ಸ್ಪರ್ಧಾತ್ಮಕ ಪರೀಕ್ಷೆಗೆ ರೆಡಿಯಾಗಿ
Team Udayavani, Jul 3, 2019, 5:00 AM IST
ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸಿನ ಜೀವನ ಪ್ರತಿಯೊಬ್ಬರ ಕನಸು. ಅದನ್ನು ಸಾಕಾರಗೊಳಿಸಲು ಒಂದು ಉತ್ತಮ ಉದ್ಯೋಗವನ್ನು ಆಯ್ಕೆ ಮಾಡುವುದು ಮತ್ತು ಸೇರಿಕೊಳ್ಳುವುದು ಬಹಳ ಮುಖ್ಯ. ಅದರಲ್ಲಿಯೂ ಸರಕಾರಿ ಉದ್ಯೋಗ ಒಂದು ಉತ್ತಮ ಆಯ್ಕೆ. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ಹೆಚ್ಚುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿ ಅತ್ಯಗತ್ಯ. ಇವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದಾದರೆ ಐಎಎಸ್ ವಿಷಯವನ್ನು ಮೊದಲು ಅರಿಯೋಣ.
ಐಎಎಸ್: ಕೇಂದ್ರ ಲೋಕಸೇವಾ ಆಯೋಗವು ನಡೆಸುವ ನಾಗರಿಕ ಸೇವಾ ಪರೀಕ್ಷೆಗಳು ಬಹಳ ಮುಖ್ಯ ಹಾಗೂ ಕಠಿನ ಪರೀಕ್ಷೆ. ಅದೇ ರೀತಿ ದೇಶದ ಅತ್ಯುನ್ನತ ಮಟ್ಟದ ಹುದ್ದೆ ಅಲಂಕರಿಸಬೇಕಾದ ಕ್ಷೇತ್ರ ಕೂಡ. ಇದರಲ್ಲಿ 24 ಸೇವೆಗಳಿದ್ದು, (ಐಎಎಸ್, ಐಪಿಎಸ್, ಐಎಫ್‌ಎಸ್, ಐಆರ್‌ಎಸ್, ಐಎಎಎಸ್ ಇತ್ಯಾದಿ) ಪ್ರತೀವರ್ಷ 1,000 ಹುದ್ದೆಗಳಿಗೆ ಅಧಿಸೂಚನೆ ನೀಡಲಾಗುತ್ತಿದೆ. ಅಲ್ಲದೆ ಇಂಡಿಯನ್ ಎಕಾನೊಮಿಕ್ ಸರ್ವಿಸ್, ಇಂಡಿಯನ್ ಮೆಡಿಕಲ್ ಸರ್ವಿಸ್, ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್ ಸೇರಿದಂತೆ ಇನ್ನೂ 30ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಕೆಎಸ್‌ಎಸ್: ಕರ್ನಾಟಕ ಲೋಕಸೇವಾ ಆಯೋಗದಿಂದ ಹತು ್ತಸಾವಿರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಗಜೆಟೆಡ್ ಆಫೀಸರ್, ಎಫ್.ಡಿ.ಎ, ಎಸ್.ಡಿ.ಎ, ಪಿ.ಡಿ.ಒ, ಪಂಚಾಯತ್ ಕಾರ್ಯದರ್ಶಿ, (ಗಜೆಟೆಡ್ ಆಫೀಸರ್, ಟೆಕ್ನಿಕಲ್) ಇತ್ಯಾದಿ.
