ಆಟೋಮೊಬೈಲ್‌ ಕ್ಷೇತ್ರದಲ್ಲಿ ವಿಪುಲ ಅವಕಾಶ

Team Udayavani, Feb 19, 2020, 5:52 AM IST

skin-23

ಆಟೋಮೊಬೈಲ್‌ ಎಂಜಿನಿಯರಿಂಗ್‌ ಕಲಿಕೆಯಲ್ಲಿ ವಾಹನದ ವಿನ್ಯಾಸ, ತಯಾರಿಕೆ-ನಿರ್ವಹಣೆ ಕುರಿತಂತೆ ಕಲಿಸಲಾಗುತ್ತದೆ. ಈ ವಿಭಾಗದಲ್ಲಿ ಎಲೆಕ್ಟ್ರಿಕಲ್‌, ಮೆಕ್ಯಾನಿಕ್‌, ಸಾಫ್ಟ್‌ವೇರ್‌ ಮತ್ತು ಸುರಕ್ಷತೆಯ ಎಂಜಿನಿಯರಿಂಗ್‌ಗಳನ್ನು ಒಳಗೊಂಡಿರುವ ವಿಭಾಗ ಇದಾಗಿದೆ. ಮುಖ್ಯವಾಗಿ ಬಸ್‌, ಬೈಕ್‌, ಟ್ರಕ್‌, ಜೀಪು, ಕಾರು ಸೇರಿದಂತೆ ಮತ್ತಿತರ ವಾಹನಗಳ ತಯಾರಿ ಪ್ರಮುಖ ಕೆಲಸವಾಗಿದೆ.

ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ವೃತ್ತಿಪರ ಕೋರ್ಸ್‌ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಐಟಿಐನಿಂದ ಎಂಜಿನಿಯರ್‌ ಕಲಿಕೆಯವರೆಗೂ ವೃತ್ತಿಪರ ಕೋರ್ಸ್‌ಗೆ ಸೇರುವ ಮಂದಿ ಹೆಚ್ಚಾಗುತ್ತಿದ್ದಾರೆ. ಮುಖ್ಯವಾಗಿ ಕೋರ್ಸ್‌ ಮುಗಿದ ತತ್‌ಕ್ಷಣ ಅಥವಾ ಕೋರ್ಸ್‌ನಲ್ಲಿರುವಾಗಲೇ ಕೆಲಸ ಗಿಟ್ಟಿಸಿಕೊಳ್ಳುವ ವೃತ್ತಿಪರ ಕೋರ್ಸ್‌ಗಳ ಪೈಕಿ ಆಟೋಮೊಬೈಲ್‌ ಕ್ಷೇತ್ರ ಕೂಡ ಒಂದು.

ಆಟೋಮೊಬೈಲ್‌ ಎಂಜಿನಿಯರಿಂಗ್‌ ಕಲಿಕೆಯಲ್ಲಿ ವಾಹನದ ವಿನ್ಯಾಸ, ತಯಾರಿಕೆ-ನಿರ್ವಹಣೆ ಕುರಿತಂತೆ ಕಲಿಸಲಾಗುತ್ತದೆ. ಈ ವಿಭಾಗದಲ್ಲಿ ಎಲೆಕ್ಟ್ರಿಕಲ್‌, ಮೆಕ್ಯಾನಿಕ್‌, ಸಾಫ್ಟ್‌ವೇರ್‌ ಮತ್ತು ಸುರಕ್ಷತೆಯ ಎಂಜಿನಿಯರಿಂಗ್‌ಗಳನ್ನು ಒಳಗೊಂಡಿರುವ ವಿಭಾಗ ಇದಾಗಿದೆ. ಮುಖ್ಯವಾಗಿ ಬಸ್‌, ಬೈಕ್‌, ಟ್ರಕ್‌, ಜೀಪು, ಕಾರು ಸೇರಿದಂತೆ ಮತ್ತಿತರ ವಾಹನಗಳ ತಯಾರಿ ಪ್ರಮುಖ ಕೆಲಸವಾಗಿದೆ.

