ಸಿನೆಮಾಸಕ್ತರಿಗೆ ಸೆಟ್ ಡಿಸೈನಿಂಗ್ ಕೋರ್ಸ್
Team Udayavani, Sep 4, 2019, 5:00 AM IST
ಸಿನೆಮಾ ಕ್ಷೇತ್ರದಲ್ಲಿ ಕ್ರಿಯೇಟಿವಿಗೆ ಹೆಚ್ಚು ಆದ್ಯತೆ. ಇಲ್ಲಿ ಬೇಕಾಗಿರುವ ಕ್ರಿಯೇಟಿವಿಟಿ ನಿಮ್ಮಲ್ಲಿದ್ದರೆ ಇಲ್ಲಿ ಅವಕಾಶ ಧಾರಳ, ಒಂದು ಸಿನೆಮಾ ತೆರೆಯ ಮೇಲೆ ಬಹು ಆಕರ್ಷಕವಾಗಿ ಮೂಡಿ ಬರಲು ಅನೇಕ ವಿಭಾಗಗಳು ಕೆಲಸ ಮಾಡುತ್ತವೆ. ಅಂತಹ ವಿಭಾಗದಲ್ಲಿ ಸೆಟ್ ಡಿಸೈನಿಂಗ್ ಕೂಡ ಒಂದು. ಸಿನೆಮಾದ ಕಥೆಗೆ ಬೇಕಾದಂತಹ ಲೊಕೇಶನ್‌ಗಳನ್ನು ಸೆಟ್ ಡಿಸೈನಿಂಗ್ ತಂಡ ಮಾಡಿಕೊಡುತ್ತದೆ. ಭಾರತದಲ್ಲಿ ಐತಿಹಾಸಿಕ, ಪೌರಾಣಿಕ ಸಿನೆಮಾ ಮಾಡುವಾಗ ಇಲ್ಲಿ ಸೆಟ್ ಡಿಸೈನರ್‌ಗಳ ಸೃಜನಾತ್ಮಕ ಮುಖ್ಯವಾಗುತ್ತದೆ. ಚಿತ್ರ ನೋಡುಗನನ್ನು ಅದೇ ಕಾಲಘಟ್ಟಕ್ಕೆ ಕೊಂಡೊಯ್ಯುವುದು ಸೆಟ್ ಡಿಸೈನರ್‌ನ ಕೆಲಸ. ಸದ್ಯ ಸೆಟ್ ಡಿಸೈನಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಕೋರ್ಸ್‌ಗಳು ಲಭ್ಯವಿವೆ.
ಸೆಟ್ ಡಿಸೈನಿಂಗ್ ಕೆಲಸ ಹೇಗೆ?
ಸ್ಕ್ರಿಪ್ಟ್ಗಳನ್ನು ಅಧ್ಯಯನ ಮಾಡಿ ಮತ್ತು ನಿರ್ದೇಶಕರೊಂದಿಗೆ ವಿಷಯಗಳನ್ನು ಚರ್ಚಿಸಿ ವೇಷಭೂಷಣ, ಮೇಕಪ್, ರಂಗಪರಿಕರಗಳ ಮತ್ತು ಬೆಳಕಿನ ವಿನ್ಯಾಸಕರ ಜತೆ ಆಲೋಚನೆಗಳನ್ನು ತಿಳಿಸಿ, ದೃಶ್ಯಗಳನ್ನು ಸೆರೆ ಹಿಡಿಯಲು ಲಭ್ಯವಿರುವ ಬಜೆಟ್‌ನಲ್ಲಿ ಪರಿಣಾಮಕಾರಿಯಾಗಿ ಹೇಗೆ ತೋರಿಸಬಹುದೆಂದು ‘ಸ್ಟೋರಿ ಬೋರ್ಡ್’ (ದೃಶ್ಯಗಳ ಸ್ಕೆಚ್) ಮೂಲಕ ತೋರಿಸಿ ಕಾರ್ಯರೂಪಕ್ಕೆ ತರುವುದಾಗಿದೆ.
