ಕಾನೂನು ಶಿಕ್ಷಣ ವಿಪುಲ ಅವಕಾಶ
Team Udayavani, Oct 16, 2019, 6:00 AM IST
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನು ಕಾನೂನಿನ ಅರಿವು ಹೊಂದಿರುವುದು ಅಗತ್ಯ. ಮಾನವ ಸಂಘಜೀವಿ ಆಗಿರುವವರೆಗೂ ಕಾನೂನು ಅಸ್ತಿತ್ವ ದಲ್ಲಿರುತ್ತದೆ. ಜನರಿಗೆ ಕಾನೂನಿನ ಕುರಿತು ಮಾಹಿತಿ, ಮಾರ್ಗದರ್ಶನ ನೀಡುವವರು ವಕೀಲರು. ಹೀಗಾಗಿ ಕಾನೂನು ಶಿಕ್ಷಣ ಕಲಿಕೆಗೆ ಹೆಚ್ಚಿನ ಮಹತ್ವವಿದೆ. ಕಾನೂನು ಪದವಿ ಪಡೆದರೆ ಅನೇಕ ಅವಕಾಶಗಳು ತೆರೆದುಕೊಳ್ಳುತ್ತವೆ.
ಒಂ ದು ಕಲ್ಲನ್ನು ಸುಂದರ ಶಿಲ್ಪವಾಗಿಸುವ ಚಾಣಾಕ್ಷತೆ ಶಿಲ್ಪಿಗೆ ಇದ್ದಂತೆಯೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ಆ ಹಿನ್ನಲೆಯಲ್ಲಿ ಶಿಕ್ಷಣದಿಂದ ದೂರವಿದ್ದ ಎಲ್ಲ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂಬುದಾಗಿ ಸರಕಾರ ಆದೇಶ ನೀಡಿತು. ಅದರಂತೆ ಶೈಕ್ಷಣಿಕ ರಂಗದಲ್ಲೂ ದಿನಂಪ್ರತಿ ಸಾವಿರಾರು ಅವಕಾಶಗಳು ಉದಯಿಸಿದವು.
ಪ್ರಾಥಮಿಕ, ಪ್ರೌಢ ಶಿಕ್ಷಣದ ಬಳಿಕ ಹಲವಾರು ಕೋರ್ಸ್‌ಗಳು ವಿದ್ಯಾರ್ಥಿಗಳನ್ನು ಆಕರ್ಷಿಸತೊಡಗಿದವು. ಅದರಲ್ಲಿ ಕಾನೂನು ಶಿಕ್ಷಣವೂ ಒಂದು. ಕೆಲವು ವರ್ಷಗಳ ಹಿಂದೆ ಅರೆಕಾಲಿಕ ಕೋರ್ಸ್ ಆಗಿದ್ದ ಕಾನೂನು ಶಿಕ್ಷಣ ಇದೀಗ ಉದ್ಯೋಗಾವಕಾಶ ನೀಡುವ ಉತ್ತಮ ಮಾರ್ಗವಾಗಿ ಬದಲಾಗಿದೆ. ಕಾನೂನು ಶಿಕ್ಷಣವು ಜಾಗತೀಕರಣದ ಹಿನ್ನಲೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಆ ಬಳಿಕ ಕಾನೂನು ಶಿಕ್ಷಣದಲ್ಲಿ ಸಮಗ್ರ ಸುಧಾರಣೆಗಳಾಗಿದ್ದು, ಕಾಲೇಜುಗಳು ಪೂರ್ಣಕಾಲಿಕ ವೃತ್ತಿಪರ ಕಾಲೇಜುಗಳಾಗಿವೆ. ಜಾಗತಿಕ ಸ್ಪರ್ಧೆಗೆ ತಕ್ಕಂತೆ ಪಠ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಕಾನೂನಿನ ಅರಿವು ಹೊಂದಬೇಕಾಗಿರುವುದು ಹಾಗೂ ಅದನ್ನು ಪಾಲಿಸಬೇಕಾಗಿರುವುದು ಕರ್ತವ್ಯ. ಎಲ್ಲಿಯವರೆಗೆ ವ್ಯಕ್ತಿ ಸಂಘ ಜೀವಿಯಾಗಿರುತ್ತಾನೋ ಅಲ್ಲಿಯವರೆಗೆ ಕಾನೂನಿನ ಅಸ್ತಿತ್ವ ಇರುತ್ತದೆ. ಹಾಗಾಗಿ ಸರಕಾರಿ ಸಂಸ್ಥೆ, ಬಹುರಾಷ್ಟ್ರೀಯ ಕಂಪೆನಿ , ಸೇನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಲು ಪ್ರಸ್ತುತ ಕಾನೂನು ವಿದ್ಯಾರ್ಥಿಗಳನ್ನು ತಯಾರು ಮಾಡುವ ಜವಾಬ್ದಾರಿಯನ್ನು ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳು ವಹಿಸಿಕೊಂಡಿವೆ.
