ಕ್ರೀಡಾ ಶಿಕ್ಷಣ, ಸಮಗ್ರ ಶಿಕ್ಷಣಕ್ಕೊಂದು ಮುನ್ನುಡಿ
Team Udayavani, Sep 5, 2018, 1:06 PM IST
ದೇಸೀ ಕ್ರೀಡಾ ಪಟುಗಳಿಗೆ ವೇದಿಕೆ ಬೇಕು. ಇತ್ತೀಚಿನ ದಿನಗಳಲ್ಲಿ ಕಬಡ್ಡಿ ಸೇರಿದಂತೆ ದೇಸೀಯ ಆಟಗಳು ಹೆಚ್ಚಿನ ಮಹತ್ವ ಪಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿವೆ. ಹಳ್ಳಿ ಪ್ರದೇಶಗಳಲ್ಲಿ ಅನೇಕ ಮಂದಿ ಕ್ರೀಡಾಪಟುಗಳಿದ್ದು, ಅವರಿಗೆ ತರಬೇತಿಯ ಕೊರತೆ ಕಾಣುತ್ತಿದೆ.
ದೇಶದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ನೀಡಲು ಅವರಿಗೆ ಸಮರ್ಪಕ ತರಬೇತಿ ಅಗತ್ಯ. ಗುಣಮಟ್ಟದ ತರಬೇತಿ ಪಡೆದ ಕ್ರೀಡಾಪಟುವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಲು ಸಾಧ್ಯವಿದೆ. ಶಾಲಾ-ಕಾಲೇಜಿನ ಓದಿನ ಜತೆಗೆ ಕ್ರೀಡೆಗೆ ತರಬೇತಿ ನೀಡಿದರೆ, ಪೂರ್ಣಮಟ್ಟದ ಗುರಿಮುಟ್ಟಲು ಸಾಧ್ಯ. ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಮಂದಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕ್ರೀಡಾ ಶಾಲೆಗಳನ್ನು ತೆರೆಯುವ ಅಗತ್ಯವಿದೆ.
ರಾಜ್ಯ ಸರಕಾದ ಮುಂದಿನ ದಿನಗಳಲ್ಲಿ ಕ್ರೀಡಾ ಶಾಲೆಗಳನ್ನು ಪ್ರಾರಂಭಿಸುವ ನಿರ್ಧಾರವಿದ್ದು. ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳುವಲ್ಲಿ ವಿಳಂಬವಾಗುತ್ತಿದೆ. ಇದೇ ಕಾರಣದಿಂದ ಹೆಚ್ಚಿನ ಯುವಕರು ಕ್ರೀಡಾಕ್ಷೇತ್ರದಲ್ಲಿ ಕಾಣಿಸಿಕೊಳ್ಳುವಲ್ಲಿ ಹಿನ್ನೆಡೆಯಾಗುತ್ತಿದೆ ಎನ್ನಬಹುದು. ಇದರಿಂದಾಗಿ ಜಿಲ್ಲಾ ಮಟ್ಟದಲ್ಲೊಂದು ಸುಸಜ್ಜಿತ ಕ್ರೀಡಾ ಶಾಲೆಗ ನಿರ್ಮಾಣವಾಗಬೇಕಿದೆ.
ಹಳ್ಳಿ ಪ್ರದೇಶದಲ್ಲಿ ಕಲಿಯುತ್ತಿರುವಂತಹ ಅನೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ಆದರೆ ಅದಕ್ಕೆ ಯಾವುದೇ ರೀತಿಯ ವೇದಿಕೆ ಸಿಕ್ಕಿರುವುದಿಲ್ಲ. ರಾಜ್ಯ ಸರಕಾರ ಕ್ರೀಡಾ ಶಾಲೆಗಳನ್ನು ತೆರೆದರೆ ಆ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.
ವಿ.ವಿ.ಗಳಲ್ಲೂ ಕ್ರೀಡಾತರಗತಿಗಳಿವೆ
ವಿವಿಧ ರಾಜ್ಯಗಳಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವಿವಿಧ ಪ್ರದೇಶಗಳಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಶ್ವವಿದ್ಯಾನಿಲಯಗಳಿದ್ದು, ಬಿ.ಎ., ಬಿ.ಎಸ್.ಸಿ., ಬಿ.ಕಾಂ. ಪಠ್ಯಕ್ರಮದಂತಯೇ ಕ್ರೀಡಾ ವಿಷಯದ ಪಠ್ಯಗಳಿದ್ದು, ಪ್ರಾಯೋಗಿಕ ಚಟುವಟಿಕೆಗಳಿಗೆ ಮಹತ್ವ ನೀಡಲಾಗುತ್ತಿದೆ.
ಪಠ್ಯೇತರ ಚಟುವಟಿಕೆಯಾಗಿಯೂ ಬಳಕೆ
ಕ್ರೀಡೆ ಎನ್ನುವುದನ್ನು ಇತ್ತೀಚೆನ ದಿನಗಳಲ್ಲಿ ಪಠ್ಯೇತರ ಚಟುವಟಿಕೆಯಾಗಿಯೂ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕೆ ಹೆಚ್ಚುವರಿ ಅಂಕ ಕೊಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲೂ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಲು ಕಾರಣವಾಗುತ್ತಿದೆ. ಕಾಲೇಜುವಾರು ಕ್ರೀಡಾಕೂಟಗಳನ್ನು ಆಯೋಜಿಸುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಕ್ರೀಡಾಸವಲತ್ತುಗಳಿಗೂ ಪ್ರಾಮುಖ್ಯತೆ ನೀಡುವುದು ಅಗತ್ಯ.
