ಆನ್‌ಲೈನ್‌ ಬಳಸಿ ಕೌಶಲ ಹೆಚ್ಚಿಸಿ

Team Udayavani, Oct 31, 2018, 1:13 PM IST

31-october-10.gif

ಇತ್ತೀಚಿನ ದಿನಗಳಲ್ಲಿ ಮೊಬೈಲ್‌, ಕಂಪ್ಯೂಟರ್‌, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದರೂ ನಮ್ಮ ಕೌಶಲವನ್ನು ಹೆಚ್ಚಿಸುವಲ್ಲಿ ಅದರ ಬಳಕೆ ತೀರಾ ಕಡಿಮೆ. ಅಲ್ಲಿ ಸಿಗುವ ವಿವಿಧ ಮಾಹಿತಿ ಅಲ್ಲಿಗೇ ಸೀಮಿತವಾಗುತ್ತಿದ್ದು, ಅದರಿಂದ ನಮಗೇನಾದರೂ ಪ್ರಯೋಜನವಿದೆಯೇ?, ನಾವೇನದರೂ ಕಲಿಯಬಹುದೇ ಎಂಬುದನ್ನು ಯೋಚಿಸಲು ಹೋಗುವುದಿಲ್ಲ. ಉದ್ಯೋಗ, ಶೈಕ್ಷಣಿಕ ಸಹಿತ ಎಲ್ಲ ಕ್ಷೇತ್ರಗಳಲ್ಲೂ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ನಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಈ ನಿಟ್ಟಿನಲ್ಲಿ ಆನ್‌ ಲೈನ್‌ ಎಂಬುದು ನಮಗೆ ಮಾರ್ಗ ದರ್ಶನ ನೀಡುವ ಒಂದು ಪ್ರಮುಖ ಸಾಧನವಾಗಿ ಗುರುತಿಸಲ್ಪಟ್ಟಿದೆ. ಏನೇ ಕಲಿಯಬೇಕಿದ್ದರೂ ಮಾಹಿತಿಯೊಂದಿಗೆ ಸಂಪೂರ್ಣ ತರಬೇತಿ ನೀಡುವ ವ್ಯವಸ್ಥೆಯೂ ಇದರೊಳಗಿದೆ. 

ಉದ್ಯೋಗ ಎಂಬುದು ಇಂದು ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ಇದಕ್ಕಾಗಿ ಸಾಕಷ್ಟು ಡಿಗ್ರಿಗಳನ್ನು ಪಡೆದರೂ ಉದ್ಯೋಗ ಸಿಗುವುದಿಲ್ಲ. ಅದಕ್ಕೆ ತಮ್ಮ ಹಣೆಬರಹವನ್ನು ಹಳಿಯುವ ಬದಲು ದೌರ್ಬಲ್ಯವನ್ನು ಅರಿತುಕೊಂಡು, ಕೌಶಲಗಳನ್ನು ಹೆಚ್ಚಿಸುವತ್ತ ಚಿಂತನೆ ನಡೆಸಬೇಕಿದೆ. ಉದ್ಯೋಗ ಇಂದು ಎಲ್ಲರಿಗೂ ಅನಿವಾರ್ಯ. ಹೀಗಾಗಿ ಇಲ್ಲಿ ಪೈಪೋಟಿ ಸಾಮಾನ್ಯ. ಅದ್ದರಿಂದ ನಿರಂತರ ಬದಲಾವಣೆಯ ಜತೆಗೆ ಹೊಸತನವನ್ನು ಬಯಸುವ ಕಂಪೆನಿಗಳು ತಮ್ಮ ಉದ್ಯೋಗಿಗಳೂ ಪರಿಪೂರ್ಣರಾಗಿರಬೇಕು ಎಂದು ಬಯಸುತ್ತದೆ. ಹೀಗಾಗಿ ಸಂದರ್ಶನದ ವೇಳೆ ಡಿಗ್ರಿಯ ಹೊರತಾಗಿಯೂ ಕೆಲವೊಂದು ಕೌಶಲ ಹೊಂದಿರುವವರಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲೇ ಶಿಕ್ಷಣದ ಜತೆಜತೆಗೆ ಉದ್ಯೋಗ ಮಾಹಿತಿ ಪಡೆದು, ಅದಕ್ಕೆ ಪೂರಕವಾದ ಕೌಶಲಗಳನ್ನು ಬೆಳೆಸಿಕೊಳ್ಳಬೇಕಿದೆ. ಹೀಗಾಗಿಯೇ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವ ಮುಂಚೆಯೇ ಕೆಲವೊಂದು ತರಬೇತಿಗಳು ಕಡ್ಡಾಯವಾಗಿರುವುದು ನಾವು ಕಾಣುತ್ತೇವೆ. ಅನುಭವದೊಂದಿಗೆ ಕೌಶಲವನ್ನು ಗುರುತಿಸಲು ಇದೊಂದು ವೇದಿಕೆಯಾಗಿದೆ.