ಆಟೋಮೊಬೈಲ್‌ ಎಂಜಿನಿಯರಿಂಗ್‌ ಪದವಿ ಕೋರ್ಸ್‌ ಪಡೆಯಲು ಪಿಯುಸಿ ಉತ್ತೀರ್ಣರಾಗಿರಬೇಕು. ಅದರಲ್ಲಿಯೂ ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತದಲ್ಲಿ ಶೇ.50ರಷ್ಟು ಅಂಕಗಳಿಸಿರಬೇಕು. ಅದೇ ರೀತಿ ಸ್ನಾತಕೋತ್ತರ ಪದವಿ ಪಡೆಯಲು ಆಟೋಮೊಬೈಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌. ಓದಿದವರು ಅರ್ಜಿ ಸಲ್ಲಿಸಬಹುದು. ಎಂಜಿನಿಯರಿಂಗ್‌ ಕೋರ್ಸ್‌ 4 ವರ್ಷಗಳ ಅವಧಿಯಲ್ಲಿ ಇರುತ್ತದೆ. ಅದೇ ರೀತಿ ಡಿಪ್ಲೋಮೋ ಓದಲು ಪಿಯುಸಿ ಶಿಕ್ಷಣ ಅರ್ಹತೆ ಇರಬೇಕು.

ಕಳೆದ ವರ್ಷ ಆಟೋಮೊಬೈಲ್‌ ಕ್ಷೇತ್ರ ಕುಂಠಿತ ಸಾಧಿಸಿದರೂ, ಇತ್ತೀಚಿನ ದಿನಗಳಲ್ಲಿ ಬೆಳವಣಿಗೆ ಕಾಣುತ್ತಿದೆ. ಆರಂಭಿಕವಾಗಿ ಉದ್ಯೋಗ ಪಡೆಯುವವರು 15-20 ಸಾವಿರ ರೂ. ಅನುಭವಿಗಳು ಸುಮಾರು 1 ಲಕ್ಷ ರೂ.ವರೆಗೂ ವೇತನ ಪಡೆಯುತ್ತಾರೆ. ಅದರಲ್ಲಿಯೂ ವಿದೇಶಗಳಲ್ಲಿ ಉದ್ಯೋಗ ಬಯಸುವವರು ಮತ್ತಷ್ಟು ವೇತನ ಪಡೆಯುತ್ತಾರೆ.

ಐಟಿಐ ತಳಹದಿ
ಆಟೋಮೊಬೈಲ್‌ ಕ್ಷೇತ್ರಕ್ಕೆ ಮುನ್ನುಡಿ ಎಂಬಂತೆ ಐಟಿಐ ಮಾಡಲು ಅವಕಾಶವಿರುತ್ತದೆ. ಆಟೋಮೊಬೈಲ್‌ ಕ್ಷೇತ್ರದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಬೇಕು ಎಂದಿರುವವರು ಐಟಿಐ ಕಲಿತು ಬಳಿಕ ಡಿಪ್ಲೊಮಾ, ಬಳಿಕ ಎಂಜಿನಿಯರಿಂಗ್‌ ಕ್ಷೇತ್ರವನ್ನು ಆರಿಸಿಕೊಳ್ಳಬಹುದು.ಐಟಿಐನಲ್ಲಿ ಎರಡು ವರ್ಷಗಳ ಕೋರ್ಸ್‌ ಆಗಿ ಮೆಕ್ಯಾನಿಕ್‌ ವಿಷಯವನ್ನು ಆರಿಸಿಕೊಳ್ಳಲು ಅವಕಾಶ ಇರುತ್ತದೆ. ಎಸೆಸೆಲ್ಸಿ ಅಥವಾ ಪಿಯುಸಿ ಉತ್ತೀರ್ಣರಾದ ಮಂದಿಗೆ ಐಟಿಐನಲ್ಲಿ ಕಲಿಕೆಗೆ ಪ್ರವೇಶಾತಿ ಸಿಗುತ್ತದೆ.

ವಾಹನ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳು ನೀವಾಗಿದ್ದರೆ ಅಥವಾ ನಿಮಗೆ ಆಟೋಮೊಬೈಲ್‌ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯಿದ್ದರೆ, ಮೆಕ್ಯಾನಿಕ್‌ ಮೋಟಾರ್‌ ವಾಹನ ಅತ್ಯುತ್ತಮ ಆಯ್ಕೆ. ಈ ಐಟಿಐ ಕೋರ್ಸ್‌ ಪೂರ್ಣಗೊಳ್ಳಲು ಎರಡು ವರ್ಷಗಳು ಬೇಕು. ಐಟಿಐ ಫ್ರೆಷರ್‌ ಆದಾಗ ನಿಮಗೆ, ಭಾರತದಲ್ಲಿನ ಆಟೋಮೊಬೈಲ್‌ ಒಇಎಂ ಗಳ ನಿರ್ದಿಷ್ಟ ವಿಭಾಗಗಳಲ್ಲಿ ಮೆಕ್ಯಾನಿಕ್‌ ಮೋಟಾರ್‌ ವೆಹಿಕಲ್‌ ಉದ್ಯೋಗ ಸಿಗುತ್ತದೆ. ನಿಮಗೆ ಸ್ವಂತ ಉದ್ಯೋಗ ಆರಂಭಿಸುವ ಮನಸ್ಸಿದ್ದರೆ, ನೀವೇ ಸ್ವಂತ ಗ್ಯಾರೇಜ್‌ ಒಂದನ್ನು ಹೊಂದಲು ಇದೊಂದು ಉತ್ತಮ ಅವಕಾಶವಾಗಿದೆ.

