ವಿದ್ಯಾರ್ಥಿ ಜೀವನದಲ್ಲಿ ನೋಡಬೇಕಾದ ಸಿನೆಮಾ
Team Udayavani, Aug 7, 2019, 5:07 AM IST
ಸಿನೆಮಾ ಕೇವಲ ಮನೋರಂಜನೆಗೆ ಸೀಮಿತವಾಗಿಲ್ಲ. ಅದರಲ್ಲೂ ಕಲಿಕೆ ಬೇಕಾದ ಸಾಕಷ್ಟು ವಿಷಯಗಳು ಅಡಕವಾಗಿರುತ್ತವೆ. ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಿನೆಮಾಗಳನ್ನು ನೋಡುವ ಹವ್ಯಾಸಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸಿನೆಮಾಕ್ಕೆ ಭಾಷೆಯ ಬೇಲಿಯಿಲ್ಲ. ಎಲ್ಲ ಭಾಷೆಗಳಲ್ಲೂ ಅತ್ಯುತ್ತಮ ಸಿನೆಮಾಗಳು ನಿರ್ಮಾಣಗೊಳ್ಳುತ್ತವೆ. ಅವುಗಳನ್ನು ನೋಡಿ ಆನಂದಿಸುವುದರೊಂದಿಗೆ ಅವುಗಳಲ್ಲಿರುವ ಮಾಹಿತಿ ಗಳನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ನೋಡಬೇಕಾದ ಸಿನೆಮಾಗಳ ಮಾಹಿತಿ ಇಲ್ಲಿದೆ.
ಲೈಫ್ ಆಫ್ ಪೈ: ಇದು ಇಂಗ್ಲಿಷ್ ಸಿನೆಮಾ. 2012ರಲ್ಲಿ ಬಿಡುಗಡೆಗೊಂಡು ಸುದ್ದಿ ಮಾಡಿದ ಸಿನೆಮಾ ಯಾನ್ ಮಾರ್ಟೆಲ್ ಕೃತಿಯ ಮೂಲವಾಗಿದ್ದು. ಸೂರಜ್ ಶರ್ಮಾ ಇದರ ಪ್ರಮುಖ ಪಾತ್ರಧಾರಿ. ಆ್ಯಂಡ್ಲಿ ನಿರ್ದೇಶಕ. ಈ ಸಿನೆಮಾ ಗಮನ ಸೆಳೆದದ್ದು ಬಾಲಕ ಮತ್ತು ಹುಲಿ ಬೋಟ್‌ನಲ್ಲಿ ಸಾಗುವ ದೃಶ್ಯ. ಕ್ರೂರತೆ ಮತ್ತು ಮುಗ್ಧತೆ ಎಂಬ ಎರಡು ವಿಷಯಗಳನ್ನು ತೆಗೆದುಕೊಂಡು ಮಾನವೀಯ ಸಂಬಂಧಗಳನ್ನು ಮನಮುಟ್ಟುವಂತೆ ತೋರಿಸಿದ ಸಿನೆಮಾ.
ಅಬಿ: ಮಲೆಯಾಳಂ ಭಾಷೆಯ ನಿರ್ದೇಶಿಸಿದ್ದು ಶ್ರೀಕಾಂತ್ ಮುರಳಿ. ವಿಮಾನವನ್ನು ಕಂಡುಹಿಡಿಯಬೇಕೆನ್ನುವ ಕನಸಿನ ಹಿಂದೆ ಓಡುವವವನ್ನು ಕೇಂದ್ರವಾಗಿಟ್ಟುಕೊಂಡು ಮಾಡಿದ ಸಿನೆಮಾ. ಓದಲು ಇಷ್ಟವಿಲ್ಲದ ಆತ ವಿಮಾನವನ್ನು ಕಂಡು ಹಿಡಿಯುವುದನ್ನು ಮನೋಜ್ಞವಾಗಿ ಇಲ್ಲಿ ಚಿತ್ರಿಸಿದ್ದಾರೆ.
