ನಿರಂತರವಾದ ಅಧ್ಯಯನದಿಂದ ಸಮಸ್ಯೆಗಳು ಪರಿಹಾರ
Team Udayavani, Mar 4, 2020, 4:12 AM IST
ಶೈಕ್ಷಣಿಕ ವರ್ಷದ ಅಂತಿಮ ಹಂತದಲ್ಲಿದ್ದೇವೆ. ಈಗಾಗಲೇ ಎಲ್ಲ ಶಾಲಾ-ಕಾಲೇಜುಗಳಲ್ಲಿ ಪಠ್ಯ ಬೋಧನೆ ಅಂತಿಮವಾಗಿದ್ದು ಇಷ್ಟರಲ್ಲೇ ಪರೀಕ್ಷೆಗಳು ಕೂಡ ಆರಂಭವಾಗಲಿವೆ. ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳು ಕೂಡ ಜೋರಾಗಿಯೇ ಸಿದ್ಧತೆ ನಡೆಸಿರುತ್ತಾರೆ. ಈ ಮಧ್ಯೆ ಕೆಲವೊಂದು ಅಂಶಗಳ ಬಗ್ಗೆ ಗಮನಹರಿಸುವುದು ಕೂಡ ಅಗತ್ಯ.
ಇಂದಿನ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಪಠ್ಯಗಳ ಬಗೆಗಿನ ಸಮಸ್ಯೆಗಳನ್ನು ಪರಿಹರಿಸುವುದು ಕೂಡ ಗಂಭೀರವಾದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪ್ರಯತ್ನ ಕೂಡ ಸತತವಾಗಿದೆ. ಆದರೆ ಮುಖ್ಯವಾಗಿ ವಿದ್ಯಾರ್ಥಿಗಳು ಬೋಧಿಸಿದ ಪಠ್ಯಗಳ ವಿಷಯವನ್ನು ಗ್ರಹಿಕೆ ಸಹಿತ ವಿಷಯಗಳ ಬಗೆಗಿನ ಸ್ಪಷ್ಟತೆ ಪಡೆದುಕೊಳ್ಳುವಲ್ಲಿ ಎಡವುತ್ತಾರೆ ಎಂಬ ವಾದವನ್ನು ಆಗಾಗ ಕೇಳಿರುತ್ತೇವೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನನ ಮಾಡುವುದು ಕೂಡ ಅಗತ್ಯವಾಗಿದೆ.
ಗ್ರಹಿಕೆ ಎಂಬುವುದು ಅಸಾಧಾರಣವಾದ ಶಕ್ತಿಯೇನಲ್ಲ. ಅದು ಎಲ್ಲರೂ ರೂಢಿಸಿಕೊಳ್ಳಬಹುದಾಗಿದೆ. ಆದರೆ ನಮ್ಮ ಮಾನಸಿಕ ಸದೃಢತೆಯೇ ಗ್ರಹಿಸುವುದರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇನ್ನು ನಾವು ವಿಷಯಗಳನ್ನು ಗ್ರಹಿಸಿದಾಗ ಮಾತ್ರ ಸ್ಪಷ್ಟತೆಯನ್ನು ಕಂಡುಕೊಳ್ಳಲು ಸಾಧ್ಯ. ಸ್ಪಷ್ಟತೆಯನ್ನು ಕಂಡುಕೊಂಡವೇ ಎಂದರೆ ನಮಗೆ ಯಾವುದೇ ರೀತಿಯಾದ ಸಮಸ್ಯೆಗಳು ಸುಳಿಯುವುದಿಲ್ಲ ಖಚಿತವೆನಿಸಬಹುದು. ಈ ನಿಟ್ಟಿನಲ್ಲಿ ನಾವು ಗ್ರಹಿಕೆ ಮತ್ತು ಸ್ಪಷ್ಟತೆಯನ್ನು ರೂಢಿಸಿಕೊಳ್ಳುವ ಬಗೆಯ ಬಗ್ಗೆ ಅವಲೋಕಿಸುವುದು ಅಗತ್ಯ.