ಎಲ್ಲೆಲ್ಲಿ ಉದ್ಯೋಗ
ಆಟೋಮೊಬೈಲ್‌ ಕ್ಷೇತ್ರದಲ್ಲಿ ಕಲಿತ ಮಂದಿ ಮುಖ್ಯವಾಗಿ ತಾವೇ ಸ್ವಂತ ಉದ್ಯೋಗವನ್ನು ಆರಂಭ ಮಾಡಿಕೊಳ್ಳಬಹುಸು. ಇತ್ತೀಚಿನ ದಿನಗಳಲ್ಲಿ ಸ್ಟಾರ್ಟ್‌ಅಪ್‌ ಸೇರಿದಂತೆ ಕೇಂದ್ರ ಸರಕಾರವು ವಿವಿಧ ಯೋಜನೆಗಳನ್ನು ಘೋಷಿಸಿದೆ. ಅದೇ ರೀತಿ ಬ್ಯಾಂಕ್‌ ಮುಖೇನ ಸಾಲ ಸೌಲಭ್ಯಗಳು ಕೂಡ ಇವೆ. ಇವುಗಳನ್ನು ಬಳಸಿ ತಮ್ಮ ಉದ್ಯೋಗವನ್ನು ತಾವೇ ಸೃಷ್ಟಿಸಿಕೊಳ್ಳಬಹುದು. ಇವಿಷ್ಟೇ ಅಲ್ಲದೆ, ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ದುಡಿಯಬಹುದು.

ಇನ್ನು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ನಾಗರಿಕ ವಿಮಾನಯಾನ ಇಲಾಖೆ) ಅಗ್ನಿಶಾಮಕ ವಿಭಾಗದಲ್ಲಿಯೂ ಕೆಲಸ ಮಾಡಲು ಅವಕಾಶವಿದೆ. ತಿಂಗಳಿಗೆ 20,000 ದಿಂದ 50,000 ರೂ.ವರೆಗೆ ವೇತನವನ್ನೂ ಪಡೆಯಬಹುದು. ಮುಂದಿನ ದಿನಗಳಲ್ಲಿ ವಿದ್ಯುತ್‌ ಚಾಲಿತ ಕಾರುಗಳು, ಬೈಕ್‌ಗಳು ತಯಾರಾಗುತ್ತಿದ್ದು, ಈ ಕ್ಷೇತ್ರದಲ್ಲಿಯೂ ಉದ್ಯೋಗ ಪಡೆಯಬಹುದಾಗಿದೆ. ಭಾರತವಷ್ಟೇ ಅಲ್ಲದೆ, ವಿದೇಶಗಳಲ್ಲಿಯೂ ಆಟೋಮೊಬೈಲ್‌ ಓದಿದ ವಿದ್ಯಾರ್ಥಿಗಳಿಗೆ ಡಿಮ್ಯಾಂಡ್‌ ಇದೆ. ಮಾರುತಿ ಸುಝುಕಿ, ಟಾಟಾ ಮೋಟರ್ಸ್‌, ಯಮಹಾ, ಹುಂಡೈ, ಹೀರಿ ಮೊಟೊಕಾರ್ಪ್‌, ಫೋಕ್ಸ್‌ವ್ಯಾಗನ್‌, ಔಡಿ, ರೆನೊ, ಅಶೋಕ್‌ ಲೇಲ್ಯಾಂಡ್‌, ಟೊಯೊಟಾ, ಮಹೇಂದ್ರ ಸೇರಿದಂತೆ ಮತ್ತಿತರ ಸರ್ವಿಸ್‌ ಸ್ಟೇಶನ್‌ಗಳಲ್ಲಿ ಡೀಲರ್‌ಷಿಪ್‌ಗ್ಲ್ಲಿ, ಟ್ರಾನ್ಸ್‌ಪೊರ್ಟ್‌ ಸರ್ವೀಸರ್ ಗಳಲ್ಲಿ, ರಕ್ಷಣಾ ವಿಭಾಗಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಅವಕಾಶವಿದೆ.

- ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.