ಅದರಲ್ಲಿಯೂ ಭಾರತದಲ್ಲಿ ಪ್ರಮುಖವಾಗಿ ಹೊಸದಿಲ್ಲಿಯಲ್ಲಿರುವ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಶನ್ ಆ್ಯಂಡ್ ನ್ಪೋರ್ಟ್ ಸೈನ್ಸ್, ಬಾಂಬೆ ಫಿಸಿಕಲ್ ಕಲ್ಚರ್ ಅಸೋಸಿಯೇಶನ್, ಪಂಜಾಬ್‌ನಲ್ಲಿನ ನೇತಾಜಿ ಸುಭಾಶ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ನ್ಪೋರ್ಟ್ಸ್, ಪಶ್ಚಿಮ ಬಂಗಾಳದ ಯುನಿವರ್ಸಿಟಿ ಆಫ್ ಕ್ಯಾಲಿಕಟ್, ಚೆನ್ನೈನಲ್ಲಿನ ಯುನಿವರ್ಸಿಟಿ ಆಫ್ ಮದ್ರಾಸ್, ಹೈದರಾಬಾದ್‌ನ ಒಸ್ಮಾನಿಯಾ ಯುನಿವರ್ಸಿಟಿ, ಪುಣೆ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ಸೇರಿದಂತೆ ಮತ್ತಿತರ ಕಾಲೇಜುಗಳಲ್ಲಿ ಕ್ರೀಡಾ ವಿಷಯದ ಕುರಿತು ಬೋಧನೆ ಮಾಡಲಾಗುತ್ತದೆ.
ರಾಜ್ಯಕ್ಕೂ ಬೇಕಿದೆ ಕ್ರೀಡಾ ವಿ.ವಿ.
ರಾಜ್ಯದ ಅನೇಕ ಮಂದಿ ಕ್ರೀಡಾಪಟುಗಳಿಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಎಳೆವೆಯಲ್ಲಿಯೇ ಕ್ರೀಡಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆ ಇರುವವರಿಗೆ ಪ್ರತ್ಯೇಕ ಶಾಲೆಗಳನ್ನು ರಾಜ್ಯ ಸರಕಾರ ತೆರೆದು ಪ್ರೋತ್ಸಾಹ ನೀಡಬೇಕಿದೆ.
ಪಾಠಕ್ಕಿಂತ ಆಟಕ್ಕೆ ಪ್ರಾಮುಖ್ಯ
ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕೂತು ಪಾಠ ಕೇಳುವ ಪದ್ಧತಿ ಹೆಚ್ಚಾಗಿ ಇದೆ. ಕ್ರೀಡಾ ಶಾಲೆ ಅಂದಮೇಲೆ ಅಲ್ಲಿ ಪಾಠಕ್ಕಿಂತ ಹೆಚ್ಚು ಆಟಕ್ಕೇ ಪ್ರಾಮುಖ್ಯತೆ ಇರುತ್ತದೆ. ಶಾಲೆಗಳಲ್ಲಿ ಇರುವಂತೆಯೇ ಸಿಲೆಬಸ್ ಇರುತ್ತದೆ. ಅಷ್ಟೇಕೆ ವರ್ಷಂಪ್ರತಿ ಪರೀಕ್ಷೆ ಕೂಡ ಇರುತ್ತದೆ. ಆದರೆ ಇದರಲ್ಲಿ ಕೇವಲ ಕ್ರೀಡಾ ಚಟುವಟಿಕೆಗಳು ಮಾತ್ರ ಒಳಗೊಂಡಿರುತ್ತದೆ. ಕ್ರೀಡೆ ಅಂದ ಮೇಲೆ ಅದಕ್ಕೆ ತನ್ನದೇ ಆದಂತಹಾ ನಿಯಮಗಳಿರುತ್ತದೆ. ಅಲ್ಲದೆ, ಅದರ ಅಳವಾದ ಜ್ಞಾನ ಕೂಡ ಅಗತ್ಯವಿದೆ. ಇವುಗಳ ಬಗೆಯನ್ನು ಸಾಮಾನ್ಯ ಶಾಲೆಗಳಲ್ಲಿ ಕಲಿಯಲು ಸಾಧ್ಯವಿಲ್ಲ. ಕೆಲವೊಂದು ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಪಾಠ ಇದ್ದರೂ, ಆಳವಾದ ಅಧ್ಯಯನ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕೇವಲ ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಸಾಧನೆ ಮಾಡಬೇಕು ಎನ್ನುವ ವಿದ್ಯಾರ್ಥಿಗಳಿಗೆ ಕ್ರೀಡಾ ತರಗತಿ/ಶಾಲೆಗಳಿಗೆ ದಾಖಲಾಗುವುದು ಉತ್ತಮ. ಕ್ರೀಡಾ ಶಾಲೆ/ವಿ.ವಿ.ಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತಹಾ ಉಪಕರಣಗಳಿರುತ್ತದೆ. ಅದರಲ್ಲಿಯೂ ಸುಸಜ್ಜಿತ ಮೈದಾನ, ಜಿಮ್ ಉಪಕರಣ, ತರಬೇತಿ ಕೊಠಡಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.