ಸ್ಪಷ್ಟವಾಗಿ ಆಲಿಸಿ
ನಾವು ಯಾವುದೇ ವಿಷಯಗಳನ್ನು ಗ್ರಹಿಸಿಕೊಳ್ಳುವ ಶಕ್ತಿ ರೂಢಿಸಿಕೊಳ್ಳಬೇಕಾದರೆ ಮೊದಲು ಬೋಧಿಸಿದ ವಿಷಯಗಳನ್ನು ಸರಿಯಾಗಿ ಕೇಳಿ, ಆಲಿಸಬೇಕಿದೆ. ಯಾರು ಚೆನ್ನಾಗಿ ಕೇಳುತ್ತಾರೋ, ಅವರು ಚೆನ್ನಾಗಿ ಬರೆಯುತ್ತಾರೆ ಎಂಬ ಮಾತಿದೆ. ಅಂತೆಯೇ ನಾವು ಚೆನ್ನಾಗಿ ಕೇಳಿದಾಗ ವಿಷಯಗಳನ್ನು ಗ್ರಹಿಸಿಕೊಳ್ಳುವ ಶಕ್ತಿ ನಮ್ಮದಾಗುತ್ತದೆ. ಇದರಿಂದ ಯಾವುದಾದರೂ ವಿಷಯದ ಬಗ್ಗೆ ಗೊಂದಲ ಮೂಡಿದರೆ ನಾವು ಕೇಳುವ ಮೂಲಕ ಸ್ಪಷ್ಟತೆಯನ್ನು ಪಡೆಯಬಹುದು.
ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಿ
ಪ್ರಾಯೋಗಿಕ ಕಾರ್ಯಗಳು ನಮ್ಮಲ್ಲಿ ಹೆಚ್ಚು ದಿನಗಳ ಕಾಲದವರೆಗೆ ನೆನಪಿನಲ್ಲಿರುತ್ತವೆ. ನಮಗೆ ತುಂಬಾ ಕ್ಲಿಷ್ಟವಾದ ವಿಷಯಗಳನ್ನು ಹೆಚ್ಚಿನ ರೀತಿಯಲ್ಲಿ ಗಮನಹರಿಸಬೇಕಾಗುತ್ತದೆ. ಈ ವಿಚಾರವಾಗಿ ನಾವು ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದ ವಿಷಯವಾಗಿ ತಮಗೆ ಕ್ಲಿಷ್ಟವಾದ ಅಧ್ಯಯನಗಳನ್ನು ಪ್ರಾಯೋಗಿಕವಾಗಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಹಾಗೆಯೇ ಇನ್ನಿತರ ವಿಷಯಗಳನ್ನು ಬರೆದು ಮನನ ಮಾಡಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ರೀತಿಯಾಗಿ ಮಾಡಿದಾಗ ಗ್ರಹಿಕೆ ಸಾಮರ್ಥ್ಯ ಹೆಚ್ಚುತ್ತದೆ. ಉತ್ತರಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳಬಹುದಾಗಿದೆ.
ನಿರಂತರವಾದ ಅಧ್ಯಯನ
ನಿರಂತರವಾದ ಅಧ್ಯಯನವು ವಿದ್ಯಾರ್ಥಿಗಳ ಸರ್ವ ರೀತಿಯ ವಿಕಸನಕ್ಕೆ ಪೂರಕವಾಗುತ್ತದೆ. ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಮಾಡಿ ಮನನ ಮಾಡಿಕೊಳ್ಳುವುದರಿಂದಾಗಿ ನಮಗೆ ಒಂದು ವಿಷಯವನ್ನು ಯಾವ ರೀತಿಯಾಗಿ ಪ್ರಚುರಪಡಿಸಬಹುದು ಎಂಬ ಅಂಶವನ್ನು ಗೊತ್ತುಪಡಿಸಿಕೊಳ್ಳಬಹುದಾಗಿದೆ. ಅಲ್ಲದೇ ನಿರಂತರ ಅಧ್ಯಯನದಿಂದ ನಮಗೆ ಗ್ರಹಿಕೆ ಶಕ್ತಿಯೂ ವೃದ್ಧಿಯಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿರಂತರವಾರ ಅಧ್ಯಯನದ ಕಡೆಗೆ ಗಮನಹರಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್ ಆಕರ್ಷಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.