ಬದುಕು ಬದಲಿಸುವ ಈಜು ಹವ್ಯಾಸ


Team Udayavani, Jun 13, 2018, 4:06 PM IST

13-june-18.jpg

ದೇಹ, ಮನಸ್ಸಿನ ಆರೋಗ್ಯ ಕಾಪಾಡಲು ಈಜು ಒಂದು ಸರಳ ವಿಧಾನ. ಹವ್ಯಾಸವಾಗಿ ಇದರಲ್ಲಿ ತೊಡಗಿಸಿಕೊಂಡವರು ಮುಂದೆ ಇದನ್ನೇ ವೃತ್ತಿಯನ್ನಾಗಿಯೂ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಸಮಯ ಸಿಕ್ಕಾಗ ಈಜು ಕಲಿಯುವುದರಿಂದ ಭವಿಷ್ಯದಲ್ಲಿ ಇದು ನೆರವಿಗೆ ಬರುವುದು. ಈಜು ಕಲಿಯಲು ವಯಸ್ಸು, ಶಿಕ್ಷಣಾರ್ಹತೆಯ ಹಂಗಿಲ್ಲ. ಬೆಳಗ್ಗೆ ಅಥವಾ ಸಂಜೆ ಹೊತ್ತು ಒಂದರ್ಧ ಗಂಟೆ ನೀರಿನಲ್ಲಿ ಈಜುವ ಹವ್ಯಾಸ ರೂಪಿಸಿಕೊಳ್ಳುವುದು ನಮ್ಮ ಭವಿಷ್ಯವನ್ನೇ ಬದಲಿಸಬಲ್ಲದು.

ಉದ್ಯೋಗಾವಕಾಶ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದು ಉದ್ಯೋಗ ಪಡೆಯುವುದು ಕೂಡ ಸವಾಲಿನ ಕೆಲಸ. ಹೀಗಾಗಿ ವೃತ್ತಿಯನ್ನೇ ನಂಬಿಕೊಂಡು ಕೂರುವಂತಿಲ್ಲ. ಅದಕ್ಕಾಗಿ ಹವ್ಯಾಸಗಳನ್ನೇ ಪಾರ್ಟ್‌ಟೈಂ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಈಜು ಕಲಿಕೆಯೂ ಒಂದು ಹೊಸ ದಾರಿಯನ್ನು ತೋರಬಲ್ಲದು. 

ತರಬೇತುದಾರ
ಈಜು ಗೊತ್ತಿದ್ದರೆ ಸಾಕು. ತರಬೇತುದಾರರಾಗಿ ಸ್ವಂತ ವೃತ್ತಿಯನ್ನು ಮಾಡಿಕೊಳ್ಳಬಹುದು. ಹೆಡ್‌ ಸ್ವಿಮ್‌ ಕೋಚ್‌ ಡಿಗ್ರಿಯ ಅನಂತರ ಏನಾಗಬೇಕು ಎಂಬ ಗೊಂದಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ, ಫಿಸಿಕಲ್‌ ಎಜುಕೇಶನ್‌ ಬಗ್ಗೆ ತಿಳಿದುಕೊಂಡು ಡಿಗ್ರಿಯಲ್ಲಿ ಆ್ಯತ್ಲೆಟಿಕ್‌ ಕ್ರೀಡಾಪಟುವಾಗಿರುವವರು ಅನಂತರ ಹೆಡ್‌ ಸ್ವಿಮ್‌ ಕೋಚ್‌ ವೃತ್ತಿಗೆ ಟ್ರೈ ಮಾಡಬಹುದು.

ಅಸಿಸ್ಟೆಂಟ್‌ ಸ್ವಿಮ್ಮಿಂಗ್‌ ಕೋಚ್‌
ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಅಸಿಸ್ಟೆಂಟ್‌ ಸ್ವಿಮ್ಮಿಂಗ್‌ ಕೋಚ್‌ ಆಗಿ ಸೇರಿಕೊಳ್ಳಬಹುದು. ಇಲ್ಲಿ ಸ್ವಿಮ್ಮಿಂಗ್‌ ಬಗ್ಗೆ ಬೇಸಿಕ್‌ ಜ್ಞಾನವನ್ನು ಹೊಂದಿರಬೇಕು. ಪಾರ್ಟ್‌ ಟೈಮ್‌ ಆಗಿ ಕೆಲಸ ಮಾಡಬಹುದು. ವಾರದಲ್ಲಿ 20 ಗಂಟೆ ಕೆಲಸವಿರುತ್ತದೆ. ನೆಮ್ಮದಿಯ ಜತೆಗೆ ಹಣವನ್ನೂ ಸಂಪಾದಿಸಿಕೊಳ್ಳಬಹುದು. ಸತತ ಪರಿಶ್ರಮದಿಂದ ರಾಷ್ಟ್ರೀಯ ಮಟ್ಟದ ಈಜುಪಟುವಾಗುವ ಕನಸನ್ನೂ ನನಸಾಗಿಸಬಹುದು.