ತಾರೇ ಝಮೀನ್ ಪರ್: ಇದು 2007 ರಲ್ಲಿ ಬಿಡುಗಡೆಗೊಂಡ ಹಿಂದಿ ಸಿನೆಮಾ. ಆರೋಗ್ಯ ಸಮಸ್ಯೆಯನ್ನು ಹೊಂದಿದ್ದ ಹುಡುಗನ ಜೀವನವನ್ನು ಹೇಗೆ ಶಿಕ್ಷಕ ಸರಿಪಡಿಸುತ್ತಾನೆ ಎಂಬುದು ಇದರ ಮೂಲ ವಿಷಯ.
ಪರಮಾಣು
2018ರಲ್ಲಿ ಬಿಡುಗಡೆಯಾದ ಹಿಂದಿ ಸಿನೆಮಾ ಪರಮಾಣು. ಅಭಿಷೇಕ್ ಶರ್ಮಾ ನಿರ್ದೇಶನದ, ಜಾನ್ ಅಬ್ರಾಹಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನೆಮಾ. ಭಾರತ ಅಣ್ವಸ್ತ್ರವನ್ನು ಕಂಡು ಹಿಡಿದ ಬಗೆ ಮತ್ತು ಅದನ್ನು ಪ್ರಯೋಗಕ್ಕೊಳಪಡಿಸಿದ ನೈಜ ವಸ್ತು ಚಿತ್ರವನ್ನು ಅದರ ಹಿಂದಿನ ಕಥೆಗಳನ್ನು ಸೇರಿಸಿ ಈ ಸಿನೆಮಾ ತಯಾರಿಸಲಾಗಿದೆ. ಅನೇಕ ಕುತೂಹಲಕಾರಿ ವಿಷಯಗಳನ್ನು ಒಳಗೊಂಡಿರುವ ಈ ಚಿತ್ರ ನೋಡುಗರಿಗೆ ಭಾರತದ ಬಗ್ಗೆ ಅಭಿಮಾನ ಮೂಡಿಸುತ್ತದೆ. ಆ ಸಮಯದಲ್ಲಿನ ರಾಜಕಾರಣಿಗಳು, ಶತ್ರು ರಾಷ್ಟ್ರಗಳು, ವಿಜ್ಞಾನಿಗಳು ಮೊದಲಾದ ಹಲವು ವಿಷಯ ಸಂಗ್ರಹದೊಡನೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಉತ್ತಮ ಸಿನೆಮಾ.
ರೈಲ್ವೇ ಚಿಲ್ಡ್ರನ್
ರೈಲ್ವೇ ಚಿಲ್ಡ್ರನ್ 2016ರಲ್ಲಿ ಬಿಡುಗಡೆಯಾದ ಕನ್ನಡ ಸಿನೆಮಾ. ಈ ಸಿನೆಮಾವನ್ನು ಪೃಥ್ವಿ ಕೊನನೂರು ನಿರ್ದೇಶಿಸಿದ್ದಾರೆ. ಸ್ಲಮ್ ಹುಡುಗರ ಬದುಕಿನ ಸಿನೆಮಾ ಇದಾಗಿದೆ. ಈ ಹುಡುಗರು ದಾರಿ ತಪ್ಪುವ ರೀತಿಯನ್ನು ಅಷ್ಟೇ ನೈಜತೆಯಿಂದ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಈ ರೀತಿ ದಿಕ್ಕಿಲ್ಲದ ಹುಡುಗರನ್ನು ಯಾವ ರೀತಿ ಸಮಾಜ ಉಪಯೋಗಿಸುತ್ತದೆ ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ. ಈ ಸಿನೆಮಾ ಕೊನೆಗೆ ತೃತೀಯ ಲಿಂಗಿಗಳ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಚಿತ್ರಿಸಿದ್ದಾರೆ. ಆದರೆ ವಾಣಿಜ್ಯ ಸಿನೆಮಾಗಳಂತೆ ಇದು ಥಿಯೇಟರ್‌ನಲ್ಲಿ ಪ್ರದರ್ಶನಗೊಂಡೇ ಇಲ್ಲ.
ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.