ಆದಾಯದ ಆಗರ ಮೆಹೆಂದಿ ಡಿಸೈನಿಂಗ್
Team Udayavani, Feb 19, 2020, 4:47 AM IST
ಹಿಂದಿನ ಕಾಲದಲ್ಲಿ ಮೆಹಂದಿ ಗಿಡವನ್ನು ಅರೆದು ಬಹುತೇಕ ಎಲ್ಲ ಸಂದರ್ಭದಲ್ಲಿಯೂ ಒಂದೇ ಡಿಸೈನ್ ಮಾಡುತ್ತಿದ್ದರಂತೆ. ಆದರೆ ಕಾಲಕ್ರಮೇಣ ಮೆಹೆಂದಿ ಕೊನ್ ಪರಿಕಲ್ಪನೆ ಹುಟ್ಟಿಕೊಂಡು ಇತ್ತೀಚೆಗೆ ಆದಾಯದೊಂದಿಗೆ ಉದ್ಯೋಗ ಸೃಷ್ಟಿಸಲು ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರು ಈ ಕ್ಷೇತ್ರದಲ್ಲಿ ಅಗ್ರಗಣ್ಯರೆಂದರೂ ತಪ್ಪಾಗಲಾರದು. ಡಿಸೈನ್‌ನ ವಿಭಿನ್ನತೆಯ ಆಧಾರದ ಮೇಲೆ ನಿಮ್ಮ ತಾಳ್ಮೆ, ಪರಿಶ್ರಮ ಬೆರೆತಾಗ ಉತ್ತಮ ಪ್ರತಿಫಲವನ್ನು ನೀವು ಈ ಕ್ಷೇತ್ರದಲ್ಲಿ ನಿರೀಕ್ಷಿಸಬಹುದಾಗಿದೆ.
ಮೆಹಂದಿಯ ಜೀವಾಳವೇ ಅದರ ಡಿಸೈನ್(ವಿನ್ಯಾಸವಾಗಿದೆ). ಇಂದು ಮೆಹೆಂದಿಯಲ್ಲಿ ಅರೆಬಿಕ್, ಇಂಡೋ ಅರೆಬಿಕ್, ಕ್ಲಾಸಿಕ್, ವೆಸ್ಟರ್ನ್ ಹೀಗೆ ಹಲವಾರು ಡಿಸೈನ್‌ಗಳಿದ್ದು ಬೇಡಿಕೆಯು ಅಧಿಕವಾಗಿದೆ. ಅಂತೆಯೇ ಆದಾಯವೂ ಕೂಡ. ವಿನ್ಯಾಸವೂ ತುಂಬಾ ಸೂಕ್ಷ್ಮವಾಗಿಸಿ ಅಂಗೈ ಜಾಗದಲ್ಲಿ ಸುಂದರ ಕಲಾಕೃತಿಯ ಮೆಹೆಂದಿ ಸೃಷ್ಟಿಸುವುದು ಒಂದು ಚಾಣಾಕ್ಷತನದ ಕೆಲಸವಾಗಿದೆ. ಕೆಲವು ವಿನ್ಯಾಸಕಾರರು ತಮಗೆ ಬೇಕಾದ ಟ್ಯೂಬ್ ತಾವೇ ತಯಾರಿಸಿಕೊಳ್ಳವುದು ವಿಶೇಷ.
ಆದಾಯ ಗಳಿಕೆ ಹೇಗೆ
ಈ ಕ್ಷೇತ್ರದಲ್ಲಿ ನೀವು ನಿಮ್ಮ ಅಭಿವ್ಯಕ್ತಿ ಮತ್ತು ಕ್ರಿಯಾಶೀಲತೆ ಮತ್ತು ಯಾವ ಕಾರ್ಯಕ್ರಮ ಎನ್ನುವ ಆಧಾರದ ಮೇಲೆ ಆದಾಯ ಗಳಿಕೆ ಮಾಡಲು ಸಾಧ್ಯವಿದೆ. ನೀವು ಮಾಡುವ ಡಿಸೈನ್ ಕೂಡ ನಿಮ್ಮ ಆದಾಯವನ್ನು ನಿರ್ಧಾರ ಮಾಡುತ್ತದೆ. ಶ್ರೀಮಂತ ಕುಟುಂಬಸ್ಥರು, ಸಿನಿಮಾ ತಾರೆಯರ ಕೈಯ ಮೇಲಿನ ಮೆಹೆಂದಿ ಚಿತ್ತಾರಕ್ಕೆ ಸಾವಿರದಿಂದ ಲಕ್ಷದವರೆಗೆ ಸಂಪಾದಿಸಲೂ ಅವಕಾಶವಿದೆ. ಇಂದು ಮಾಲ್, ಬ್ಯೂಟಿ ಪಾರ್ಲರ್ ಮಾತ್ರವಲ್ಲದೆ ಮನೆಗೇ ಬಂದು ಮೆಹೆಂದಿ ಇಡುವವರಿಗೂ ಬೇಡಿಕೆ ಅಧಿಕವಿದ್ದು ಒಂದು ಸಾವಿರದಿಂದ ಹದಿನೈದು ಸಾವಿರದ ಆದಾಯ ಸಾಮಾನ್ಯ ಗಳಿಕೆಯಾಗಿದೆ.
