬರಿಗೂ ಪಿಎಚ್‌.ಡಿ. ಪದವಿ ಪೂರ್ಣಗೊಂಡಿರಬೇಕು ಎಂಬ ನಿಯಮವಿದೆ.

ಸಾಹಿತ್ಯ ವಿಮರ್ಶೆ ಮುಖ್ಯ
ಪಿಎಚ್‌.ಡಿ. ಮಾಡುವ ಮಂದಿಗೆ ಮುಂದಿನ ಹಂತ ಬಹಳ ಪ್ರಾಮುಖ್ಯ ಎನಿಸುತ್ತದೆ. ಸಮಗ್ರ ವಿವರಣೆ ವಿಭಾಗ ಮುಗಿದ ಬಳಿಕ ಮುಂಬರುವ ಪ್ರಕ್ರಿಯೆಯೇ ಸಾಹಿತ್ಯ ವಿಮರ್ಶೆ. ಸಂಶೋಧನೆಗೆ ನಾವು ಆಯ್ಕೆ ಮಾಡಿದ ವಿಷಯದಲ್ಲಿ ಈವರೆಗೆ ಯಾವೆಲ್ಲಾ ಸಂಶೋಧನೆಗಳಾಗಿವೆ? ಅದರಲ್ಲಿರುವ ತೊಡಕುಗಳು, ಸಂಶೋಧಕರ ಸಲಹೆಗಳನ್ನು ಸಾಹಿತ್ಯ ವಿಮರ್ಶೆಯಲ್ಲಿ ನಮೂದು ಮಾಡಬೇಕು. ಬಳಿಕ, ಎರಡು ಅಂತಾರಾಷ್ಟ್ರೀಯ ಪ್ರಬಂಧ ಬರೆಯಬೇಕಾಗುತ್ತದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರಕ್ಕೆ ಭೇಟಿ ಮಾಡಬಹುದು. ಆ ವೇಳೆ ಸಂಶೋಧನೆಗೆ ಸಂಬಂಧಿಸಿದಂತೆ ಸಲಹೆಗಳು ಸಿಗುತ್ತವೆ.

ಇದರಲ್ಲಿ ಸುಮಾರು 8 ಪರಿವಿಡಿಗಳಿರುತ್ತವೆ. ಪ್ರಬಂಧ ಪೂರ್ಣಗೊಂಡ ಬಳಿಕ ಮಾರ್ಗದರ್ಶಕರಿಗೆ ಒಪ್ಪಿಸಬೇಕು. ಅವರು ವಿ.ವಿ.ಗಳಿಗೆ ಸಲ್ಲಿಸುತ್ತಾರೆ. ಅದರಲ್ಲಿ ಒಂದು ಅಂತಾರಾಷ್ಟ್ರೀಯ ರೆಫ್ರಿಗೆ, ಮತ್ತೂಂದನ್ನು ರಾಷ್ಟ್ರೀಯ ರೆಫ್ರಿಗೆ ನೀಡುತ್ತಾರೆ. ಅವರು ಸಂಶೋಧನೆಯನ್ನು ವಿಮರ್ಶಿಸಿ ಅಭಿಪ್ರಾಯ ಬರೆಯುತ್ತಾರೆ.

ಪ್ರಬಂಧದ ಬಗ್ಗೆ ರೆಫ್ರಿಗಳ ಬಳಿ ಒಟ್ಟಾರೆ ನಾಲ್ಕು ಆಯ್ಕೆ ಇರುತ್ತದೆ. ಪ್ರಬಂಧವನ್ನು ಆಯ್ಕೆ ಮಾಡಲಾಗಿದೆ. ಪ್ರಬಂಧವನ್ನು ಆಯ್ಕೆ ಮಾಡಲಾಗಿದೆ .. ಆದರೆ, ಸ್ವಲ್ಪ ಬದಲಾವಣೆ ಮಾಡಬೇಕು, ಬದಲಾವಣೆ ಮಾಡಿ ಪುನಃ ಸಲ್ಲಿಸಿ, ಪ್ರಬಂಧ ತಿರಸ್ಕರಿಸಲಾಗಿದೆ ಎಂಬ ಆಯ್ಕೆ ಇರುತ್ತಾರೆ. ಈ ಪ್ರಕ್ರಿಯೆಗಳ ಬಳಿಕ ವಿ.ವಿ.ಗೆ ಪ್ರಬಂಧ ಸಲ್ಲಿಕೆಯಾಗುತ್ತವೆ. ಬಳಿಕ, ಮಾರ್ಗದರ್ಶಕರಿಗೆ ವಿ.ವಿ.ಯಿಂದ ಪ್ರಬಂಧದ ಬಗ್ಗೆ ಮಾಹಿತಿ ಬರುತ್ತದೆ. ಆಯ್ಕೆಯಾದರೆ ಬಳಿಕ ಪ್ರಸ್ತುತಿ ನಡೆಯುತ್ತದೆ. ಬಳಿಕ ಆ ಪ್ರಬಂಧವನ್ನು ವಿ.ವಿ.ಗೆ ಕಳುಹಿಸಲಾಗುತ್ತದೆ. ಮತ್ತೂಮ್ಮೆ ಪರಿಶೀಲನೆ ಮಾಡಿದ ಬಳಿಕ ಪ್ರಬಂಧ ಆಯ್ಕೆಯಾಗುತ್ತದೆ.

