ಉದ್ಯಮ ಕ್ಷೇತ್ರವನ್ನು ಕಾಡುತ್ತಿದೆ ಕೌಶಲದ ಕೊರತೆ
Team Udayavani, Aug 22, 2018, 2:31 PM IST
. ವಾಣಿಜ್ಯ ಅಧ್ಯಯನ ವಿಷಯಗಳಲ್ಲಿ ಯಾವುದಾದರೂ ಬದಲಾವಣೆ ಬೇಕಾಗಿದೆಯೇ? ಹೇಗೆ?
ಹೌದು. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಅಧ್ಯಯನ ವಿಷಯದಲ್ಲಿ ಉದ್ಯಮಕ್ಕೆ ಬೇಕಾಗಿರುವ ಕೌಶಲದ ಕೊರತೆ ಎದ್ದು ಕಾಣುತ್ತಿದೆ. ಇದನ್ನು ನೀಗಿಸಲು ವಾಣಿಜ್ಯ ವಿಷಯದಲ್ಲಿ ಉದ್ಯಮಕ್ಕೆ ಸಂಬಂಧಿಸಿ ಪಠ್ಯಕ್ರಮವನ್ನು ಬದಲಾಯಿಸಿ, ಬೋಧನೆ ಮಾಡುವುದು ಸೂಕ್ತ. ಕೇಸ್ ಸ್ಟಡಿ ಅನಾಲಿಸಿಸ್‌ನಂಥ ಪಠ್ಯಕ್ರಮವನ್ನು ಅಳವಡಿಸುವುದು ಸೂಕ್ತ.
. ವಾಣಿಜ್ಯ ಕ್ಷೇತ್ರದಲ್ಲಿ ನಿರ್ವಹಣೆ ಬಹಳ ಕಷ್ಟ ಎನ್ನುತ್ತಾರೆ ಯಾಕೆ?
ನಿರ್ವಹಣೆ ಎನ್ನುವುದು ತುಂಬಾ ವ್ಯವಸ್ಥಿತ ಉದ್ಯಮದ ಭಾಗ. ಅದನ್ನು ಸುಲಭವಾಗಿ ಮಾಡಲು ನಮ್ಮ ಜತೆ ಅನುಭವಿಗಳು ಇರಬೇಕು. ಉತ್ತಮ ಯೋಜನೆ, ಸಂಘಟಿಸುವಿಕೆಯಿಂದ ವಾಣಿಜ್ಯ ಕ್ಷೇತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಹುದು. ಒಳ್ಳೆಯ ನಾಯಕತ್ವ, ವ್ಯವಸ್ಥೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು, ಎಲ್ಲವನ್ನೂ ಕಾನೂನು ಅನುಸಾರವಾಗಿ ಮಾಡುವುದು, ಗ್ರಾಹಕರ ಬಯಕೆ ಹಾಗೂ ಬೇಡಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಒಳ್ಳೆಯ ಸೇವೆ ಸಲ್ಲಿಸುವುದರಿಂದ ವಾಣಿಜ್ಯ ಕ್ಷೇತ್ರದ ನಿರ್ವಹಣೆಯನ್ನು ಸುಲಭ ಮಾಡಬಹುದು.
. ಆಧುನಿಕ ತಂತ್ರಜ್ಞಾನಗಳು ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸಿದೆ. ಹೀಗಿದ್ದರೂ ಕೆಲವೊಂದು ವಿಚಾರದಲ್ಲಿ ಬ್ಯಾಂಕ್‌ಗಳು ಗ್ರಾಹಕರಿಂದ ಹಣ ಲೂಟಿ ಮಾಡುತ್ತಿವೆ ಎಂಬ ಆರೋಪವಿದೆ. ಇದು ಸರಿಯೇ?
ಅತ್ಯಾಧುನಿಕ ತಂತ್ರಜ್ಞಾನಗಳು ಇವತ್ತಿನ ದಿನಗಳಲ್ಲಿ ಗ್ರಾಹಕರ ಮತ್ತು ಬ್ಯಾಂಕ್ ಗಳ ನಡುವಿನ ಸಂಬಂಧವನ್ನು ಸುಧಾರಿಸಿದೆ ನಿಜ. ಆದರೆ ಬ್ಯಾಂಕ್‌ಗಳ ಹೊರೆ ಕಡಿಮೆಯಾಗಿಲ್ಲ. ಬ್ಯಾಂಕ್‌ಗಳು ಸಾಕಷ್ಟು ಬ್ಯಾಕ್ ಎಂಡ್ ಕೆಲಸಗಳನ್ನು ನಿರ್ವಹಿಸುತ್ತವೆ. ಅದು ತುಂಬಾ ಜವಾಬ್ದಾರಿಯುತವಾಗಿರುತ್ತವೆ. ಬ್ಯಾಂಕಿನ ಸೇವೆಗಳು ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದ್ದರೂ ಅವು ಉಚಿತವಾಗಿಲ್ಲ. ಬ್ಯಾಂಕ್‌ಗಳು ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ದಂಡ, ಹಲವಾರು ರೀತಿಯ ಶುಲ್ಕವನ್ನು ಗ್ರಾಹಕರಿಂದ ಪಡೆದುಕೊಳ್ಳುತ್ತಿವೆ. ತಂತ್ರಜ್ಞಾನ ಸುಧಾರಿಸದರೂ ಬ್ಯಾಂಕ್‌ಗಳು ಸೇವೆಯ ಜತೆಗೆ ಹಲವು ಶುಲ್ಕವನ್ನು ವಿಧಿಸುತ್ತಿವೆ. ಇದರ ಬಗ್ಗೆ ಗ್ರಾಹಕರು ಜಾಗೃತರಾಗಿರಬೇಕು.
.ನಿರ್ವಹಣಾ ಶಾಸ್ತ್ರದ ಕಲಿಕೆಯಿಂದ ಬದುಕಿನ ಮೇಲೆ ಬೀರುವ ಪರಿಣಾಮ ಏನು?
ನಮ್ಮ ಸುತ್ತಮುತ್ತಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುತ್ತದೆ. ನಮ್ಮ ಆರ್ಥಿಕತೆ ಹೇಗೆ ಇದೆ, ಅದು ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಗೊತ್ತಾಗುತ್ತದೆ. ಜೀವನದಲ್ಲಿ ಪರಿಣಾಮಕಾರಿ ನಿರ್ಣಯಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ. ನಾಯಕನಾಗಲು ಮಾರ್ಗದರ್ಶನ ಮಾಡುತ್ತದೆ.
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.