ಉತ್ತಮ ವಿದ್ಯಾರ್ಥಿಗಿರಬೇಕಾದ ಗುಣಗಳು
Team Udayavani, Jan 1, 2020, 4:48 AM IST
ಸ್ತುತ ಉತ್ತಮ ವಿದ್ಯಾರ್ಥಿ ಎಂಬುದರ ವ್ಯಾಖ್ಯಾನ ಬದಲಾಗಿದೆ. ಉತ್ತಮ ವಿದ್ಯಾರ್ಥಿ ಎಂದರೆ ಹಿಂದಿನಂತೆ ಅಂಕ ಪಡೆಯುವುದು ಮಾತ್ರವಲ್ಲ. ಬದಲಾಗಿ ಬದಲಾದ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಸವಾಲು ಎದುರಿಸುವುದೂ ಅಗತ್ಯ. ಉತ್ತಮ ವಿದ್ಯಾರ್ಥಿಯೆಂದಾಗ ಪಾಠದಲ್ಲಿ ಮುಂದಿದ್ದು, ಉತ್ತಮ ಅಂಕ ಗಳಿಸುವುದು ಎಂದಷ್ಟೇ ಅಲ್ಲ. ಬದಲಾಗಿ ಪಠ್ಯೇತರ ಚಟವಟಿಕೆಗಳಲ್ಲೂ ಭಾಗವಹಿಸಿ ಉತ್ತಮ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಅಂತಹ ಕೆಲವು ಗುಣಗಳನ್ನು ವಿವರಿಸಲಾಗಿದೆ.
1. ಆಸಕ್ತಿ
ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಮೇಲೂ ಆಸಕ್ತಿಯಿರಬೇಕು. ಪ್ರಶ್ನಿಸುವ ಗುಣವಿರಬೇಕು. ಹಾಗಿದ್ದರೆ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ.
2. ಉತ್ತಮ ಸಂವಹನ
ಉತ್ತಮ ವಿದ್ಯಾರ್ಥಿಗೆ ಉತ್ತಮ ಸಂವಹನ ಮಾಡುವ ಕಲೆ ಗೊತ್ತಿರಬೇಕು. ಸಂವಹನದಿಂದ ವಿಷಯಗಳನ್ನು ಪಡೆದುಕೊಳ್ಳಬಹುದು ಮತ್ತು ತಮಗೆ ಗೊತ್ತಿರುವ ವಿಷಯಗಳನ್ನು ತಿಳಿಸಬಹುದು. ಆದ್ದರಿಂದ ಉತ್ತಮ ಸಂವಹನ ಮಾಡುವ ಕಲೆ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು.
3. ಓದುವ ಹವ್ಯಾಸ
ಪಾಠದ ಜತೆಗೆ ಇತರ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಸಹಕಾರಿ.
4. ಒಳ್ಳೆಯ ಹವ್ಯಾಸ
ಒಳ್ಳೆಯ ಹವ್ಯಾಸಗಳು ವಿದ್ಯಾರ್ಥಿಗಳನ್ನು ಉತ್ತಮ ವಿದ್ಯಾರ್ಥಿಗಳನ್ನಾಗಿ ಮಾಡುತ್ತವೆ. ಉತ್ತಮ ಹವ್ಯಾಸಗಳು ವಿದ್ಯಾರ್ಥಿಗಳನ್ನು ಸರ್ವ ರೀತಿಯಲ್ಲೂ ಬೆಳೆಸುತ್ತವೆೆ.
5. ಭಾಷಾ ಜ್ಞಾನ
ವಿದ್ಯಾರ್ಥಿಗಳು ತಮ್ಮ ಭಾಷೆಯ ಜತೆಗೆ ಇತರ ಭಾಷಾ ಕಲಿಕೆಗೂ ಆದ್ಯತೆ ನೀಡಬೇಕು. ಇದರಿಂದ ಜ್ಞಾನ ಹೆಚ್ಚಲು ಸಾಧ್ಯ. ಜತೆಗೆ ಕಲಿತಿರುವ ಭಾಷೆಯಲ್ಲೂ ಉತ್ತಮ ಪರಿಣತಿ ಅಗತ್ಯ.
6. ಕೇಳಿ ತಿಳಿದುಕೊಳ್ಳುವ ಅಭ್ಯಾಸ
ಗೊತ್ತಿಲ್ಲದೆ ಇರುವ ವಿಷಯಗಳನ್ನು ಕೇಳಿ ತಿಳಿದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಇದಕ್ಕಾಗಿ ಮುಜುಗರ ಪಡುವುದರಿಂದ ಯಾವುದೇ ವಿಷಯ ತಿಳಿದುಕೊಳ್ಳಲು ಅಸಾಧ್ಯ. ಗೊತ್ತಿಲ್ಲದೆ ಇದ್ದನ್ನು ಕೇಳಿ ತಿಳಿದುಕೊಳ್ಳುವುದು ಉತ್ತಮ ವಿದ್ಯಾರ್ಥಿಯ ಲಕ್ಷಣ.
7. ಸಾಮಾನ್ಯ ಜ್ಞಾನ
ಸಾಮಾನ್ಯ ಜ್ಞಾನ ಇಂದಿನ ಆಧುನಿಕ ಕಾಲದಲ್ಲಿ ಪ್ರಮುಖ ಅಗತ್ಯ. ಯಾವುದೇ ಕ್ಷೇತ್ರಕ್ಕೆ ಹೋಗುವುದಾದರೂ ಪ್ರಸಕ್ತ ವಿಷಯಗಳ ಕುರಿತು ಮಾಹಿತಿ ಅಗತ್ಯ.
ಕೌಶಲ ಮೈಗೂಡಿಸಿಕೊಳ್ಳಿ
ಅಂಕಗಳ ಜತೆಗೆ ಉತ್ತಮ ಕೌಶಲಗಳು ಅಗತ್ಯವಾಗಿದೆ. ಪಾಠಗಳ ಜತೆಗೆ ಕೌಶಲಗಳನ್ನು ಬೆಳೆಸುವುದರಿಂದ ಸುಲಭವಾಗಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಡಬಹುದು. ಪಾಠಗಳ ಜತೆಗೆ ಪ್ರಸಕ್ತ ವಿಷಯಗಳು,ಕೌಶಲಗಳನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ. ಕೇವಲ ಅಂಕಗಳಿಂದ ಇಂದು ಯಾವುದೇ ಕ್ಷೇತ್ರಗಳಲ್ಲೂ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅಂಕಗಳ ಜತೆಗೆ ಕೌಶಲಗಳನ್ನು ಬೆಳೆಸಿಕೊಂಡರೆ ಉತ್ತಮ ವಿದ್ಯಾರ್ಥಿಯಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು
Mangaluru: ಕರಾವಳಿ ಖಗೋಳ ಉತ್ಸವ; ಉಲ್ಕಾ ತುಣುಕು, ನಕ್ಷತ್ರ ವೀಕ್ಷಣೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.