ಐಟಿಐ ಕಲಿತವರಿಗೆ ಉತ್ತಮ ಭವಿಷ್ಯವಿದೆ
Team Udayavani, Oct 17, 2018, 1:53 PM IST
. ಐಟಿಐ ರಂಗದಲ್ಲಿ ಸ್ಮಾರ್ಟ್ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಉದ್ಯೋಗಾವಕಾಶಗಳು ಹೇಗಿವೆ?
ಎಲ್ಲ ರೀತಿಯ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಕೈಗಾರಿಕೆಗಳು ನಗರದಲ್ಲಿ ಇನ್ನೂ ಆರಂಭವಾಗಿಲ್ಲ. ಎಲೆಕ್ಟ್ರಿಕ್ ಮತ್ತು ವಯರಿಂಗ್ ಕ್ಷೇತ್ರದಲ್ಲಿ ಇಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿವೆ.
. ಐಟಿಐ ಕಲಿಕೆ ಮತ್ತು ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?
ಐಟಿಐ ಕಲಿಕೆಯಿಂದ ಭವಿಷ್ಯದಲ್ಲಿ ಜೀವನವನ್ನು ಸುಭದ್ರವಾಗಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಎಂಜಿನಿಯರಿಂಗ್ ಓದಿದವರಿಗೆ ಉದ್ಯೋಗಾವಕಾಶಗಳು ಕಡಿಮೆ ಇವೆ. ಏಕೆಂದರೆ ಅವರ ಸಂಬಳದ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ ಐಟಿಐ ಮತ್ತು ಡಿಪ್ಲೊಮಾ ಕಲಿತವರ ಸಂಬಳ ನಿರೀಕ್ಷೆ ಕಡಿಮೆ ಇರುವುದರಿಂದ ಕಂಪೆನಿಗಳು ಇವರನ್ನೇ ಹೆಚ್ಚು ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಈ ಟ್ರೆಂಡ್ ಇನ್ನಷ್ಟು ಬದಲಾಗಬಹುದು.
. ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಗಳ ಬಗ್ಗೆ ಸುಲಭ, ಸರಳವಾಗಿ ಮಾಹಿತಿ ನೀಡುವುದು ಹೇಗೆ?ಉಪಕರಣವನ್ನು ತೋರಿಸಿ ಅದರ ಬಗ್ಗೆ ವಿಶ್ಲೇಷಿಸಿದರೆ ಸುಲಭವಾಗಿ ಅರ್ಥವಾಗುವುದು. ಕೇವಲ ಥಿಯರಿಯನ್ನು ಬೋಧಿಸುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ. ವೃತ್ತಿ ಮಾರ್ಗದರ್ಶನ ನೀಡುವಾಗಲೂ ತರಗತಿಯಲ್ಲಿ ಪಾಠ ಮಾಡುವಾಗಲೂ ಪ್ರಾಯೋಗಿಕ ಕಲಿಕೆಯೇ ಸೂಕ್ತ. ಸುಲಭ ಮತ್ತು ಸರಳವಾದ ವಿಚಾರವನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದೂ ಇದರಿಂದ ಸಾಧ್ಯ. ಐಟಿಐನಲ್ಲಿ ಪ್ರಾಯೋಗಿಕ ಕಲಿಕೆಯೇ ಇರುತ್ತದೆ.
. ಫೇಲಾದರೆ ಜೀವನವೇ ಮುಗಿಯಿತು ಎನ್ನುವ ವಿದ್ಯಾರ್ಥಿಗಳಿಗೆ ಏನು ಸಲಹೆ ಏನು?
ಎಸೆಸೆಲ್ಸಿ, ಪಿಯುಸಿಯಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸುವವರು, ಫೇಲಾದರೆ ಭವಿಷ್ಯವಿಲ್ಲ ಎಂದು ತಿಳಿದುಕೊಳ್ಳುವವರು ಯೋಚನೆ ಮಾಡಬೇಕು. ಅನುತ್ತೀರ್ಣರಾದರೂ ಕಡಿಮೆ ಅಂಕ ಬಂದರೂ ಭವಿಷ್ಯಕ್ಕೆ ಪೂರಕವಾದ ವಿದ್ಯಾಭ್ಯಾಸ ಮುಂದುವರಿಸಲು ಸಾಕಷ್ಟು ಅವಕಾಶಗಳಿವೆ. ಐಟಿಐ ಕೋರ್ಸ್ ಆಯ್ಕೆ ಮಾಡಿಕೊಂಡಲ್ಲಿ ಭವಿಷ್ಯ ಸದೃಢವಾಗಿಸಿಕೊಳ್ಳಬಹುದು.
ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳುವವರಿಗೆ ನಿಮ್ಮ ಸಲಹೆ?
ಎಸೆಸೆಲ್ಸಿ, ಪಿಯುಸಿ ಬಳಿಕ ಯಾವುದೇ ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದಿದ್ದರೂ, ಮೊದಲು ಕ್ಷೇತ್ರಜ್ಞಾನ ಪಡೆದುಕೊಳ್ಳಬೇಕು. ಐಟಿಐ ಕ್ಷೇತ್ರದಲ್ಲಿ ಭವಿಷ್ಯವಿದೆ. ಹೊರಗಡೆ ಹೋಗಿ ದುಡಿಯುವ ಧೈರ್ಯ ಇದ್ದಲ್ಲಿ ಬೇರೆ ಕೋರ್ಸ್ ಮಾಡಬಹುದು. ಮಂಗಳೂರಿನಲ್ಲೇ ಅಥವಾ ತನ್ನದೇ ಊರಲ್ಲಿಯೇ ಇರಬೇಕೆಂದರೆ ಅಲ್ಲಿಗೆ ಹೊಂದಿಕೆಯಾಗುವ ವೃತ್ತಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.