ಕಲಿಕೆ ಇಂದು ಅನಿವಾರ್ಯ
ನಾವಿಂದು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಇಲ್ಲಿ ಹೊಸ ವಿಷಯಗಳನ್ನು ಕಲಿಯುವುದು ನಮ್ಮ ಆಯ್ಕೆಯಲ್ಲ. ಅದು ಅನಿವಾರ್ಯ. ಉದ್ಯೋಗ ಕ್ಷೇತ್ರ ಸೇರುವ ಮುಂಚೆಯಾಗಿರಬಹುದು ಅಥವಾ ಸೇರಿದ ಅನಂತರವಾಗಿರಬಹುದು ದಿನದಿಂದ ದಿನಕ್ಕೆ ಅಪ್‌ ಟು ಡೇಟ್‌ ಆಗಿರಲೇಬೇಕು. ಉದ್ಯೋಗ ಎಂಬುದು ಇಂದು ಉದ್ಯಮವಾಗಿ ಬೆಳೆದಿರುವುದರಿಂದ ಪದವಿಗಿಂತ ಕೌಶಲಕ್ಕೆ ಇಲ್ಲಿ ಹೆಚ್ಚಿನ ಆದ್ಯತೆ. 

ಹೊಸ ಹೊಸ ಪ್ರಾಜೆಕ್ಟ್ ಗಳನ್ನು ಸಮಯಕ್ಕೆ ಸರಿಯಾಗಿ ಪರಿಪೂರ್ಣವಾಗಿ ಸಿದ್ಧಗೊಳಿಸಬೇಕಾದರೆ ಇಲ್ಲಿ ನಿಮ್ಮ ಪ್ರತಿಭೆಗೆ ಆದ್ಯತೆ ಸಿಗುತ್ತದೆ. ನಮ್ಮ ದೇಶ ದಲ್ಲಿ ಹೆಚ್ಚಾಗಿ ಒಂದು ಸೀಮಿತ ವಿಷಯಗಳ ಕುರಿತು ಆಳವಾದ ಅಧ್ಯಯನಕ್ಕೆ ಮಹತ್ವ ನೀಡುತ್ತಿರುವುದರಿಂದ ಆ ಕ್ಷೇತ್ರದ ಪರಿಣಿತಿಯಷ್ಟೇ ನಮಗೆ ದೊರೆಯುತ್ತಿದೆ. ಹೀಗಾಗಿ ಇದು ಸ್ಪರ್ಧಾ ತ್ಮಕ ಜಗ ತ್ತಿ ನಲ್ಲಿ ಪೈಪೋಟಿ ನಡೆಸಲು ನಾವು ಅಸಮರ್ಥರಾಗುವಂತೆ ಮಾಡುತ್ತದೆ. ಅದ್ದರಿಂದ ಶಿಕ್ಷಣದ ಜತಜತೆಗೆ ಕೌಶಲವನ್ನು ಬೆಳೆಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಆನ್‌ ಲೈನ್‌ ಶಿಕ್ಷಣ ಇತ್ತೀಚಿನ ಟ್ರೆಂಡ್‌ ಆಗಿ ಬೆಳೆಯುತ್ತಿದೆ.

