ಬದುಕು ಬದಲಿಸುವ ಜಾದೂ

Team Udayavani, Oct 3, 2018, 1:14 PM IST

3-october-12.gif

ಎಲ್ಲರಿಗೂ ಮನಸ್ಸಿನಲ್ಲಿ ನಾನೂ ಜಾದೂಗಾರನಾಗಬೇಕು ಎಂಬ ಹಂಬಲ ಇರುತ್ತದೆ. ಈ ಕಣ್ಣುಕಟ್ಟು ವಿದ್ಯೆಗೆ ಬೇಗನೆ ಮರುಳಾಗುವುದು ಸಹಜ. ಈ ವೃತ್ತಿಯಲ್ಲಿನ ವೈಶಿಷ್ಟ್ಯವೇ ಕ್ರಿಯಾಶೀಲತೆ. ಪ್ರತಿ ಸೆಕೆಂಡು ಕೂಡ ಬಹಳ ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ಜಾದೂ ವಿದ್ಯೆಯನ್ನು ಒಲಿಸಿದರೆ ಸಮಾಜವನ್ನು ಈ ಮಂತ್ರ ಲೋಕದಲ್ಲಿಟ್ಟುಕೊಳ್ಳಬಹುದು.

ಪ್ರಖ್ಯಾತ ಮಾಂತ್ರಿಕರಾದ ಕುದ್ರೋಳಿ ಗಣೇಶ್‌, ರಾಜೇಶ್‌ ಮಳಿ, ರಮೇಶ್‌ ಬಾಬು ಹೆಸರು ಕೇಳಿದಾಕ್ಷಣ ಅವರ ಜಾದೂ ಶೋ ನೋಡಲು ಹೋಗುವ ಎನ್ನುವ ತವಕವಾಗುವುದು ಸಹಜ. ಸಮಯ ಹಾಗೂ ಕೆಲವೊಂದು ಕಣ್ಣುಕಟ್ಟು ವಿದ್ಯೆಯಿಂದ ಮಂತ್ರಗಳಿಂದ ನೆರೆದವರ ಸುಲಭವಾಗಿ ಮೋಸ ಮಾಡುವುದು ಇಲ್ಲಿ ಬಂಡವಾಳ. ಮಾತ್ರವಲ್ಲದೆ ಸಮಯ ಹಾಗೂ ಕ್ರಿಯಾಶೀಲತೆ ಇಲ್ಲಿನ ಮುಖ್ಯ ಅಂಶವಾಗಿರುತ್ತದೆ.

ಶಿಕ್ಷಣದ ಜತೆಜತೆಗೆ ಈ ವಿದ್ಯೆಯನ್ನು ಕಲಿತರೆ ಮುಂದೆ ವೇದಿಕೆಯ ಮೇಲೆ ಚೂಮಂತರ್‌ ಮಾಡುತ್ತಾ ಎಲ್ಲರ ಗಮನವನ್ನು ನಮ್ಮ ಮೇಲೆ ಇಡುವಂತೆ ಮಾಡಬಹುದು. ಶಿಕ್ಷಣದ ಜತೆಗೆ ಆಸಕ್ತಿ ಇದ್ದಲ್ಲಿ ಈ ಜಾದೂ ವಿದ್ಯೆಯನ್ನು ಕಲಿಯಬಹುದು. ಇದರಲ್ಲಿ ಸಾಕಷ್ಟು ಅವಕಾಶಗಳಿವೆ.

ಜಾದೂ ತರಗತಿಗಳು
ಜಾದೂ ತರಗತಿಯನ್ನು ಎಲ್ಲೆಡೆಯೂ ನೀಡುವುದಿಲ್ಲ. ಆದರೆ ಕೆಲವೆಡೆ ಇದನ್ನು ಕಲಿಸುತ್ತಾರೆ. ಕಾಲೇಜು ಶಿಕ್ಷಣದ ರೀತಿ ಇದರ ಅಭ್ಯಾಸ ಅಲ್ಲದಿದ್ದರೂ ಇದರಲ್ಲಿ ಕಲಿಯುವಂತಹ ಹಲವಾರು ಅಂಶಗಳು ನಮ್ಮ ಪಠ್ಯ ಕಲಿಕೆಗಿಂತಲೂ ಹೆಚ್ಚು ಆಸಕ್ತಿದಾಯಕವಾಗಿರುತ್ತದೆ. ಈ ಜಾದೂವಿನಲ್ಲಿ ಸಣ್ಣ ವಯಸ್ಸಿನವರಿಗೆ ಒಳ್ಳೆಯ ಭವಿಷ್ಯವಿದೆ.

ಸದಾ ಅವಕಾಶಗಳು
ಜಾದೂಗಾರನಿಗೆ ಅವಕಾಶಗಳು ಹಲವಾರು ಇವೆ. ಕೇವಲ ಹಣ ಸಂಪಾದನೆಯೊಂದೇ ಅಲ್ಲದೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳಬಹುದು. ಉದಾಹರಣೆಗೆ ಈಗ ನಡೆಯತ್ತಿರುವ ಡ್ರಗ್ಸ್‌ ವಿರೋಧಿ ಜಾದೂ ಶೋಗಳನ್ನು ಮಾಡುವುದು, ಸಾಮಾಜಿಕ ಜಾಗೃತಿಗಳನ್ನು ಮೂಡಿಸುವ ಮೂಲಕ ಕೆಲವೊಂದು ಕಾರ್ಯಕ್ರಮಗಳಿಗೆ ಬ್ರ್ಯಾಂಡ್‌ ಅಂಬಾಸಿಡರ್‌ ಕೂಡ ಆಗಬಹುದು. ಒಟ್ಟಿನಲ್ಲಿ ಕಲಿಯುವ ಆಸಕ್ತಿಯಿದ್ದರೆ ಏನನ್ನೂ ಬೇಕಾದರೂ ಕಲಿಯಬಹುದು ಹಾಗೂ ಶಿಕ್ಷಣದ ಜತೆಗೆ ಇಂತಹ ಹಲವು ವಿದ್ಯೆಗಳನ್ನು ಕಲಿತರೆ ಭವಿಷ್ಯದಲ್ಲಿ ಇದರಲ್ಲೂ ಫ‌ುಲ್‌ಟೈಮ್‌ ಅಥವಾ ಪಾರ್ಟ್‌ ಟೈಮ್‌ ತೊಡಗಿಸಿಕೊಳ್ಳಬಹುದು.

ಮಾಂತ್ರಿಕನ ವಿಶೇಷತೆ
ಒಳ್ಳೆಯ ಗುರುವಿನ ಜತೆಗೆ ಒಳ್ಳೆಯ ವಾಕ್ಚಾತುರ್ಯ, ಕೆಲವು ಕಣ್ಣುಕಟ್ಟು ವಿದ್ಯೆಗಳು, ಸಮಯ ಪ್ರಜ್ಞೆ, ಜಾದೂ ಸಂಬಂಧಿ ವಸ್ತುಗಳು ಹಾಗೂ ಜನರನ್ನು ತನ್ನತ್ತ ಸೆಳೆಯುವ ನೈಪುಣ್ಯತೆ, ಕ್ರಿಯಾಶೀಲತೆ ಜತೆಗೆ ಕೆಲವು ವಿಜ್ಞಾನದ ಪ್ರಯೋಗಗಳನ್ನು ತಿಳಿದರೆ ಜಾದೂಗಾರನಾಗುವುದು ಸುಲಭ. 

 ಭರತ್‌ರಾಜ್‌ ಕರ್ತಡ್ಕ 

ಟಾಪ್ ನ್ಯೂಸ್

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.