ಕಾನೂನು ವಿಶ್ವ ವಿದ್ಯಾನಿಲಯಗಳು
ಎಲ್ಲ ರಂಗದಲ್ಲೂ ಕಾನೂನಿನ ಪದವೀಧರರಿಗೆ ಹಲವಾರು ಅವಕಾಶಗಳು ಇವೆ. ಐದು ವರ್ಷದ ಕಾನೂನು ಶಿಕ್ಷಣ ಹಾಗೂ 3 ವರ್ಷದ ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರದಲ್ಲಿ ಹಲವಾರು ಕಾನೂನು ವಿಶ್ವವಿದ್ಯಾನಿಲಯಗಳಿದ್ದು, ಕಾನೂನಿನ ವಿವಿಧ ಅಂಶಗಳನ್ನು ಹಾಗೂ ಭಾರತೀಯ ದಂಡ ಸಂಹಿತೆಯ (ಇಂಡಿಯನ್ ಪಿನಲ್ ಕೋಡ್) ಕುರಿತು ಅಧ್ಯಯನ ಕೈಗೊಳ್ಳಬಹುದು. ಈ ಕೋರ್ಸ್‌ನಲ್ಲಿ ಸ್ಪೆಷಲೆ„ಜೇಶನ್ ಆಗಿ ಸಿವಿಲ್ ಅಥವಾ ಕ್ರಿಮಿನಲ್ ಲಾ, ಅಂತಾರಾಷ್ಟ್ರೀಯ ಕಾನೂನು, ಲೇಬರ್ ಲಾ, ಸೆ„ಬರ್ ಲಾ, ಅಡ್ಮಿನಿಸ್ಟ್ರೇಟಿವ್ ಲಾ, ಪೇಟೆಂಟ್ ಲಾ ಇವೇ ಮೊದಲಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾನೂನು ವೃತ್ತಿ ಕೈಗೊಳ್ಳಬೇಕಾದರೆ ಎಲ್‌ಎಲ್‌ಬಿ ಕೋರ್ಸ್ ಮಾಡಿರಬೇಕು.
ಶೈಕ್ಷಣಿಕ ಕೋರ್ಸ್‌ಗಳು
ಕಾನೂನು ಶಿಕ್ಷಣದಲ್ಲಿ ಬ್ಯಾಚುಲರ್ ಆಫ್ ಲಾ (ಎಲ್‌ಎಲ್‌ಬಿ), ಮಾಸ್ಟರ್ ಆಫ್ ಲಾ (ಎಲ್‌ಎಲ್‌ಎಮ್), ಮಾಸ್ಟರ್ ಆಫ್ ಬ್ಯುಸಿನೆಸ್ ಲಾ, ಡಾಕ್ಟರ್ ಆಫ್ ಫಿಲಾಸಫಿ(ಪಿಎಚಿx) ಕೋರ್ಸ್ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.