ಶ್…! ಇದು ಓದುವ ಸ್ಥಳ
Team Udayavani, Mar 18, 2020, 4:07 AM IST
ಪರೀಕ್ಷೆ ಬಂತು ಪರೀಕ್ಷೆ. ಮಾರ್ಚ್ ತಿಂಗಳು ಆರಂಭವಾಯಿತೆಂದರೆ, ಯುಕೆಜಿಯಿಂದ ಹಿಡಿದು ಎಲ್ಲಾ ಮಕ್ಕಳಿಗೆ ಪರೀಕ್ಷೆಯ ಕಾಲ. ಮಕ್ಕಳ ಜತೆ ಪೋಷಕರಿಗೂ ಹೆಚ್ಚು ಟೆನ್ಷನ್. ಏಕಾಗ್ರತೆಯ ಓದಿಗೆ ಕೊಡುವಷ್ಟೇ ಪ್ರಾಮುಖ್ಯವನ್ನು ಓದುವ ವಾತಾವರಣಕ್ಕೂ ನೀಡಬೇಕಾಗಿದೆ.ಇ ದು ಪರೀಕ್ಷಾ ಸಮಯ. ಓದಲಿರುವ ಪುಸ್ತಕದ ಪುಟಗಳ ಗಾತ್ರ ಬೆಳೆಯುತ್ತಿದೆ. ಓದಲಿರುವ ಸಮಯ ಕಡಿಮೆಯಾಗುತ್ತಲೇ ಇದೆ. ಈ ಸೂಚ್ಯ ಸಮಯದಲ್ಲಿ ಪರೀಕ್ಷಾ ತಯಾರಿ, ಓದುವ ಸ್ಥಳ ಹೇಗಿರಬೇಕು ಗೊತ್ತೇ..? ಪರೀಕ್ಷಾ ಒತ್ತಡದ ಸಂದರ್ಭದಲ್ಲಿ, ಸಿಕ್ಕ ಸಿಕ್ಕ ಕಡೆಗಳಲ್ಲಿ ಕೂತು ಪುಟಗಳನ್ನು ನೋಡುವ ಅಭ್ಯಾಸ ಬಹಳಷ್ಟು ವಿದ್ಯಾರ್ಥಿಗಳಿಗೆ ಈಗ ರೂಢಿಯಾಗಿದೆ. ಆದರೆ ಏಕಾಗ್ರ ತೆಗೆ ಭಂಗ ತರುವ, ಮನ ಸ್ಸಿನ ಹತೋಟಿ ತಪ್ಪಿ ಸುವ ಹಲವಾರು ಸಂದರ್ಭಗಳು ಮತ್ತು ತಂತ್ರಜ್ಞಾನಗಳ ಪ್ರಭಾವ ಇಂದು ಬಲವಾಗಿದೆ. ಅವುಗಳಿಂದ ದೂರ ಇದ್ದು ಓದುವುದ ರಿಂದ ಮಾತ್ರ ಪರಿ ಣಾಮ ನಿಶ್ಚಲವಾಗಿ ಧನಾತ್ಮಕವಾಗಿರಲು ಸಾಧ್ಯವಿದೆ.
ಪ್ರಶಾಂತವಾದ ಸ್ಥಳ
ಪ್ರಶಾಂತವಾದ ವಾತಾವರಣವಿರುವ ಕಡೆ ಅಧ್ಯಯನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ “ಎಫೆಕ್ಟು ರೀಡಿಂಗ್’ ಸಾಧ್ಯ. ಗದ್ದಲಗಳು ಅಥವಾ ಗಮನವನ್ನು ವಿಕೇಂದ್ರಿತಗೊಳಿಸುವ ಪ್ರದೇಶಗಳಿಂದ ಸಾಧ್ಯವಾದಷ್ಟು ದೂರ ಇರುವುದು ಒಳಿತು. ಇದರಿಂದ ಆಧ್ಯಯನಗೊಳಿಸಿದ ಅಂಶಗಳು ಪುಸ್ತಕದಿಂದ ಮಸ್ತಕಕ್ಕೆ ಪರಿಣಾಮಕಾರಿಯಾಗಿ ತಲುಪಲು ಸಾಧ್ಯ.
ಕೊಠಡಿಗಳು ಸ್ವಚ್ಛವಾಗಿ, ಚೊಕ್ಕವಾಗಿರಲಿ
ಅಭ್ಯಸಿಸುವ ಕೊಠಡಿಗಳು ಸ್ವತ್ಛವಾಗಿರಬೇಕು. ಸ್ವಚ್ಛತೆಯಿಂದ ಮನಸ್ಸು ಅರಳಲು ಸಾಧ್ಯ. ಪರಿಣಾಮಕಾರಿ ಓದು ಅಥವಾ ಅಭ್ಯಾಸಕ್ಕೆ ಅಂತರಾಳದ ಶುದ್ಧತೆಯ ಜತೆಗೆ ಬಹಿರಂಗ ಶುಚಿ ತ್ವವೂ ಅಷ್ಟೇ ಮುಖ್ಯ. ಕೊಠಡಿಗಳನ್ನು ಸ್ವತ್ಛವಾಗಿರಿಸಿ, ಪುಸ್ತಕವನ್ನು ಸರಿಯಾಗಿ ಜೋಡಿಸಿ ಕೊಠಡಿಯನ್ನು ಅಧ್ಯಯನಕ್ಕೆ ಪೂರಕವಾಗಿರಿಸಬೇಕು. ಇದರಿಂದ ಓದು ಸುಲಭವಾಗಲಿದೆ.