ಕೌಶಲ ಹೆಚ್ಚಿಸಿಕೊಳ್ಳುವುದು ಹೇಗೆ?
ನಮ್ಮ ಕೌಶಲವನ್ನು ಮೂರು ವಿಧಗಳಲ್ಲಿ ಹೆಚ್ಚಿಸಿಕೊಳ್ಳಬಹುದು.
1 ಉದ್ಯೋಗವನ್ನು ಕಲಿತುಕೊಳ್ಳುವುದು
2 ಕ್ಯಾಂಪಸ್‌ ಶಿಕ್ಷಣ ಪಡೆಯುವುದು
3 ಆನ್‌ಲೈನ್‌ನ ಸದುಪಯೋಗ ಮಾಡಿಕೊಳ್ಳುವುದು
 ಇದರಲ್ಲಿ ಯಾವುದು ಸೂಕ್ತವೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಉದ್ಯೋಗವನ್ನು ಕಲಿಯುವುದೆಂದರೆ ನೀವು ಯಾವ ಕ್ಷೇತ್ರಕ್ಕೆ ಹೋಗಲು ಬಯ ಸು ತ್ತೀರೋ ಅದಕ್ಕೆ ಸಂಬಂಧಿತ ಸಂಪೂರ್ಣ ಮಾಹಿತಿ, ತರಬೇತಿಯನ್ನು ಪಡೆದುಕೊಳ್ಳುವುದು. ಇಲ್ಲಿ ಕಲಿಕೆಗೆ ಸಾಕಷ್ಟು ಅವಕಾಶವಿದೆ. ಇದು ಉದ್ಯೋಗದೊಂದಿಗೆ ಹೊಸ ಹೊಸ ವಿಷಯಗಳನ್ನು ಕಲಿಯುವ ಅವಕಾಶವನ್ನೂ ಒದಗಿಸುತ್ತದೆ. ಕ್ಯಾಂಪಸ್‌ ಶಿಕ್ಷಣದಲ್ಲಿ ತಂತ್ರಜ್ಞಾನಗಳ ಕಲಿಕೆಗೆ ಆದ್ಯತೆ. ಅನುಭವಿಗಳ ಜತೆಗಿನ ಮಾತುಕತೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುವಲ್ಲಿ ಸಹಾಯ ಮಾಡುತ್ತದೆ. ಫ‌ುಲ್‌ ಟೈಮ್‌, ಪಾರ್ಟ್‌ ಟೈಮ್‌ ಆಗಿ ಈ ಶಿಕ್ಷಣವನ್ನು ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಈ ಎರಡು ವಿಷಯಕ್ಕಿಂತ ಹೆಚ್ಚು ಚಾಲ್ತಿಯಲ್ಲಿರುವುದು ಆನ್‌ಲೈನ್‌ ಶಿಕ್ಷಣ. ಇದರಲ್ಲಿ ಕಲಿಕೆ ಸುಲಭ ಮತ್ತು ವೇಗವಾಗಿ ನಡೆಯುತ್ತದೆ. ಹಲವಾರು ವಿದ್ಯಾರ್ಥಿಗಳು ಮಾತ್ರವಲ್ಲ ಉದ್ಯೋಗಸ್ಥರು, ಹಿರಿಯರು, ಗೃಹಿಣಿಯರು ಇದರಲ್ಲಿ ಸಕ್ರಿಯರಾಗಿತ್ತಾರೆ. ಆನ್‌  ಲೈನ್‌ ಶಿಕ್ಷಣ ಬೇರೆ ಬೇರೆ ವಿಷಯಗಳನ್ನು ಕಲಿಯುವ ಅವಕಾಶ ಒದಗಿಸುತ್ತದೆ. ಇದು ಶಿಕ್ಷಣದ ಅಭಿವೃದ್ಧಿ ಹೊಂದಿದ ತಂತ್ರಜ್ಞಾ ನವಾಗಿರುವುದರಿಂದ ಅಲ್ಲಿ ಅನುಭವದ ಜತೆಗೆ ಕೌಶಲ ಸೇರಿ ನಿಮ್ಮನ್ನು ಆಧುನಿಕ ಯುಗ ಸೂಕ್ತವಾಗುವ ಹಾಗೆ ಮಾಡುತ್ತದೆ.

