ಫೇಸ್ ಬುಕ್ ನಲ್ಲಿ ನಮ್ಮವರ ಹುಡುಕಾಟ
Team Udayavani, Aug 22, 2018, 3:16 PM IST
ಆಧುನಿಕ ತಂತ್ರಜ್ಞಾನಗಳು ನಮ್ಮನ್ನು ಸ್ಪರ್ಧಾತ್ಮಕ ಜಗತ್ತಿನೆಡೆಗೆ ಒಯ್ಯುತ್ತಿವೆ. ಆದರೆ ನಮ್ಮ ಮೂಲ ನೆಲೆ, ನಮ್ಮವರಿಂದ ದೂರ ಮಾಡುತ್ತಿದೆ ಎಂಬ ವಿಚಾರದ ಕುರಿತು ಸುರಭಿ ಲತಾ ಬರೆದ ‘ಫೇಸ್ ಬುಕ್ ಕಥೆ’ ಮನೋಜ್ಞವಾಗಿ ಮೂಡಿಬಂದಿದೆ. ಸಂಬಂಧಗಳಲ್ಲಿ ಉಂಟಾಗಿರುವ ದೂರವನ್ನು ಆಧುನಿಕ ತಂತ್ರಜ್ಞಾನದ ಎಳೆಯೊಂದಿಗೆ ಬರೆದಿರುವ ಈ ಸಣ್ಣ ಕಥೆ ಮನಕಲಕುವಂತೆ ಮಾಡುತ್ತದೆ.
ಘಟನೆ 1
ಇಬ್ಬರು ಮುದುಕರು ಲ್ಯಾಪ್ ಟಾಪ್ ಅಂಗಡಿಗೆ ಬರುತ್ತಾರೆ. ಒಂದು ಒಳ್ಳೆಯ ಲ್ಯಾಪ್ ಟಾಪ್ ಕೇಳುತ್ತಾರೆ. ಲ್ಯಾಪ್ ಟಾಪ್ ಖರೀದಿಸಿದ ಮುದುಕರು ಇಂಟರ್ನೆಟ್ ಪ್ಯಾಕ್ ಹಾಕುವಂತೆ ಹೇಳುತ್ತಾರೆ? ಅಂಗಡಿಯ ಹುಡುಗನಿಗೆ ಆಶ್ಚರ್ಯ. ಈ ಮುದುಕರಿಗೆ ಏಕೆ ಲ್ಯಾಪ್ ಟಾಪ್? ಇವರು ಇದರಿಂದ ಏನು ಮಾಡುತ್ತಾರೆ? ಇಂಟರ್ನೆಟ್‌ನ ಅಗತ್ಯ ಏನಿದೆ?
ಘಟನೆ 2
ಇಂಟರ್ನೆಟ್ ಹಾಕಿಸಿದ ಬಳಿಕ ಅಂಗಡಿಯ ಹುಡುಗನ ಬಳಿ ಬಂದ ಮುದುಕರು ನಿನಗೆ ಫೇಸ್ ಬುಕ್ ಅಕೌಂಟ್ ತೆರೆಯುವುದು ಗೊತ್ತೇ? ಎಂದು ಪ್ರಶ್ನಿಸುತ್ತಾರೆ. ಆತ ಗೊತ್ತಿದೆ ಎನ್ನುತ್ತಾನೆ. ಹಾಗಾದರೆ ನಮಗೊಂದು ಫೇಸ್ ಬುಕ್ ಅಕೌಂಟ್ ತೆರೆದು ಕೊಡುತ್ತೀಯಾ ಎನ್ನುತ್ತಾರೆ. ಆಗ ಹುಡುಗ ಸರಿ ಎಂದು ಲ್ಯಾಪ್ ಟಾಪ್ ಪಡೆದು ಫೇಸ್ ಬುಕ್ ಅಕೌಂಟ್ ಓಪನ್ ಮಾಡುತ್ತಾನೆ. ಯಾರ ಹೆಸರಲ್ಲಿ ಮಾಡಲಿ ಎಂದು ಪ್ರಶ್ನಿಸುತ್ತಾನೆ. ಆಗ ಮುದುಕರು ಯಾರಾದರೊಬ್ಬರು ಫೇಮಸ್ ಹುಡುಗಿಯ ಹೆಸರಲ್ಲಿ ಮಾಡು ಎನ್ನುತ್ತಾರೆ. ಆಗ ಹುಡುಗನಿಗೆ ಇನ್ನಷ್ಟು ಅಚ್ಚರಿ. ಫೇಕ್ ಅಕೌಂಟ್ ಎನ್ನುತ್ತಾ ಆಶ್ಚರ್ಯ ವ್ಯಕ್ತಪಡಿಸುತ್ತಾನೆ.
ಘಟನೆ 3
ಫೇಸ್ ಬುಕ್ ನಲ್ಲಿ ಎಲ್ಲರೂ ತಮ್ಮ ಫ್ಯಾಮಿಲಿ ಫೋಟೋ ಹಾಕ್ತಾರಂತೆ. ನಮ್ಮನ್ನು ನೋಡಲು ಕಷ್ಟವಾಗುತ್ತೆ ಅಂತ ಹೆಂಡತಿ ಹೇಳಿದ್ದಕ್ಕೆ ಮಗ ಹೆಂಡತಿ, ಮಕ್ಕಳೊಂದಿಗೆ ದೂರದ ಊರಿಗೆ ಹೋದ. ಅವರನ್ನು ನೋಡಬೇಕು ಎಂದೆನಿಸುತ್ತಿದೆ. ಫೇಸ್ ಬುಕ್‌ನಲ್ಲಿ ಅವರು ಹಾಕಿರೋ ಫೋಟೋದಲ್ಲಾದರೂ ಅವರನ್ನು ನೋಡಬಹುದಲ್ವಾ ಎಂದು ಮುದುಕರು ಹೇಳಿದಾಗ ಹುಡುಗನ ಮುಖದಲ್ಲಿ ಬೇಸರದ ಛಾಯೆ.
ಫೇಸ್ ಬುಕ್, ವಾಟ್ಸಪ್ ಯುಗದಲ್ಲಿ ನಮಗೆ ಅರಿವಿಲ್ಲದಂತೆಯೇ ನಾವು ನಮ್ಮವರಿಂದ ಮರಳಿ ವಾಪಸ್ ಸೇರಲಾಗದಷ್ಟು ದೂರ ಹೋಗುತ್ತಿದ್ದೇವೆ. ಸಂಬಂಧಗಳ ಮೌಲ್ಯಗಳು ಕುಸಿಯುತ್ತಿವೆ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಮುಂದೊಂದು ದಿನ ನಾವೂ ಪರಿತಪಿಸಬೇಕಾಗುವುದು ಎನ್ನುವುದನ್ನು ಮನೋಜ್ಞವಾಗಿ ಚಿತ್ರಿಸಿರುವ ಲೇಖಕರ ಈ ಕಥೆ ಪ್ರತಿಯೊಬ್ಬರೂ ಓದಲೇ
ಬೇಕು ಎನ್ನುವಂತಿದೆ.
ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.