ವಯೋಮಿತಿ ಹೀಗಿರಬೇಕು
ಯುಪಿಎಸ್‌ಸಿ ಪರೀಕ್ಷೆ ಬರೆಯುವುದಾದರೆ ಸಾಮಾನ್ಯ ಕೆಟಗರಿಯಲ್ಲಿ 21 ವರ್ಷದಿಂದ 32 ವರ್ಷದವರೆಗೆ ಒಟ್ಟು 6 ಸಲ ಅವಕಾಶವಿದೆ. ಒಬಿಸಿಯವರಿಗೆ 21 ವರ್ಷದಿಂದ 35 ವರ್ಷದವರೆಗೆ 9 ಸಲ ಅವಕಾಶವಿದೆ. ಎಸ್‌ಸಿ/ಎಸ್‌ಟಿಯವರಿಗೆ 21 ವರ್ಷದಿಂದ 37 ವರ್ಷದವರೆಗೆ 16 ಸಲ ಪರೀಕ್ಷೆ ಬರೆಯಲು ಅವಕಾಶವಿದೆ. ಕೆಪಿಎಸ್‌ಸಿಯಲ್ಲಿ ಸಾಮಾನ್ಯ ಕೆಟಗಿರಿಯಲ್ಲಿ 21 ವರ್ಷದ ಅನಂತರ 35 ವರ್ಷದ ಒಳಗೆ 5 ಸಲ, ಓಬಿಸಿಯವರಿಗೆ 21 ವರ್ಷದಿಂದ 38 ವರ್ಷದವರೆಗೆ 8 ಸಲ ಹಾಗೂ ಎಸ್‌ಸಿ/ಎಸ್‌ಟಿಯವರಿಗೆ 21 ವರ್ಷದಿಂದ 40 ವರ್ಷದವರೆಗೆ 19 ಸಲ ಪರೀಕ್ಷೆ ಬರೆಯಲು ಅವಕಾಶವಿದೆ. ಅಭ್ಯರ್ಥಿಯು ಕಾನೂನು ರೀತಿಯ ಸ್ಥಾಪಿತವಾದ ಯಾವುದೇ ವಿ.ವಿ.ಯ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಪರೀಕ್ಷೆ ಸಂದರ್ಭ ಮೀಸಲಾತಿಗಳು ಲಭ್ಯವಿದೆ. ಜಾತಿ ಮೀಸಲಾತಿಯಡಿಯಲ್ಲಿ ಪ.ಜಾ/ಪ.ಪಂ. ಸೇರಿದ ಅಭ್ಯರ್ಥಿಗಳಿಗೆ, ಹಿಂದುಳಿದ ವರ್ಗಗಳ ಪ್ರವರ್ಗ-2 (ಎ) ಪ್ರವರ್ಗ 2 (ಬಿ), ಪ್ರವರ್ಗ 3 (ಎ) ಮತ್ತು ಪ್ರವರ್ಗ 3(ಬಿ) ಮೀಸಲಾತಿಯ ಅಭ್ಯರ್ಥಿಗಳಿಗೆ ಮೀಸಲಾತಿ ದೊರೆಯಲಿದೆ.
ಮೀಸಲಾತಿಯಿದೆ
ಕೆಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ. ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ರೀತಿ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವವರು ಅರ್ಹರು. ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮೀಸಲಾತಿ ಲಭ್ಯವಿದೆ. ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ, ಮೊಹರು ಮತ್ತು ನಿಗದಿತ ನಮೂನೆಯಲ್ಲಿ ಪಡೆದಿಟ್ಟುಕೊಂಡಿರಬೇಕು. ಮಾಜಿ ಸೈನಿಕರಿಗೆ ಮೀಸಲಾತಿ ಇದೆ. ಅಂದರೆ, ಸಶಸ್ತ್ರ ದಳಗಳಾದ ನಿಯಮಿತ ಭೂದಳ, ನೌಕಾದಳ ಮತ್ತು ವಾಯು ದಳದಲ್ಲಿ ಯಾವುದೇ ಶ್ರೇಣಿಯಲ್ಲಿ (ಯೋಧ ಅಥವಾ ಯೋಧನಾಗಿಲ್ಲದೇ) ಸೇವೆ ಸಲ್ಲಿಸಿರುವ ವ್ಯಕ್ತಿಯು ಅರ್ಹತೆ ಪಡೆಯುತ್ತಾರೆ. ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾತಿ ಲಭ್ಯವಿದೆ. ಇದರನ್ವಯ ಶೇ.40ಕ್ಕಿಂತ ಕಡಿಮೆ ಇಲ್ಲದಂತಹ ಅಂಗವಿಕಲತೆಯುಳ್ಳ ಅಭ್ಯರ್ಥಿಗಳು ಮಾñ್ರ ಈ ಮೀಸಲಾತಿ ಪಡೆಯಬಹುದು.
