ಬದುಕಿನ ಸತ್ಯವನ್ನು ಬಿಚ್ಚಿಡುವ ಮಹಾವೀರನ ಮುಗ್ಧತೆ
Team Udayavani, Aug 29, 2018, 1:02 PM IST
ಸದ್ಗುರು ಓಶೋ ಅವರ ವಿಚಾರಧಾರೆಗಳು ವಿಚಾರ ಶುದ್ಧಿಯಾಗಿಸುವುದು ಮಾತ್ರವಲ್ಲ ದೇಹಶುದ್ಧಿ ಮತ್ತು ಭಾವಶುದ್ಧಿಯನ್ನೂ ಮಾಡುತ್ತದೆ. ಇದಕ್ಕಾಗಿ ಓಶೋ ಅವರ ಧ್ಯಾನ ವಿಧಾನಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ದೇಹ, ಮನಸ್ಸು, ಭಾವವನ್ನು ವೈಜ್ಞಾನಿಕವಾಗಿ ಉಪಚರಿಸಬೇಕು. ಓಶೋ ಅವರ ಮಹಾವೀರ ಮುಗ್ಧತೆಯ ಮುಚ್ಚಲಾಗದು’ ಎಂಬ ಪುಸ್ತಕವೂ ಇಂತಹ ಅನೇಕ ವಿಚಾರಗಳನ್ನು ತಿಳಿಸುವ ಪ್ರಯತ್ನವನ್ನು ಮಾಡಿದೆ. ಧಾರ್ಮಿಕತೆ ನಮ್ಮ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಅಳವಡಿಸಲಾಗಿದೆ, ಧಾರ್ಮಿಕ ಭಾವನೆಗಳಲ್ಲಿರುವ ಕಪಟತನ, ಆಸ್ತಿಕ, ನಾಸ್ತಿಕನ ನಡುವಿನ ಅಂತರ, ಮಾನವನ ಶ್ರೇಷ್ಠತೆ ಮತ್ತು ವೈಶಿಷ್ಟ್ಯಗಳನ್ನು ಈ ಕೃತಿಯಲ್ಲಿ ಉದಾಹರಣೆ ಸಹಿತವಾಗಿ ವಿವರಿಸಲಾಗಿದೆ.
ಘಟನೆ 1
ಧಾರ್ಮಿಕನಾಗುವುದು ತೀವ್ರವಾದ ಸಾಧನೆಗೆ ಸಂಬಂಧಿಸಿದ ವಿಚಾರವಾಗಿದೆ. ಇದು ಹುಟ್ಟಿಗೆ ಸಂಬಂಧಿಸಿದ್ದಲ್ಲ. ಯಾವ ದುರ್ಗುಣಗಳು, ಅಂಧಕಾರ ನಿಮ್ಮೊಳಗೆ ಇರುವುದೋ ಅದರ ನಾಶದೊಂದಿಗೆ ಧರ್ಮ ಸಂಬಂಧ ಹೊಂದಿದೆ. ನಿಮ್ಮ ಮರಣದೊಂದಿಗೆ ಧರ್ಮವು ಸಂಬಂಧವನ್ನು ಹೊಂದಿದೆ. ನೀವು ಯಾವ ಮನೆಯಲ್ಲಿ ಹುಟ್ಟುವಿರಿ ಎಂಬುವುದು ಮುಖ್ಯವಾಗುವುದಿಲ್ಲ. ಬದಲಿಗೆ ನಿಮ್ಮ ಅಹಂ ಮರಣಿಸಲು ನೀವು ಎಷ್ಟರಮಟ್ಟಿಗೆ ತಯಾರಿರುವಿರಿ ಎಂಬುವುದರ ಆಧಾರದ ಮೇಲೆ ನಿಮಗೆ ಧರ್ಮ ಸಂಪರ್ಕ ಹೊಂದಿದೆ.
ಘಟನೆ 2
ಮನುಷ್ಯನಿಗೆ ಎರಡು ಆಯ್ಕೆಗಳಿವೆ. ಒಂದು ಭ್ರಮೆಯನ್ನು ವಿಸರ್ಜಿಸುವುದು.ಇನ್ನೊಂದು ಭ್ರಮೆಯನ್ನು ಪೋಷಿಸುವುದು. ಯಾರಿಗೆ ಮಹಾವೀರನ ಮಾರ್ಗದಲ್ಲಿ ಉತ್ಸುಕತೆ ಇರುವುದೋ ಅವರು ಈ ಭ್ರಮೆಯನ್ನು ವಿಸರ್ಜಿಸುವ ಕಡೆಗೆ ಗಮನ ಕೊಡುವರು.ಯಾವ ಕ್ರಿಯೆ ಮತ್ತು ವಿಚಾರ ನಿಮ್ಮೊಳಗೆ ನಾನು ಶರೀರವೆಂಬ ಭ್ರಮೆಯನ್ನು ಇಲ್ಲವಾಗಿಸುವುದೋ ಅದೇ ಪುಣ್ಯ, ಅದೇ ಸತ್ಕರ್ಮ. ಯಾವ ಕ್ರಿಯೆ ಮತ್ತು ವಿಚಾರ ನಾನು ಶರೀರವೆಂಬ ಭ್ರಮೆಯನ್ನು ಘನವಾಗಿಸುತ್ತಾ ಹೋಗುವುದೋ ಅದೇ ಮಹಾಪಾಪ.
ಘಟನೆ 3
ನಮ್ಮ ಮನಸ್ಸು ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರುತ್ತದೆ. ಮಹಾವೀರ ಸಾಧನೆ ವೇಳೆ ಮನಸ್ಸು ಏನೂ ಮಾಡದೇ ಇರುವಂತೆ ಮಾಡುತ್ತಿದ್ದ. ಏಕೆಂದರೆ ಮನಸ್ಸು ಏನೇ ಮಾಡಲಿ ಅದೆಲ್ಲವೂ ಸಂಸಾರವನ್ನು ಹಿಡಿದುಕೊಳ್ಳುವ ಕಾರ್ಯವಾಗುತ್ತದೆ. ಚಿತ್ರವೊಂದನ್ನು ರಚಿಸುವ ಕಾರ್ಯದ ಹೊರತೂ ಮನಸ್ಸು ಬೇರೆ ಏನೂ ಮಾಡುತ್ತಿರುವುದಿಲ್ಲ. ಚಿತ್ತದ ಏಕ ಮಾತ್ರ ಕೆಲಸ ಚಿತ್ರ ರಚಿಸುವುದು. ಚಿತ್ತವೆ ಒಂದು ಚಿತ್ರಕಾರ. ಅದು ತಿಳಿವಳಿಕೆ. ಅದು ಬೇರೆ ಯಾವ ಕೆಲಸವನ್ನೂ ಮಾಡುವುದಿಲ್ಲ.
ಶ್ರುತಿ ನೀರಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.