ಸೆಟ್ ಡಿಸೈನರ್ ಆಗಲು ಏನು ಮಾಡಬೇಕು?
ಒಳಾಂಗಣ ವಿನ್ಯಾಸ, ಲಲಿತ ಕಲೆ, 3ಡಿ ವಿನ್ಯಾಸ, ವಾಸ್ತುಶಿಲ್ಪ ಈ ವಿಷಯದಲ್ಲಿ ವಿನ್ಯಾಸ ಕೌಶಲ ಮತ್ತು ಸೃಜನಶೀಲ ದೃಷ್ಟಿಯನ್ನು ಹೊಂದಿರುವಿರಾದರೆ ನೀವು ಸೆಟ್ ಡಿಸೈನಿಂಗ್ ಕೋರ್ಸ್‌ಗಳನ್ನು ಮಾಡಬಹುದು.
ಸೆಟ್ ಡಿಸೈನರ್‌ಗೆ ಇರಬೇಕಾದ ಪ್ರಮುಖ ಲಕ್ಷಣಗಳು
•ಸಂಬಂಧಿತ ಕೌಶಲಗಳು
•ವಿವರಗಳಿಗೆ ಗಮನ
•ಸಂವಹನ ಕೌಶಲ
•ಸೃಜನಶೀಲತೆ
•ಸಮಸ್ಯೆ ಪರಿಹರಿಸುವಂಥ ತಾಳ್ಮೆ
•ತಾಂತ್ರಿಕ ಸಾಮರ್ಥ್ಯ
•ಸಮಯ ನಿರ್ವಹಣೆ
ಕೋರ್ಸ್‌ನ ವಿವರ
ಸೆಟ್ ಡಿಸೈನಿಂಗ್ ಕೋರ್ಸ್ ಭಾರತದ ಪ್ರಮುಖ ನಗರಗಳಲ್ಲಿ ಇದೆ. ಅವುಗಳಲ್ಲಿ ಮುಂಬಯಿನ ಮಲಾಡ್ ವೆಸ್ಟ್, ಪುಣೆಯ ನವಿ ಪೇತ್, ಹೈದರಾಬಾದ್ ಅಮೀರ್ ಪೇಟ್, ಬೆಂಗಳೂರು ಮುಂತಾದ ನಗರಗಳಲ್ಲಿ ಸೆಟ್ ಡಿಸೈನ್‌ಗೆ ಸಂಬಂಧಪಟ್ಟ ಕೋರ್ಸ್‌ಗಳು ಲಭ್ಯವಿದೆ. ಈ ಕೋರ್ಸ್ 1, 2 ವರ್ಷದ ಅವಧಿಯಾಗಿದ್ದು, 59,000 ದಿಂದ ಹಿಡಿದು 1 ಲಕ್ಷದವರೆಗೆ ಫೀಸ್‌ಗಳವರೆಗೆ ಇದೆ. ರಂಗಭೂಮಿ ಕ್ಷೇತ್ರ, ಸಿನೆಮಾ ಕ್ಷೇತ್ರ, ಜಾಹೀರಾತು ಕ್ಷೇತ್ರಗಳಲ್ಲಿ ಸೆಟ್ ಡಿಸೈನಿಂಗ್‌ಗೆ ಧಾರಳ ಅವಕಾಶವಿದೆ.
ಈ ಕ್ಷೇತ್ರದಲ್ಲಿ ನಿಮ್ಮ ಕೌಶಲಗಳಿಗೆ ಆಧಾರಿತವಾಗಿ ಸಂಬಳ ದೊರಕುವುದು. ಒಮ್ಮೆ ಈ ಕ್ಷೇತ್ರದಲ್ಲಿ ಗೆದ್ದರೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಇವೆಲ್ಲಾ ನಿಂತಿರುವುದು ನಿಮ್ಮ ಕ್ರಿಯೇಟಿವಿಟಿಯ ಆಧಾರದಲ್ಲಿ .
•ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.