ಬಿಡುವಿನಲ್ಲಿ ಸಂಗೀತ ಆಲಿಸಿ
ನಮ್ಮಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕೇಳಿಸಿಕೊಳ್ಳದೆ ಓದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಶುದ್ಧ ತಪ್ಪು ಕಲ್ಪನೆ. ಸಂಗೀತದ ಜತೆಗೆ ಕೆಲಸ ಮಾಡಲು ಸಾಧ್ಯ. ಆದರೆ ಓದು ಸಾಧ್ಯವೇ ಇಲ್ಲ. ಅತ್ತ ಸಂಗೀತವನ್ನು ಆಸ್ವಾಧಿಸದೆ ಇತ್ತ ಓದನ್ನು ಅರ್ಥ ಮಾಡಿಕೊಳ್ಳಲಾಗದ ಕ್ಲಿಷ್ಟ ಪರಿಸ್ಥಿತಿ ಇದು. ಮನಸ್ಸನ್ನು ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಓದಿನ ನಡುವೆ ಬಿಡುವು ಮಾಡಿ ಕೊಂಡು ಸಂಗೀತ ಕೇಳುವುದು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು, ಸ್ನೇಹಿತರೊಂದಿಗೆ ಒಂದಷ್ಟು ಸಮಯ ವ್ಯಯಿಸುವುದರಿಂದ ಓದಿನಿಂದ ಉಂಟಾದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.
ಮಲಗಿಕೊಂಡು ಓದುವ ಸಾಹಸ ಬೇಡ
ಬಹಳಷ್ಟು ವಿದ್ಯಾರ್ಥಿಗಳು ಮಲಗಿಕೊಂಡು ಓದಲು ಇಷ್ಟಪಡುತ್ತಾರೆ. ಇದರಿಂದ ಪುಸ್ತಕದ ಪುಟವನ್ನು ತಿರುವಿ ಹಾಕಬಹುದೇ ಹೊರತು ಏಕಾಗ್ರತೆ ಮೂಡಲು ಸಾಧ್ಯವೇ ಇಲ್ಲ. ದೇಹಕ್ಕೆ ಆರಾಮ ಅಥವಾ ಹಿತಕರವಾದ ವಾತವಾರಣ ಲಭಿಸಿದ ಕೂಡಲೇ ನಿದ್ದೆಗೆ ಮನಸ್ಸು ಹರಿಯುತ್ತದೆ. ಇದರಿಂದ ಮಲಗಿಕೊಂಡು ಓದುವ ಕಲೆ ಕರಗತವಾಗಿದ್ದರೂ ಪರೀಕ್ಷೆ ಸಿದ್ಧತೆ ವೇಳೆ
ಇದು ಅಪಾಯಕಾರಿ.
ಆಹಾರ ಸೇವನೆಯ ಜತೆಗೆ ಓದು ಬೇಡ ಕೆಲವರಿಗೆ ಓದುತ್ತಾ ತಿಂಡಿ ತಿನ್ನುವ ಅಭ್ಯಾಸವಿರುತ್ತದೆ. ಪರೀಕ್ಷೆ ಸಮಯದಲ್ಲಿ ಇದನ್ನು ದೂರ ಇರಿಸುವುದೇ ಒಳಿತು. ಆಹಾರವನ್ನು ಸೇವಿಸುತ್ತಾ ಓದುವ ಅಭ್ಯಾಸ ಆರೋಗ್ಯಕ್ಕೂ ಒಳ್ಳೆಯದಲ್ಲ. ಚಾಟ್ಸ್, ಸ್ವೀಟ್ಸ್, ಕಾಫಿ, ಟೀ ಸೇವನೆ ಜತೆಗೆ ಓದುವುದರಿಂದ ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಓದು ಪೂರ್ಣವಾಗು ವುದೂ ಇಲ್ಲ. ಅಗತ್ಯವಿದ್ದರೆ ಜತೆಗೆ ನೀರನ್ನು ಇಟ್ಟುಕೊಳ್ಳಿ. ನೀರನ್ನು ಸೇವಿಸುವುದರಿಂದ ಓದಿಗೆ ಪೂರಕವಾದ ವಾತಾವರಣ ದೇಹದಲ್ಲಿ ರೂಪುಗೊಳ್ಳುತ್ತದೆ ಎಂಬುದು ಸಂಶೋಧನೆಗಳಿಂದಲೂ ದೃಢಪಟ್ಟಿವೆ.
ದೃಶ್ಯಕಾವ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.