ಜ್ಞಾನ ಸಾಮರ್ಥ್ಯ ವೃದ್ಧಿಗೆ ಕ್ವಿಝ್
Team Udayavani, Jan 22, 2020, 4:23 AM IST
ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸುವ ಮತ್ತು ಜ್ಞಾನದ ಮಟ್ಟವನ್ನು ಪರೀಕ್ಷಿಸುವ ಸ್ಪರ್ಧೆಗಳಲ್ಲಿ ರಸಪ್ರಶ್ನೆ (ಕ್ವಿಝ್) ಸ್ಪರ್ಧೆಯೂ ಒಂದು. ಗ್ರಹಿಸಿದ ಮಾಹಿತಿ, ಓದಿ ತಿಳಿದ ವಿಚಾರಗಳು, ಸ್ಮರಣೆಯಲ್ಲಿ ಉಳಿಸಿಕೊಂಡದ್ದು- ಇವೆಲ್ಲದರ ಕುರಿತು ಪ್ರಶ್ನೆಯನ್ನು ಕೇಳಿದಾಕ್ಷಣ ಉತ್ತರಿಸುವ ಚಾಣಾಕ್ಷತನಕ್ಕೆ ನಮ್ಮನ್ನು ಸಿದ್ಧಗೊಳಿಸುವುದು ರಸಪ್ರಶ್ನೆ ಸ್ಪರ್ಧೆಗಳು.
ಇತ್ತೀಚಿನ ದಿನಗಳಲ್ಲಿ ಶಾಲೆ-ಕಾಲೇಜುಗಳಲ್ಲಿ ಪಠ್ಯಕ್ರಮವನ್ನು ಮುಗಿಸುವುದೇ ಸವಾಲಾಗಿ ರುವಾಗ ರಸಪ್ರಶ್ನೆಯಂತಹ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸುವ ಕ್ರಮ ತೀರಾ ಕಡಿಮೆ. ಆಗಾಗ ರಸಪ್ರಶ್ನೆ ಕೇಳುವಿಕೆಯನ್ನು ಸ್ಪರ್ಧಾ ರೂಪದಲ್ಲಿ ಆಯೋಜಿಸುವುದರಿಂದ ಇದು ವಿದ್ಯಾರ್ಥಿಗಳನ್ನು ಒತ್ತಡದಿಂದ ಮುಕ್ತಗೊಳಿ ಸುತ್ತದೆಂಬುದರಲ್ಲಿ ಎರಡು ಮಾತಿಲ್ಲ. ಅಧ್ಯಾಪಕರು ಹಮ್ಮಿಕೊಳ್ಳುವ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳೂ ಮುಕ್ತವಾಗಿ ಭಾಗವಹಿಸುತ್ತಾರೆ. ಏಕೆಂದರೆ, ಇದು ಕುತೂಹಲದ ಮತ್ತು ಬುದ್ಧಿಗೆ ಕಸರತ್ತು ನೀಡುವ ಆಟ, ಹಾಗಾಗಿ ವಿದ್ಯಾರ್ಥಿಗಳು ಈ ಸ್ಪರ್ಧೆಯನ್ನು ಆಟದಂತೆ ಸಂಭ್ರಮಿಸುತ್ತಾರೆ.
ಜ್ಞಾನವರ್ಧನೆ
ಮೊದಲೇ ಹೇಳಿದಂತೆ ರಸಪ್ರಶ್ನೆ ಆಗಾಗ ಹಮ್ಮಿಕೊಳ್ಳುವುದರಿಂದ ಇದು ವಿದ್ಯಾರ್ಥಿಗಳ ಜ್ಞಾನ ವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಠ್ಯದಲ್ಲಿನ ಅಂಶಗಳನ್ನೇ ರಸಪ್ರಶ್ನೆ ರೂಪದಲ್ಲಿ ಕೇಳಿ ದರೆ, ಒಂದು ವೇಳೆ ಆತ ತಪ್ಪು ಉತ್ತರ ನೀಡಿದರೂ,
ಮುಂದೆ ಸರಿ ಉತ್ತರ ತಿಳಿಸಿದ ಮೇಲೆ ಆ ಉತ್ತರ ಆತನ ನೆನಪಿನಲ್ಲಿ ಸದಾಕಾಲ ಉಳಿಯುತ್ತದೆ. ಪರೀಕ್ಷೆಯ ದೃಷ್ಟಿಯಿಂದ ಪಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಂಡರೆ, ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ವರ್ಧನೆಗೆ ಪಠ್ಯರಹಿತ, ಪ್ರಪಂಚದ ಆಗು ಹೋಗುಗಳನ್ನು ತಿಳಿದುಕೊಳ್ಳಲೂ ಅವಕಾಶವೂ ಹೌದು.