ಹೆಡ್‌ ಸೀನಿಯರ್‌ ಕೋಚ್‌
ಸೀನಿಯರ್‌ ಕೋಚ್‌ಗಳಿಗೆ ಹೆಡ್‌ ಸೀನಿಯರ್‌ ಕೋಚ್‌ ಆಗಿಯೂ ವೃತ್ತಿ ನಿರ್ವಹಿಸಬಹುದು.

ತರಬೇತಿ ಕೇಂದ್ರಗಳು
ಮಂಗಳೂರು ಭಾಗದಲ್ಲಿ ಹಲವು ಸ್ವಿಮ್ಮಿಂಗ್‌ ತರಬೇತಿ ಕೇಂದ್ರಗಳಿವೆ. ನಗರಕ್ಕೆ ಹತ್ತಿರವಾಗಿ ಶ್ರೀನಿವಾಸ ನಗರ, ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಬೆಳಗ್ಗೆ 9.30ರಿಂದ ಸಂಜೆ 6.30ರವರೆಗೆ ತರಬೇತಿ ನೀಡಲಾಗುತ್ತದೆ.

ಅಶೋಕನಗರದ ಕೋಡಿಕಲ್‌ನಲ್ಲಿ ಬೆಳಗ್ಗೆ 6ರಿಂದ 8 ಗಂಟೆಯವರೆಗೆ ಹಾಗೂ ಸಂಜೆ 5 ರಿಂದ 9 ಗಂಟೆಯವರೆಗೆ ತರಬೇತಿಗಳನ್ನು ನೀಡಲಾಗುತ್ತದೆ.

ಲೇಡಿಹಿಲ್‌ ಬಳಿಯಲ್ಲಿ ಫೆರ್ರೀ ರೋಡ್‌ ಬಳಿಯೂ ಸ್ವಿಮ್ಮಿಂಗ್‌ ತರಬೇತಿ ಕೇಂದ್ರಗಳಿವೆ. ಸ್ವಿಮ್ಮಿಂಗ್‌ಗೆ ಸಂಬಂಧಿಸಿದ ಸರ್ಟಿಫಿಕೇಟ್‌ ಕೋರ್ಸ್‌ಗಳು ಇವೆ. ಈ ಬಗ್ಗೆ ಆನ್‌ಲೈನ್‌ ಅಥವಾ ತರಬೇತಿ ಕೇಂದ್ರಗಳಿಂದ ಮಾಹಿತಿ ಪಡೆಯಬಹುದು. 

ಹಲವು ಪ್ರಯೋಜನ 
· ಕಲುಷಿತ ವಾತಾವರಣ ಹೆಚ್ಚಿನವರಲ್ಲಿ ಉಸಿರಾಟದ ತೊಂದರೆಯನ್ನುಂಟು ಮಾಡುತ್ತಿದೆ. ಇದರ ನಿವಾರಣೆಗೆ ಔಷಧಗಳಿಗೇ ಮೊರೆಹೋಗಬೇಕಿಲ್ಲ. ನೀರಿನಲ್ಲಿ ಈಜುವ ಅಭ್ಯಾಸ ಮಾಡಿಕೊಂಡರೆ ತನ್ನಿಂತಾನೇ ಉಸಿರಾಟದ ತೊಂದರೆ ನಿವಾರಣೆಯಾಗುವುದು.

· ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಈಜು ಸಹಕಾರಿ. ಇದರಿಂದ ದೇಹದಲ್ಲಿ ಶಕ್ತಿ ವೃದ್ಧಿಯಾಗುವುದು. ಮಾತ್ರವಲ್ಲದೆ ಫಿಟ್ನೆಸ್ ಕಾಪಾಡಲು ಇದು ನೆರವಾಗುತ್ತದೆ.

· ನಿತ್ಯವು ಎದ್ದ ಕೂಡಲೇ ಈಜಾಡುವ ಅಭ್ಯಾಸ ಮಾಡಿದರೆ ದೇಹ, ಮನಸ್ಸು ಉಲ್ಲಸಿತವಾಗುತ್ತದೆ. ದಿನ ಪೂರ್ತಿ ಚುರುಕಾಗಿ ಕೆಲಸ ಮಾಡಬಹುದು. ಮಾನಸಿಕ ಒತ್ತಡ ನಿವಾರಣೆಯಾಗುವುದು ಮಾತ್ರವಲ್ಲದೆ ನಿದ್ದೆಯ ತೊಂದರೆಯನ್ನೂ ನಿವಾರಿಸಿಕೊಳ್ಳಬಹುದು. 

ಶ್ರುತಿ ನೀರಾಯ

ಟಾಪ್ ನ್ಯೂಸ್

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.