ಬೇಡಿಕೆ ಹೆಚ್ಚಿಸಲು ಸಹಾಯಕ
ಇಂದು ಈ ಕ್ಷೇತ್ರ ಕೇವಲ ಆದಾಯ ಗಳಿಕೆ ಮಾತ್ರವಾಗಿರದೇ ನಿಮ್ಮನ್ನು ನೀವು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಲು ಸಹಕಾರಿಯಾಗಿದೆ. ನಿಮ್ಮದೇ ಆದ ಬ್ಲಾಗ್ ಮಾಡಿ ನೀವು ಮಾಡಿದ ಡಿಸೈನ್ ಸಂಗ್ರಹವನ್ನು ಅದರಲ್ಲಿ ಹಾಕಿದರೆ ಬಹುತೇಕರು ನಿಮ್ಮನ್ನು ಗುರುತಿಸುತ್ತಾರೆ ಮಾತ್ರವಲ್ಲದೇ ನಿಮ್ಮ ಬೆಡಿಕೆಯೂ ಅಧಿಕವಾಗುತ್ತದೆ. ಇನ್ನೂ ಯುಟ್ಯೂಬ್‌ನಲ್ಲಿ ಮೆಹೆಂದಿ ಡಿಸೈನ್ ಬಿಡಿಸುವ ವಿಡಿಯೋ ಕೂಡ ಅಪ್ಲೋಡ್ ಮಾಡಬಹುದು. ಆದರೆ ಯಾವುದೇ ಹೊಸ ಡಿಸೈನ್ ನೀವು ಅಪ್ಲೋಡ್ ಮಾಡಿದರೆ ತರ್ಜುಮೆ ಆಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅತಿ ಅಗತ್ಯ. ಇಂದು ಬ್ಯೂಟಿಪಾರ್ಲರ್‌ನಲ್ಲಿ, ಫ್ಯಾಶನ್ ಡಿಸೈನಿಂಗ್ ಕೋರ್ಸ್ ನಲ್ಲಿ ಮೆಹೆಂದಿ ವಿನ್ಯಾಸ ಕಲಿಸಲು ತರಬೇತುದಾರರಿದ್ದು ನಿಮ್ಮ ಸ್ವ ಆಸಕ್ತಿ ಕೂಡ ಇದರಲ್ಲಿ ಅತಿಮುಖ್ಯವಾಗಿದೆ.
ಬೇಕಾದ ಕೌಶಲ
ಮೆಹಂದಿಯ ಶೈಲಿಯನ್ನು ತಿಳಿದಿರಬೇಕು.
ಡಿಸೈನ್ಸ್ ಬಗ್ಗೆ ತಿಳಿದಿರಬೇಕು.
ಆಸಕ್ತಿ ಮತ್ತು ತಾಳ್ಮೆ ಅತಿ ಮುಖ್ಯ
ಕಾರ್ಯಕ್ರಮಕ್ಕೆ ಯಾವುದು ಸೂಕ್ತ ಡಿಸೈನ್ ಎಂದು ತಿಳಿದಿರಬೇಕು.
ಉತ್ತಮ ಮಾತುಗಾರಿಕೆ ನಿಮ್ಮನ್ನು ಗುರುತಿಸಲು ಸಹಕಾರಿಯಾಗಿದೆ.
ಕ್ರಿಯಾಶೀಲತೆ ಇರಬೇಕು.
ನಗರದಲ್ಲಿ ವಾಸಿಸುವವರಾದರೆ ವಿವಿಧ ಭಾಷೆಯೂ ತಿಳಿದಿದ್ದರೆ ಉತ್ತಮ.
ಉತ್ತಮ ಏಕಾಗ್ರತೆ ಅತೀ ಅಗತ್ಯ
- ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.