1.62 ಲಕ್ಷ ಮಂದಿ ವಿದ್ಯಾರ್ಥಿ
ಪಿಎಚ್‌.ಡಿ ಪಡೆಯಲು ದೇಶದೆಲ್ಲೆಡೆ ಹೆಚ್ಚಿನ ಮಂದಿ ಆಸಕ್ತಿ ತೋರುತ್ತಿದ್ದಾರೆ. ಈ ಹಿಂದೆ ಉನ್ನತ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷಾ ವರದಿ ಪ್ರಕಾರ ಪ್ರತಿ ವರ್ಷ ದೇಶದಲ್ಲಿ ಸುಮಾರು 1.61 ಲಕ್ಷ ವಿದ್ಯಾರ್ಥಿಗಳು ಪಿಎಚ್‌.ಡಿ.ಗೆ ನೋಂದಾಯಿಸಿಕೊಳ್ಳುತ್ತಾರೆ.

ಪರೀಕ್ಷೆ
ಪಿಎಚ್‌.ಡಿ. ಅಧ್ಯಯನಕ್ಕೆಂದು ಪ್ರವೇಶಕ್ಕೂ ಮುನ್ನ ವಿ.ವಿ.ಗಳಲ್ಲಿ ಆ ಬಗ್ಗೆ ಪರೀಕ್ಷೆಯೊಂದು ಇರುತ್ತದೆ. ಆದರೆ, ಗೇಟ್‌ ಪರೀಕ್ಷೆಯನ್ನು ಮೊದಲೇ ಪೂರ್ಣಗೊಳಿಸಿದರೆ ಇದಕ್ಕೆ ಹಾಜರಾಗುವ ಅಗತ್ಯವಿರುವುದಿಲ್ಲ. ಇಲ್ಲಿ É ಗಳಿಸಿದ ಅಂಕಗಳ ಆಧಾರದಲ್ಲಿ ವಿ.ವಿ.ಯು ಅಭ್ಯರ್ಥಿಗಳನ್ನು ಪಿಎಚ್‌.ಡಿ.ಗೆ ಆಯ್ಕೆ ಮಾಡುತ್ತದೆ. ಆಯ್ಕೆಯಾದ ಬಳಿಕ ಸಂಶೋಧನೆ ಮಾಡುವ ವಿಷಯ, ವಿಧಾನ, ಪ್ರಕ್ರಿಯೆ, ವಿಶೇಷತೆಗಳನ್ನು ಕಮಿಟಿಗೆ ಪ್ರಸ್ತುತ ಪಡಿಸಬೇಕಾಗುತ್ತದೆ.

ವಿವಿಧ ಹಂತಗಳು
ಇದಾದ ಬಳಿಕ ಅಧ್ಯಯನ ಪೂರ್ವ ಸಿದ್ಧತೆಗೆಂದು ಆಯಾ ಅಭ್ಯರ್ಥಿಗಳಿಗೆ ನಡೆಯುವ ಕೋರ್ಸ್‌ ವರ್ಕ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು. ಅಭ್ಯರ್ಥಿಯು ತನ್ನ ಸಂಶೋಧನೆಯನ್ನು ಪೂರ್ಣಕಾಲಿಕ ಅಥವಾ ಅರೆಕಾಲಿಕ ವಿದ್ಯಾರ್ಥಿ ಯಾಗಿ ಪೂರ್ಣಗೊಳಿಸಲು ಅವಕಾಶವಿರುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕವಷ್ಟೇ ಮುಂದಿನ ಹಂತದ ಪ್ರಕ್ರಿಯೆಗೆ ಅಭ್ಯರ್ಥಿಯು ಆರ್ಹನಾಗುತ್ತಾನೆ. ಅರ್ಹನಾದ ಬಳಿಕ ಆರು ತಿಂಗಳಿಗೊಮ್ಮೆ ಅಧ್ಯಯನದ ಸಾರಾಂಶವನ್ನು ವಿ.ವಿ.ಗೆ ಸಲ್ಲಿಸಬೇಕಾಗುತ್ತದೆ. ಪಿಎಚ್‌.ಡಿ. ಅಭ್ಯರ್ಥಿಯು ಪ್ರವೇಶ ಪಡೆದ ಒಂದು ವರ್ಷದೊಳಗೆ ಸಮಗ್ರ ವಿವರಣೆಯ ಪರೀಕ್ಷೆ ಇರುತ್ತದೆ. ಈ ಪರೀಕ್ಷೆಯನ್ನು ನೋಡಿಕೊಳ್ಳಲು ಮಾರ್ಗದರ್ಶಕ, ಇಂಟರ್ನಲ್‌ ಇನ್ವಿಜಿಲೇಟರ್‌, ಎಕ್ಸ್‌ಟರ್ನಲ್‌ ಇನ್ವಿಜಿಲೇಟರ್‌ ಮೂರು ಮಂದಿ ಅಧಿಕಾರಿಗಳು ಇರುತ್ತಾರೆ.

- ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.