ಶಿಕ್ಷಣದೊಂದಿಗೆ ನೈತಿಕ ಮೌಲ್ಯವಿರಲಿ
Team Udayavani, May 22, 2019, 6:00 AM IST
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳೆಂಬಂತೆ ಭವ್ಯ ಭಾರತದ ಭವಿಷ್ಯಕ್ಕಾಗಿ ಇಂದಿನ ಮಕ್ಕಳಿಗೆ ಅಂಕ ಗಳಿಸುವ ಶಿಕ್ಷಣದೊಂದಿಗೆ ನೈತಿಕ ಮೌಲ್ಯಯುತ ಶಿಕ್ಷಣವನ್ನೂ ನೀಡಬೇಕಾಗಿದೆ. ಶಿಕ್ಷಣವೂ ಮನೋಸ್ಥೈರ್ಯವನ್ನು ನೀಡುವಂತಿರಬೇಕು. ಆದರೆ ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಉದ್ಯೋಗಕ್ಕೆ ಬೇಕಾದ ಪಾಠವನ್ನು ಕಲಿಯುತ್ತೇವೆ ಹೊರತು ಸುಂದರ ಜೀವನಕ್ಕೆ ಬೇಕಾಗುವ ಯಾವುದೇ ಪಾಠಗಳು ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿಲ್ಲ. ಈ ತಪ್ಪಿಗೆ ಶಿಕ್ಷಣ ವ್ಯವಸ್ಥೆ, ಪೋಷಕರು , ಶಿಕ್ಷಕರು ಹೊಣೆಯಾಗುತ್ತಿದ್ದಾರೆ.
ಅನುಭವ ಪಾಠ
ಹಿಂದಿನ ಕಾಲ ದಲ್ಲಿ ಶಿಕ್ಷಕರು ತಮ್ಮ ಜೀವನಾನುಭದಲ್ಲಿ ಕಲಿತ ಅನೇಕ ವಿಷಯಗಳನ್ನು ತರ ಗ ತಿ ಯಲ್ಲಿ ಹೇಳುತ್ತಿದ್ದರು. ಆದರೆ ಇಂದು ಪಠ್ಯವಿಷಯ ಬಿಟ್ಟು ಬೇರೆ ವಿಷಯಗಳ ಕುರಿತಾಗಿ ಮಾತನಾಡಲು ಸಮಯವೇ ಇರುವುದಿಲ್ಲ.
ಸೌಜನ್ಯಇರಲಿ
ಶಿಕ್ಷಣ ಒಬ್ಬ ವ್ಯಕ್ತಿಗೆ ವಿನಯ, ಸಭ್ಯತೆ , ಸಜ್ಜನಿಕೆ ಹಾಗೂ ಸೌಜನ್ಯವನ್ನು ಕಲಿಸಿಕೊಡಬೇಕು. ಆಗ ಶಿಕ್ಷಣವೇ ನಿಜವಾಗಿಯೂ ಅರ್ಥ ಪೂರ್ಣವೆನಿಸುತ್ತದೆ.
ಜೀವನ ಪ್ರೀತಿ ಹೆಚ್ಚಿಸುವಂತಿರಲಿ
ಎಂತಹ ನೋವು, ಆಘಾತ ಆದರೂ ಜೀವನ ಪ್ರೀತಿ ಇದ್ದರೆ ಇವುಗಳನ್ನು ಎದುರಿಸಲು ಸಾಧ್ಯ. ಅಂತಹ ಜೀವನ ಪ್ರೀತಿಯನ್ನು ಬೆಳೆಸಿಕೊಳ್ಳಿ. ಜೀವನದಲ್ಲಿ ಪ್ರೀತಿ ಇದ್ದಾಗ ಎಂತಹ ಸಮಸ್ಯೆಯೂ ಶೂನ್ಯ ಎನಿಸುತ್ತದೆ. ಕಡಿಮೆ ಅಂಕ ಬಂದರೆ ಇಂದಿನ ಯುವ ಪೀಳಿಗೆ ಕುಗ್ಗಿ ಹೋಗುವವರೆ ಹೆಚ್ಚು. ಇದಕ್ಕೆಲ್ಲ ಜೀವನ ಪ್ರೀತಿಯ ಕೊರತೆ ಕಾರಣ.
ಧನಾತ್ಮಕ ಅಲೋಚನೆ
ಧನಾತ್ಮಕ ಯೋಚನೆಗಳು ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಬದುಕಿನಲ್ಲಿ ಉತ್ತಮ ಸ್ಥಾನಕ್ಕೇರಲು ಸಕಾರಾತ್ಮಕ ಅಂಶಗಳು ಸಹಕಾರಿ. ಆದ್ದರಿಂದ ಆದಷ್ಟು ಧನಾತ್ಮಕ ಅಂಶಗಳನ್ನು ತಲೆಯಲ್ಲಿ ತುಂಬಿಕೊಳ್ಳಿ.
ಶಿಸ್ತು ಮತ್ತು ಸಮಯ ಪಾಲನೆ
ಶಿಸ್ತು ಮತ್ತು ಸಮಯ ಪಾಲನೆಯನ್ನು ನಮ್ಮ ಜೀವನದಲ್ಲಿ ರೂಢಿಸಿಕೊಂಡಲ್ಲಿ ನಾವು ಯಾರಿಗೂ ತಲೆ ಬಾಗುವ ಸಂದರ್ಭ ಎದುರಾಗುವುದಿಲ್ಲ. ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಇವುಗಳನ್ನು ಹೇಳಿಕೊಡಬೇಕು ಮತ್ತು ಕಟ್ಟುನಿಟ್ಟಿನಲ್ಲಿ ಪಾಲಿಸುವಂತೆ ಮಾಡಬೇಕು.
ಸಾಮಾಜಿಕ ಕರ್ತವ್ಯಗಳ ಪಾಲನೆ
ಬಾಲ್ಯದಿಂದಲೇ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ಅಂಶಗಳನ್ನು ತಿಳಿಸಿದರೆ ಮುಂದೆ ಮಕ್ಕಳು ಸಮಾಜಘಾತುಕರಾಗುವುದನ್ನು ತಪ್ಪಿಸಬಹುದು.
ವಿಶಾಲ ಮನೋಭಾವ / ದೃಷ್ಟಿಕೋನ ಬೆಳೆಸಿಕೊಳ್ಳಲಿ
ಶಿಕ್ಷಣವೂ ಮಕ್ಕಳಲ್ಲಿ ವಿಶಾಲ ದೃಷ್ಟಿಕೋನ ಬೆಳೆಸುವಲ್ಲಿ ಪೇರಣೆ ನೀಡಬೇಕು. ಸಂಕುಚಿತ ಮನಸ್ಥಿತಿಯು ನಮ್ಮನ್ನು ಇದ್ದಲ್ಲಿಯೇ ಇರುವಂತೆ ಮಾಡುತ್ತದೆ.
ಪ್ರಜ್ಞಾವಂತ ಪ್ರಜೆಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮೌಲ್ಯಯುತ ಶಿಕ್ಷಣ ಪ್ರಜ್ಞಾವಂತ ಪ್ರಜೆಗಳನ್ನು ಮಾಡವಲ್ಲಿ ಸಹಕಾರಿ.
ಧನ್ಯಶ್ರೀ ಬೋಳಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.