ಸೆಮಿನಾರ್ ಪ್ರಸ್ತುತಿ ಹೀಗಿರಲಿ
ಆಸಕ್ತಿಯಿರುವ ವಿಷಯವನ್ನೇ ಆಯ್ದುಕೊಳ್ಳಿ
Team Udayavani, Sep 18, 2019, 5:31 AM IST
ಕ್ಲಾಸ್‌ನಲ್ಲಿ ಸೆಮಿನಾರ್ ಮಾಡಿ ಎಂದರೆ ಯಾರಿಗೂ ಇಷ್ಟವಾಗುವುದಿಲ್ಲ ಅದರ ಬದಲಾಗಿ ಸಾವಿರ ಪ್ರಶ್ನೆಗಳು ಹುಟ್ಟಿಕೊಂಡು ಅದನ್ನು ಹೇಗೆ ನಿರ್ವಹಿಸುವುದು ಎನ್ನುವುದು ತಿಳಿಯದೇ ಹೆದರಿ ನನ್ನಿಂದಾಗುವುದಿಲ್ಲ ಎಂದು ಹೇಳುತ್ತೇವೆ. ಕೆಲವರು ಒಪ್ಪಿಕೊಂಡು ನಿರೀಕ್ಷೆಯ ಮಟ್ಟಕ್ಕೆ ತಲುಪದೆ ನಿರಾಶೆಗೊಳಗಾಗುತ್ತಾರೆ. ಹಾಗಾಗಿ ಸೆಮಿನಾರ್ ಮಾಡುವ ಮೊದಲು ಕೆಲವು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಆಗ ನಿಮ್ಮ ಸೆಮಿನಾರ್ ಅನ್ನು ನೀವು ಇನ್ನಷ್ಟು ಚೆಂದವಾಗಿ ಮತ್ತು ನಿರೀಕ್ಷೆಯ ಮಟ್ಟದಲ್ಲಿ ಮಾಡಲು ಸಾಧ್ಯ. ಮೊದಲು ಉತ್ತಮ ವಿಷಯವನ್ನು ಆರಿಸಿಕೊಳ್ಳಿ
ನಿಮಗೆ ತುಂಬಾ ಆಸಕ್ತಿಯಿರುವ ವಿಷಯವನ್ನೇ ಸೆಮಿನಾರ್‌ಗೆ ಆಯ್ದುಕೊಳ್ಳಿ. ಅನಂತರ ಅದಕ್ಕೆ ಪೂರಕವಾಗಿ ಗ್ರಂಥಾಲಯಗಳಿಂದ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಿ. ಹಿಂದೆ ಈ ವಿಷಯದ ಬಗ್ಗೆ ಸಂಶೋಧನೆ ಮಾಡಿದ್ದಾರಾ? ಅಥವಾ ಇದರ ಕುರಿತು ಯಾವುದಾದರೂ ಲೇಖನಗಳು ಬಂದಿವೆಯೇ? ಎಂದು ಒಮ್ಮೆ ಪರೀಕ್ಷಿಸಿ. ಇವು ನಿಮ್ಮ ಸೆಮಿನಾರ್‌ಗೆ ಒಂದು ಸುಂದರ ರೂಪ ನೀಡುತ್ತವೆ. ನೀವು ತೆಗೆದುಕೊಂಡ ವಿಷಯದ ಕುರಿತು ಎಲ್ಲಿಯಾದರೂ ಉಲ್ಲೇಖೀಸಿದ್ದರೆ ಅದರ ಬಗ್ಗೆ ಕೂಡ ಸ್ಪಷ್ಟವಾದ ಮಾಹಿತಿ ತೆಗೆದುಕೊಳ್ಳಿ. ಇದೆಲ್ಲ ಆದ ಅನಂತರ ನಿಮ್ಮ ಕ್ಲಾಸ್ ಅಥವಾ ನೀವು ಸೆಮಿನಾರ್ ಮಾಡುವಲ್ಲಿ ಎಷ್ಟು ಜನ ಈ ವಿಷಯದ ಬಗ್ಗೆ ತಿಳಿದುಕೊಂಡಿದ್ದಾರೆ ಎಂಬುದನ್ನು ಗಮನಿಸಿಕೊಳ್ಳಿ. ಅದಲ್ಲದೆ ನಿಮ್ಮ ಕ್ಲಾಸ್ ರೂಮ್ ಅಥವಾ ಇನ್ನಾವುದೋ ಬೇರೆ ಕೊಠಡಿಗಳಿದ್ದಲ್ಲಿ ಅದನ್ನು ಮೊದಲೇ ಹೋಗಿ ವೀಕ್ಷಿಸಿ ತಾಂತ್ರಿಕ ಸಮಸ್ಯೆ ಬಾರದ ರೀತಿಯಲ್ಲಿ ಪೂರ್ವಸಿದ್ಧತೆ ಮಾಡಿ.