ಆನ್‌ ಲೈನ್‌ ಶಿಕ್ಷಣ ಆಯ್ಕೆಯ ಮುನ್ನ
ಆನ್‌ ಲೈನ್‌ ಶಿಕ್ಷಣವನ್ನು ಆಯ್ದುಕೊಳ್ಳುವ ಮುನ್ನ ನಿಮ್ಮ ವೃತ್ತಿ ಮತ್ತು ಆನ್‌ಲೈನ್‌  ಕ್ಷಣಗಳು ಪರಸ್ಪರ ಹೊಂದಿಕೆಯಾಗುತ್ತಿವೆಯೇ ಎಂದು ನೋಡಿಕೊಳ್ಳಬೇಕು. ಸಂಯೋಜನೆಯನ್ನು ಹೊಂದಿರುವ ಶಿಕ್ಷಣವನ್ನೇ ಆಯ್ದುಕೊಳ್ಳಬೇಕು. ಆನ್‌ಲೈನ್‌ ಶಿಕ್ಷಣಗಳು ತಂತ್ರಜ್ಞಾನ ಕ್ಷೇತ್ರಕ್ಕೆ ಮೀಸಲಾಗಿರುತ್ತವೆ. ಜತಗೆ ಇಲ್ಲಿ ಇತರೆ ಕ್ಷೇತ್ರಗಳ ಮಾಹಿತಿಯನ್ನೂ ಪಡೆಯಬಹುದು. ಆನ್‌ ಲೈನ್‌ ಶಿಕ್ಷಣದಲ್ಲಿ ವಯಸ್ಕರಿಗೆ ಪ್ರತ್ಯೇಕವಾಗಿ ನೀಡುವ ಪಠ್ಯಕ್ರಮವೂ ಇದರಲ್ಲಿದೆ. ಹೀಗಾಗಿ ಆಯ್ದುಕೊಂಡ ವಿಷಯದ ಬಗ್ಗೆ ಸೂಕ್ಷ್ಮವಾದ ವಿಚಾರಗಳನ್ನೂ ಅರಿತುಕೊಳ್ಳಬಹುದು. ವಿಷಯದ ಸಣ್ಣ ಮಾಹಿತಿ, ವೀಡಿಯೊ ಕೂಡ ಲಭಿಸುತ್ತದೆ.

ಆನ್‌ ಲೈನ್‌ ಶಿಕ್ಷಣದ ಮೂಲಕ ಇತರ ಅವಕಾಶಗಳು ತೆರೆದುಕೊಳ್ಳುತ್ತವೆ. ಇರುವ ಅವಕಾಶಗಳಲ್ಲಿ ಹೊಸ ಬದಲಾವಣೆಯನ್ನೂ ತೋರಿಸುತ್ತದೆ. ಎಲ್ಲ ವೃತ್ತಿ ಕ್ಷೇತ್ರ ಗಳಲ್ಲಿ ಇಂದು ಪ್ರಾಜೆಕ್ಟ್, ಚರ್ಚೆ, ಗುಂಪು ಚಟುವಟಿಕೆಗಳಿಗೆ, ಬ್ಯುಸಿನೆಸ್‌ ಸಮಸ್ಯೆಗಳಿಗೆ ಪರಿಹಾರ ಮೊದಲಾದವುಗಳು ಇರುತ್ತವೆ. ಇವೆಲ್ಲದ್ದಕ್ಕೂ ಆನ್‌ಲೈನ್‌ ಶಿಕ್ಷಣದಲ್ಲಿ ಅವಕಾಶವಿದೆ. ವೃತ್ತಿ ರಂಗದ ಬೆಳವಣಿಗೆಗೆ ಹೊಸ ಐಡಿಯಾಗಳನ್ನು ನೀಡುವುದರ ಜತೆಗೆ ಒಟ್ಟು ಕೌಶಲ ಬೆಳವಣಿಗೆಗೆ ಆನ್‌ ಲೈನ್‌ ಶಿಕ್ಷಣ ಸಹಕರಿಸುತ್ತದೆ. ಉದ್ಯಮ ಕ್ಷೇತ್ರಕ್ಕೆ ಹೊಸದಾಗಿ ಕಾಲಿಡುವರಿಗೂ ಇಲ್ಲಿ ವಿವಿಧ ತರಬೇತಿ ಸಿಗುವುದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಸ್ಪರ್ಧೆಗಿಳಿಯಲು ಪ್ರೇರಣೆ ನೀಡುತ್ತದೆ. 

ಎಲ್ಲರಿಗೂ ಅವಕಾಶ
ಆನ್‌ಲೈನ್‌ ಶಿಕ್ಷಣವು ಕಲಿಕೆಗೆ ಎಲ್ಲರಿಗೂ ಅವಕಾಶವನ್ನೊದಗಿಸುತ್ತದೆ. ಇಲ್ಲಿ ನೀವು ಕಲಿಯಬೇಕಿರುವ ವಿಷಯದೊಂದಿಗೆ ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನೂ ತಿಳಿದುಕೊಳ್ಳಬಹುದು. ಜತೆಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆ. 

 ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.