ಬದುಕಿಗೆ ಪ್ರೇರಣೆ ಬದುಕಲು ಕಲಿಯಿರಿ
Team Udayavani, Aug 21, 2019, 5:00 AM IST
ಬದುಕಿನಲ್ಲಿ ಸೋಲು-ಗೆಲುವು, ನೋವು-ನಲಿವು ಇವುಗಳು ಇದ್ದೇ ಇರುತ್ತವೆ. ಅಂತೆಯೇ ಜೀವನಕ್ಕೊಂದು ಅರ್ಥ ಬರಬೇಕಾದರೆ ಇವುಗಳ ಮಧ್ಯೆಯೇ ನಾವು ಜೀವಿಸುವುದು ಹೇಗೆ ಎಂಬ ಅತ್ಯುನ್ನತ ಮಾರ್ಗದರ್ಶನ ಸಿಗುವುದು ಸ್ವಾಮಿ ಜಗದಾತ್ಮಾನಂದ ಅವರ ‘ಬದುಕಲು ಕಲಿಯಿರಿ’ ಪುಸ್ತಕದಿಂದ. ಸ್ವಾಮೀಜಿ ಜಗದಾತ್ಮಾನಂದರು ಭವಿಷ್ಯದ ಯುವ ಜನತೆಯನ್ನು ಕೇಂದ್ರೀಕೃತವಾಗಿ ಈ ಪುಸ್ತಕದಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಬದುಕನ್ನು ಪ್ರೀತಿಸಲು ಕಲಿಯಬೇಕಾದರೆ ಈ ಪುಸ್ತಕ ಓದುವುದು ಅತ್ಯವಶ್ಯಕ. ಈ ಪುಸ್ತಕ ನಮಗೆಲ್ಲರಿಗೆ ಇಷ್ಟವಾಗಲು ಮುಖ್ಯ ಅಂಶಗಳ ಮೇಲೆ ಬೆಳಕು ಚೆಲ್ಲುವುದು ಒಳಿತು.
•ಅಂಶ: 1
‘ಒಂದು ಸಚ್ಚಾರಿತ್ರೆಯ ಕಾರ್ಯ ಸಾವಿರ ಟನ್ ಉಪದೇಶಗಳಿಗೆ ಸಮ’ ಎಂದು ಸ್ವಾಮೀಜಿಯವರು ಈ ಕೃತಿಯ ಮುನ್ನುಡಿಯಲ್ಲಿ ತಿಳಿಸುತ್ತಾರೆ. ಈ ಮಾತು ನಿಜಕ್ಕೂ ಎಲ್ಲ ವರ್ಗದ ಜನರಿಗೆ ಅತ್ಯವಶ್ಯಕವಾಗಿ ಮಾರ್ಗದರ್ಶಿ ಆಗಬೇಕಿದೆ. ಕೇವಲ ಮಾತುಗಳಲ್ಲಿ ದಿನಗಳನ್ನು ಕಳೆಯುವುದಕ್ಕಿಂತ ಒಂದು ಒಳ್ಳೆಯ ಕೆಲಸದಿಂದ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ ಎಂಬುದು ಇದರ ತಿರುಳಾಗಿದ್ದು ನಮಗೆಲ್ಲರಿಗೂ ಮಾರ್ಗದರ್ಶನವಾಗಲಿದೆ.
•ಅಂಶ: 2
ಸಾಧನೆ, ಸೋಲು-ಗೆಲುವು ಹೀಗೆ ಎಲ್ಲ ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಕೃತಿಯಲ್ಲಿ ಪ್ರತಿಭೆಯ ಹಿಂದಿದೆ ಪರಿಶ್ರಮ ಎಂಬ ಲೇಖನದಲ್ಲಿ ಥಾಮಸ್ ಅಲ್ವ ಎಡಿಸನ್ ಸಾಧನೆಯನ್ನು ಉದ್ದೇಶವಾಗಿಟ್ಟು ಸ್ವಾಮೀಜಿ ಅವರು ಹೀಗೆ ಹೇಳಿದ್ದಾರೆ. ಜಗತ್ತಿನ ಇತಿಹಾಸವನ್ನು ನಾವು ನೋಡಿದಾಗ, ಏನಾದರೂ ಮಹತ್ವದ್ದನ್ನು ಸಾಧಿಸಿದವರೆಲ್ಲರೂ ಶ್ರಮಪಟ್ಟು ದುಡಿಯುತ್ತಿದ್ದರು, ತಮ್ಮ ಕೆಲಸದಲ್ಲೇ ಮಗ್ನರಾಗುತ್ತಿದ್ದರು. ಈ ದುಡಿಮೆ ಅವರಿಗೆ ಅದ್ಭುತ ಎನಿಸುವ ಆಪಾರ ಶಕ್ತಿ, ಆತ್ಮವಿಶ್ವಾಸ ನೀಡುತ್ತದೆ ಎಂದು ಎಡಿಸನ್‌ನ ಸಾಧನೆಯ ಯಶೋಗಾಥೆ ಹೇಳುತ್ತದೆ.
•ಅಂಶ: 3
ಏಕಾಗ್ರತೆಯಿಂದ ಚಿಂತಿಸಿದಾಗ ಆತನಿಗೆ ಏನೋ ಒಂದು ಹೊಸದು ಹುಟ್ಟುತ್ತದೆ ಎಂಬುದಕ್ಕೆ ವಿಜ್ಞಾನಿ ಆರ್ಕಿಮಿಡಿಸ್‌ಗೆ ಸಾಧನೆಯನ್ನು ಸ್ವಾಮೀಜಿ ಉದಾಹರಣೆಯಾಗಿ ನೀಡುತ್ತಾರೆ. ರಾಜನಿಗೆ ಅಕ್ಕಸಾಲಿಗನೊಬ್ಬ ನೀಡಿದ ಕಿರೀಟದಲ್ಲಿ ಲೋಹಗಳ ಮಿಶ್ರಣವಿದೇಯೇ ಎಂಬ ಗೊಂದಲ ಮೂಡಿದಾಗ ಇದರ ನಿವಾರಣೆಗೆ ಅರ್ಕಿಡಿಮಿಸ್‌ಗೆ ನೀಡಲಾಯಿತು. ಆಗ ಅವನೂ ತದೇಕಚಿತ್ತ ದಿಂದ ಯೋಚಿಸುತ್ತಿರುವಾಗ ತುಂಬಿದ ನೀರಿನ ತೊಟ್ಟಿಗೆ ಬಿದ್ದ , ಆಗ ನೀರು ಹೊರ ಚೆಲ್ಲಿತ್ತು. ಆಗಲೇ ಅವನಿಗೆ ಸಾಪೇಕ್ಷ ಸಾಂದ್ರತೆ ಸಿದ್ಧಾಂತದ ಅರಿವಾಯಿತು.
ಶಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.