ಪ್ರತೀ ವರ್ಷ 12ರಿಂದ 15 ಸ್ಪರ್ಧಾತ್ಮಕ ಪರೀಕ್ಷೆ ಅವಕಾಶ
ಸರಕಾರಿ ಉದ್ಯೋಗದ ಕುರಿತಂತೆ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಪಂಪ್‌ವೆಲ್ನ ಸತ್ಯಂ ಆರ್ಕೆಡ್‌ನಲ್ಲಿರುವ ಸರ್ವಜ್ಞ ಐಎಎಸ್ ಅಕಾಡೆಮಿಯ ಸುರೇಶ್ ಎಂ.ಎಸ್. ಅವರು ಹೇಳುವ ಪ್ರಕಾರ, ಪ್ರತಿ ವರ್ಷ ಸುಮಾರು 12-15 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (ಐ.ಎ.ಎಸ್., ಕೆ.ಎ.ಎಸ್., ಬ್ಯಾಂಕಿಂಗ್., ರೈಲ್ವೇ., ಆರ್.ಬಿ.ಐ., ಸರಕಾರದ ಸಾಮಾನ್ಯ ಪರೀಕ್ಷೆಗಳು ಇತ್ಯಾದಿ) ಬರೆಯಲು ಅವಕಾಶಗಳಿವೆ. ನಿರಂತರ ತಯಾರಿ ನಡೆಸಿದರೆ ಯಾವುದಾದರೊಂದು ಪರೀಕ್ಷೆಯಲ್ಲಿ ಯಶಸ್ಸು ನಿಶ್ಚಿತ. ಇಂತಹ ಪರೀಕ್ಷೆಗಳಲ್ಲಿ ಯಶಸ್ಸಿಗೆ ಕನಿಷ್ಠ 2 ವರ್ಷಗಳ ತಯಾರಿ ಅತ್ಯಗತ್ಯ. 500 ದಿನಗಳ ಪ್ರಚಲಿತ ವಿದ್ಯಮಾನಗಳ ನೋಟ್ಸ್, ಪ್ರತಿನಿತ್ಯ ಬರೆದಿಡಬೇಕಾಗುತ್ತದೆ. ಎಲ್ಲ ಪುಸ್ತಕಗಳು ಮತ್ತು ಮಾಸಿಕ ಪತ್ರಿಕೆಗಳ ಪಟ್ಟಿ ಮಾಡಿ ಅದನ್ನು 10-12 ತಿಂಗಳುಗಳಲ್ಲಿ ಓದಿಕೊಳ್ಳಬೇಕಾಗುತ್ತದೆ. ಪ್ರತಿನಿತ್ಯ ದಿನಪತ್ರಿಕೆ, ಮತ್ತು ಅಂತರ್ಜಾಲಗಳಲ್ಲಿ ಪ್ರಚಲಿತ ವಿದ್ಯಮಾನ ಮತ್ತು ಪೂರಕ ವಿಷಯಗಳನ್ನು ಸಂಗ್ರಹಿಸಲು ಸಮಯ ನಿಗದಿಮಾಡಿ ನಿರಂತರ ನೋಟ್ಸ್ ಮಾಡಬೇಕು. ಒಂದು ವರ್ಷದ ನಿರಂತರ ತಯಾರಿಯಾದ ಮೇಲೆ ಮಾದರಿ ಪರೀಕ್ಷೆಗಳನ್ನು ಬರೆಯಬೇಕು. ಆನ್‌ಲೈನ್ ಅಥವಾ ಕೋಚಿಂಗ್ ಸೆಂಟರ್‌ಗಳಲ್ಲಿ ಬರೆದರೆ ಒಳ್ಳೆಯದು. ಹೈಸ್ಕೂಲು ಮಟ್ಟದಿಂದ ತಯಾರಿ ಪ್ರಾರಂಭಿಸುವುದು ಉತ್ತಮ ಎನ್ನುತ್ತಾರೆ ಅವರು.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 2 ವಿಷಯದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಸಾಮಾನ್ಯಜ್ಞಾನ ಮತ್ತು ಆ್ಯಪ್ಟಿಟ್ಯೂಡ್ ಟೆಸ್ಟ್. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳಿಗೆ ಶೇ.80ರಷ್ಟು ಸಾಮಾನ್ಯಜ್ಞಾನ ಮತ್ತು ಶೇ.20ರಷ್ಟು ಅಪ್ಟಿಟ್ಯೂಡ್ ವಿಚಾರಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ. ಬ್ಯಾಂಕಿಂಗ್, ರೈಲ್ವೇಸ್, ಪೋಸ್ಟಲ್, ಎಸ್‌ಎಸ್‌ಸಿ ಮುಂತಾದ ಪರೀಕ್ಷೆಗಳಿಗೆ ಶೇ.80ರಷ್ಟು ಅಪ್ಟಿಟ್ಯೂಡ್, ರೀಸನಿಂಗ್, ಮ್ಯಾಥ್ಸ್ ಸಂಬಂಧಿಸಿದ ಪ್ರಶ್ನೆಗಳು ಹಾಗೂ ಶೇ.20ರಷ್ಟು ಸಾಮಾನ್ಯಜ್ಞಾನ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡು ವಿಷಯಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.