ತನ್ನನ್ನು ತಾನು ಹುಡುಕುವ ಶಿಕಾರಿ
Team Udayavani, Nov 13, 2019, 4:00 AM IST
ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು ಅರ್ಥಪೂರ್ಣವಾಗಿ ಒಂದೊಂದೇ ಹಂತದಲ್ಲಿ ವಿವರಿಸುತ್ತಾ ಹೋಗಿರುವುದನ್ನು ನಾವು ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯಲ್ಲಿ ಕಾಣಬಹುದಾಗಿದೆ.
ಶಿಕಾರಿ ಚಿತ್ತಾಲರ ತುಂಬಾ ಜನಪ್ರಿಯ ಕಾದಂಬರಿಗಳಲ್ಲಿ ಕೂಡ ಇದು ಒಂದಾಗಿದ್ದು. ಕಾದಂಬರಿಯ ನಿರೂಪಣೆಯೂ ಸೊಗಸಾಗಿದ್ದು, ಓದಿನಡೆಗೆ ಸೆಳೆಯುತ್ತದೆ. ಸ್ವಾರ್ಥ, ಸ್ವ ರಕ್ಷಣೆಯ ಜತೆಗೆ ಅಧಿಕಾರದ ದವಲತ್ತುಗಳು ಹೇಗೆ ಮನುಷ್ಯನ್ನು ನಾಶಪಡಿಸುತ್ತವೆ ಎಂಬುದನ್ನು ಈ ಕಾದಂಬರಿಯಲ್ಲಿ ವ್ಯಕ್ತವಾಗಿದೆ. ತನ್ನ ತಂದೆ ತಾಯಿ, ಸಂಬಂಧಗಳಿಗಿರುವ ಬೆಲೆಯನ್ನು ತುಂಬಾ ನಾಜೂಕಾಗಿ ಬಿಂಬಿಸಿರುವುದನ್ನು ಕಾಣಬಹುದು, ವೈವಾಹಿಕ ಜೀವನ, ತೊಡಕುಗಳು ಹೇಗೆ ಮನುಷ್ಯನ್ನು ಕೂಪಕ್ಕೆ ತಳ್ಳುತ್ತವೆ ಎಂದು ಈ ಪುಸ್ತಕದಲ್ಲಿ ಸ್ಪಷ್ಟಪಡಿಸಿದ್ದಾರೆ. ಇವುಗಳಲ್ಲದೇ ಈ ಪುಸ್ತಕ ತುಂಬಾ ಇಷ್ಟವಾಗಲು ಮತ್ತು ವ್ಯಕ್ತವಾದ ಮುಖ್ಯವಾದ ಸಂಗತಿಗಳನ್ನು ಈ ಕೃತಿಯಲ್ಲಿ ಗಮನಿಸಬಹುದಾಗಿದೆ.
ಅಂಶ 1
ನಾಗಪ್ಪನ್ನು ಕೆಲಸದಿಂದ ತೆಗಯಲಾಗಿದೆ. ಈತನೂ ಕೆಲಸದಿಂದ ತೆಗೆದಿರುವುದಕ್ಕೆ ಈತ ಕಾರಣ ಹುಡುಕುತ್ತಿದ್ದಾನೆ. ತನ್ನ ಮನಸ್ಸಿನಲ್ಲಿ ಉದ್ಭವಿಸುವ ಉದ್ವೇಗದಿಂದ ಇದಕ್ಕೆ ಕಾರಣ ಯಾರು? ನಾನೋ ? ಇಲ್ಲವೇ ಮೇಲಾಧಿಕಾರಿಗಳ್ಳೋ ಎಂಬ ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಳ್ಳುತ್ತಿದ್ದಾನೆ.
ಅಂಶ 2
ಒಬ್ಬಂಟಿಯಾದ ನಾಗಪ್ಪನಿಗೆ ತನ್ನೆಲ್ಲ ನೋವುಗಳನ್ನು ದಾಖಲೀಕರಿಸಬೇಕು ಎಂದು ಅವನ ಆಸೆ. ಆದರೆ ಅವನ ಅನಿವಾರ್ಯ ಪರಿಸ್ಥಿತಿಗಳನ್ನು ಅವನನ್ನು ಕೈಕಟ್ಟಿವೆ. ಎಂದಿಗೂ ಸ್ನೇಹಿತನ ಮನೆಗೆ ಹೋಗಬಾರದು ಎಂದು ನಿರ್ಧರಿಸುವ ನಾಗಪ್ಪ ಪರಿಸ್ಥಿತಿ ಮೀರಿ ಅವನ ಮನೆಗೆ ಹೋಗುತ್ತಾನೆ. ಇನ್ನು ಆತ ಪುಸ್ತಕ ಬರೆಯುವ ಆಕಾಂಕ್ಷೆ ಕೈಗೂಡುವುದಿಲ್ಲ. ಸ್ವಾಭಿಮಾನ ಕೈ ಚೆಲ್ಲಿ ನಾಗಪ್ಪ ಕುಳಿತಿರುತ್ತಾನೆ.
ಅಂಶ 3
ತಾನಂದುಕೊಂಡಿರುವ ಗುರಿಯನ್ನು ಮುಟ್ಟಲಾಗದೆ, ಅಲೆಮಾರಿಯಂತೆ ಭಯಬೀತನಾಗಿ ಪ್ರತಿಯೊಂದು ಪ್ರಶ್ನೆಗೂ ಉತ್ತರಗಳನ್ನು ಹುಡುಕುತ್ತಾ ಇಡಿ ಜೀವನ ಹೇಗಿರುತ್ತದೆ ಮತ್ತು ಆತನಲ್ಲಾಗುವ ಬದಲಾವಣೆ ಯಾವೆಲ್ಲಾ ತಾಪತ್ರಯಕ್ಕೆ ಕಾರಣವಾಗುತ್ತದೆ ಎನ್ನುವುದರ ಜತೆಗೆ ತನ್ನನ್ನೇ ತಾನೂ ಸಂಶಯ ಪಡುವಂತೆ ಮಾಡುತ್ತದೆ. ಕೊನೆಗೂ ಉತ್ತರದ ದಕ್ಕದ ಹಲವಾರು ಪ್ರಶ್ನೆಗಳು ಅಳಿದುಳಿದಂತೆ ಕಂಡುಬರುವುದನ್ನು ಈ ಪುಸ್ತಕದಲ್ಲಿ ಕಾಣಬಹುದು.
- ವಿಜಿತಾ, ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.