ಧೈರ್ಯವಿರಲಿ
ಸೆಮಿನಾರ್ ಮಾಡುವ ವೇಳೆ ವಿಚಲಿತರಾಗದೆ ಧೈರ್ಯದಿಂದ, ಸ್ಪಷ್ಟವಾಗಿ ವಿಷಯವನ್ನು ಮಂಡಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಇತರರಿಗೆ ತಿಳಿಸುತ್ತದೆ. ಸೆಮಿನಾರ್ ಕೊನೆಗೊಳಿಸುವಾಗಲೂ ಸ್ಪಷ್ಟತೆ ಇರಲಿ. ಇನ್ನೇನು ಮುಗಿಯುತ್ತದೆ ಒಮ್ಮೆ ಮುಗಿಸಬೇಕು ಎಂದು ಅವಸರಿಸದೆ ನಿಮ್ಮ ವಿಷಯಕ್ಕೆ ಪೂರ್ಣ ವಿರಾಮವನ್ನಿರಿಸಿ.
ಕೇಳುಗರೊಂದಿಗೆ ಚರ್ಚಿಸಿ
ಸೆಮಿನಾರ್‌ನ ಕೊನೆಯಲ್ಲಿ ನೀವು ಮಂಡಿಸಿದ ವಿಷಯದ ಸಂಕ್ಷಿಪ್ತ ಸಾರಾಂಶವನ್ನು ಮತ್ತೂಮ್ಮೆ ಹೇಳಿ. ಬಗ್ಗೆ ಸ್ವಲ್ಪ ಹೊತ್ತು ಕೇಳುಗರೊಂದಿಗೆ ಚರ್ಚಿಸಿ. ಅನಂತರ ಸಮಯವಿದ್ದಲ್ಲಿ ಪ್ರಶ್ನೋತ್ತರವನ್ನು ನಡೆಸಿ. ಆಗ ಎಷ್ಟು ಜನರಿಗೆ ಅರ್ಥವಾಗಿದೆ ಅಥವಾ ಯಾರಿಗೇ ಯಾವುದು ಅರ್ಥವಾಗಿಲ್ಲ ಎಂಬುದು ನಿಮಗೆ ತಿಳಿಯುತ್ತದೆ. ಅರ್ಥವಾಗದೆ ಇರುವ ವಿಷಯವನ್ನು ಮತ್ತೂಮ್ಮೆ ಸರಿಯಾಗಿ ಅರ್ಥಮಾಡಿಸಿ. ಕೊನೆಯಲ್ಲಿ ಒಂದು ಚಿಕ್ಕR ಚೀಟಿಯಲ್ಲಿ ಅನಿಸಿಕೆಗಳನ್ನು ಬರೆಸಿಕೊಳ್ಳಿ ಇದು ನಿಮ್ಮ ಮುಂದಿನ ಸೆಮಿನಾರ್‌ಗಳಲ್ಲಿ ನಿಮ್ಮನ್ನು ರೂಪಿಸಿಕೊಳ್ಳು ನೆರವಾಗುತ್ತದೆ.
ವಿಷಯಗಳನ್ನು ಪಟ್ಟಿ ಮಾಡಿಕೊಳ್ಳಿ
ಯಾವ ಯಾವ ವಿಷಯಗಳನ್ನು ಹೇಗೆ ಹೇಳಬೇಕು ಮತ್ತು ಅದರಲ್ಲಿ ನೀವು ಯಾವ ಅಂಶಗಳನ್ನು ಸೇರಿಸಬೇಕು ಎಂಬುದನ್ನು ಪಟ್ಟಿ ಮಾಡಿಕೊಳ್ಳಿ ಮತ್ತು ಅದನ್ನು ನೋಡಿದ ಕೂಡಲೇ ನಿಮಗೆ ನೀವು ಹೇಳಬೇಕಾದ ವಿಷಯಗಳು ನೆನಪಿಗೆ ಬರುತ್ತವೆಯೇ ಎಂಬುದನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಅನಂತರ ನಿಮ್ಮ ಮುಂದಿರುವ ಪ್ರೇಕ್ಷಕರಿಗೆ ನಿಮ್ಮ ವಿಷಯವನ್ನು ಚೆನ್ನಾಗಿ ಪರಿಚಯಿಸಿ ಮತ್ತು ಅದಕ್ಕೆ ಹೊಂದುವ ಫೋಟೋ ಇನ್ನಿತರ ಆಸಕ್ತಿದಾಯಕ ವಿಷಯಗಳನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿ. ಅದಲ್ಲದೆ ಅವರ ಗಮನ ಸೆಳೆಯಲು ಏನು ಮಾಡಬೇಕು ಎನ್ನುವುದನ್ನು ಮೊದಲೇ ಅರಿತಿಟ್ಟುಕೊಳ್ಳಿ. ನಿಮ್ಮ ಸ್ವಂತ ಸಂಶೋಧನೆಯ ಬಗ್ಗೆ ನೀವು ಹೇಳುತ್ತಿದ್ದರೆ ಅದು ಅವರಿಗೆ ಅರ್ಥವಾಗಲು ಚಿತ್ರ ಅಥವಾ ಫ್ಲೋ ಚಾರ್ಟ್‌ಗಳನ್ನು ಬಳಸಿ.
ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.