ಮಡಕೆ ಚಿತ್ತಾರ ಬೇಡಿಕೆ ಹೆಚ್ಚಳ
Team Udayavani, Jul 17, 2019, 5:00 AM IST
ಮಾರುಕಟ್ಟೆಯಲ್ಲಿ, ಮನೆಗಳಲ್ಲಿ ಅಲಂಕಾರಕ್ಕಾಗಿ ಬಳಸುವ ಪಾಂಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಲಂಕಾರಿಕ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪಾಟ್ ಪೈಂಟಿಂಗ್‌ನಂತಹ ಕೋರ್ಸ್ ಗಳೂ ಮಹತ್ವ ಪಡೆಯುತ್ತಿವೆ. ಕಲೆಯಲ್ಲಿ ಆಸಕ್ತಿಯಿರುವವರಿಗೆ ಸೂಕ್ತವಾದ ಕೋರ್ಸ್ ಆಗಿದೆ. ಹವ್ಯಾಸಕ್ಕಾಗಿ ಮಾಡುವ ಇದನ್ನು ವೃತ್ತಿಯನ್ನಾಗಿ ಬದಲಾಯಿಸಿಕೊಳ್ಳಬಹುದು.
ಪಾಟ್ ಪೈಂಟಿಂಗ್ ಎಂದರೆ
ಪಾಟ್ ಪೈಂಟಿಂಗ್ ಎಂದರೆ ಮಡಕೆ ಮತ್ತು ಇನ್ನಿತರ ವಸ್ತುಗಳ ಮೇಲೆ ಪೈಂಟಿಂಗ್ ಮಾಡುವುದು. ಇದು ಅತ್ಯಂತ ಸೂಕ್ಷ್ಮವಾದ ಕೆಲಸವಾಗಿದ್ದು, ಪೈಂಟಿಂಗ್‌ನಲ್ಲಿ ಆಸಕ್ತಿಯಿರುವವರು ಇದನ್ನು ಕಲಿಯಬಹುದು.
ಪಾಟ್ ಪೈಂಟಿಂಗ್‌ಗೆ ಇತ್ತೀಚೆಗೆ ಮಹತ್ವ ಹೆಚ್ಚಾಗಿದ್ದು, ಅದರ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಕಲೆಯ ಮೇಲಿನ ಆಸಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಲಂಕಾರಿಕ ವಸ್ತುಗಳ ತಯಾರಿಕಾ ಕಂಪೆನಿಗಳಲ್ಲಿ ಪಾಂಟ್ ಪೈಟಿಂಗ್‌ಗೆ ಹೆಚ್ಚು ಅವಕಾಶವಿದೆ. ಜತೆಗೆ ಇಲ್ಲಿ ಚಿತ್ರಕಲೆಗೆ ಹೆಚ್ಚು ಮಹತ್ವ ದೊರೆಯುವುದರಿಂದ ಆಯಿಲ್ ಪೈಂಟಿಂಗ್, ಗ್ಲಾಸ್ ಪೈಂಟಿಂಗ್‌ಗಳಲ್ಲೂ ಆಸಕ್ತಿ ವಹಿಸಬಹುದು. ಚಿತ್ರಕಲೆಗೆ ಸಂಬಂಧಿಸಿದಂತೆ ಹಲವಾರು ಕಾಲೇಜುಗಳಿವೆ. ಎಂ.ಐ.ಟಿ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿ ಯುನಿವರ್ಸಿಟಿ ಪುಣೆ, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಫೈನ್ ಆಟ್ಸ್ ಮೋದಿನಗರ್, ಭಾರತೀಯ ವಿದ್ಯಾಭವನ್‌ನಲ್ಲಿ ಇದಕ್ಕೆ ಸಂಬಂಧಿಸಿದ ಕೋರ್ಸ್‌ಗಳಿವೆ.
ಇಂದು ಪಾಟ್ ಪೈಂಟಿಂಗ್‌ಗೆ ಬೇಡಿಕೆ ಹೆಚ್ಚಿತ್ತಿದೆ. ಸಾಮಾನ್ಯವಾಗಿ ಗೃಹಾಲಂಕಾರಕ್ಕಾಗಿ ಬಣ್ಣ ಬಣ್ಣದ ಪಾಟ್‌ಗಳನ್ನು ಖರೀದಿ ಮಾಡುತ್ತಾರೆ. ಹೀಗಾಗಿ ಬಣ್ಣದ ಪಾಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಈ ಕೋರ್ಸ್‌ಗಳಿಗೂ ಬೇಡಿಕೆ ಅಪಾರ. ಚಿತ್ರಕಲೆಯಲ್ಲಿ ಆಸಕ್ತಿಯಿರುವವರು ಇದನ್ನು ವೃತ್ತಿಯನ್ನಾಗಿ ಮಾಡಬಹುದು. ಅದರ ಜತೆಗೆ ಇತರ ಮಾದರಿಯ ಪೈಂಟಿಂಗ್‌ಗಳನ್ನು ಕರಗತಗೊಳಿಸಿಕೊಳ್ಳಬಹುದು.
ಪಾಂಟ್ ಪೈಟಿಂಗ್‌ನ ವಿಧಗಳು
1 ಬ್ರಶ್‌ವರ್ಕ್
ಬ್ರಶ್ ಮೂಲಕ ಮಾಡುವ ಪೈಂಟಿಂಗ್ ಇದಾಗಿದೆ.
2 ಅಂಡರ್‌ಗ್ಲೆಝ್
ವಾಟರ್ ಕಲರ್ ಮಾದರಿಯಲ್ಲಿ ಮಾಡಬಹುದಾದ ಪೈಂಟಿಂಗ್ ಇದಾಗಿದ್ದು, ಪಾಟ್ ಸುಂದರವಾಗಿ ಕಾಣುವಂತೆ ಮಾಡುತ್ತದೆ.
3 ಸಿರಾಮಿಕ್ ಪೈಟಿಂಗ್
ಸಿರಾಮಿಕ್ ಬಳಸಿ ಮಾಡುವ ಪೈಂಟಿಂಗ್ ಹೆಚ್ಚು ಆಕರ್ಷಕವಾಗಿರುತ್ತದೆ.
- ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.