ವೈಯಕ್ತಿಕ ಆರ್ಥಿಕತೆ ಕಲಿಕೆ ಇಂದಿನ ಅಗತ್ಯ
Team Udayavani, Sep 19, 2018, 12:24 PM IST
. ಇಂದಿನ ಯುವಜನರಲ್ಲಿ ದುಂದುವೆಚ್ಚ ಹೆಚ್ಚಾಗುತ್ತಿದೆ ಎಂಬ ಆರೋಪವಿದೆ. ಇದಕ್ಕೆ ಕಡಿವಾಣ ಹಾಕುವುದು ಹೇಗೆ?ವೈಯಕ್ತಿಕ ಆದಾಯ ಹಾಗೂ ಖರ್ಚಿನ ಮೇಲೆ ಯುವಜನತೆ ಬಜೆಟ್ ಮಾಡುತ್ತಿಲ್ಲ. ಹೆಚ್ಚೇಕೆ ಬಜೆಟ್ ಮಾಡುವುದು ಹೇಗೆ ಎನ್ನುವುದೇ ಗೊತ್ತಿಲ್ಲ. ಆದಾಯ- ಉಳಿತಾಯ= ಉಳಿಕೆ. ಉಳಿಕೆಯನ್ನು ಖರ್ಚು ಮಾಡಬೇಕು. ಹೀಗೆ ಮಾಡಿದರೆ ಮಾತ್ರ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು.
. ಹಣಕಾಸು ವ್ಯವಹಾರದ ಬಗ್ಗೆ ಪಠ್ಯವಾಗಿ ಕಲಿಯುವ ಅಗತ್ಯವಿದೆಯೇ? ಯಾಕೆ?
ವೈಯಕ್ತಿಕ ಆರ್ಥಿಕತೆ ಬಗ್ಗೆ ಶೈಕ್ಷಣಿಕವಾಗಿ ಕಲಿಸಿಕೊಡುವುದು ತುಂಬಾ ಅಗತ್ಯ. ಇದಕ್ಕಾಗಿ ಪದವಿ ಬಳಿಕ ಒಂದು ಕೋರ್ಸ್ ಕೂಡ ಇದೆ. ಫೈನಾನ್ಶಿಯಲ್ ಪ್ಲ್ಯಾನಿಂಗ್ ಸ್ಟ್ಯಾಂಡರ್ಡ್ ಬೋರ್ಡ್ ಇಂಡಿಯಾದ ವತಿಯಿಂದ ಸಿಎಫ್‌ಪಿ ಕೋರ್ಸ್ ಇದೆ. ಆದರೆ ವಿವಿ ಮಟ್ಟದಲ್ಲಿ ಇಲ್ಲ.
. ಈಗಿನ ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿದೆ ಎಂದೆನಿಸುತ್ತಿದೆಯೇ?
ದೇಶದ ಆರ್ಥಿಕ ಪರಿಸ್ಥಿತಿ ಉತ್ತಮ ಸ್ಥಿತಿಯಲ್ಲಿ ಹೋಗುತ್ತಿದೆ. ಮುಂದಿನ 10 ವರ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ. ಮಾರುಕಟ್ಟೆ ಟ್ರೆಂಡ್ ಧನಾತ್ಮಕವಾಗಿದೆ. ಜಿಡಿಪಿ ಬೆಳವಣಿಗೆ ಕಾಣುತ್ತಿದೆ, ದುಡಿಯುವ ಜನರ ಸಂಖ್ಯೆ ಹೆಚ್ಚಿದೆ. ದುಡಿಯುವ ಜನರು ನಿವೃತ್ತಿ ಜೀವನಕ್ಕೆ ಹೋಗುವವರೆಗೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಯೇ ಇರಲಿದೆ. ಯಾಕೆಂದರೆ ದುಡಿಯುವ ಆದಾಯ ಜಾಸ್ತಿ ಇರುತ್ತದೆ.
. ಕೊಳ್ಳುಬಾಕ ಸಂಸ್ಕೃತಿ ದುಂದುವೆಚ್ಚಕ್ಕೆ ಕಾರಣ. ಇದಕ್ಕೆ ಹೇಗೆ ಕಡಿವಾಣ ಹೇಗೆ?
ತನ್ನ ಬಗ್ಗೆ ತಾನೇ ಋಣಾತ್ಮಕ ಚಿಂತನೆ ಮಾಡುವ ವ್ಯಕ್ತಿ ಹೆಚ್ಚು ಖರ್ಚು ಮಾಡುತ್ತಾನೆ. ಶೋಕಿಗಾಗಿ, ಸ್ನೇಹಿತರಿಗಾಗಿ, ಇನ್ನೊಬ್ಬರ ಮಾತು ಕೇಳಿ ಖರ್ಚುಗಳ ಮೊರೆ ಹೋಗುತ್ತಾನೆ. ಅಚಾನಕ್ಕಾಗಿ ಡಿಪ್ರಷನ್‌ಗೆ ಹೋಗುವುದು ಇದೇ ಕಾರಣಕ್ಕೆ. ಆದ್ದರಿಂದ ಮೊದಲು ನಮ್ಮ ಮೇಲೆ ನಾವೇ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಆಗ ಆರ್ಥಿಕತೆ ಬಗ್ಗೆಯೂ ಆಲೋಚನೆ ಮೂಡುತ್ತದೆ. ಇದರ ಬಗ್ಗೆ ಯುವಜನರಿಗೆ ಅರಿವು ಮೂಡಿಸಬೇಕಾಗಿದೆ.
. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಭದ್ರವಾಗಿ ಇರಿಸುವುದೇ?
ನಮ್ಮ ದೇಶದ ಆದಾಯದ ದೊಡ್ಡ ಖರ್ಚನ್ನು ತೈಲಕ್ಕಾಗಿ ಮೀಸಲಿಡುತ್ತಿದ್ದೇವೆ. ಇದು ಆರ್ಥಿಕ ವ್ಯವಸ್ಥೆಗೆ ಸರಿಯಾದುದಲ್ಲ. ಮೊದಲು ವಾರಕ್ಕೆ 700 ರೂ. ಪೆಟ್ರೋಲ್‌ಗೆ ಖರ್ಚು ಮಾಡುತ್ತಿದ್ದವರು ಈಗ 1,500 ರೂ. ಗೆ ಏರಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಇತರ ಅಗತ್ಯ ವಸ್ತುಗಳ ಖರೀದಿಗೆ ತೊಂದರೆಯಾಗುತ್ತಿದೆ. ಪೆಟ್ರೋಲ್ ಖರ್ಚನ್ನು ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಖರ್ಚನ್ನು ಸರಿದೂಗಿಸುವುದು ಹೇಗೆ ಎನ್ನುವುದನ್ನು ಕಲಿತುಕೊಳ್ಳಬೇಕು.
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.