ಕ್ವಿಜ್ ವೀಕ್ಷಣೆಯಿಂದ ಜ್ಞಾನವರ್ಧನೆ
ಟಿವಿ, ಪತ್ರಿಕೆಗಳಲ್ಲಿ ಮೆದುಳಿಗೆ ಕೆಲಸ ಕೊಡುವ ರಸಪ್ರಶ್ನೆಗಳು ಪ್ರಕಟವಾಗುತ್ತಲೇ ಇರುತ್ತವೆ. ಇವನ್ನೇ ಆಯ್ದುಕೊಂಡು ವಿದ್ಯಾರ್ಥಿಗಳ ಚುರುಕುತನಕ್ಕೆ ಕೆಲಸ ಕೊಡುವ ಕೆಲಸವನ್ನು ಅಧ್ಯಾಪಕರು ಮಾಡಬಹುದು.
ಶಾಲೆ, ಕಾಲೇಜು, ಅಂತರ್‌ಶಾಲಾ, ಕಾಲೇಜು ಮಟ್ಟಗಳಲ್ಲಿ, ತಾಲೂಕು, ಜಿಲ್ಲಾ, ರಾಜ್ಯ ಮಟ್ಟಗಳಲ್ಲಿ ರಸಪ್ರಶ್ನೆ ಸ್ಪರ್ಧೆಗಳು ನಡೆಯುತ್ತಲಿರುತ್ತವೆ. ಇಂಥವು ಗಳಿಗೆ ಆಯ್ದ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವ ಮೂಲಕವೂ ಅವರ ಜ್ಞಾನವೃದ್ಧಿಗೆ ಶಿಕ್ಷಕರು ಪ್ರಯತ್ನಿಸಬಹುದು.
ಕೌಶಲಾಭಿವೃದ್ಧಿಗೆ ಪೂರಕ
ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸೃಜನಶೀಲ ಪ್ರತಿಭೆಗಳು ರಸಪ್ರಶ್ನೆಯ ಮೂಲಕ ಹೊರ ಬರಬಹುದು. ಹಾಡಿನ ಮೂಲಕ, ಪ್ರಶ್ನೆಯ ಮೂಲಕ ಹೀಗೆ ನಾನಾ ಮಾದರಿಯಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಪ್ರಯೋಗಿಸಿ ನೋಡಬಹುದು. ದಡ್ಡ ವಿದ್ಯಾರ್ಥಿಯೋರ್ವನನ್ನೂ ಸರಾಸರಿ ಅಂಕ ಪಡೆಯುವ ನಿಟ್ಟಿನಲ್ಲಿ ತಯಾರುಗೊಳಿಸುವ ಶಕ್ತಿ ರಸಪ್ರಶ್ನೆಗಿದೆ. ಕ್ವಿಝ್ ಎನ್ನುವುದು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅವರಿಗೆ ಹೊಸಹೊಸ ಅವಕಾಶಗಳನ್ನು ತೆರೆದಿಡುತ್ತದೆ. ಹೀಗಾಗಿ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಇಂಥ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು.
ಪಠ್ಯೇತರ ಆಸಕ್ತಿ
ತರಗತಿಗಳಲ್ಲೂ ಆಯಾ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ, ಸಣ್ಣ ಬಹುಮಾನವನ್ನು ನೀಡುವ ಕೆಲಸ ಅಧ್ಯಾಪಕರು ಮಾಡಬೇಕು. ಬಹುಮಾನ ನಗದು ಆದರೂ ಸರಿಯೇ, ಚಾಕಲೇಟ್ ಆದರೂ ಸರಿಯೇ. ಇವೆಲ್ಲ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡುತ್ತದೆ. ಶಾಲಾ ಹಂತದಲ್ಲಿ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ವಿದ್ಯಾರ್ಥಿಯೊಬ್ಬ ಸಾಮಾನ್ಯ ಜ್ಞಾನ ಬೆಳೆಸಿಕೊಂಡು ಮುಂದೆ ಐಎಎಸ್ ಅಧಿಕಾರಿಯಾಗಿ ಬೆಳೆಯುವ ಅವಕಾಶವನ್ನೂ ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.